/newsfirstlive-kannada/media/post_attachments/wp-content/uploads/2024/08/Vinesh_Phogat_BABITHA.jpg)
ಪ್ಯಾರಿಸ್ ಒಲಿಂಪಿಕ್ಸ್​​ನ 50 ಕೆ.ಜಿ ಮಹಿಳೆಯರ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಅನರ್ಹಗೊಂಡಿದ್ದ ವಿನೇಶ್ ಫೋಗಟ್ ಮೊನ್ನೆಯಷ್ಟೇ ಸ್ವಗ್ರಾಮಕ್ಕೆ ಆಗಮಿಸಿದ್ದಾರೆ. ಮೆಡಲ್ ಗೆಲ್ಲುವ ತವಕದಲ್ಲಿದ್ದ ವಿನೇಶ್ ಫೋಗಟ್​ಗೆ ಒಲಿಂಪಿಕ್ಸ್​​ ಕಮಿಟಿಯಿಂದ ಭಾರೀ ಆಘಾತ ಎದುರಾಗಿತ್ತು. ಇದರಿಂದ ಪದಕ ಗೆಲ್ಲಲಾಗಲಿಲ್ಲವೆಂದು ಕಣ್ಣೀರು ಹಾಕಿ ಕುಸ್ತಿಗೆ ವಿದಾಯ ಹೇಳಿದ್ದರು. ಇನ್ನು ಇದೆಲ್ಲ ಜನಮಾನಸದಲ್ಲಿ ಇರುವಾಗಲೇ ವಿನೇಶ್ ಫೋಗಟ್ ಕುರಿತು ಮತ್ತೊಂದು ಬಿಗ್ ಅಪ್​ಡೇಟ್ ಸಿಕ್ಕಿದೆ.
ಅಕ್ಟೋಬರ್​ನಲ್ಲಿ ನಡೆಯುವ ಹರಿಯಾಣ ವಿಧಾನಸಭಾ ಎಲೆಕ್ಷನ್​ನಲ್ಲಿ ವಿನೇಶ್ ಫೋಗಟ್ ಅವರು ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಈ ಮೊದಲು ಅವರು ಸಕ್ರಿಯ ರಾಜಕಾರಣದಲ್ಲಿ ಭಾಗವಹಿಸಲ್ಲ ಎಂದಿದ್ದರು. ಆದರೆ ಶೀಘ್ರದಲ್ಲೇ ಪರಿಸ್ಥಿತಿ ಬದಲಾಗಬಹುದು. ಏಕೆಂದರೆ ಕೆಲವು ರಾಜಕೀಯ ಪಕ್ಷಗಳು ಅವರನ್ನು ಸಂಪರ್ಕಿಸಿ ಮನವೊಲಿಸಲು ಯತ್ನಿಸುತ್ತಿವೆ ಎನ್ನಲಾಗಿದೆ. ಹೀಗಾಗಿ 2024ರ ಅಕ್ಟೋಬರ್ 1ರಿಂದ ನಡೆಯುವ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: KL ರಾಹುಲ್​ಗೆ ಮೋಸವಾಗುತ್ತಾ..? ಪಾಂಡ್ಯ ಖರೀದಿಗೆ ಕೋಟಿ ಕೋಟಿ ಹಣ ಸುರಿಯಲು​ ಮುಂದಾದ RCB
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಭಜರಂಗ್ ಪುನಿಯಾ ವಿರುದ್ಧ ಯೋಗೇಶ್ವರ್ ದತ್, ಮಹಿಳಾ ಕುಸ್ತಿಪಟು ಬಬಿತಾ ಫೋಗಟ್ ವಿರುದ್ಧ ನೀವು ಏಕೆ ಸ್ಪರ್ಧೆ ಮಾಡಬಾರದು ಹೇಳಿ. ಇದೊಂದು ಅವಕಾಶ ಇದೆ. ಸದುಪಯೋಗಪಡಿಸಿಕೊಳ್ಳಿ ಎಂದು ರಾಜಕೀಯ ಪಕ್ಷಗಳು ವಿನೇಶ್​ ಫೋಗಟ್​ ಮನದಲ್ಲಿ ದಾಳ ಉರುಳಿಸಿವೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ ಎಂದು ಹೇಳಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/08/Vinesh_Phogat-1-1.jpg)
ಇನ್ನು ಹರಿಯಾಣದ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನಾಂಕ ಸೆಪ್ಟೆಂಬರ್ 12 ಆಗಿದೆ. ಮತದಾನ ಅಕ್ಟೋಬರ್​ 1 ರಂದು ಒಂದೇ ಹಂತದಲ್ಲಿ ನಡೆಯಲಿದೆ. ಒಟ್ಟು 90 ವಿಧಾನಸಭಾ ಸ್ಥಾನಗಳಿಗೆ ಎಲೆಕ್ಷನ್ ನಡೆಯಲಿದ್ದು ಅಕ್ಟೋಬರ್​ 4 ರಂದು ಮತ ಎಣಿಕೆ ನಡೆಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us