newsfirstkannada.com

ದುರಂತದ ಮೇಲೆ ದುರಂತ.. ಯುವ ರೈತ ಸೇರಿ ಇಬ್ಬರು ಅನ್ನದಾತರು ಸಾವು; ಆಗಿದ್ದೇನು?

Share :

Published June 1, 2024 at 2:18pm

Update June 1, 2024 at 2:26pm

  ಸಾಲಬಾಧೆ ತಾಳಲಾರದೇ ಜೀವ ತೆಗೆದುಕೊಂಡ ರೈತರು

  ಬಿಸಿಲಿನ ತೀವ್ರತೆಯ ಎಫೆಕ್ಟ್, ಕೈಕೊಟ್ಟ ಮಾವಿನ ಫಸಲು

  ಕರ್ನಾಟಕದ ಅನ್ನದಾತ ಆತ್ಮಹತ್ಯೆಗೆ ಕೊನೆ ಎಂದು?

ಗದಗ/ರಾಮನಗರ: ಸಾಲಬಾಧೆಗೆ ಓರ್ವ ಯುವ ರೈತ ಸೇರಿ ಇಬ್ಬರು ಅನ್ನದಾತರು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಸಂದಿಗವಾಡದಲ್ಲಿ ಕ್ರಿಮಿನಾಶಕ ಸೇವಿಸಿ ರೈತ ಶಂಕರಪ್ಪ ಬೆಳಹಾರ (60) ಸಾವಿಗೆ ಶರಣಾಗಿದ್ದಾರೆ. ನಿನ್ನೆ ರಾತ್ರಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಬ್ಯಾಂಕ್ ಗಳಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಸಾಲ ಪಡೆದಿದ್ದರು.

ಇದನ್ನೂ ಓದಿ:ರಾಜ್ಯದಲ್ಲಿ ಮೂರು ಪ್ರತ್ಯೇಕ ದುರಂತ.. ಹೃದಯ ವಿದ್ರಾವಕ ಘಟನೆಯಲ್ಲಿ ಮೂವರು ಸಾವು

ಜತೆಗೆ ಸ್ಥಳೀಯ ಸಾರ್ವಜನಿಕರೊಂದಿಗೆ ಕೈಗಡವನ್ನೂ ಪಡೆದುಕೊಂಡಿದ್ದರು. ಸಾಲವನ್ನು ತೀರಿಸಲಾಗಿದೆ ‌ಪ್ರತಿನಿತ್ಯವೂ ಪರದಾಡುತ್ತಿದ್ದರು. ಹೀಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡ ರೈತ ಕ್ರಿಮಿನಾಶಕ ಸೇರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಪಿ.ಹಳ್ಳಿ ದೊಡ್ಡಿ ಗ್ರಾಮದಲ್ಲಿ ಯುವ ರೈತ ದರ್ಶನ್ (23) ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಿಕಾಂ ಓದುತ್ತಿದ್ದ ಈತ ತಂದೆ ಜೊತೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ. ತನ್ನ ತಂದೆ ಕೃಷ್ಣ ಅವರ ಜೊತೆಗೂಡಿ ಮಾವಿನ ತೋಟಗಳನ್ನು ಗುತ್ತಿಗೆಗೆ ಪಡೆದು ಬೇಸಾಯ ಮಾಡುತ್ತಿದ್ದರು. ಬಿಸಿಲಿನ ತೀವ್ರತೆಗೆ ಮಾವಿನ ಫಸಲು ಕೈಕೊಟ್ಟ ಪರಿಣಾಮ ಸಾಲಬಾಧೆ ಹೆಚ್ಚಾಗಿತ್ತು. ಸ್ಥಳಕ್ಕೆ ಅಕ್ಕೂರು ಪೊಲೀಸರು ಭೇಟಿ ನೀಡಿದ್ದಾರೆ. ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ವಿಶ್ವಕಪ್​ಗೂ ಮುನ್ನವೇ ಟೀಂ ಇಂಡಿಯಾದಲ್ಲಿ ಅಪಸ್ವರ.. ರೋಹಿತ್, ದ್ರಾವಿಡ್​ರಿಂದ ಭಾರೀ ಆಕ್ರೋಶ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದುರಂತದ ಮೇಲೆ ದುರಂತ.. ಯುವ ರೈತ ಸೇರಿ ಇಬ್ಬರು ಅನ್ನದಾತರು ಸಾವು; ಆಗಿದ್ದೇನು?

https://newsfirstlive.com/wp-content/uploads/2024/06/FARMER-1.jpg

Load More