Advertisment

ದೆಹಲಿ ಪೊಲೀಸರ ವಿರುದ್ಧ ಗಂಭೀರ ಆರೋಪ.. ಇಂದು ಜಡ್ಜ್​ ಮುಂದೆ ನಿಂತು ಸಾಕ್ಷಿ ಹೇಳಲಿದ್ದಾರೆ ವಿನೇಶ್ ಫೋಗಟ್

author-image
AS Harshith
Updated On
ದೆಹಲಿ ಪೊಲೀಸರ ವಿರುದ್ಧ ಗಂಭೀರ ಆರೋಪ.. ಇಂದು ಜಡ್ಜ್​ ಮುಂದೆ ನಿಂತು ಸಾಕ್ಷಿ ಹೇಳಲಿದ್ದಾರೆ ವಿನೇಶ್ ಫೋಗಟ್
Advertisment
  • ಇಂದು ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ
  • ಪದಕ ವಂಚಿತ ವಿನೇಶ್ ಫೋಗಟ್​ ಅವರಿಂದ ಮತ್ತೊಂದು ಆರೋಪ
  • ಮಹಿಳಾ ಕುಸ್ತಿಪಟುಗಳ ಭದ್ರತೆಯನ್ನು ಹಿಂಪಡೆದರಾ ಪೊಲೀಸರು?

ಕುಸ್ತಿ ಒಕ್ಕೂಟದ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಇತರ ಆರೋಪಗಳನ್ನು ದಾಖಲಿಸಲಾಗಿತ್ತು. ಈ ಪ್ರಕರಣದ ಸಂಬಂಧ ಇವತ್ತು ದೆಹಲಿ ಕೋರ್ಟ್ ವಿಚಾರಣೆ ನಡೆಸಲಿದೆ. ಬ್ರಿಜ್ ಭೂಷಣ್ ಸಿಂಗ್ ಲೈಂಗಿಕ ಕಿರುಕುಳ ಬಗ್ಗೆ ಜಡ್ಜ್ ಮುಂದೆ ಮಹಿಳಾ ಕುಸ್ತಿಪಟುಗಳು ಸಾಕ್ಷಿ ಹೇಳಲಿದ್ದಾರೆ. ಆದರೆ ಇದಕ್ಕೂ ಮುನ್ನ ದೆಹಲಿ ಪೊಲೀಸರು ಕುರಿತಾಗಿ ಆರೋಪವೊಂದನ್ನು ಮಾಡಲಿದ್ದಾರೆ.

Advertisment

ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಧಿಕ್ಕಾರ, ಆಕ್ರೋಶ, ಹೋರಾಟಗಳಾಯ್ತು. ಕ್ರೀಡಾಪಟುಗಳು ಕಣ್ಣೀರಿಟ್ಟಿದ್ದಾಯ್ತು. ಗೆದ್ದಿದ್ದ ಮೆಡಲ್​ಗಳನ್ನ ಪ್ರಧಾನಿ ಕಚೇರಿ ಮುಂದೆ ಇಟ್ಟು ವಾಪಾಸ್​ ಬಂದಿದ್ದಾಯ್ತು. ಸದ್ಯ ಕುಸ್ತಿ ಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ಇಂದು ದೆಹಲಿ ನ್ಯಾಯಾಲಯದಲ್ಲಿ ನಡೆಯಲಿದೆ. ಈ ಹೊತ್ತಲ್ಲೇ ಒಲಂಪಿಕ್ಸ್‌ನಲ್ಲಿ ಸಾಧನೆಗೈದರೂ ಪದಕದಿಂದ ವಂಚಿತರಾದ ವಿನೇಶ್ ಫೋಗಟ್ ಮತ್ತೊಂದು ಆರೋಪ ಮಾಡಿದ್ದಾರೆ.

publive-image

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ದೆಹಲಿ ಯಾತ್ರೆ.. ಹೈಕಮಾಂಡ್​ ಮಟ್ಟದಲ್ಲಿ ಹೋರಾಟಕ್ಕೆ ರಣತಂತ್ರ

ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದ ಕುಸ್ತಿ ಪಟು ವಿನೇಶ್ ಫೋಗಟ್ ದೆಹಲಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ದೆಹಲಿ ನ್ಯಾಯಾಲಯದಲ್ಲಿ ಜಡ್ಜ್​ ಮುಂದೆ ನಿಂತು ಇವತ್ತು ಸಾಕ್ಷಿ ಹೇಳಲು ಸಿದ್ಧವಾಗಿರೋ ಮಹಿಳಾ ಕುಸ್ತಿಪಟುಗಳಿಗೆ ರಕ್ಷಣೆ ಇಲ್ಲ ಅಂತ ಗುಡುಗಿದ್ದಾರೆ. ಸಾಕ್ಷಿ ಹೇಳಲು ಸಜ್ಜಾಗಿರೋ ಮಹಿಳಾ ಕುಸ್ತಿಪಟುಗಳ ಭದ್ರತೆಯನ್ನೇ ಕಿತ್ತುಕೊಳ್ಳಲಾಗಿದೆ ಅಂತ ಆರೋಪಿಸಿದ್ದಾರೆ.

Advertisment

publive-image

ಬ್ರಿಜ್ ಭೂಷಣ್ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಹೊರಟಿದ್ದ ಮಹಿಳಾ ಕುಸ್ತಿಪಟುಗಳ ಭದ್ರತೆಯನ್ನು ದೆಹಲಿ ಪೊಲೀಸರು ಹಿಂಪಡೆದಿದ್ದಾರೆ.
-ವಿನೇಶ್ ಫೋಗಟ್, ಕುಸ್ತಿ ಪಟು

ಹೀಗಂತ ಟ್ವೀಟ್​ ಮಾಡಿರೋ ಫೋಗಟ್, ದೆಹಲಿ ಪೋಲೀಸ್. DCW ಅಂದ್ರೆ ದೆಹಲಿ ಮಹಿಳಾ ಆಯೋಗ. NCWIndia ಅಂದ್ರೆ ರಾಷ್ಟ್ರೀಯ ಮಹಿಳಾ ಆಯೋಗವನ್ನ ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ:  ಸನ್​​ಸ್ಕ್ರೀನ್ ಹೆಚ್ಚು ಬಳಸಿದ್ರೆ ಕ್ಯಾನ್ಸರ್​ ಗ್ಯಾರಂಟಿ; ಮಹಿಳೆಯರು ಓದಲೇಬೇಕಾದ ಸ್ಟೋರಿ!

Advertisment

publive-image

ಸಾಕ್ಷಿ ಹೇಳಲಿರುವ ಮಹಿಳಾ ಕುಸ್ತಿಪಟುಗಳ ಭದ್ರತೆಯನ್ನು ದೆಹಲಿ ಪೊಲೀಸರು ಹಿಂಪಡೆದಿದ್ದಾರೆ ಎಂಬ ವಿನೇಶ್ ಫೋಗಟ್ ಆರೋಪವನ್ನ ದೆಹಲಿ ಪೊಲೀಸರು ನಿರಾಕರಿಸಿದ್ದಾರೆ.

ದೆಹಲಿ ಪೊಲೀಸರ ಸ್ಪಷ್ಟನೆ!

ಭದ್ರತಾ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಹರಿಯಾಣ ಪೊಲೀಸರಿಗೆ ಮನವಿ ಮಾಡಲಾಗಿದೆ. ಮನವಿ ಮಾಡಿದ ನಂತರ ಸಂಬಂಧಪಟ್ಟ ವೈಯಕ್ತಿಕ ಭದ್ರತಾ ಅಧಿಕಾರಿಗಳು ಕರ್ತವ್ಯಕ್ಕೆ ತಡವಾಗಿ ವರದಿ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಕುಸ್ತಿಪಟುಗಳಿಗೆ ಒದಗಿಸಲಾದ ಭದ್ರತೆಯನ್ನ ಯಾವ ಕಾರಣಕ್ಕೂ ಹಿಂತೆಗೆದುಕೊಳ್ಳಲಾಗಿಲ್ಲ. ರಕ್ಷಣಾ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಹರಿಯಾಣ ಪೊಲೀಸರಿಗೆ ವಿನಂತಿಸಲು ನಿರ್ಧರಿಸಲಾಗಿದೆ ಎಂದು ಡೆಪ್ಯುಟಿ ಕಮಿಷನರ್ ಆಫ್ ಪೋಲಿಸ್ ನ್ಯೂ ಡೆಲ್ಲಿ ಹೇಳಿದ್ದಾರೆ. ನಿಯೋಜಿತ ದೆಹಲಿ ಪೊಲೀಸ್ ಪಿಎಸ್‌ಒಗಳು ಈ ನಿರ್ಧಾರವನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ. ಮತ್ತು ಇಂದು ವರದಿ ಮಾಡಲು ತಡಮಾಡಿದ್ದಾರೆ, ಪರಿಸ್ಥಿತಿಯನ್ನು ಸರಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬರೋಬ್ಬರಿ 65 ಲಕ್ಷ ವಿದ್ಯಾರ್ಥಿಗಳು ಫೇಲ್‌.. ಶಿಕ್ಷಣ ಇಲಾಖೆಯಿಂದ ಶಾಕಿಂಗ್ ಮಾಹಿತಿ ಬಯಲು; ಏನದು?

Advertisment

ಅರ್ಜಿದಾರರ ಭದ್ರತೆಯನ್ನು ಹಿಂತೆಗೆದುಕೊಳ್ಳಲು ಕಾರಣಗಳ ಬಗ್ಗೆ ವಿವರವಾದ ವರದಿಯನ್ನು ಶುಕ್ರವಾರದೊಳಗೆ ಸಲ್ಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment