newsfirstkannada.com

ಕಿಂಗ್ ಕೊಹ್ಲಿ ಸೆಂಚುರಿ ಸಿಡಿಸಿ ಎಷ್ಟು ತಿಂಗಳಾಯಿತು.. ಶತಕ ಸಿಡಿಸುವಲ್ಲಿ ವಿರಾಟ್ ಫೇಲ್​; ಯಾಕೆ?

Share :

Published September 7, 2024 at 10:45am

    ಈ ಸವಾಲುಗಳ ಚಕ್ರವ್ಯೂಹ ಬೇಧಿಸಿ ಕೊಹ್ಲಿ ಗೆದ್ದು ಬೀಗ್ತಾರಾ?

    ಸೆಂಚುರಿ ಜತೆ ಬಿಗ್ ಇನ್ನಿಂಗ್ಸ್ ಕಟ್ಟುವ ಒತ್ತಡ ಕೊಹ್ಲಿ ಮೇಲೆ

    ತಂಡದಲ್ಲಿ ಪೈಪೋಟಿ ಹೆಚ್ಚು, ವಿರಾಟ್​​​​​​​​​ ರನ್ ​​​​ಗಳಿಸಲೇಬೇಕು

ಪ್ರತಿ ಸರಣಿಗೂ ಮುನ್ನ ಕಿಂಗ್ ಕೊಹ್ಲಿ ಎದುರಾಳಿ ತಂಡಕ್ಕೆ ದೊಡ್ಡ ಸವಾಲು ಆಗಿರುತ್ತಿದ್ದರು. ಆದ್ರೀಗ ಮುಂಬರುವ ಬಾಂಗ್ಲಾ ಟೆಸ್ಟ್​ ಸರಣಿ ರನ್ ಮಷಿನ್​​​​​ ಬಿಗ್ಗೆಸ್ಟ್​ ಚಾಲೆಂಜ್​​​ ಆಗಿದೆ. ಕ್ರಿಕೆಟ್ ದಂತಕಥೆ ಹಲವು ಸವಾಲುಗಳ ಸುಳಿಯಲ್ಲಿ ಸಿಲುಕಿದ್ದಾರೆ. ಒಂದೊಂದು ಚಾಲೆಂಜ್ ಡಿಫರೆಂಟ್​. ಅಷ್ಟಕ್ಕೂ ಕಿಂಗ್ ಕೊಹ್ಲಿ ಮುಂದಿರೋ ಚಾಲೆಂಜ್​ಗಳೇನು?.

ಅಭ್ಯಾಸದ ಅಖಾಡಕ್ಕೆ ಧುಮುಕಿದ ಕಿಂಗ್ ಕೊಹ್ಲಿ..!

ಟೀಮ್ ಇಂಡಿಯಾ ಟೆಸ್ಟ್​​ ಸೀಸನ್​ಗೆ ಕೌಂಟ್​​ಡೌನ್​​ ಶುರುವಾಗಿದೆ. ಸೆಪ್ಟೆಂಬರ್​ 19 ರಿಂದ ಇಂಡೋ-ಬಾಂಗ್ಲಾದೇಶ ನಡುವೆ ರೆಡ್​ಬಾಲ್​ ಫೈಟ್​​​​​​​​​​​​​​​​​​​​ ನಡೆಯಲಿದೆ. ಮೆಗಾ ಬ್ಯಾಟಲ್ ಸಮೀಪಿಸಿದ ಬೆನ್ನಲ್ಲೆ ಕಿಂಗ್ ಕೊಹ್ಲಿ ಲಂಡನ್​​ನಿಂದ ಭಾರತಕ್ಕೆ ವಾಪಾಸಾಗಿದ್ದಾರೆ. ಪ್ಯಾಡ್ ಕಟ್ಟಿ ನೆಟ್ಸ್​​ನಲ್ಲಿ ಭರ್ಜರಿ ಬೆವರು ಹರಿಸಿದ್ದಾರೆ. ಆ ಮೂಲಕ ಬಾಂಗ್ಲಾ ಬೇಟೆಗೆ ನಾನ್​​ ರೆಡಿ ಅನ್ನೋ ಮೆಸೇಜ್ ರವಾನಿಸಿದ್ದಾರೆ. ಆದ್ರೆ, ಬಾಂಗ್ಲಾ ಹುಲಿಗಳ ಬೇಟೆ ಅಷ್ಟು ಸುಲಭವಿಲ್ಲ. ಸವಾಲುಗಳ ಚಕ್ರವ್ಯೂಹವನ್ನ ಬೇಧಿಸುವ ಬಿಗ್ಗೆಸ್ಟ್​ ಚಾಲೆಂಜ್​ ಕಿಂಗ್ ಕೊಹ್ಲಿ ಮುಂದಿದೆ.

ಇದನ್ನೂ ಓದಿ: ರೋಹಿತ್ ಲೇಜಿಯಾಗಿ, ಕ್ಯಾಸುವೆಲ್ ಆಗಿ ಕಾಣುತ್ತಾರೆ.. ಆದ್ರೆ ಸತ್ಯವಾಗಲೂ..; ಅಂಪೈರ್ ಬಿಗ್​ ಸ್ಟೇಟ್​ಮೆಂಟ್!

ಚಾಲೆಂಜ್​ ನಂ.1- ರೆಡ್​​ಬಾಲ್​​​​​​​​ಗೆ ಹೊಂದಿಕೊಳ್ಳೋದು!

ಕೊಹ್ಲಿ ಟೆಸ್ಟ್​ ಕ್ರಿಕೆಟ್ ಆಡದೇ ಬರೋಬ್ಬರಿ 8 ತಿಂಗಳಾಗಿದೆ. ಈ ವರ್ಷಾರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆ ಬಾರಿ ಕಾಣಿಸಿಕೊಂಡಿದ್ರು ಆ ಬಳಿಕ ಕೇವಲ ಏಕದಿನ ಹಾಗೂ ಟಿ20 ಪಂದ್ಯಗಳನ್ನಷ್ಟೇ ಆಡಿದ್ದಾರೆ. ಹೀಗಾಗಿ ಕಿಂಗ್ ಕೊಹ್ಲಿಗೆ ವೈಟ್​​ಬಾಲ್​​ನಿಂದ ರೆಡ್​​​​​ಬಾಲ್​ ಕ್ರಿಕೆಟ್​ಗೆ ಹೊಂದಿಕೊಳ್ಳುವ ಸವಾಲು ಎದುರಾಗಿದೆ. ಸೀಮಿತ ಓವರ್​​​​ಗಳ ಕ್ರಿಕೆಟ್​​ನಲ್ಲಿ ಅಗ್ರೆಸ್ಸಿವ್​​ ಮೈಂಡ್​ಸೆಟ್​​​ನಿಂದ ಬ್ಯಾಟ್​ ಬೀಸಿದ್ದ ಕೊಹ್ಲಿ ಟೆಸ್ಟ್​​​​​ನಲ್ಲಿ ತಾಳ್ಮೆಯ ಮಂತ್ರ ಜಪಿಸುವ ಅಗತ್ಯವಿದೆ.

ಚಾಲೆಂಜ್​ ನಂ.2- ಸ್ಪಿನ್ ವೀಕ್ನೆಸ್ ಮೆಟ್ಟಿನಿಲ್ಲುವುದು

ಇದು ಕಿಂಗ್ ಕೊಹ್ಲಿ ಮುಂದಿರೋ ಎರಡನೇ ಬಿಗ್ಗೆಸ್ಟ್​ ಚಾಲೆಂಜ್​​. ಟೆಸ್ಟ್​ ಕ್ರಿಕೆಟ್​ನಲ್ಲಿ ಸ್ಪಿನ್ನರ್ಸ್​ ವಿರುದ್ಧ ರನ್ ಗಳಿಸಲು ಪರದಾಡ್ತಿದ್ದಾರೆ. ವೇಗಿಗಳನ್ನ ಲೀಲಾಜಾಲವಾಗಿ ದಂಡಿಸುವ ಕೊಹ್ಲಿ ಸ್ಪಿನ್ನರ್ಸ್​ ಎದುರು ಮಕಾಡೆ ಮಲಗ್ತಿದ್ದಾರೆ. 2023 ರಿಂದ ಇಲ್ಲಿ ತನಕ ಒಟ್ಟು 8 ಬಾರಿ ಸ್ಪಿನ್ನರ್ಸ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಬಾಂಗ್ಲಾ ತಂಡದಲ್ಲಿ ಕ್ವಾಲಿಟಿ ಸ್ಪಿನ್ನರ್​​​​​​​​​​​ಗಳ ದಂಡಿದ್ದು, ಹೇಗೆ ಎದುರಿಸ್ತಾರೆ ಅನ್ನೋ ಪ್ರಶ್ನೆ ಉದ್ಭವಿಸಿದೆ.

ಚಾಲೆಂಜ್​ ನಂ.3- ಮೂರಂಕಿ ದಾಟದೇ 14 ತಿಂಗಳು!

ಕೊಹ್ಲಿಗೆ ಸೆಂಚುರಿ ಸಿಡಿಸೋದು ನೀರು ಕುಡಿದಷ್ಟೇ ಸುಲಭ ಅನ್ನೋ ಮಾತಿದೆ. ಆದ್ರೀಗ ಇದೇ ಸ್ಪೆಷಲಿಸ್ಟ್​​​ ಟೆಸ್ಟ್​ ಕ್ರಿಕೆಟ್​ನಲ್ಲಿ ಶತಕ ಬಾರಿಸಿದೇ 14 ತಿಂಗಳಾಗಿದೆ. 2023ರ ಜುಲೈನಲ್ಲಿ ವೆಸ್ಟ್​ಇಂಡೀಸ್ ವಿರುದ್ಧ ಕೊನೆ ಶತಕ ಸಿಡಿಸಿದ್ದಾರೆ. ಆ ಬಳಿಕ ಆಡಿದ ಸೌತ್ ಆಫ್ರಿಕಾ ಪ್ರವಾಸದಲ್ಲಿ ಆಡಿದ್ರೂ ಸೆಂಚುರಿ ಗಳಿಸಲು ಫೇಲಾಗಿದ್ರು. ಈಗ ಸೆಂಚುರಿ ಜೊತೆ ಬಿಗ್ ಇನ್ನಿಂಗ್ಸ್ ಕಟ್ಟುವ ಒತ್ತಡ ಕೊಹ್ಲಿ ಮೇಲಿದೆ.

ಚಾಲೆಂಜ್​ ನಂ.4- ಕೊನೆ ಸರಣಿಯಲ್ಲಿ ಡಿಸೆಂಟ್​ ಆಟ

ಕೊಹ್ಲಿ ಆಡಿದ ದಕ್ಷಿಣ ಆಫ್ರಿಕಾ ಎದುರಿನ ಕೊನೆ ಟೆಸ್ಟ್ ಸರಣಿಯಲ್ಲಿ ಫ್ಯಾನ್ಸ್ ಎಕ್ಸ್​​​ಪೆಕ್ಟೇಶನ್ ರೀಚ್​ ಮಾಡಿರಲಿಲ್ಲ. ಒನ್​ಮ್ಯಾನ್ ಆರ್ಮಿಯಂತೆ ಹೋರಾಡಬೇಕಿದ್ದ ಕೊಹ್ಲಿ ಡೀಸೆಂಟ್​ ಪರ್ಪಾಮೆನ್ಸ್​ ನೀಡಿದ್ರು. ಆಡಿದ 4 ಇನ್ನಿಂಗ್ಸ್​​ಗಳಲ್ಲಿ 43.00ರ ಎವರೇಜ್​ನಲ್ಲಿ 172 ರನ್ ಅಷ್ಟೇ ಬಾರಿಸಿದ್ರು. 76 ರನ್ ಇವರ ಬ್ಯಾಟ್​​​ನಿಂದ ಮೂಡಿ ಬಂದ ಬೆಸ್ಟ್ ಸ್ಕೋರ್ ಆಗಿತ್ತು. ಇದೀಗ ತವರಿನಲ್ಲಾದ್ರು ಬಾಂಗ್ಲಾ ವಿರುದ್ಧ ಅಸಲಿ ಖದರ್​​ ತೋರಿಸಬೇಕಿದೆ.

ಇದನ್ನೂ ಓದಿ: ಡಾ.ಬ್ರೋ ಕಂಪನಿಯಲ್ಲಿ ಉದ್ಯೋಗ ಅವಕಾಶ.. ಗೋಪ್ರವಾಸದಲ್ಲಿ ಗಗನ್ ಜೊತೆ ನೀವೂ ಸೇರಿಕೊಳ್ಳಿ!

ಚಾಲೆಂಜ್​ ನಂ.5- ಯಂಗ್​ಸ್ಟರ್ಸ್​ ಪೈಪೋಟಿ

ಕಿಂಗ್ ಕೊಹ್ಲಿ ರೆಡ್​ಬಾಲ್ ಕ್ರಿಕೆಟ್​ನಲ್ಲಿ ಹಳೆ ಖದರ್​ ಉಳಿಸಿಕೊಂಡಿಲ್ಲ. ಕನ್ಸಿಸ್ಟೆನ್ಸಿ ಸಮಸ್ಯೆ ಎದುರಿಸ್ತಿದ್ದಾರೆ. ಇನ್ನೊಂದೆಡೆ ಯಂಗ್​ಸ್ಟರ್ಸ್​ ಸಾಲಿಡ್​ ಪ್ರದರ್ಶನ ನೀಡ್ತಿದ್ದಾರೆ. ಇದರಿಂದ ವಿರಾಟ್ ಸ್ಥಾನಕ್ಕೆ ಕುತ್ತು ಎದುರಾಗಿದೆ. ತಂಡದಲ್ಲಿ ಪೈಪೋಟಿ ಹೆಚ್ಚಿರೋದ್ರಿಂದ ವಿರಾಟ್​​​​​​​​​ ರನ್​​​​ಗಳಿಸಲೇ ಬೇಕಿದೆ. ಈ ಕಾರಣಕ್ಕಾಗಿ ಮುಂಬರೋ ಬಾಂಗ್ಲಾ ಸರಣಿ ಕಿಂಗ್ ಕೊಹ್ಲಿಗೆ ಮಹತ್ವದ್ದಾಗಿದೆ.

ಬಾಂಗ್ಲಾ ಟೆಸ್ಟ್​​ ಸಿರೀಸ್​ ಸೆಂಚುರಿ ಸಾಮ್ರಾಟನಿಗೆ ಚಾಲೆಂಜಿಂಗ್ ಸರಣಿಯಾಗಿದೆ. ಈ ಸವಾಲುಗಳ ಚಕ್ರವ್ಯೂಹ ಬೇಧಿಸಿ ಕಿಂಗ್ ಕೊಹ್ಲಿ ಗೆದ್ದು ಬೀಗ್ತಾರಾ?. ಇಲ್ಲ ಫೇಲ್​​​ ಆಗಿ ಟೀಕಾಕಾರರ ಬಾಯಿಗೆ ಆಹಾರಾವಾಗ್ತಾರಾ.? ಅನ್ನೋದನ್ನ ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕಿಂಗ್ ಕೊಹ್ಲಿ ಸೆಂಚುರಿ ಸಿಡಿಸಿ ಎಷ್ಟು ತಿಂಗಳಾಯಿತು.. ಶತಕ ಸಿಡಿಸುವಲ್ಲಿ ವಿರಾಟ್ ಫೇಲ್​; ಯಾಕೆ?

https://newsfirstlive.com/wp-content/uploads/2023/12/Virat-Kohli.jpg

Load More