Advertisment

ಕೆನಡಾ.. ಪಾಕ್​ ಆಯ್ತು.. ಈಗ ಮಿಷನ್ INDIA.. ಇದು ಟೀಂ ಇಂಡಿಯಾಗೆ ಎಚ್ಚರಿಕೆಯ ಕರೆಗಂಟೆ..!

author-image
Ganesh
Updated On
ಯಾರು ಏನೇ ಹೇಳಲಿ.. ಈ ಇಬ್ಬರ ಆಟದಿಂದ ಭಾರತಕ್ಕೆ ಜಯ.. ಕ್ರೆಡಿಟ್ ಯಾರಿಗೆ ಸಿಗಬೇಕು ಗೊತ್ತಾ?
Advertisment
  • ಎಚ್ಚರ ಬಾಯ್ಸ್​.. ಎಚ್ಚರ.. ಯಾಮಾರಿದ್ರೆ ಸೋಲು ಫಿಕ್ಸ್​!
  • ಗೆಲುವು ಸುಲಭದಲ್ಲ.. ಲಘುವಾಗಿ ಪರಿಗಣಿಸುವಂತಿಲ್ಲ..!
  • ಅಮೆರಿಕಾಗೆ ಇದೆ ಟಫ್ ಕಾಂಫಿಟೇಷನ್ ನೀಡುವ ತಾಕತ್ತು..!

ಟಿ20 ಕ್ರಿಕೆಟ್​ನಲ್ಲಿ ಅಚ್ಚರಿಯ ಫಲಿತಾಂಶಗಳಿಗೆ ಕೊರತೆ ಇಲ್ಲ. ಅದು ಪ್ರಸಕ್ತ ಟಿ20 ವಿಶ್ವಕಪ್​ನಲ್ಲೂ ಸಾಗಿದೆ. ಪಾಕಿಸ್ತಾನಕ್ಕೆ ಅಮೆರಿಕಾ ನೀಡಿರುವ ಸೋಲಿನ ಬರೆ, ಪರೋಕ್ಷ ಟೀಮ್ ಇಂಡಿಯಾಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.

Advertisment

ಗೆಲುವು ಯಾರಪ್ಪನ ಸ್ವತ್ತಲ್ಲ. ಸಾಂಘೀಕ ಹೋರಾಟ ನಡೆಸಿದ್ರೆ ಎಂಥಹ ಬಲಾಢ್ಯ ತಂಡಗಳನ್ನಾದರು ಮಣ್ಣು ಮುಕ್ಕಿಸಬಹುದು. ಇದಕ್ಕೆ ಪಾಕಿಸ್ತಾನ​ ಹಾಗೂ ಅಮೆರಿಕಾ ನಡುವಿನ ಪಂದ್ಯದ ಫಲಿತಾಂಶವೇ ಸಾಕ್ಷಿ. ಪ್ರತಿ ವಿಶ್ವಕಪ್​​ಗಳಲ್ಲಿ ಒಂದಿಲ್ಲೊಂದು ಅಚ್ಚರಿಯ ಫಲಿತಾಂಶ ಹೊರ ಬೀಳುತ್ತೆ. ಹಾಟ್​ ಫೇವರಿಟ್ಸ್​ ತಂಡಗಳಿಗೆ ಕ್ರಿಕೆಟ್​ ಶಿಶುಗಳೇ ಬಿಗ್ ಶಾಕ್ ನೀಡಿವೆ. ಅಂಥದ್ದೇ ಶಾಕ್ ಬಾಬರ್ ಅಜಂ ನೇತೃತ್ವದ ಪಾಕ್ ತಂಡಕ್ಕೆ ಕ್ರಿಕೆಟ್ ಶಿಶು ಅಮೆರಿಕ ನೀಡಿದೆ. ಐತಿಹಾಸಿಕ ಗೆಲುವಿನೊಂದಿಗೆ ಇತರೆ ತಂಡಗಳಿಗೂ ಪರೋಕ್ಷ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಇದನ್ನೂ ಓದಿ:ರಾಜ್ಯದ ಐದು ಸಂಸದರಿಗೆ ಖಾತೆ ಹಂಚಿಕೆ.. ಯಾರಿಗೆ ಯಾವ ಖಾತೆ ಹಂಚಿಕೆ ಆಗಿದೆ..?

publive-imageಎಚ್ಚರ.. ಎಚ್ಚರ..!! ಯಾಮಾರಿದ್ರೆ ಸೋಲು ಫಿಕ್ಸ್​!
ಮೆಗಾ ಟೂರ್ನಿಗಳಲ್ಲಿ ಅಚ್ಚರಿ ಫಲಿತಾಂಶಗಳು ಹೊಸದಲ್ಲ. ಇಂಥಹ ಅಚ್ಚರಿಯ ಫಲಿತಾಂಶಗಳೇ, ಬಲಿಷ್ಠ ತಂಡಗಳ ಹಣೆಬರಹ ಬದಲಿಸಿವೆ. ಇಂತಹ ಅಚ್ಚರಿ ಫಲಿತಾಂಶಗಳನ್ನೇ ನೀಡ್ತಿರುವ ಅಮೆರಿಕಾ, ಈಗ ಟೀಮ್ ಇಂಡಿಯಾ ಎದುರಿನ ಗೆಲುವಿಗೆ ಕನಸು ಕಾಣ್ತಿದೆ. ಹೌದು! ಮೊದಲ ಪಂದ್ಯದಲ್ಲಿ ಕೆನಡಾ ತಂಡವನ್ನ ಮಣಿಸಿರುವ ಅಮೆರಿಕಾ, ಪಾಕ್​ ತಂಡಕ್ಕೂ ಅಘಾತ ನೀಡಿದೆ. ಈ ಬೆನ್ನಲ್ಲೇ ಅಮೆರಿಕಾದ ದೃಷ್ಟಿ, ಟೀಮ್ ಇಂಡಿಯಾ ಮೇಲೆ ನೆಟ್ಟಿದೆ. ತವರಿನ ಲಾಭದಲ್ಲೇ ರೋಹಿತ್ ಪಡೆಯ ಎದುರು ಗೆಲ್ಲೋ ಹಂಬಲದಲ್ಲಿದೆ. ಹೀಗಾಗಿ ಅಮೆರಿಕಾ ಎದುರು ಟೀಮ್ ಇಂಡಿಯಾ ಎಚ್ಚರಿಕೆಯ ಆಟವಾಡಬೇಕಿದೆ.

Advertisment

ಗೆಲುವು ಸುಲಭದಲ್ಲ..! ಲಘುವಾಗಿ ಪರಿಗಣಿಸುವಂತಿಲ್ಲ..!
ಕ್ರಿಕೆಟ್​​​ನಲ್ಲಿ ಒಂದೇ ಒಂದು ಎಸೆತ, ಒಂದೇ ಒಂದು ಅದ್ಭುತ ಕ್ಯಾಚ್.. ಒಂದೇ ಒಂದು ಓವರ್.. ಇಡೀ ಪಂದ್ಯದ ಚಿತ್ರಣ ಬದಲಿಸುತ್ತೆ. ಹೀಗೆ ತಂಡದ ಫಲಿತಾಂಶ ಬದಲಿಸುವ ಬಿಗ್ ಮ್ಯಾಚ್​ ವಿನ್ನರ್​ಗಳು ಅಮೆರಿಕ ತಂಡದಲ್ಲಿದ್ದಾರೆ. ತವರಿನ ಅನುಭವದ ಜೊತೆಗೆ ಕಂಡೀಷನ್ಸ್​ ಬಗ್ಗೆ ಚೆನ್ನಾಗಿ ಅರಿತಿರುವ ಅಮೆರಿಕಾವನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸುವಂತಿಲ್ಲ. ಟಿ20 ವಿಶ್ವಕಪ್​ಗೂ ಮುನ್ನ ಬಾಂಗ್ಲಾ ತಂಡವನ್ನೇ ಬಗ್ಗುಬಡಿದಿದ್ದ ಅಮೆರಿಕಾ, ಟೀಮ್ ಇಂಡಿಯಾಕ್ಕೂ ಟಫ್​ ಕಾಂಪಿಟೇಷನ್ ನೀಡಬಲ್ಲದು.

ಇದನ್ನೂ ಓದಿ:ಮಳೆಯೋ ಮಳೆ.. ರಾಜ್ಯದ ಈ ಜಿಲ್ಲೆಗಳಿಗೆ ರೆಡ್​​ ಅಲರ್ಟ್​.. ಎಲ್ಲೆಲ್ಲಿ ಏನೆಲ್ಲ ಆಯ್ತು..?

ಅಮೆರಿಕಾ ತಂಡದಲ್ಲಿದ್ದಾರೆ ನಾನಾ ದೇಶದ ಆಟಗಾರರು
ಒಂದೆಡೆ ತವರಿನ ಲಾಭ ಹೊಂದಿರುವ ಅಮೆರಿಕಾಗೆ, ಮತ್ತೊಂದೆಡೆ ನಾನಾ ದೇಶದ ಆಟಗಾರರ ದಂಡೇ ಇದೆ. ಬಿಗ್ ಮ್ಯಾಚ್​ ವಿನ್ನರ್​ಗಳ ಶಕ್ತಿಯಿದೆ. ಅಪಾಯಕಾರಿ ಕೋರಿ ಆ್ಯಂಡರ್ಸನ್ ಬಲವಿದೆ. ಬ್ಯಾಟಿಂಗ್ ಡೆಪ್ತ್​ ಜೊತೆಗೆ ಒಂದೊಳ್ಳೆ ಬೌಲಿಂಗ್ ಇದೆ. ಭಾರತದ ಮೂಲದ ಕ್ಯಾಪ್ಟನ್ ಮೊನಾಕ್​ ಪಾಟೀಲ್, ನಿತೀಶ್ ಕುಮಾರ್, ಸೌರಭ್‌ ನೇತ್ರವಲ್ಕರ್‌, ಹರ್ಮೀತ್ ಸಿಂಗ್ ತಂಡದ ಬಲವೇ ಆಗಿದ್ದಾರೆ. ಹೀಗಾಗಿ ಮೈಯೆಲ್ಲಾ ಕಣ್ಣಾಗಿಸಿಕೊಂಡೇ ಟೀಮ್ ಇಂಡಿಯಾ, ಅಖಾಡಕ್ಕೆ ಇಳಿಯಬೇಕಾಗುತ್ತೆ. ಇಲ್ಲ ಅಪಾಯ ತಪ್ಪಿದಿಲ್ಲ.

Advertisment

ಒಟ್ನಲ್ಲಿ.! ಪಾಕ್​​​​​​ ಥ್ರೆಟ್ ಆಗುತ್ತಾ ಎಂಬ ಚಿಂತೆಯಲ್ಲಿದ್ದ ಟೀಮ್ ಇಂಡಿಯಾ, ಈಗ ಅಮೆರಿಕಾ ಬಗ್ಗೆಯೇ ಯೋಚಿಸುವಂತಾಗಿದ್ದು, ಅಸಲಿ ಅಖಾಡದಲ್ಲಿ ಯಾವ ರೀತಿಯ ರಣತಂತ್ರ ರೂಪಿಸಿ ಗೆಲ್ಲುತ್ತೆ ಅನ್ನೋದು ಭಾರೀ ಕ್ಯೂರಿಯಾಸಿಟಿ ಹುಟ್ಟಿಸಿದೆ.

ಇದನ್ನೂ ಓದಿ:ಪಾಕ್ ವಿರುದ್ಧ ಗೆದ್ದರೂ ಟೀಂ ಇಂಡಿಯಾದಲ್ಲಿ ಇಲ್ಲ ಖುಷಿ.. ಇದೇ ತಪ್ಪು ಮುಂದುವರಿದ್ರೆ ಭಾರೀ ಕಷ್ಟ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment