Advertisment

ಒಂದು​ ಕೈಯಲ್ಲಿ ಸಿಗರೇಟ್, ಮತ್ತೊಂದು ಕಡೆ ಟೀ ಕಪ್‌; ಜೈಲಲ್ಲಿ ದರ್ಶನ್‌ಗೆ ರಾಜಾತಿಥ್ಯ? ಶಾಕಿಂಗ್ ಮಾಹಿತಿ ಬಹಿರಂಗ

author-image
Gopal Kulkarni
Updated On
ದರ್ಶನ್​​ಗೆ ಮತ್ತೊಂದು ಕೇಸ್​ನಲ್ಲಿ ಸಂಕಷ್ಟ.. ಪೊಲೀಸರಿಂದ ಬಿಗ್ ಪ್ಲಾನ್ ರೆಡಿ.. ಏನದು..?
Advertisment
  • ಪರಪ್ಪನ ಅಗ್ರಹಾರದಲ್ಲಿ VIPಗಳಿಗೆಲ್ಲಾ ಸೌಲಭ್ಯ ಸಿಗೋದು ಕಾಮನ್ ಆಗಿದ್ಯಾ?
  • ‘ಒಬ್ಬ ರೌಡಿ ಜೊತೆ ಹೀಗೆ ಕುಳಿತು ಸಿಗರೇಟ್ ಹೊಡೆಯೋದು ನಾವು ಕಂಡಿಲ್ಲ’
  • ದರ್ಶನ್ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ಎಸ್​.ಕೆ.ಉಮೇಶ್ ಹೇಳಿದ್ದೇನು?

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೆಂಗಳೂರಿನ ದೊಡ್ಡ ದೊಡ್ಡ ರೌಡಿಗಳೊಂದಿಗೆ ಕುಳಿತು ಬಿಂದಾಸ್​ ಆಗಿ ಕಾಫಿ ಹೀರುತಾ, ಸಿಗರೇಟ್ ಎಳಿತಾ ಇರೋ ನಟ ದರ್ಶನ್ ಫೋಟೋ ಈಗ ದೊಡ್ಡ ಸದ್ದು ಮಾಡುತ್ತಿದೆ. ಒಬ್ಬ ವಿಚಾರಣಾಧೀನ ಕೈದಿಯನ್ನು ಹೀಗೆಲ್ಲಾ ರಾಜಾತಿಥ್ಯ ಕೊಟ್ಟು ನಡೆಸಿಕೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಈ ವಿಚಾರವಾಗಿ ನ್ಯೂಸ್​ ​ಫಸ್ಟ್ ಜೊತೆ ಮಾತನಾಡಿದ ನಿವೃತ್ತ ಪೊಲೀಸ್ ಅಧಿಕಾರಿ ಎಸ್​. ಕೆ ಉಮೇಶ್ ಅವರು​ ಇದು ಖಂಡಿತವಾಗಿಯೂ ತಪ್ಪು. ಈ ಫೋಟೋ ಸರ್ಕಾರ ಹಾಗೂ ಜೈಲು ಅಧಿಕಾರಿಗಳ ಮೇಲೆ ಬೇರೆಯದ್ದೇ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

Advertisment

publive-image

ಇದನ್ನೂ ಓದಿ:ಜೈಲಿನಲ್ಲಿ ದರ್ಶನ್ ಆರಾಮಾಗಿ ಇದ್ದಾರಾ? ಫೋಟೋ ಫುಲ್ ವೈರಲ್‌; ಏನಿದರ ಅಸಲಿಯತ್ತು?

ಜೈಲಲ್ಲಿ ವಿಚಾರಣಾಧೀನ ಕೈದಿಯಾಗಿ ಹೋದವರಲ್ಲಿ ವಿಐಪಿ ಕೈದಿಗಳು ಹಾಗೂ ಜನರಲ್ ಕೈದಿಗಳು ಜೊತೆ ಇರಲ್ಲ. ವಿಐಪಿ ಬ್ಯಾರಕ್​ಗೆ ಸಾಮಾನ್ಯ ಕೈದಿಗಳು ಬರೋದಿಲ್ಲ.  ಸದ್ಯ ದರ್ಶನ್ ವಿಚಾರದಲ್ಲಿ ಹೊರ ಬಂದಿರುವಂತ ಸುದ್ದಿಗಳು ಈ ಹಿಂದೆಯೂ ಆಗಿವೆ. ಇಂತಹ ಚಟುವಟಿಕೆಗಳು ಜೈಲಿನಲ್ಲಿ ನಡೆಯುತ್ತಲೇ ಇರುತ್ತವೆ. ಜೈಲಲ್ಲಿ ವಿಐಪಿಗಳು ಗೆಸ್ಟ್​ ರೀತಿ ಆಗಿ ಹೋಗುತ್ತಾರೆ. ಕಾನೂನು ರೀತಿಯಲ್ಲಿ ಅವರ ವಿರುದ್ಧ ತೆಗೆದುಕೊಳ್ಳುವ ಕ್ರಮಗಳೇ ಬೇರೆ. ಜೈಲಿನಲ್ಲಿ ಅವರನ್ನು ನಡೆಸಿಕೊಳ್ಳುವ ರೀತಿಯೇ ಬೇರೆ. ಅವರು ಏನು ಅಪರಾಧ ಮಾಡಿದ್ದಾರೆ, ಎಂತಹ ಕೃತ್ಯ ಮಾಡಿದ್ದಾರೆ ಅನ್ನೋದು ಸಂಬಂಧ ಇರಲ್ಲ. ಒಳಗೆ ಬಂದ ವಿಐಪಿಗಳನ್ನು ಎಲ್ಲಾ ರೀತಿಯ ವ್ಯವಸ್ಥೆ ಮಾಡಿ ಚೆನ್ನಾಗಿ ನೋಡಿಕೊಳ್ಳುವುದು ಈ ಹಿಂದಿನಿಂದಲೂ ಬಂದಿದೆ ಎಂದಿದ್ದಾರೆ.

publive-image

ಇದನ್ನೂ ಓದಿ:‘ದಾಸ’ ಫುಲ್‌ ಬಿಂದಾಸ್‌? ಜೈಲಿನಲ್ಲಿ ದರ್ಶನ್ ಪಕ್ಕ ಕುಳಿತಿರುವ ನಟೋರಿಯಸ್‌ ರೌಡಿಗಳು ಯಾರು?

Advertisment

ಜೈಲಿನಲ್ಲಿ ಬಿಡಿ, ಸಿಗರೇಟ್​ ಎಲ್ಲಾ ಸಿಗುತ್ತವೆ. ಕೂಪನ್ ವ್ಯವಸ್ಥೆ ಇರುತ್ತದೆ. ಕೂಪನ್ ಕೊಂಡು ತಮಗೆ ಬೇಕಾದ ಎಲ್ಲವನ್ನು ಪಡೆಯುತ್ತಾರೆ. ಆದ್ರೆ ಪರಪ್ಪನ ಅಗ್ರಹಾರದಲ್ಲಿ ಈ ರೀತಿ ಚೇರ್​ ಮೇಲೆ ಕುಳಿತು ನಟೋರಿಯಸ್ ರೌಡಿಯ ಜೊತೆ ಹೀಗೆ ಬಿಂದಾಸ್ ಆಗಿ ಕುತ್ಕೊಂಡು ಟೀಪಾಯಿ ವ್ಯವಸ್ಥೆ ಮಾಡಿಕೊಟ್ಟು. ಅಲ್ಲಿ ಕುಳಿತು ಟೀ ಕುಡಿಯುವಂತಹ ವ್ಯವಸ್ಥೆಯನ್ನು ನಾವು ಹಿಂದೆಂದೂ ನೋಡಿಲ್ಲ ಎಂದು ಉಮೇಶ್ ಅವರು ಹೇಳಿದ್ದಾರೆ.

ಇದನ್ನೂ ಓದಿ:ನಟ ದರ್ಶನ್ ಕೇಸ್​​ಗೆ ಮತ್ತೊಂದು ಟ್ವಿಸ್ಟ್; ತನಿಖಾಧಿಕಾರಿಗಳ ಕೈಸೇರಿದ CSFL ರಿಪೋರ್ಟ್..!

ಇದು ಸರ್ಕಾರದ ಮೇಲೆ ಹಾಗೂ ಜೈಲು ವ್ಯವಸ್ಥೆಯ ಮೇಲೆ ಬೇರೆಯದ್ದೇ ಪರಿಣಾಮ ಬೀರುತ್ತದೆ. ಈಗಲೇ ಕಾಂಪೌಂಡ್ ಎಗರಲು ನಿಂತಿರುವ ಅವರ ಅಭಿಮಾನಿಗೆ ಏನಾದ್ರೂ ಮಾಡಿ ಜೈಲಿಗೆ ಹೋಗೋಣ ಬಾಸ್ ಹತ್ರ ಒಂದು ಫೋಟೋ ತಗೊಳೊನಾ ಅನ್ನೋ ರೀತಿಯ ವಿಚಾರಗಳು ಬಂದ್ರೆ ತುಂಬಾ ಅಪಾಯಕಾರಿ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಎಸ್​ ಕೆ ಉಮೇಶ್​ ಅವರು ನ್ಯೂಸ್​ಫಸ್ಟ್‌​ನಲ್ಲಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment