/newsfirstlive-kannada/media/post_attachments/wp-content/uploads/2024/09/Nasa.jpg)
ತಾಂತ್ರಿಕ ದೋಷದಿಂದ ಬಾಹ್ಯಾಕಾಶದಲ್ಲಿ ಸಿಲುಕಿರುವ ಭಾರತದ ಮೂಲದ ಸುನೀತಾ ವಿಲಿಯಮ್ಸ್​ ಮತ್ತು ಮತ್ತೋರ್ವ ಗಗನಯಾತ್ರಿ ಬುಚ್ ವಿಲ್ಮೋರ್​ ಅವರನ್ನು ಕರೆತರಲು ನಾಸಾ ನಿರಂತರ ಹೋರಾಡುತ್ತಿದೆ. ಅದಕ್ಕಾಗಿಯೇ ಇದೀಗ ಸ್ಪೇಸ್​​ ಎಕ್ಸ್​​ ಕ್ರ್ಯೂ-9 ಮಿಷನ್​​ನನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ನಿರ್ಧರಿಸಿದೆ. ಇಬ್ಬರು ಗಗನಯಾತ್ರಿಗಳನ್ನು ನಾಸಾ ಕಳುಹಿಸಲು ಮುಂದಾಗಿದೆ. ಸೆಪ್ಟೆಂಬರ್​ ಕೊನೆಯಲ್ಲಿ ಮಿಷನ್​ ನಿರ್ಗಮಿಸಲಿದೆ ಎನ್ನಲಾಗುತ್ತಿದೆ. ಅದಕ್ಕಾಗಿ ನಾಸಾ ಅಧಿಕೃತ ಘೋಷಣೆ ಮಾಡುವುದೊಂದೇ ಬಾಕಿ ಇದೆ.
ಸುನೀತಾ ವಿಲಿಯಮ್ಸ್​ರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಲು ಅನುಭವಿ ನಾಸಾ ಗಗನಯಾತ್ರಿಗಳನ್ನು ಕಳುಹಿಸಿಕೊಡುತ್ತಿದೆ. ನಿಕ್​ ಹೇಗ್​​ ಮತ್ತು ಅಲೆಕ್ಸಾಂಡರ್​​ ಗೊರ್ಬುನೊವ್​ ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ. ಇಬ್ಬರು ಮೊದಲ ಬಾರಿಗೆ ಪ್ರವಾಸ ಮಾಡುತ್ತಿದ್ದಾರೆ.
ನಾಸಾ ಹಾಕಿಕೊಂಡಿರುವ ಯೋಜನೆಯಂತೆ, ಸ್ಪೇಸ್​​ಎಕ್ಸ್​​ ಕ್ರ್ಯೂ-9 ಮಿಷನನ್ನು ಇದೇ ಸೆಪ್ಟೆಂಬರ್​ 24ಕ್ಕಿಂತ ಮುಂಚೆ ಉಡಾವಣೆ ಮಾಡಲು ಸಿದ್ಧವಾಗಿದೆ. ಇದು ನಾಲ್ವರ ಬದಲಿದೆ ಇಬ್ಬರನ್ನು ಮಾತ್ರ ಹೊತ್ತೊಯ್ಯಲಿದೆ.
ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ವಿಚಿತ್ರ ಶಬ್ಧದ ರಹಸ್ಯವನ್ನು ಭೇದಿಸಿದ ನಾಸಾ.. ಸುನೀತಾ ವಿಲಿಯಮ್ಸ್​ಗಾಗಿ ಎಲ್ಲರ ಪ್ರಾರ್ಥನೆ!
ನಿಕ್​ ಹೇಗ್​ ಕಮಾಂಡರ್​ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅಲೆಕ್ಸಾಂಡರ್​ ಗೊರ್ಬುನಾವ್​​ ಮಿಷನ್​ ಸ್ಪೆಷಲಿಸ್ಟ್​ ಆಗಿ ಕೆಲಸ ನಿರ್ವಹಿಸಲಿದ್ದಾರೆ. ಫೆಬ್ರವರಿ 2025ರ ವೇಳೆಗೆ ಸುನೀತಾ ವಿಲಿಯಮ್ಸ್​ ಮತ್ತು ಬುಚ್​ ವಿಲ್ಮೋರ್​​ ಅವರನ್ನು ಭೂಮಿಗೆ ಕರೆತರಲಿದ್ದಾರೆ.
ನಿಕ್​​ ಹೇಗ್​
ಇವರು ಅಮೆರಿಕಾದ ಸ್ಪೇಸ್​​​ ಪೋರ್ಸ್​​ನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ ಕರ್ನಲ್​. ಅನೇಕ ಅನುಭವವನ್ನು ಹೊಂದಿದ್ದಾರೆ. ಈಗಾಗಲೇ ಮೂರನೇ ಬಾಹ್ಯಾಕಾಶ ಯಾನದ ಜೊತೆಗೆ ಐಎಸ್​​ಎಸ್​​ಗೆ ಅವರ ಎರಡನೇ ಕಾರ್ಯಚರಣೆಯಾಗಿದೆ. 2018ರಲ್ಲಿ ಸೋಯುಜ್​ ಉಡಾವಣೆಯಲ್ಲೂ ಕಾರ್ಯನಿರ್ವಹಿಸಿದ್ದಾರೆ. ಸುನೀತಾ ವಿಲಿಯಮ್ಸ್​ ಅವರನ್ನು ಸುರಕ್ಷಿತವಾಗಿ ಕರೆತರುವ ಎಲ್ಲಾ ಸಾಮರ್ಥ್ಯ ಅವರಿಗಿದೆ.
ಅಲೆಕ್ಸಾಂಡರ್​ ಗೋರ್ಬುನೋವ್
ಇವರು ರೋಸ್ಕೊಸ್ಮೊಸ್​​​ ಗಗನಯಾತ್ರಿ. ಕ್ರ್ಯೂ-9ನೊಂದಿಗೆ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ರಷ್ಯಾ ಮೂಲದವರಾಗಿರುವ ಇವರು. ಬಾಹ್ಯಾಕಾಶ ನೌಕೆ ಮತ್ತು ಅದರ ಮೇಲೆ ಕೆಂದ್ರೀಕರಿಸುವ ಎಂಜಿನಿಯರಿಂಗ್​ ಪರಿಣತಿ ಹೊಂದಿದ್ದಾರೆ.
2018ರ ಬಳಿಕ ಅವರು ಗಗನಯಾತ್ರಿಯಾದರು. ಅದಕ್ಕೂ ಮೊದಲು ರಾಕೆಟ್​ ಸ್ಪೇಸ್​​ ಕಾರ್ಪೋರೇಷನ್​​ ಎನರ್ಜಿಯಾದಲ್ಲಿ ಎಂಜಿನಿಯರಿಂಗ್​​ ವೃತ್ತಿ ಮಾಡುತ್ತಿದ್ದರು. ಸದ್ಯ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಇಬ್ಬರನ್ನು ಕರೆತರಲು ಅಲೆಕ್ಸಾಂಡರ್​ ಮಿಷನ್​ ಸ್ಪೆಷಲಿಸ್ಟ್​ ಆಗಿ ಕೆಲಸ ಮಾಡಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ