Advertisment

ಸ್ವಾತಂತ್ರ್ಯ ದಿನಾಚರಣೆಯಂದೇ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಕ್ರಿಕೆಟರ್ಸ್​!

author-image
AS Harshith
Updated On
ಚಾಂಪಿಯನ್ಸ್​ ಟ್ರೋಫಿಗೆ ಗಂಭೀರ್​​ ಕೃಪೆ ಯಾರ ಮೇಲೆ? ಟೀಮ್​ ಇಂಡಿಯಾದಲ್ಲಿ ಯಾರಿಗೆಲ್ಲಾ ಸ್ಥಾನ?
Advertisment
  • ಇಂದು ದೇಶದಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ
  • ಇದೇ ದಿನ 2 ಕ್ರಿಕೆಟರ್ಸ್​​ ಟೀಂ ಇಂಡಿಯಾಗೆ ವಿದಾಯ ಹೇಳಿದ್ದು ನೆನಪಿದ್ಯಾ?
  • ಇಬ್ಬರು ಸ್ವಾತಂತ್ರ್ಯ ದಿನಾಚರಣೆಯಂದು ನಿವೃತ್ತಿ ಘೋಷಿಸಿದ್ಯಾಕೆ ಗೊತ್ತಾ?

ಇಂದು ದೇಶದಾದ್ಯಂತ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಇದೇ ಶುಭದಿನದಲ್ಲಿ ಇಬ್ಬರು ಕ್ರಿಕೆಟರ್ಸ್​​ ಟೀಂ ಇಂಡಿಯಾಗೆ ವಿದಾಯ ಹೇಳಿದ್ದ ಘಟನೆಯನ್ನು ನೆನಪಿಸಬೇಕಿದೆ.

Advertisment

ಮಹೇಂದ್ರ ಸಿಂಗ್​ ಧೋನಿ ಮತ್ತು ಸುರೇಶ್​ ರೈನಾ ಆಗಸ್ಟ್​ 15ರಂದು ಅಂತರರಾಷ್ಟ್ರೀಯ ಕ್ರಿಕೆಟ್​​ಗೆ ವಿದಾಯ ಹೇಳಿದ್ದು ನೆನಪಿಸಬೇಕಿದೆ. ಥಾಲಾ ಮಾಹಿ ಮತ್ತು ಚಿನ್ನ ಥಾಲಾ ಸುರೇಶ್​ ರೈನಾ ಅಷ್ಟಕ್ಕೂ ಇದೇ ದಿನ ವಿದಾಯ ಹೇಳಿದ್ದು ಯಾಕೆ? ಇಲ್ಲಿದೆ ನೋಡಿ.

publive-image

ಇದನ್ನೂ ಓದಿ: ವಾರೆವ್ಹಾ! 5 ಡೋರ್​​ನ ಥಾರ್​​ ರೋಕ್ಸ್​ ಪರಿಚಯಿಸಿದ ಮಹೀಂದ್ರಾ.. ಇಷ್ಟೊಂದು ಕಡಿಮೆ ಬೆಲೆಗೆ ಸಿಗುತ್ತಿದ್ಯಾ?

ಮಹೇಂದ್ರ ಸಿಂಗ್​ ಧೋನಿ 23 ಡಿಸೆಂಬರ್​ 2004ರಲ್ಲಿ ಭಾರತೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದೆ. ನಾಯಕನಾಗಿಯೂ ಮಿಂಚಿದ ಇವರು ಭಾರತ ತಂಡಕ್ಕೆ ಅನೇಕ ಕೊಡುಗೆಯನ್ನು ನೀಡಿದ್ದಾರೆ. ಆದರೆ ಜುಲೈ 2019 ರಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಕೊನೆಯ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿದರು. ಬಳಿಕ ಒಂದು ವರ್ಷಕ್ಕೂ ಹೆಚ್ಚು ಕಾಲ ಕ್ರಿಕೆಟ್‌ನಿಂದ ದೂರ ಉಳಿದರು, ನಂತರ 15 ಆಗಸ್ಟ್ 2020 ರಂದು ಟೀಂ ಇಂಡಿಯಾಗೆ ವಿದಾಯ ಹೇಳಿದರು.

Advertisment

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೆ ದೆಹಲಿಯ ಕೆಂಪುಕೋಟೆ ಸಜ್ಜು; ಸತತ 11ನೇ ಬಾರಿ ‘ನಮೋ’ ಭಾಷಣ

74 ನೇ ಸ್ವಾತಂತ್ರ್ಯ ದಿನದಂದು ಧೋನಿ ನಿವೃತ್ತಿ ಘೋಷಿಸಿದರು. ಮಾಹಿ ವಿದಾಯ ಮಾತ್ರವನ್ನು ಕ್ರಿಕೆಟ್​​ ಫ್ಯಾನ್ಸ್​ ಇನ್ನು ಅರಗಿಸಿಕೊಂಡಿಲ್ಲ ಎಂಬುದು ಇಂದಿಗೂ ಸತ್ಯ.

ಇದನ್ನೂ ಓದಿ: 78ನೇ ಸ್ವಾತಂತ್ರ್ಯ ದಿನಾಚರಣೆ; ಕೆಂಪು ಕೋಟೆಯಲ್ಲೇಕೆ ಧ್ವಜಾರೋಹಣ? ಏನಿದರ ಇತಿಹಾಸ?

Advertisment

publive-image

ಮಾಹಿ ಯಾವಾಗ ನಿವೃತ್ತಿ ಘೋಷಿಸಿದರೂ. ಅದಾದ ಕೆಲವೇ ಗಂಟೆಗಳಲ್ಲಿ ಸುರೇಶ್ ರೈನಾ ಕೂಡ ತಮ್ಮ ನಿವೃತ್ತಿ ಘೋಷಿಸಿದರು. ಈ ಕುರಿತಾಗಿ ಇನ್​​ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಹಂಚಿಕೊಂಡರು.

ಸ್ವಾತಂತ್ರ್ಯ ದಿನಾಚರಣೆಯಂದು ನಿವೃತ್ತಿ ಘೋಷಿಸಿದ್ಯಾಕೆ?

ಸುರೇಶ್ ರೈನಾ ಆಗಸ್ಟ್ 15 ರಂದು ನಿವೃತ್ತಿ ಘೋಷಿಸಿದ ಬಗ್ಗೆ ಕಾರಣವನ್ನು ಈ ಹಿಂದೆಯೇ ಬಿಚ್ಚಿಟ್ಟಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ‘ಆಗಸ್ಟ್ 15 ರಂದು ನಾವು ನಿವೃತ್ತರಾಗಲು ನಿರ್ಧರಿಸಿದ್ದೇವೆ. ಕಾರಣವೇನೆಂದರೆ ಧೋನಿಯ ಜೆರ್ಸಿ ಸಂಖ್ಯೆ 7, ನನ್ನ ಜೆರ್ಸಿ ಸಂಖ್ಯೆ 3. ಇಬ್ಬರೂ ಒಟ್ಟಿಗೆ ಸೇರಿದರೆ 73 ಆಗುತ್ತದೆ. ಆಗಸ್ಟ್ 15. 2020 ರಂದು ಭಾರತ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತದೆ. ಹೀಗಾಘಿ ನಿವೃತ್ತಿ ಘೋಷಿಸುತ್ತಿದ್ದೇವೆ. ನನ್ನ ಪ್ರಕಾರ, ನಿವೃತ್ತಿಗೆ ಅದಕ್ಕಿಂತ ಉತ್ತಮವಾದ ದಿನವಿರಲಿಲ್ಲ ಎಂದು ಹೇಳಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment