newsfirstkannada.com

ವಿಧಾನಪರಿಷತ್ ಚುನಾವಣೆ: ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೆ ಬಿಗ್‌ ಶಾಕ್‌; ಆಗಿದ್ದೇನು?

Share :

Published June 2, 2024 at 12:34pm

    ಇದೇ ಜೂನ್ 13ಕ್ಕೆ ನಡೆಯಲಿರುವ ವಿಧಾನಪರಿಷತ್ ಚುನಾವಣೆ

    ಮೂರು ಸ್ಥಾನಕ್ಕೆ ಟಿಕೆಟ್ ಘೋಷಣೆ ಮಾಡಿದ್ದ ಬಿಜೆಪಿ ಹೈಕಮಾಂಡ್

    ಮಂಡ್ಯ ಟಿಕೆಟ್ ಜೆಡಿಎಸ್‌‌ಗೆ ಬಿಟ್ಟುಕೊಟ್ಟಿದ್ದ ಸುಮಲತಾ ಅಂಬರೀಶ್

ಬೆಂಗಳೂರು: ಇದೇ ಜೂನ್ 13ಕ್ಕೆ ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಕೊನೆಗೂ ಬಿಜೆಪಿ ಟಿಕೆಟ್‌ ಘೋಷಣೆ ಮಾಡಿದೆ. ವಿಧಾನಸಭೆಯಲ್ಲಿರುವ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿ ಮೂರು ಸ್ಥಾನವನ್ನು ಗೆಲ್ಲಬಹುದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಟಿಕೆಟ್ ಪ್ರಕಟ ಮಾಡಿದೆ.

ಬಿಜೆಪಿ ಹೈಕಮಾಂಡ್ ಮಾಜಿ ಸಚಿವ ಸಿ.ಟಿ ರವಿ, ಎನ್. ರವಿಕುಮಾರ್ ಹಾಗೂ ಎಂ.ಜಿ ಮುಳೆ ಅವರಿಗೆ ಟಿಕೆಟ್ ನೀಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಸಿ.ಟಿ ರವಿ ಸೋತಿದ್ದರು. ಇದೇ ಮೊದಲ ಬಾರಿಗೆ ಸಿ.ಟಿ ರವಿ ಅವರು ವಿಧಾನಪರಿಷತ್‌ಗೆ ಪ್ರವೇಶ ಮಾಡಲಿದ್ದಾರೆ.

ಸಿ.ಟಿ ರವಿಗೆ ವಿಪಕ್ಷ ನಾಯಕ ಸ್ಥಾನ?
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ವಿಧಾನಪರಿಷತ್ ವಿಪಕ್ಷ ನಾಯಕರಾಗಿದ್ದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಸ್ಪರ್ಧಿಸಿದ್ದಾರೆ. ಕೋಟಾ ಶ್ರೀನಿವಾಸ್ ಪೂಜಾರಿ ಅವರು ಚುನಾವಣೆಯಲ್ಲಿ ಗೆದ್ದರೆ ವಿಪಕ್ಷ ನಾಯಕನ ಸ್ಥಾನ ತೆರವಾಗಲಿದೆ. ಸಿ.ಟಿ ರವಿ ಅವರ ಮೂಲಕ ಆ ಸ್ಥಾನ ತುಂಬಲು ಬಿಜೆಪಿ ಪ್ಲಾನ್ ಮಾಡಿದೆ. ಮೂಲಗಳ ಪ್ರಕಾರ ಸಿ.ಟಿ ರವಿ ಅವರನ್ನು ವಿಧಾನಪರಿಷತ್‌ ವಿಪಕ್ಷ ನಾಯಕನಾಗಿ ಮಾಡುವ ಸಾಧ್ಯತೆ ಇದೆ.
ಒಕ್ಕಲಿಗ ಕೋಟಾದಲ್ಲಿ ಸಿ.ಟಿ ರವಿ ಅವರಿಗೆ ಟಿಕೆಟ್ ನೀಡಿದ್ರೆ ಒಬಿಸಿ ವರ್ಗದಲ್ಲಿ ಎನ್. ರವಿಕುಮಾರ್‌ ಅವರಿಗೆ ಎರಡನೇ ಬಾರಿ ವಿಧಾನಪರಿಷತ್ ಟಿಕೆಟ್ ನೀಡಲಾಗಿದೆ. ರವಿಕುಮಾರ್ ಅವರು ಸದ್ಯ ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕರಾಗಿದ್ದಾರೆ.

ಇದನ್ನೂ ಓದಿ: BREAKING: ವಿಧಾನಪರಿಷತ್ ಚುನಾವಣೆ: ಮೂರು ಸ್ಥಾನಕ್ಕೆ BJP ಟಿಕೆಟ್ ಘೋಷಣೆ; ಯಾರಿಗೆ ಬಂಪರ್‌? 

ಮೂರನೇ ಟಿಕೆಟ್ ಅನ್ನು ಬಿಜೆಪಿ ಹೈಕಮಾಂಡ್‌ ಮರಾಠ ಸಮುದಾಯದ ನಾಯಕ ಎಂ.ಜಿ ಮುಳೆ ಅವರಿಗೆ ನೀಡಿದೆ. ಎಂ.ಜಿ ಮೂಳೆ ಅವರು ಬಸವ ಕಲ್ಯಾಣ ಕ್ಷೇತ್ರದ ಮಾಜಿ ಶಾಸಕ ಮತ್ತು ಮರಾಠಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು ಆಗಿದ್ದರು. ಮೂಳೆ ಅವರು ಈ ಮೊದಲು ಜೆಡಿಎಸ್‌ನಲ್ಲಿದ್ದು, ಕಳೆದ ಉಪಚುನಾವಣೆಯಲ್ಲಿ ಬಿಜೆಪಿ ಸೇರಿದ್ದರು. ಮರಾಠ ಸಮುದಾಯವನ್ನು ಸೆಳೆಯಲು ಮಾರುತಿರಾವ್ ಮುಳೆಗೆ ಪರಿಷತ್ ಟಿಕೆಟ್ ನೀಡಿದೆ ಎನ್ನಲಾಗಿದೆ.

ಸುಮಲತಾ ಅಂಬರೀಶ್‌ಗೆ ಬಿಗ್‌ ಶಾಕ್‌!
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಗೆ ಒಪ್ಪಿಗೆ ಸೂಚಿಸಿದ್ದ ಸಂಸದೆ ಸುಮಲತಾ ಅಂಬರೀಶ್ ಮಂಡ್ಯ ಚುನಾವಣೆಯ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರಿಗೆ ಮಂಡ್ಯ ಟಿಕೆಟ್ ನೀಡದೆ ಜೆಡಿಎಸ್‌‌ಗೆ ಬಿಟ್ಟುಕೊಡಲಾಗಿತ್ತು.

ಇದನ್ನೂ ಓದಿ: ವಿಧಾನಪರಿಷತ್​ ಕದನಕ್ಕೆ ಕಲಿಗಳ ಆಯ್ಕೆಯೇ ದೊಡ್ಡ ಟೆನ್ಷನ್; ಟಿಕೆಟ್​ ವಿಚಾರದಲ್ಲಿ ಸಿಎಂ ಎಚ್ಚರಿಕೆ.. ಏನದು? 

ಈ ತ್ಯಾಗದ ಹಿನ್ನೆಲೆಯಲ್ಲಿ ವಿಧಾನಪರಿಷತ್‌ಗೆ ಸುಮಲತಾ ಅಂಬರೀಶ್ ಆಯ್ಕೆ ಬಗ್ಗೆ ಚರ್ಚೆಯಾಗಿತ್ತು. ಆದ್ರೆ ಸುಮಲತಾ ಅಂಬರೀಶ್ ಅವರಿಗೆ ವಿಧಾನಪರಿಷತ್ ಚುನಾವಣೆಯ ಟಿಕೆಟ್ ಕೈ ತಪ್ಪಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಧಾನಪರಿಷತ್ ಚುನಾವಣೆ: ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೆ ಬಿಗ್‌ ಶಾಕ್‌; ಆಗಿದ್ದೇನು?

https://newsfirstlive.com/wp-content/uploads/2024/02/Sumalatha-Ambarish.jpg

Load More