/newsfirstlive-kannada/media/media_files/2025/08/16/trump-putin-2025-08-16-08-00-18.jpg)
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ( Donald Trump and Vladimir Putin) ನಿನ್ನೆ ಅಲಾಸ್ಕಾದಲ್ಲಿ (Alaska) ಮಹತ್ವದ ಶೃಂಗಸಭೆ ನಡೆಸಿದರು. ಈ ವೇಳೆ ಪ್ರಮುಖವಾಗಿ ಉಕ್ರೇನ್ ಯುದ್ಧ (Ukraine war) ಕೊನೆಗೊಳಿಸುವ ಪ್ರಯತ್ನಗಳ ಕುರಿತು ಉಭಯ ನಾಯಕರು ಮಹತ್ವದ ಚರ್ಚೆ ನಡೆಸಿದರು. ಆದರೆ ಯಾವುದೇ ಅಂತಿಮ ಒಪ್ಪಂದಕ್ಕೆ ಇನ್ನೂ ಬಂದಿಲ್ಲ. ಈ ಮಾತುಕತೆಯು ಮೂರು ಗಂಟೆಗಳ ಕಾಲ ನಡೆಯಿತು. ಇಬ್ಬರೂ ಇದನ್ನು ‘ಫಲಪ್ರದ’ ಮತ್ತು ‘ಪರಸ್ಪರ ಗೌರವಾನ್ವಿತ’ ಎಂದು ಬಣ್ಣಿಸಿಕೊಂಡಿದ್ದಾರೆ.
ಟ್ರಂಪ್ ಮತ್ತು ಪುಟಿನ್ ಹೇಳಿದ್ದೇನು..?
ಮಾತುಕತೆ ಬಳಿಕ ವಿಶ್ವದ ನಾಯಕರು ಮಾಧ್ಯಮಗಳ ಮುಂದೆ ಎದುರಾರದು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿ, ‘ಸಂಪೂರ್ಣ ಒಪ್ಪಂದ ಆಗುವ ತನಕ ಯಾವುದೇ ಒಪ್ಪಂದ ಇಲ್ಲ. ಕೆಲವು ವಿಷಯಗಳ ಬಗ್ಗೆ ಒಪ್ಪಂದವಿದೆ. ಆದರೆ ಕೆಲವು ಅಂಶಗಳು ಇನ್ನೂ ಬಾಕಿ ಉಳಿದಿವೆ ಎಂದರು. ‘ಎರಡು ದೇಶಗಳ ನಡುವಿನ ಮಾತುಕತೆಗಳು ‘ತೀವ್ರ ಮತ್ತು ಉಪಯುಕ್ತ’. ರಷ್ಯಾ, ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಪ್ರಾಮಾಣಿಕವಾಗಿ ಬಯಸುತ್ತದೆ. ಆದರೆ ಅದರ ಕಾನೂನು ಕಾಳಜಿಗಳನ್ನು ನೋಡಿಕೊಳ್ಳಬೇಕು ಎಂದು ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ್ದಾರೆ.
ಇದನ್ನೂ ಓದಿ:ಕಪಿಲ್ ಶರ್ಮಾ ಕೆಫೆ ಮೇಲೆ ದಾಳಿ ಮಾಡಿದ್ದು ಬಿಷ್ಣೋಯಿ ಗ್ಯಾಂಗ್! ಸಲ್ಮಾನ್ ಖಾನ್ ಆಹ್ವಾನಿಸಿದ್ದಕ್ಕೆ ಗುಂಡಿನ ದಾಳಿ
ಉಕ್ರೇನ್ ಮತ್ತು ಯುರೋಪ್ ರಾಷ್ಟ್ರಗಳು ಇದನ್ನ ಸಕಾರಾತ್ಮಕವಾಗಿ ಸ್ವಕರಿಸಿ, ಅಡೆತಡೆ ಸೃಷ್ಟಿಸುವುದಿಲ್ಲ ಎಂದುಕೊಂಡಿದ್ದೇವೆ. ತೆರೆಮರೆಯಲ್ಲಿ ಯಾವುದೇ ಪ್ರಚೋದನೆ ಅಥವಾ ಪಿತೂರಿಯಿಂದ ಪ್ರಗತಿಗೆ ಅಡ್ಡಿಯಾಗಬಾರದು ಅಂತಾ ಪುಟಿನ್ ಎಚ್ಚರಿಸಿದ್ದಾರೆ. ಉಕ್ರೇನ್ ವಿಷಯವು ರಷ್ಯಾದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ ಅನ್ನೋ ಮೂಲಕ ಉಕ್ರೇನ್ ಮತ್ತು ಅದರ ಮಿತ್ರ ರಾಷ್ಟ್ರಗಳಾದ ಯುರೋಪ್ ದೇಶಗಳಿಗೆ ಸಂದೇಶ ರವಾನಿಸಿದ್ದಾರೆ.
ಟ್ರಂಪ್ ತುಂಬಾ ಒಳ್ಳೆಯ ವ್ಯಕ್ತಿ
ಟ್ರಂಪ್ ಮಾತನ್ನಾಡಿ.. ಸಾಮಾನ್ಯ ಜನ ಸಾಯುವುದು ನಿಲ್ಲಬೇಕಿದೆ. ಸಕಾರಾತ್ಮಕವಾಗಿ ಹಲವು ವಿಚಾರ ಚರ್ಚೆಯಾಗಿವೆ. ಉಕ್ರೇನ್ ಅದ್ಯಕ್ಷ ಝೆಲೆನ್ಸ್ಕಿಗೆ ಟ್ರಂಪ್ Make a deal ಎಂಬ ಸಂದೇಶ ನೀಡಿದರು. ನಾವಿಗ ಯುದ್ಧ ನಿಲ್ಲಿಸೋ ಕೊನೆಯ ಹಂತದಲ್ಲಿದ್ದೇವೆ. ಅದಕ್ಕೆ ಪ್ರತಿಕ್ರಿಯಿಸಿದ ಪುಟಿನ್, ಟ್ರಂಪ್ ತುಂಬಾ ಒಳ್ಳೆಯವ್ಯಕ್ತಿ, ಟ್ರಂಪ್ ಇದ್ದರೆ ಯುದ್ಧವೇ ಆಗ್ತಿರಲಿಲ್ಲ ಎಂದ ಹೊಗಳಿದ್ದಾರೆ.
ಇದನ್ನೂ ಓದಿ: ನಮ್ಮ ಜೊತೆ ಅರ್ಧ ಜಗತ್ತನ್ನೇ ನಾಶ ಮಾಡ್ತೀವಿ ಎಂದ ಪಾಕ್ ಸೇನಾ ಮುಖ್ಯಸ್ಥ ಅಸೀಮ್ ಮುನೀರ್
ಸಭೆಯು ಅಮೆರಿಕದ ಅಲಾಸ್ಕಾದ ಆಂಕಾರೇಜ್‌ನಲ್ಲಿ ನಡೆಯಿತು. ಈ ವೇಳೆ ಎರಡೂ ದೇಶಗಳ ನಿಯೋಗಗಳು ಉಪಸ್ಥಿತರಿದ್ದವು. ಇಬ್ಬರು ನಾಯಕರು ಉನ್ನತ ಸಲಹೆಗಾರರೊಂದಿಗೆ ತ್ರಿ-ಆನ್-ತ್ರಿ ಮಾದರಿಯಲ್ಲಿ ಭೇಟಿಯಾದರು. ಅಧ್ಯಕ್ಷ ಪುಟಿನ್ ಅವರನ್ನು ಬಿ-2 ಬಾಂಬರ್ ವಿಮಾನದೊಂದಿಗೆ ಸ್ವಾಗತಿಸಲಾಯಿತು. ಪುಟಿನ್ ರೆಡ್ ಕಾರ್ಪೆಟ್ ಮೇಲೆ ಬಂದ ತಕ್ಷಣ ಟ್ರಂಪ್ ಚಪ್ಪಾಳೆ ತಟ್ಟಿದರು. ಇದಕ್ಕೂ ಮೊದಲು ಟ್ರಂಪ್ ಸುಮಾರು ಅರ್ಧ ಗಂಟೆ ವಿಮಾನದಲ್ಲಿ ಕುಳಿತು ಪುಟಿನ್ಗಾಗಿ ಕಾಯುತ್ತಿದ್ದರು.
ಇದನ್ನೂ ಓದಿ: ಧರ್ಮಸ್ಥಳಕ್ಕೆ ಬಿಜೆಪಿ ಱಲಿ.. ಅಪಪ್ರಚಾರ ಮಾಡೋರಿಗೆ ನೇರ ಎಚ್ಚರಿಕೆ ಗಂಟೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ