ಸರಕು ತುಂಬಿದ ಲಾರಿ ಮತ್ತು ಎಸ್ಯುವಿ ಕಾರಿನ ನಡುವೆ ಭೀಕರ ಅಪಘಾತ
ಕಬ್ಬಿಣದ ಸರಳುಗಳನ್ನು ತುಂಬಿಕೊಂಡು ವೇಗವಾಗಿ ಬರುತ್ತಿದ್ದ ಲಾರಿ
ಮದುವೆ ಪಾರ್ಟಿಗೆಂದು ಹೊರಟ ಆರು ಜನರು ಮಸಣ ಸೇರಿದರು
ಸರಕು ತುಂಬಿದ ಲಾರಿಯೊಂದು ಎಸ್ಯುವಿ ಕಾರಿನ ಮೇಲೆ ಬಿದ್ದ ಪರಿಣಾಮ ಆರು ಮಂದಿ ಸಾವನ್ನಪ್ಪಿದ ಘಟನೆ ಬಿಹಾರದ ಭಾಗಲ್ಪುರ್ದಲ್ಲಿ ನಡೆದಿದೆ. ಘೋಘಾ ಪೊಲೀಸ್ ಠಾಣಾ ವ್ಯಾಪ್ತಿಯ ಆಮಾಪುರ್ ಗ್ರಾಮದ ಸಮೀಪವಿರುವ ಹೆದ್ದಾರಿ 80ರಲ್ಲಿ ಈ ಘಟನೆ ಸಂಭವಿಸಿದೆ.
ಲಾರಿ ಕಬ್ಬಿಣದ ಸರಳುಗಳನ್ನು ತುಂಬಿಕೊಂಡು ವೇಗವಾಗಿ ಬರುತ್ತಿತ್ತು. ಈ ವೇಳೆ ಲಾರಿ ಟೈರ್ ಸ್ಫೋಟಗೊಂಡಿದೆ. ಸ್ಫೋಟಗೊಂಡಂತೆ ಕಾರಿನ ಮೇಲೆ ಬಂದು ಬಿದ್ದಿದೆ.
ಇನ್ನು ಎಸ್ಯುವಿ ಕಾರಿನಲ್ಲಿದ್ದವರು ಮದುವೆ ಪಾರ್ಟಿಗೆಂದು ತೆರಳುತ್ತಿದ್ದರು. ಕಹಲ್ಗಾಂವ್ನ ಶ್ರೀಮಂತ್ಪುರಕ್ಕೆ ಪ್ರಯಾಣಿಸುತ್ತಿದ್ದರು. ಆದರೆ ಈ ವೇಳೆ ದುರ್ಘಟನೆ ನಡೆದಿದೆ.
ಇದನ್ನೂ ಓದಿ: ಮಾನಸಿಕ ಅಸ್ವಸ್ಥ ಬಾಲಕಿಯನ್ನೂ ಬಿಡದ ಕಾಮುಕ.. ಗರ್ಭಿಣಿ ಮಾಡಿದ ಅತ್ಯಾಚಾರಿಗೆ 106 ವರ್ಷ ಜೈಲು ಶಿಕ್ಷೆ
ಮೃತದೇಹಗಳನ್ನು ಕಾರಿನಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ