Advertisment

ಅತ್ತೆ ಮನೆಗೆ ಬಂದು ಪತ್ನಿ ಮೇಲೆ ಗುಂಡು ಹಾರಿಸಿದ; ತಪ್ಪಿಸಿಕೊಂಡು ಓಡಿ ಹೋದ ಹೆಂಡತಿ.. ಆಮೇಲೆ ಆಗಿದ್ದೇ ಬೇರೆ..!

author-image
Ganesh
Updated On
ಅತ್ತೆ ಮನೆಗೆ ಬಂದು ಪತ್ನಿ ಮೇಲೆ ಗುಂಡು ಹಾರಿಸಿದ; ತಪ್ಪಿಸಿಕೊಂಡು ಓಡಿ ಹೋದ ಹೆಂಡತಿ.. ಆಮೇಲೆ ಆಗಿದ್ದೇ ಬೇರೆ..!
Advertisment
  • ಪತ್ನಿ ಮಕ್ಕಳ ಕರ್ಕೊಂಡು ಹೋಗಲು ಬಂದು ಹೀಗಾ ಮಾಡೋದು?
  • ವಿಷಯ ಗೊತ್ತಾಗ್ತಿದ್ದಂತೆ ಬೆಚ್ಚಿಬಿದ್ದ ಅಕ್ಕಪಕ್ಕದ ನಿವಾಸಿಗಳು
  • ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಉತ್ತರ ಪ್ರದೇಶದ ಔರೈಯಾದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಪತ್ನಿಯನ್ನು ಮನೆಗೆ ಕರೆದುಕೊಂಡು ಅತ್ತೆ ಮನೆಗೆ ಹೋಗಿದ್ದ ಅಳಿಯ, ಬಂದೂಕಿನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಯಾವುದಕ್ಕೂ ಮೊದಲು ಪತ್ನಿಗೂ ಗುಂಡು ಹಾರಿಸಿದ್ದಾನೆ. ಆದರೆ ಪತ್ನಿ ತಪ್ಪಿಸಿಕೊಂಡು ಪರಾರಿಯಾಗಿದೆ. ಪೊಲೀಸರು ಮೃತ ವ್ಯಕ್ತಿಯ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.

Advertisment

ಆಗಿದ್ದೇನು?
ಔರೈಯಾ ಜಿಲ್ಲೆಯ ಬಿಧುನಾ ಕೊಟ್ವಾಲಿಯ ರತನ್​​ಪುರದಲ್ಲಿ ಕೃತ್ಯ ನಡೆದಿದೆ. ಬಿಕ್ರಂ ಎಂಬಾತ ತನ್ನ ಹೆಂಡತಿ ಪೂಜಾಳನ್ನು ಕರೆದುಕೊಂಡು ಹೋಗಲು ಅತ್ತೆಯ ಮನೆಗೆ ಬಂದಿದ್ದ. ಆದರೆ ಪತ್ನಿ ಗಂಡನ ಮನೆಗೆ ಹೋಗಲು ಒಪ್ಪಲಿಲ್ಲ. ಕೋಪಿಸಿಕೊಂಡ ಬಿಕ್ರಂ ಬೈಕ್​​ನಲ್ಲಿ ಇಟ್ಟುಕೊಂಡು ಬಂದಿದ್ದ ಪಿಸ್ತೂಲ್​​ ತೆಗೆದು ಪೂಜಾಳ ಮೇಲೆ ಗುಂಡು ಹಾರಿಸಿದ್ದಾನೆ.

ಇದನ್ನೂ ಓದಿ:ಕೊಹ್ಲಿಯಿಂದ ಸಿದ್ಧತೆಗೆ ತೊಡಕು.. T20 ವಿಶ್ವಕಪ್​​ನಲ್ಲಿ ಸಮಸ್ಯೆ ತಂದೊಡ್ತಾರಾ ಕಿಂಗ್?

publive-image

ಗುಂಡು ಹಾರಿಸಿದ ತಕ್ಷಣ ಅಕ್ಕಪಕ್ಕದಲ್ಲಿ ಕೋಲಾಹಲ ಉಂಟಾಯಿತು. ಕೊನೆಗೆ ಪೂಜಾ ಸ್ಥಳದಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾಳೆ. ನಂತರ ಬಿಕ್ರಂ ಅದೇ ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುಂಡು ತಗುಲಿದ ತಕ್ಷಣ ಆತ ರಕ್ತಸ್ರಾವವಾಗಿ ನೆಲದ ಮೇಲೆ ಬಿದ್ದಿದ್ದ. ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ.

Advertisment

ವರದಿಗಳ ಪ್ರಕಾರ.. ಬಿಕ್ರಂ ಮತ್ತು ಪೂಜಾ 2009ರಲ್ಲಿ ಮದುವೆ ಆಗಿದ್ದರು. ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಕೆಲವು ದಿನಗಳ ಹಿಂದೆ ಪತಿ ಹಾಗೂ ಪತ್ನಿ ನಡುವೆ ಜಗಳವಾಗಿತ್ತು. ಇದೇ ಕಾರಣಕ್ಕೆ ಪೂಜಾ ಗಂಡನ ಮನೆಯಿಂದ ತಾಯಿ ಮನೆಗೆ ಬಂದಿದ್ದಳು. ಹೆಂಡತಿ ಹಾಗೂ ಮಕ್ಕಳನ್ನು ಕರೆದುಕೊಂಡು ಹೋಗಲು ಆತ ಇಟಾಹ್​ನಿಂದ ಬಂದಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಸಮಸ್ಯೆ ಇದ್ದಾಗ ಮಾತ್ರ KL ರಾಹುಲ್ ನೆನಪಾಗ್ತಾರೆ.. ಈ ವಿಚಾರದಲ್ಲಿ ತಪ್ಪು ಮಾಡಿಬಿಡ್ತಾ ಬಿಸಿಸಿಐ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment