/newsfirstlive-kannada/media/post_attachments/wp-content/uploads/2024/08/varamahalaxmi5.jpg)
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ತಯಾರಿ ಜೋರಾಗಿ ನಡೆಯುತ್ತಿದೆ. ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹಬ್ಬದ ವಸ್ತುಗಳ ಖರೀದಿಗಾಗಿ ಜನ ಮುಗಿಬಿದ್ದಿದ್ದಾರೆ. ಅದರಲ್ಲೂ ಕೆ.ಆರ್. ಮಾರ್ಕೆಟ್ನಲ್ಲಿ ಜನಸಾಗರವೇ ಹರಿದು ಬಂದಿತ್ತು. ಈ ಬಾರಿ ವರಮಹಾಲಕ್ಷ್ಮೀ ಹಬ್ಬವು ಆಗಸ್ಟ್ 16 ಶುಕ್ರವಾರದಂದೇ ಬಂದಿದೆ. ಹೀಗಾಗಿ ಮಹಿಳೆಯರು ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಕಲಾವಿದರ ಮೇಲೆ ನಾಗದೈವ ಕೆಂಡ.. ಸ್ಯಾಂಡಲ್‌ವುಡ್‌ನಲ್ಲಿ ಆಗಿರೋ ದೊಡ್ಡ ತಪ್ಪೇನು? ಪೂಜೆಯಲ್ಲಿ ಆಗಿದ್ದೇನು?
ಶುಭ ಶುಕ್ರವಾರ ಬಂದ ವರಮಹಾಲಕ್ಷ್ಮಿ ಹಬ್ಬವನ್ನು ಹೇಗೆ ಮಾಡಬೇಕು? ಯಾವ ಮುಹೂರ್ತದಲ್ಲಿ ಮಾಡಿದ್ರೆ ಒಳ್ಳೆಯದು? ಯಾವ ರೀತಿಯಲ್ಲಿ ಪೂಜೆ ಮಾಡಬೇಕು? ಪೂಜೆಗೆ ಯಾವೆಲ್ಲಾ ತಿಂಡಿ ತಿನಿಸುಗಳನ್ನು ರೆಡಿ ಮಾಡಿಕೊಳ್ಳಬೇಕು ಎಂಬೆಲ್ಲಾ ಪ್ರಶ್ನೆಗಳು ಮಹಿಳೆಯರಲ್ಲಿ ಮೂಡಿರುತ್ತದೆ. ಹಾಗಾಗಿಯೇ ಸಾಕಷ್ಟು ಮಹಿಳೆಯರು ಪುರೋಹಿತರ ಮೋರೆ ಹೋಗುತ್ತಾರೆ. ಇನ್ನು, ಈ ಬಾರಿಯೂ ಶುಭ ಶುಕ್ರವಾರ ದಿನವೇ ವರಮಹಾಲಕ್ಷ್ಮಿ ಹಬ್ಬ ಬಂದಿದೆ. ಶುಕ್ರವಾರದ ದಿನ ಲಕ್ಷ್ಮಿ ಆರಾಧನೆಗೆ ವಿಶೇಷವಾದ ದಿನ. ಆದರೆ ಕೆಲ ವಿಶೇಷ ಸಂದರ್ಭದಲ್ಲಿ ಲಕ್ಷ್ಮಿಯನ್ನು ಆರಾಧಿಸಿದರೆ ಲಕ್ಷ್ಮಿ ಕೃಪೆ ಸದಾ ನಮ್ಮ ಮೇಲಿರುತ್ತದೆ ಎಂದು ಹೇಳಲಾಗುತ್ತದೆ.
ಹೌದು, ವರಮಹಾಲಕ್ಷ್ಮಿಯ ದಿನದಂದು ಅಷ್ಟಲಕ್ಷ್ಮಿಯನ್ನು ಪೂಜಿಸಲಾಗುವುದು. ಈ ವರ್ಷ ಆಗಸ್ಟ್ 16ರಂದು ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತಿದೆ. ಸಿಂಹ ಲಗ್ನದಲ್ಲಿ ಅಂದರೆ ಬೆಳಗ್ಗೆ 05:54ರಿಂದ 08:13ರೊಳಗ ವರಮಹಾಲಕ್ಷ್ಮಿ ಪೂಜಿಸಬೇಕು. ನಂತರ ಮಧ್ಯಾಹ್ನ ವೃಶ್ಚಿಕ ಲಗ್ನ ಮಧ್ಯಾಹ್ನ 12:53 ರಿಂದ 03:13 ರವರೆಗೂ ಸಮಯವಿದೆ. ನಂತರ ಪ್ರದೋಷ ಅಂದರೆ ಸಂಜೆಯ ಸಮಯದಲ್ಲಿ ವರಮಹಾಲಕ್ಷ್ಮಿ ವಿಶೇಷವಾದ ಪೂಜೆ ಮಾಡಬಹುದು.
ಇದನ್ನೂ ಓದಿ: ರೀಲ್ಸ್ ಚೆಲುವೆಯ ದುರಂತ.. ಬೆಟ್ಟದ ಮೇಲೆ ನಡೆದ ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ; ಆಗಿದ್ದೇನು?
ಸಾಮಾನ್ಯವಾಗಿ ವರಲಕ್ಷ್ಮಿ ವ್ರತವನ್ನು ಆಚರಿಸುವವರು ತಮ್ಮ ಮನೆಯಲ್ಲಿ ಕಲಶವನ್ನು ಇಟ್ಟುಕೊಂಡು ಮಹಾಲಕ್ಷ್ಮಿ ಪೂಜಿಸುತ್ತಾರೆ. ವರಲಕ್ಷ್ಮಿ ಪೂಜೆಯನ್ನು ಸಾಮಾನ್ಯವಾಗಿ ಮಾಡದವರು ಕೂಡ ಮೂರು ವಸ್ತುಗಳಿಂದ ಮಹಾಲಕ್ಷ್ಮಿಯ ಪೂಜೆ ಮಾಡಬಹುದು. ಈ ಪೂಜೆಯನ್ನು ಮಾಡಿದ್ರೆ ಲಕ್ಷ್ಮಿಯ ಕೃಪೆಯಿಂದ ಸಕಲ ಸಂಪತ್ತು ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ವರಮಹಾಲಕ್ಷ್ಮಿಯ ಪೂಜೆ ಮಾಡುವಾಗ ತರ ತರಹದ ಹಣ್ಣುಗಳು, ಸಿಹಿ ತಿನಿಸುಗಳು, ಬಳೆಗಳು, ದುಡ್ಡು, ವಿಧ ವಿಧವಾದ ಹೂವುಗಳು, ಬುಕ್ಗಳನ್ನು ಇಡುತ್ತಾರೆ.
ಹಬ್ಬಕ್ಕಾಗಿ ದುಬಾರಿ ಆಯ್ತು ಹೂವು, ಹಣ್ಣಿನ ಬೆಲೆ
ಆಷಾಢ ಮುಗಿದು ಶ್ರಾವಣ ಮಾಸ ಶುರುವಾಗಿದ್ದು, ವರಮಹಾಲಕ್ಷ್ಮಿ ಹಬ್ಬದ ಸಡಗರ ಜೋರಾಗಿದೆ. ಒಂದೆಡೆ ಹಬ್ಬದ ಸಂಭ್ರಮವಾದರೆ ಮತ್ತೊಂದೆಡೆ ಮಾರುಕಟ್ಟೆಗಳಲ್ಲಿ ಹೂವುಗಳದ್ದೇ ಕಾರುಬಾರು. ಪ್ರತಿ ಸಲವೂ ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಹೂವುಗಳ ಬೆಲೆ ಹೆಚ್ಚಾಗುತ್ತದೆ. ಅದರಂತೆ ಈ ಸಲವೂ ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವಿನ ರೇಟ್ ಗಗನಕ್ಕೇರಿದೆ. ಹಬ್ಬಕ್ಕೆ ಇನ್ನು 2 ದಿನಗಳಷ್ಟೇ ಬಾಕಿಯಿರುವಾಗಲೇ ಹೂವುಗಳಿಗೆ ಚಿನ್ನದ ಬೆಲೆ ಬಂದಿದೆ. ಹೌದು, ಸಾಮಾನ್ಯ ದಿನಗಳಲ್ಲಿ 1000 ದಿಂದ 1500 ರೂಪಾಯಿ ಇದ್ದ ಕನಕಾಂಬರ ಈಗ 100 ಗ್ರಾಂಗೆ 400 ರೂಪಾಯಿ ಆಗಿದೆ. ಅಂದ್ರೆ ಒಂದು ಕೆಜಿಗೆ 4 ಸಾವಿರ. ಇನ್ನು, ಸಾಮಾನ್ಯ ದಿನಗಳಲ್ಲಿ 140 ರಿಂದ 200 ರೂಪಾಯಿ ಇದ್ದ ಮಲ್ಲಿಗೆ ಹೂವು ಈಗ ಕೆಜಿಗೆ 1600- 2000 ರೂಪಾಯಿ ಆಗಿದೆ. ಹಾಗೆ 140 ರೂಪಾಯಿ ಇದ್ದ ಗುಲಾಬಿ ಈಗ ಕೆಜಿಗೆ 300-350 ರೂಪಾಯಿ ಆಗಿದೆ.
ದುಬಾರಿಯಾದ ಹೂವಿನ ದರ!
1 ಕೆಜಿ ಕನಕಾಂಬರ 4000 ರೂಪಾಯಿ
ಮಲ್ಲಿಗೆ ಹೂವು ಕೆಜಿಗೆ 1600 -1800 ರೂ
ಸುಗಂಧರಾಜ ಹೂವು ಕೆಜಿಗೆ 300-350 ರೂ
ಸಂಪಿಗೆ ಹೂವು ಕೆಜಿಗೆ 400 ರೂ
ಗುಲಾಬಿ ಹೂವು ಕೆಜಿಗೆ 300-350 ರೂ
ಚೆಂಡು ಹೂವು ಕೆಜಿಗೆ 160 ರಿಂದ 200 ರೂ
ತಾವರೆ ಒಂದು ಹೂವು 80-100 ರೂ
ಮಲ್ಲಿಗೆ ಹಾರ 350 - 1500 ರೂವರೆಗೂ ಇದೆ
ಗುಲಾಬಿ ಹಾರ 800 ರೂಪಾಯಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ