Advertisment

ಕರ್ನಾಟಕದಲ್ಲಿ ಮೀನು ತಿಂದು ಇಬ್ಬರು ಸಾವು.. ಗ್ರಾಮದ 15 ಮಂದಿ ಅಸ್ವಸ್ಥ, ಭಾರೀ ಆತಂಕ

author-image
Ganesh
Updated On
ಕರ್ನಾಟಕದಲ್ಲಿ ಮೀನು ತಿಂದು ಇಬ್ಬರು ಸಾವು.. ಗ್ರಾಮದ 15 ಮಂದಿ ಅಸ್ವಸ್ಥ, ಭಾರೀ ಆತಂಕ
Advertisment
  • ರವಿಕುಮಾರ್ (46), ಪುಟ್ಟಮ್ಮ 50) ಮೃತ ದುರ್ದೈವಿಗಳು
  • ಗ್ರಾಮಕ್ಕೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಭೇಟಿ, ಪರಿಶೀಲನೆ
  • ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲು, ತನಿಖೆ ಆರಂಭ

ಹಾಸನ: ಮೀನು ತಿಂದು ಇಬ್ಬರು ಸಾವನ್ನಪ್ಪಿ ಹಲವು ಮಂದಿ ಅಸ್ವಸ್ಥರಾದ ಘಟನೆ ಅರಕಲಗೂಡು ತಾಲೂಕಿನ ಬಸವಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisment

ರವಿಕುಮಾರ್ (46), ಪುಟ್ಟಮ್ಮ 50) ಮೃತ ದುರ್ದೈವಿಗಳು. ಬಸವಹಳ್ಳಿ ಗ್ರಾಮದ ರವಿಕುಮಾರ್, ಕೆ.ಆರ್.ನಗರ ತಾಲೂಕಿನ ಸನ್ಯಾಸಿಪುರದ ಪುಟ್ಟಮ್ಮ ಸಾವನ್ನಪ್ಪಿದ್ದಾರೆ. ನೀರಿಲ್ಲದೇ ಬತ್ತಿ ಹೋಗಿದ್ದ ಗ್ರಾಮದ ಕೆರೆಯ ಮೀನನ್ನು ಗ್ರಾಮಸ್ಥರು ಹಿಡಿದಿದ್ದರು. ಖಾಲಿಯಾಗಿದ್ದ ಕೆರೆಯ ಕೆಸರಿನಲ್ಲಿದ್ದ ಮೀನನ್ನು ಹಿಡಿದುಕೊಂಡು ಗ್ರಾಮಸ್ಥರು ಹೋಗಿದ್ದರು.

ಇದನ್ನೂ ಓದಿ:ಮಳೆಯ ಬಗ್ಗೆ ಬಿಗ್ ಅಪ್​ಡೇಟ್.. ಮುಂದಿನ ನಾಲ್ಕು ದಿನ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ..!

ಮೀನುಗಳನ್ನು ಹಿಡಿದು ಅಡುಗೆ ಮಾಡಿ ಊಟ ಮಾಡಿದ್ದ ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ. ಊಟ ಮಾಡಿದ ನಂತರ ಹದಿನೈದಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥರು ಅರಕಲಗೂಡು ಹಾಗೂ ಹಾಸನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಮಕ್ಕೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisment

ಇದನ್ನೂ ಓದಿ:ಕೋವಿಶೀಲ್ಡ್ ಪಡೆದ ಬೆನ್ನಲ್ಲೇ ಇಬ್ಬರು ಸಾವು; ಮೂರು ವರ್ಷದ ಬಳಿಕ ಸೀರಮ್ ಸಂಸ್ಥೆ ವಿರುದ್ಧ ಕೇಸ್..! ​

ಇದನ್ನೂ ಓದಿ:ಇನ್​ಸ್ಟಾದಲ್ಲಿ ಅರಳಿದ ಒಂದು ಪ್ರೀತಿ..! ಯಾಕೆ ಹೀಗೆ ಆಯಿತು.. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.. ಏನಂತೀರಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment