newsfirstkannada.com

ಕಿಂಗ್​ ಕೊಹ್ಲಿಯ ಆರೆಂಜ್​ ಕ್ಯಾಪ್ ಕಸಿದುಕೊಳ್ತಾರಾ CSK ಕ್ಯಾಪ್ಟನ್​.. ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?

Share :

Published May 12, 2024 at 1:42pm

    ಸಿಎಸ್​ಕೆ- ಆರ್​​ಸಿಬಿ ಮಧ್ಯೆ ಆರೆಂಜ್ ಕ್ಯಾಪ್​​ಗಾಗಿ ಹೇಗಿದೆ ಪೈಪೋಟಿ?

    RCBಯ ಕೊಹ್ಲಿ ಬಳಿಯೇ ಬಹುತೇಕ ಉಳಿದಿರೋ ಆರೆಂಜ್ ಕ್ಯಾಪ್

    ಪರ್ಪಲ್ ಕ್ಯಾಪ್​ಗಾಗಿ ಯಾರ್, ಯಾರ ನಡುವೆ ಜಿದ್ದಾಜಿದ್ದಿ ಇದೆ ಗೊತ್ತಾ?

2024 IPL ಟೂರ್ನಿ ಆದಷ್ಟು ಕೊನೆ ಹಂತದಲ್ಲಿದ್ದು ಇನ್ನೇನು ಪ್ಲೇ ಆಫ್ ಮ್ಯಾಚ್​ಗಳು ಮುಕ್ತಾಯಗೊಳ್ಳಲ್ಲಿವೆ. ಇದರ ಮಧ್ಯೆ ಪಂದ್ಯಗಳಲ್ಲಿ ಆರೆಂಜ್ ಕ್ಯಾಪ್ ಹಾಗೂ ಪರ್ಪಲ್ ಕ್ಯಾಪ್ ಪೈಪೋಟಿ ಕೂಡ ಮಸ್ತ್ ಮಜಾ ನೀಡುತ್ತಿದೆ. ಐಪಿಎಲ್​ ಆರಂಭದಿಂದಲೂ ಆರೆಂಜ್ ಕ್ಯಾಪ್ ಆರ್​​ಸಿಬಿಯ ಸ್ಟಾರ್​ ಪ್ಲೇಯರ್​ ವಿರಾಟ್​ ಕೊಹ್ಲಿ ಬಳಿಯೇ ಇದೆ ಎನ್ನಬಹುದು. ಇನ್ನು ಪರ್ಪಲ್ ಕ್ಯಾಂಪ್ ಅಂತೂ ಕೆಲ ಆಟಗಾರರ ಬಳಿ ಹೋಗಿ ಮತ್ತೆ ಬೇರೆಯವರ ಬಳಿಗೆ ಹೋಗುತ್ತಿದೆ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಈ 17ನೇ ಸೀಸನ್​ನಲ್ಲಿ 12 ಪಂದ್ಯಗಳಿಂದ 634 ರನ್​ಗಳನ್ನು ಗಳಿಸಿ ಆರೆಂಜ್​ ಕ್ಯಾಪ್ ಪಡೆದುಕೊಂಡಿದ್ದಾರೆ. ಈ ಟೂರ್ನಿಯಲ್ಲಿ 600 ರನ್​ಗಳ ಗಡಿ ದಾಟಿದ ಮೊದಲ ಬ್ಯಾಟ್ಸ್​​ಮನ್ ಕೊಹ್ಲಿ ಆಗಿದ್ದಾರೆ. ಈ ಮೂಲಕ ಆವರೇಜ್ 70.44 ಇದ್ದು ಹಾಗೂ ಸ್ಟ್ರೈಕ್​ರೇಟ್​ 153.51 ರಷ್ಟು ಇದೆ.

ಇದನ್ನೂ ಓದಿ: ಸೂಪರ್ ಸಂಡೇ.. ಫ್ಯಾನ್ಸ್​ಗೆ ಡಬಲ್ ಧಮಾಕಾ.. ರಾಜಸ್ಥಾನ- ಚೆನ್ನೈ ಫಲಿತಾಂಶದ ಮೇಲೆ RCB ಭವಿಷ್ಯ!

ಸಿಎಸ್​ಕೆ ತಂಡದ ಕ್ಯಾಪ್ಟನ್​ ರುತುರಾಜ್ ಗಾಯಕ್ವಾಡ್ 12 ಪಂದ್ಯಗಳಿಂದ 541 ರನ್ ಗಳಿಸಿದ್ದು ಟೂರ್ನಿಯಲ್ಲಿ 2ನೇ ಅತ್ಯಂತ ಹೆಚ್ಚು ರನ್ ಗಳಿಸಿದವರು ಆಗಿದ್ದಾರೆ. ಇವರು ವಿರಾಟ್​ ಕೊಹ್ಲಿಗಿಂತ ಮುಂದೆ ಹೋಗಬೇಕು ಎಂದರೆ ಬರೋಬ್ಬರಿ 94 ರನ್​ಗಳನ್ನ ಗಳಿಸಬೇಕಿದೆ. ಇದು ಇವತ್ತಿನ ಪಂದ್ಯದಲ್ಲಿ ಸಾಧ್ಯವಾದರೆ ಕೊಹ್ಲಿ ಒಂದು ಸ್ಥಾನ ಹಿಂದಕ್ಕೆ ಬರುತ್ತಾರೆ. ಗಾಯಕ್ವಾಡ್ ಆವರೇಜ್ 54.10 ಇದ್ದು ಹಾಗೂ ಸ್ಟ್ರೈಕ್​ರೇಟ್​ 145.82 ರಷ್ಟು ಹೊಂದಿದ್ದಾರೆ.

SRH ಓಪನರ್ ಬ್ಯಾಟ್ಸ್​ಮನ್​ ಟ್ರಾವಿಸ್ ಹೆಡ್ 11 ಪಂದ್ಯಗಳಿಂದ 533 ರನ್​ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. ಗುಜರಾತ್ ಓಪನರ್ ಸಾಯಿ ಸುದರ್ಶನ್ 12 ಪಂದ್ಯಗಳಿಂದ 527 ರನ್​ಗಳನ್ನು ಕಲೆ ಹಾಕಿದ್ದಾರೆ.

ಇದನ್ನೂ ಓದಿ: ಪ್ಲೇ ಆಫ್​ ಎಂಟ್ರಿ ಜೊತೆಗೆ ಅದೃಷ್ಟದ ಹುಡುಕಾಟದಲ್ಲಿ RCB.. ಭಯ ಹೆಚ್ಚಿಸಿದ ಡೆಲ್ಲಿಯ ಈ ಇಬ್ಬರ ಬ್ಯಾಟಿಂಗ್​!

ಪರ್ಪಲ್ ಕ್ಯಾಪ್ ಹೀರೋ ಬೂಮ್ರಾ

ಈ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದುಕೊಂಡ ಮುಂಬೈ ಇಂಡಿಯನ್ಸ್​ ಟೀಮ್​ನ ಬೂಮ್ರಾ 6.48 ಎಕನಾಮಿಯೊಂದಿಗೆ 13 ಪಂದ್ಯಗಳಲ್ಲಿ 20 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗಿಟ್ಟಿಸಿಕೊಂಡಿದ್ದಾರೆ. ಇವರನ್ನ ಬಿಟ್ಟರೇ 2ನೇ ಸ್ಥಾನದಲ್ಲಿ ಪಂಜಾಬ್​ನ ಹರ್ಷಲ್ ಪಟೇಲ್ 12 ಮ್ಯಾಚ್​ಗಳಿಂದ 20 ವಿಕೆಟ್ ಪಡೆದಿದ್ದಾರೆ. ಆದ್ರೆ ಹರ್ಷಲ್ ಎಕನಾಮಿ 9.75 ಇದ್ದು ದ್ವಿತೀಯ ಸ್ಥಾನದಲ್ಲಿದ್ದಾರೆ. ಕೆಕೆಆರ್​ನ ವರುಣ್ ಚಕ್ರವರ್ತಿ 12 ಗೇಮ್​ನಿಂದ 18 ವಿಕೆಟ್ ಪಡೆದು 3ನೇ ಸ್ಥಾನದಲ್ಲಿದ್ದಾರೆ. ಸದ್ಯ ಪರ್ಪಲ್ ಕ್ಯಾಪ್ ಈ ಮೂವರ ನಡುವೆ ಕಾಳಗ ತಂದಿಟ್ಟಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕಿಂಗ್​ ಕೊಹ್ಲಿಯ ಆರೆಂಜ್​ ಕ್ಯಾಪ್ ಕಸಿದುಕೊಳ್ತಾರಾ CSK ಕ್ಯಾಪ್ಟನ್​.. ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?

https://newsfirstlive.com/wp-content/uploads/2024/05/VIRAT_KOHLI_CSK.jpg

Load More