newsfirstkannada.com

×

Video- ಅಬ್ಬಬ್ಬಾ! 2 ಕಾಡಾನೆಗಳ ನಡುವೆ ಭಯಾನಕ ಕಾಳಗ.. ನೀರಿನ ವಾಲ್, ಅಡಿಕೆ ತೋಟ ನಾಶ

Share :

Published April 11, 2024 at 2:36pm

Update April 11, 2024 at 2:43pm

    ಆನೆಗಳ ಕಾಳಗ ನೋಡಿ ಆತಂಕ ವ್ಯಕ್ತಪಡಿಸಿದ ಗ್ರಾಮಸ್ಥರು

    ತಾಲೂಕಿನ ಕಡೆಗರ್ಜೆ ಸಮಿಪ ಎರಡು ಆನೆಗಳ ಮಧ್ಯ ಕಾಳಗ

    ಕಾಡಾನೆಗಳ ಕಾದಾಟದಿಂದ ಸುತ್ತಲೂ ಮಣ್ಣಿನ ಧೂಳು ಎದ್ದಿತು

ಹಾಸನ: ಗ್ರಾಮದ ಸಮೀಪ ಎರಡು ಕಾಡಾನೆ ಭಯಾನಕವಾಗಿ ಕಾದಾಡಿದ ಪರಿಣಾಮ ಮನೆಗೆ ಸಂಪರ್ಕವಿದ್ದ ಪೈಪ್​ ಹೊಡೆದು ಹೋಗಿದ್ದಲ್ಲದೇ, ಅಡಿಕೆ ತೋಟದಲ್ಲಿ ಕೆಲ ಗಿಡಗಳು ನಾಶವಾಗಿವೆ. ಈ ಘಟನೆಯು ಬೇಲೂರು ತಾಲೂಕಿನ ಕಡೆಗರ್ಜೆ ಗ್ರಾಮದಲ್ಲಿ ನಡೆದಿದೆ.

ಕಡೆಗರ್ಜೆ ಗ್ರಾಮದ ಸಮೀಪವೇ ಎರಡು ಆನೆಗಳು ಭರ್ಜರಿಯಾಗಿ ಗುದ್ದಾಡಿಕೊಂಡಿವೆ. ಎರಡು ಬಲವಾಗಿ ಕಾದಾಡಿದ್ದರಿಂದ ಮನೆಗೆ ಸಂಪರ್ಕವಿದ್ದ ನೀರಿನ ವಾಲ್ ನಾಶವಾಗಿದೆ. ಹಾಗೇ ಗುದ್ದಾಡಿಕೊಂಡು ಅಡಿಕೆ ತೋಟಕ್ಕೆ ನುಗ್ಗಿದ್ದರಿಂದ ಕೆಲ ಗಿಡಗಳು ನಾಶಗೊಂಡಿವೆ. ಕಾಡಾನೆಗಳ ಕಾದಾಟದಿಂದ ಸುತ್ತಲೂ ಧೂಳೆದ್ದು ಬಿಟ್ಟಿತ್ತು.

ಇದನ್ನೂ ಓದಿ: ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಿಲ್ಲ, ಆದರೆ.. ಬಾಲಿವುಡ್​​ನ ರಾಮಾಯಣ ಚಿತ್ರದಲ್ಲಿ ಯಶ್ ಪಾತ್ರ ಏನು..?

ಇದನ್ನೂ ಓದಿ: ಭೀಕರ ದುರಂತ.. ಶಾಲಾ ಬಸ್​ ಮರಕ್ಕೆ ಡಿಕ್ಕಿಯಾಗಿ 6 ಮಕ್ಕಳು ಸಾವು; 20ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸ್ಥಿತಿ ಗಂಭೀರ 

ಎರಡು ಆನೆಗಳ ಕಾಳಗದಲ್ಲಿ ಕೊನೆಗೆ ಒಂದು ಸೋತು ಹೋಗಿ ಓಡಿ ಹೋಗಿದೆ. ಆದರೂ ಹಿಂದೆ ಬೆನ್ನತ್ತಿದ್ದ ಗೆದ್ದಾನೆ ಅಟ್ಟಾಡಿಸಿಕೊಂಡು ಗುದ್ದಿದೆ. ಸದ್ಯ ಈ ಭಯಾನಕ ಕಾಳಗ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ. ಇನ್ನು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ ಗ್ರಾಮಸ್ಥರು, ಜನರಿರುವ ಕಡೆಗೆ ಕಾಡಾನೆಗಳು ಬರದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video- ಅಬ್ಬಬ್ಬಾ! 2 ಕಾಡಾನೆಗಳ ನಡುವೆ ಭಯಾನಕ ಕಾಳಗ.. ನೀರಿನ ವಾಲ್, ಅಡಿಕೆ ತೋಟ ನಾಶ

https://newsfirstlive.com/wp-content/uploads/2024/04/HSN_ELEPHANT_FIGHT.jpg

Load More