newsfirstkannada.com

HD ರೇವಣ್ಣ ಕುಟುಂಬಕ್ಕೆ ಇವತ್ತು ಬಿಗ್​ ಡೇ.. ಪ್ರಜ್ವಲ್ ಮಾತ್ರವಲ್ಲ, ರೇವಣ್ಣ, ಭವಾನಿ ಭವಿಷ್ಯವೂ ನಿರ್ಧಾರ..!

Share :

Published May 31, 2024 at 6:59am

    ಅಪ್ಪ, ಅಮ್ಮ ಹಾಗೂ ಮಗ ಮೂವರಿಗೂ ಕಾನೂನು ಕಂಟಕ‌

    ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಸೇರಿ 3 ಕೇಸ್ ದಾಖಲು

    ಮಾಜಿ ಶಾಸಕ ಹೆಚ್​.ಡಿ ರೇವಣ್ಣ ವಿರುದ್ಧ ಕಿಡ್ನ್ಯಾಪ್​ ಕೇಸ್ ದಾಖಲು

ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಸಂತ್ರಸ್ತೆ ಕಿಡ್ನ್ಯಾಪ್​ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರೋ ಹೆಚ್​ಡಿ ರೇವಣ್ಣ ಕುಟುಂಬಕ್ಕೆ ಮೇ 31 ನಿರ್ಣಾಯಕ ದಿನವಾಗುವ ಸಾಧ್ಯತೆ ಇದೆ. ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಸೇರಿ 3 ಕೇಸ್ ದಾಖಲಾಗಿದ್ದರೆ, ಹೆಚ್​ಡಿ ರೇವಣ್ಣ ವಿರುದ್ಧ ಕಿಡ್ನ್ಯಾಪ್​ ಕೇಸ್ ದಾಖಲಾಗಿದೆ. ರೇವಣ್ಣ ಪತ್ನಿ ಭವಾನಿ ಅವರ ಹೆಸರೂ ಕೂಡ ಕಿಡ್ನ್ಯಾಪ್​ ಕೇಸ್‌ ಜೊತೆ ತಳಕು ಹಾಕಿಕೊಂಡಿದೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಆಗಮಿಸುತ್ತಿದ್ದಂತೆ ಬೆಂಗಳೂರು ಬಿಟ್ಟ HD ಕುಮಾರಸ್ವಾಮಿ.. ಕಾರಣವೇನು?

ಹೀಗಾಗಿ ಅಪ್ಪ-ಅಮ್ಮ ಹಾಗೂ ಮಗ ಮೂವರಿಗೂ ಕಾನೂನು ಕಂಟಕ‌ ಎದುರಾಗಿದ್ದು, ಇವತ್ತು ನಿರ್ಣಾಯಕ ದಿನವಾಗಲಿದೆ. ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ವಿದೇಶಕ್ಕೆ ಎಸ್ಕೇಪ್​ ಆಗಿದ್ದ ಪ್ರಜ್ವಲ್​ ರೇವಣ್ಣ, ಹೊರ ದೇಶದಲ್ಲಿದ್ದುಕೊಂಡೇ ತಮ್ಮ ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ, ಎಸ್​ಐಟಿ ಅಧಿಕಾರಿಗಳು ಪ್ರಜ್ವಲ್​ನನ್ನು ಅರೆಸ್ಟ್​ ಮಾಡಿರುವ ಕಾರಣ ಅದು ಅಸಿಂಧುವಾಗಲಿದೆ. ಹೀಗಾಗಿ ಪ್ರಜ್ವಲ್ ರೇವಣ್ಣರ ಮುಂದಿನ ಕಾನೂನು ಹೋರಾಟದ ಹಾದಿ ಹೇಗಿರಲಿದೆ ಎಂಬ ಕತೂಹಲ ಮೂಡಿದೆ.

ಪ್ರಜ್ವಲ್ ಕಾನೂನು ಹೋರಾಟ!

1. ಪ್ರಜ್ವಲ್​ ಬಂಧನವಾಗಿದ್ದು, ನಿರೀಕ್ಷಣಾ ಜಾಮೀನು ಅರ್ಜಿಗೆ ಮಾನ್ಯತೆ ಇರಲ್ಲ
2. ಹೊಳೆನರಸೀಪುರ, ಸಿಐಡಿ ಸೈಬರ್, ಸೈಬರ್ ಕ್ರೈಂ ಠಾಣೆಯಲ್ಲಿ 3 ಕೇಸ್​​
3. ನಿರೀಕ್ಷಣಾ ಜಾಮೀನು ಅರ್ಜಿ ರದ್ದಾದರೆ ರೆಗ್ಯೂಲರ್ ಜಾಮೀನಿಗೆ ಅರ್ಜಿ
4. ಕಸ್ಟಡಿಗಾಗಿ ಕೋರ್ಟ್​​​ಗೆ ಹಾಜರುಪಡಿಸಿದಾಗಲೇ ಅರ್ಜಿ ಸಲ್ಲಿಕೆ ಸಾಧ್ಯತೆ
5. ಮೂರು ಪ್ರಕರಣಕ್ಕೂ ಪ್ರತ್ಯೇಕ ವಕೀಲರ ನೇಮಕ ಮಾಡುವ ಸಾಧ್ಯತೆ

ಪ್ರಜ್ವಲ್​ ಬಂಧನವಾಗಿದ್ದು, ನಿರೀಕ್ಷಣಾ ಜಾಮೀನು ಅರ್ಜಿಗೆ ಮಾನ್ಯತೆ ಇರಲ್ಲ. ಹೊಳೆನರಸೀಪುರ, ಸಿಐಡಿ ಸೈಬರ್, ಸೈಬರ್ ಕ್ರೈಂ ಠಾಣೆಯಲ್ಲಿ 3 ಕೇಸ್​​ ದಾಖಲಾಗಿವೆ. ನಿರೀಕ್ಷಣಾ ಜಾಮೀನು ಅರ್ಜಿ ರದ್ದಾದರೆ ರೆಗ್ಯೂಲರ್ ಜಾಮೀನಿಗೆ ಅರ್ಜಿ ಸಲ್ಲಿಸಬಹುದು. ಕಸ್ಟಡಿ ಪಡೆದುಕೊಳ್ಳಲು ಎಸ್​ಐಟಿ ಕೋರ್ಟ್​​​ಗೆ ಹಾಜರುಪಡಿಸಿದಾಗಲೇ ಅರ್ಜಿ ಸಲ್ಲಿಕೆ ಸಾಧ್ಯತೆ ಇದೆ. ಇನ್ನು ಮೂರು ಪ್ರಕರಣಕ್ಕೂ ಪ್ರತ್ಯೇಕ ವಕೀಲರ ನೇಮಕ ಮಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಇದನ್ನೂ ಓದಿ: BREAKING: ಬೆಂಗಳೂರು ಏರ್ಪೋರ್ಟ್​ನಲ್ಲೇ ಪ್ರಜ್ವಲ್​ ರೇವಣ್ಣ ಅರೆಸ್ಟ್​​.. ಮುಂದೇನು?

ಇಂದು ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ತೀರ್ಪು

ಸಂತ್ರಸ್ತ ಮಹಿಳೆಯ ಅಪಹರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಲ್ಲಿರುವ ಭವಾನಿ ರೇವಣ್ಣಗೂ ಇವತ್ತು ಮಹತ್ವದ ದಿನವಾಗಿದೆ. ಸಂತ್ರಸ್ತೆಯ ಕಿಡ್ನ್ಯಾಪ್​ ಕೇಸ್​ನಲ್ಲಿ ಭವಾನಿ ರೇವಣ್ಣಗೆ ಜೈಲೋ, ಬೇಲೋ ಅನ್ನೋದು ನಿರ್ಧಾರವಾಗಲಿದೆ. ಮಹಿಳೆ ಅಪಹರಣ ಪ್ರಕರಣದಲ್ಲಿ ಅರ್ಜಿದಾರರಾದ ಭವಾನಿ ವಿರುದ್ಧ ಗಂಭೀರ ಆರೋಪ ಇದೆ. ಅವರನ್ನು‌ ವಿಚಾರಣೆಗೆ ಒಳಪಡಿಸಬೇಕಾಗಿದೆ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಎಸ್​ಐಟಿ ಪರ ವಕೀಲರು ಮನವಿ ಮಾಡಿದ್ದರು. ಎರಡೂ ಕಡೆಯ ವಾದ ಆಲಿಸಿದ್ದ ಜನಪ್ರತಿನಿಧಿಗಳ ನ್ಯಾಯಾಧೀಶರು, ಇವತ್ತು ತೀರ್ಪನ್ನು ಕಾಯ್ದಿರಿಸಿದ್ದರು. ಇವತ್ತು ಭವಾನಿ ರೇವಣ್ಣರ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪು ಪ್ರಕಟವಾಗಲಿದೆ. ಒಂದು ವೇಳೆ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ್ರೆ, ಭವಾನಿ ರೇವಣ್ಣ ಹೈಕೋರ್ಟ್​ ಮೊರೆ ಹೋಗುವ ಸಾಧ್ಯತೆ ಇದೆ.

ರೇವಣ್ಣರ ಜಾಮೀನು ರದ್ದು ಕೋರಿ ಎಸ್​ಐಟಿ ಹೈಕೋರ್ಟ್​ ಮೊರೆ

ಮಾಜಿ ಸಚಿವರ ಹೆಚ್​.ಡಿ.ರೇವಣ್ಣ ಪಾಲಿಗೂ ಇವತ್ತು ಮಹತ್ವದ ದಿನ. ಲೈಂಗಿಕ ಕಿರುಕುಳ ಮತ್ತು ಕಿಡ್ನ್ಯಾಪ್​ ಕೇಸ್​​ನಲ್ಲಿ ಹೆಚ್​.ಡಿ ರೇವಣ್ಣಗೆ ಜಾಮೀನು ಸಿಕ್ಕಿದೆ. ರೇವಣ್ಣರ ಜಾಮೀನು ಆದೇಶವನ್ನು ಪ್ರಶ್ನಿಸಿ, ಎಸ್​ಐಟಿ ಹೈಕೋರ್ಟ್​ ಮೆಟ್ಟಿಲೇರಿದೆ. ಇವತ್ತು ಹೈಕೋರ್ಟ್​ನಲ್ಲಿ ಎಸ್​ಐಟಿ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬರಲಿದೆ. ಇದರ ಜೊತೆಗೆ ಹೆಚ್​ಡಿ ರೇವಣ್ಣ ಕೂಡ ತಮ್ಮ ವಿರುದ್ಧದ ಪ್ರಕರಣವನ್ನು ರದ್ದು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದು ಕೂಡ ಇವತ್ತೇ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಲೈಂಗಿಕ ದೌರ್ಜನ್ಯದ ಆರೋಪ ಮತ್ತು ಕಿಡ್ನ್ಯಾಪ್​ ಕೇಸ್​ನಲ್ಲಿ ಹೆಚ್​ಡಿ ರೇವಣ್ಣ ಕುಟುಂಬಕ್ಕೆ ಕಾನೂನು ಕಂಟಕ ಎದುರಾಗಿದ್ದು, ಇವತ್ತು ಮಹತ್ವದ ದಿನವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

HD ರೇವಣ್ಣ ಕುಟುಂಬಕ್ಕೆ ಇವತ್ತು ಬಿಗ್​ ಡೇ.. ಪ್ರಜ್ವಲ್ ಮಾತ್ರವಲ್ಲ, ರೇವಣ್ಣ, ಭವಾನಿ ಭವಿಷ್ಯವೂ ನಿರ್ಧಾರ..!

https://newsfirstlive.com/wp-content/uploads/2023/12/hd-revanna-2.jpg

Load More