/newsfirstlive-kannada/media/post_attachments/wp-content/uploads/2024/06/VIRAT_KOHLI_2.jpg)
ಟಿ20 ವಿಶ್ವಕಪ್ ಇಂದು ಮದಗಜಗಳ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಬಲಿಷ್ಠ ಭಾರತ, ಮಾಜಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನ ಎದುರಿಸಲಿದೆ. ಕಿಂಗ್ ಕೊಹ್ಲಿ ಫಾರ್ಮ್ ಬಗ್ಗೆ ಫ್ಯಾನ್ಸ್ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ವಿರಾಟ್ ಇಲ್ಲಿತನಕ ಹೇಗೆ ಆಡಿದ್ರು ಅನ್ನೋದನ್ನ ಮರೆತು ಬಿಡಿ. ಇಂದು ಮಾತ್ರ ವಿರಾಟ್ ಆರ್ಭಟಿಸೋದು ಪಕ್ಕಾ. ಅದನ್ನ ಯಾರಿಂದಲೂ ತಡೆಯಲು ಸಾಧ್ಯವಿಲ್ಲ.
ಇದನ್ನೂ ಓದಿ: ಕಾವೇರಿ ಒಡಲು ಬಗೆದು ಲೂಟಿಗೆ ಸ್ಕೆಚ್.. ನ್ಯೂಸ್ ಫಸ್ಟ್ ವರದಿ ಬೆನ್ನಲ್ಲೇ ಅಧಿಕಾರಿಗಳು ಅಲರ್ಟ್, ಭೂಗಳ್ಳ ಶಾಕ್..!
ಕಿಂಗ್ ಕೊಹ್ಲಿ.. ಈ ಅಗ್ರಜ ಬ್ಯಾಟ್ಸ್ಮನ್ ಪ್ರಸಕ್ತ ಟಿ20 ವಿಶ್ವಕಪ್ನ ಗ್ರೂಪ್ ಸ್ಟೇಜ್ ಹಾಗೂ ಸೂಪರ್-8 ನಲ್ಲಿ ಹೇಗೆ ಆಡಿದ್ರೂ ಅನ್ನೋದನ್ನ ಬಿಟ್ಟು ಬಿಡಿ. ಇಂದು ಇಂಗ್ಲೆಂಡ್ ವಿರುದ್ಧ ನಡೆಯುವ ಸೆಮಿಫೈನಲ್ ಫೈಟ್ನಲ್ಲಿ ವಿರಾಟ್, ವಿರಾಟರೂಪ ತೋರಿಯೇ ತೋರಿರ್ಸಾರೆ. ಯಾಕಂದ್ರೆ ಕೊಹ್ಲಿ ನಾಕೌಟ್ ಸ್ಪೆಷಲಿಸ್ಟ್. ನಿರ್ಣಾಯಕ ಹಂತದಲ್ಲಿ ಕೈ ಕೊಟ್ಟ ಉದಾಹರಣೆಯೇ ಇಲ್ಲ. ಏನಿದ್ರೂ ಅಬ್ಬರಕ್ಕೆ ಹೆಸರುವಾಸಿ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಇಲ್ಲಿವೆ ನೋಡಿ.
ಇದನ್ನೂ ಓದಿ: ಟಾಸ್ ಗೆದ್ದು ತಪ್ಪು ನಿರ್ಣಯ ತೆಗೆದುಕೊಂಡ ರಶೀದ್ ಖಾನ್.. ಕೋಚ್ ಮುಂದೆ ಹೋಗಿ ಗಳಗಳನೇ ಕಣ್ಣೀರಿಟ್ಟ ನಾಯಕ..!
ಕೊಹ್ಲಿ ರೌದ್ರಾವತಾರಕ್ಕೆ ಬೆಚ್ಚಿಬಿದ್ದ ದಕ್ಷಿಣ ಆಫ್ರಿಕಾ!
ಅದು 2014 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯ. ಭಾರತ ಗೆಲ್ಲಲು 173 ರನ್ ಗಳಿಸಬೇಕಿತ್ತು. ಕಿಂಗ್ ಕೊಹ್ಲಿ ರೌದ್ರಾವತಾರ ತಾಳಿದ್ರು. ಬಲಿಷ್ಠ ಆಫ್ರಿಕಾ ಬೌಲಿಂಗ್ ಕೋಟೆಯನ್ನ ಧ್ವಂಸಗೊಳಿಸಿದ್ದ ವಿರಾಟ್, ಸ್ಫೋಟಕ 77 ರನ್ ಚಚ್ಚಿ, ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ರು.
189 ಸ್ಟ್ರೈಕ್ರೇಟ್.. ಸ್ಫೋಟಕ 82 ರನ್.. ವಿಂಡೀಸ್ ಹೈರಾಣ..!
2016ರ ಟಿ20 ವಿಶ್ವಕಪ್ನಲ್ಲಿ ಭಾರತ ಹಾಗೂ ವೆಸ್ಟ್ಇಂಡೀಸ್ ತಂಡಗಳು ಮುಖಾಮುಖಿಯಾಗಿದ್ವು. ಈ ಸೆಮಿಫೈನಲ್ ಕಾಳಗದಲ್ಲಿ ಕೊಹ್ಲಿ ಪರಾಕ್ರಮ ಮೆರೆದಿದ್ರು. 189ರ ಸ್ಟ್ರೈಕ್ರೇಟ್ನಲ್ಲಿ ಬಿರುಸಿನ 89 ರನ್ ಗಳಿಸಿ ತಂಡಕ್ಕೆ ಆಪತ್ಬಾಂಧವರಾಗಿದ್ರು.
ಇದನ್ನೂ ಓದಿ:ನ್ಯೂಸ್ ಫಸ್ಟ್ ಇಂಫ್ಯಾಕ್ಟ್; ಆರೋಪಿ ರವಿ ಕುಟುಂಬಕ್ಕೆ ಹರಿದು ಬಂದ ನೆರವಿನ ಹಸ್ತ.. ಶಾಲೆಗೆ ಹೊರಟ ಮಕ್ಕಳು
ಅಡಿಲೇಡ್ನಲ್ಲಿ ಆಂಗ್ಲರಿಗೆ ವಿರಾಟ್ ದುಸ್ವಪ್ನ..!
2022ರ ಟಿ20 ವಿಶ್ವಕಪ್ನಲ್ಲಿ ಕಿಂಗ್ ಕೊಹ್ಲಿ ಬ್ಯಾಟ್ ಮತ್ತೆ ಘರ್ಜಿಸಿತ್ತು. ಓಪನರ್ಸ್ ಫೇಲ್ಯೂರ್ ಮಧ್ಯೆ ಕೆಚ್ಚದೆಯ ಇನ್ನಿಂಗ್ಸ್ ಕಟ್ಟಿದ ವಿರಾಟ್ ಅರ್ಧಶತಕದೊಂದಿಗೆ ಇಂಗ್ಲೆಂಡ್ ಬೌಲರ್ಗಳ ಬೆವರಿಳಿಸಿದ್ರು. ಭಾರತ ಈ ಪಂದ್ಯವನ್ನ ಕೈಚೆಲ್ಲಿದ್ರೂ, ವಿರಾಟ್ ಟಾಪ್ ಕ್ಲಾಸ್ ಇನ್ನಿಂಗ್ಸ್ ಕಟ್ಟಿ ಎಲ್ಲರ ದಿಲ್ ಗೆದ್ರು.
ಮಿರ್ಪುರ್ನಲ್ಲಿ ಸಿಂಹಳೀಯರಿಗೆ 'ವಿರಾಟರೂಪ'ದರ್ಶನ
ಇನ್ನು 2014ರ ಫೈನಲ್ ಅಖಾಡದಲ್ಲಿ ಕೊಹ್ಲಿ ಕಟ್ಟಿದ ಅಗ್ರೆಸ್ಸಿವ್ ಇನ್ನಿಂಗ್ಸ್ ಅನ್ನ ಯಾರೊಬ್ಬರು ಮರೆಯಲು ಸಾಧ್ಯವಿಲ್ಲ. ಶ್ರೀಲಂಕಾ ಬೌಲರ್ಗಳನ್ನ ಧೂಳಿಪಟ ಮಾಡಿದ್ದ ಕೊಹ್ಲಿ 58 ಎಸೆತಗಳಲ್ಲಿ ಸಿಡಿಲಬ್ಬರದ 77 ರನ್ ಗಳಿಸಿ ಶೈನ್ ಆಗಿದ್ರು. ಇಷ್ಟಾದ್ರು ಭಾರತಕ್ಕೆ ಜಯ ಒಲಿಯಲಿಲ್ಲ. ಕಿಂಗ್ ಕೊಹ್ಲಿಯ ಟಿ20 ವಿಶ್ವಕಪ್ನ ನಾಕೌಟ್ ರನ್ ಭರಾಟೆ ಜೋರಿದೆ. ನಿರ್ಣಾಯಕ ಹಂತದ ಪಂದ್ಯಗಳಲ್ಲಿ ತಂಡಕ್ಕೆ ಬೆನ್ನೆಲುಗಾಗಿ ನಿಲ್ಲುವ ವಿರಾಟ್ ಇಂದು ಕೂಡ ಫೇಲ್ಯೂರ್ ಮೆಟ್ಟಿನಿಂತು, ಆಂಗ್ಲ ಅಟ್ಟಹಾಸಕ್ಕೆ ಬ್ರೇಕ್ ಹಾಕಲಿ ಅನ್ನೋದು ಎಲ್ಲರ ಆಶಯವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ