newsfirstkannada.com

RCB ಟೀಮ್​ನಲ್ಲಿ ಗುಡ್​ ಸ್ಟೂಡೆಂಟ್ ಅಂದ್ರೆ ವಿರಾಟ್ ಕೊಹ್ಲಿ.. ಅದ್ಕೆ ಇಲ್ಲಿದೆ ಕಾರಣ!

Share :

Published May 4, 2024 at 4:00pm

Update May 4, 2024 at 4:04pm

    ವಿರಾಟ್ ಕೊಹ್ಲಿ ಬಗ್ಗೆ ಕ್ಯಾಮರೂನ್​ ಗ್ರೀನ್ ಏನ್ ಹೇಳಿದ್ದಾರೆ?

    ವಿರಾಟ್​ ಕೊಹ್ಲಿ RCBಯ ಮೋಸ್ಟ್​ ಸೀನಿಯರ್​ ಪ್ಲೇಯರ್

    ಆರ್​​ಸಿಬಿಯಲ್ಲಿ ಕೊಹ್ಲಿ ಫಾಲೋ ಮಾಡೋ ನಿಯಮಗಳೇನು?

ವಿರಾಟ್​ ಕೊಹ್ಲಿ ಆರ್​​ಸಿಬಿ ತಂಡದ ಮೋಸ್ಟ್​ ಸೀನಿಯರ್​ ಪ್ಲೇಯರ್​. ವಿಶ್ವ ಕ್ರಿಕೆಟ್​ ಲೋಕದಲ್ಲಿ ಎಲ್ಲವನ್ನೂ ಸಾಧಿಸಿರೋ ಸಾಧಕ. ಇಂತಾ ಕೊಹ್ಲಿ ಆರ್​​ಸಿಬಿ ಕ್ಯಾಂಪ್​ನಲ್ಲಿ ಈಗಲೂ ಸ್ಟೂಡೆಂಟ್​ ಇದ್ದಂತೆ ಇರ್ತಾರಂತೆ. ಅದ್ಯಾಕೆ ಅನ್ನೋದ್ರ ಇಂಟರೆಸ್ಟಿಂಗ್​ ಕಥೆ ಇಲ್ಲಿದೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಗುಡ್​ ಬಾಯ್​ ಯಾರು ಅನ್ನೋ ಪ್ರಶ್ನೆಗೆ ಒಬ್ಬೊಬ್ಬ ಫ್ಯಾನ್ಸ್​ ಒಂದೊಂದು ಉತ್ತರ ನೀಡಬಹುದು. ಆದ್ರೆ, ತಂಡದ ಆಟಗಾರರು ಮಾತ್ರ ಹೇಳೋದು ಒಂದೇ ಹೆಸರು ಅದೇ ವಿರಾಟ್​ ಕೊಹ್ಲಿ. ಆರ್​​ಸಿಬಿ ತಂಡದ ಆಲ್​ರೌಂಡರ್​ ಕ್ಯಾಮರೂನ್​ ಗ್ರೀನ್ ಕೂಡ​ ಸಂದರ್ಶನವೊಂದರಲ್ಲಿ ಈ ಮಾತನ್ನ ಒಪ್ಪಿಕೊಂಡಿದ್ದಾರೆ. ಜೊತೆಗೆ ಕೊಹ್ಲಿನೆ ಯಾಕೆ ಗುಡ್ ​ಬಾಯ್​ ಅನ್ನೋದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ.

ಇದನ್ನೂ ಓದಿ: ಸಿಲಿಕಾನ್​ ಸಿಟಿಯಲ್ಲಿ ಟಾಕ್ಸಿಕ್ ಶೂಟಿಂಗ್.. ಯಶ್​ ಅಕ್ಕನ ಪಾತ್ರದಲ್ಲಿ ಬಹುಭಾಷಾ ಸುಂದರಿ ನಯನಾ ತಾರಾ?

ಇದನ್ನೂ ಓದಿ: ಯಶ್​ ಟಾಕ್ಸಿಕ್​​ನಿಂದ ಬಾಲಿವುಡ್​ ಬ್ಯೂಟಿ ಔಟ್​.. ಕರೀನಾ ಹೊರ ಬರಲು ಕಾರಣ?

ಐಪಿಎಲ್​​ ಶುರುವಾದಾಗಿನಿಂದ ಈವರೆಗೆ ಸತತ 17 ವರ್ಷಗಳಿಂದ ವಿರಾಟ್​ ಕೊಹ್ಲಿ ಆರ್​​ಸಿಬಿ ತಂಡದಲ್ಲಿದ್ದಾರೆ. ಈಗಿರೋ ಎಲ್ಲ ಆಟಗಾರರಿಗಿಂತ ಮೋಸ್ಟ್ ಸೀನಿಯರ್ ಅಂದ್ರೆ ಅದು ಕೊಹ್ಲಿ​​. ಹಾಗಿದ್ರೂ, ಯಾವುದೇ ಹಮ್ಮು-ಬಿಮ್ಮಿಲ್ಲದೇ ಈಗಲೂ ತಂಡದಲ್ಲಿ ಸ್ಟೂಡೆಂಟ್​ ಇದ್ದಂತೆ ಇರ್ತಾರಂತೆ. ಪಂದ್ಯವಿರಲಿ, ಅಭ್ಯಾಸವಿರಲಿ ಪ್ರತಿ ಬಾರಿ ಮೈದಾನಕ್ಕೆ ತೆರಳುವಾಗಲೂ ಬಸ್​​ಗೆ ವಿರಾಟ್​ ಕೊಹ್ಲಿ ಮೊದಲು ಬಂದು ಕೂರ್ತಾರಂತೆ. ಟೀಮ್​ ಮೀಟಿಂಗ್​ಗಳಲ್ಲೂ ಎಲ್ಲರಿಗಿಂತ ಮೊದಲು ಹಾಜರಿರ್ತಾರಂತೆ. ಟೈಮ್​ ಅಂದ್ರೆ ಟೈಮ್​​. ಪಕ್ಕಾ ಟೈಮ್​ ಮೆಂಟೇನ್​ ಮಾಡೋ ವಿಚಾರದಲ್ಲಿ ಕೊಹ್ಲಿ ಮೊದಲಿಗರು. ತಮ್ಮ ನಡೆ ನುಡಿಯಿಂದಲೇ ತಂಡದ ಯುವ ಆಟಗಾರರಿಗೆ ಎಕ್ಸಾಂಪಲ್​ ಸೆಟ್​ ಮಾಡ್ತಾರೆ. ಹೀಗಾಗಿ ಆರ್​​ಸಿಬಿಯ ಗುಡ್​ಬಾಯ್​ ವಿರಾಟ್​ ಕೊಹ್ಲಿ ಎಂದು ಕ್ಯಾಮರೂನ್​ ಗ್ರೀನ್​ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB ಟೀಮ್​ನಲ್ಲಿ ಗುಡ್​ ಸ್ಟೂಡೆಂಟ್ ಅಂದ್ರೆ ವಿರಾಟ್ ಕೊಹ್ಲಿ.. ಅದ್ಕೆ ಇಲ್ಲಿದೆ ಕಾರಣ!

https://newsfirstlive.com/wp-content/uploads/2024/04/VIRAT-KOHLI-6.jpg

Load More