newsfirstkannada.com

×

ಅರ್ಧ ಶತಕ ಬಾರಿಸಿಯೂ ಸಂಭ್ರಮಿಸಿದ ಕೊಹ್ಲಿ; ಬೇರೆಯದ್ದೇ ಮಾತಾಡಿಕೊಂಡ ಅಭಿಮಾನಿಗಳು..!

Share :

Published April 26, 2024 at 8:15am

    ನಿನ್ನೆಯ ಪಂದ್ಯದಲ್ಲೂ ಅರ್ಧಶತಕ ಬಾರಿಸಿದ ಕಿಂಗ್ ಕೊಹ್ಲಿ

    ಆರೆಂಜ್ ಕ್ಯಾಪ್ ಮತ್ತಷ್ಟು ಭದ್ರ ಪಡಿಸಿಕೊಂಡಿರುವ ವಿರಾಟ್

    ಎಸ್​ಆರ್​ಹೆಚ್​ ವಿರುದ್ಧ 35 ರನ್​​ಗಳಿಂದ ಗೆದ್ದ ಆರ್​ಸಿಬಿ

ನಿನ್ನೆ ಹೈದರಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ತಂಡವು ಸನ್​ ರೈಸರ್ಸ್ ವಿರುದ್ಧ ಗೆಲ್ಲುವ ಮೂಲಕ ಸೇಡು ತೀರಿಸಿಕೊಂಡಿದೆ. ಇಲ್ಲಿಯವರೆಗೆ 9 ಪಂದ್ಯಗಳನ್ನು ಆಡಿರುವ ಆರ್​ಸಿಬಿಗೆ ಇದು ಎರಡನೇ ಗೆಲುವಾಗಿದೆ. ಅಭಿಮಾನಿಗಳ ತೀವ್ರ ಟೀಕೆ ಬೆನ್ನಲ್ಲೇ ಆರ್​ಸಿಬಿ ಮತ್ತೆ ಪುಟಿದೆದ್ದಿದೆ.

ಇನ್ನು, ವಿರಾಟ್ ಕೊಹ್ಲಿ ಎಂದಿನಂತೆ ತಮ್ಮ ಬ್ಯಾಟಿಂಗ್ ಆರ್ಭಟ ಮುಂದುವರಿಸಿದರು. 43 ಬಾಲ್​ಗಳಲ್ಲಿ 51 ರನ್​ ಚಚ್ಚಿದ ವಿರಾಟ್​, 4 ಬೌಂಡರಿ, ಒಂದು ಸಿಕ್ಸರ್ ಬಾರಿಸಿದರು. ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ, ಎಂದಿನಂತೆ ಸಂಭ್ರಮಿಸಿಲ್ಲ. ನಾರ್ಮಲ್ ಆಗಿಯೇ ಇದ್ದರು.

ಇದನ್ನೂ ಓದಿ:ವೋಟರ್ ಐಡಿ ಮಿಸ್​​ ಆಗಿದೆಯಾ? ಚಿಂತೆ ಬೇಡ! ವೋಟ್ ಮಾಡಲು ಈ ದಾಖಲೆಗಳಿದ್ದರೆ ಸಾಕು..!

ಕೊಹ್ಲಿಯ ಈ ನಡೆ ಅಭಿಮಾನಿಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸತತ ಸೋಲುಗಳಿಂದ ಆರ್​ಸಿಬಿ ಪ್ಲೇ-ಆಫ್​ಗೆ ಹೋಗೋದು ಬಹುತೇಕ ಡೌಟ್. ಅಲ್ಲದೇ ಮೊದಲು ಬ್ಯಾಟ್​ ಮಾಡಿರುವ ಆರ್​ಸಿಬಿಗೆ ಗೆಲುವಿನ ಬಗ್ಗೆ ಖಚಿತತೆ ಇಲ್ಲ. ಸಾಲು ಸಾಲು ಸೋಲುಗಳಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಇದೇ ಕಾರಣಕ್ಕೆ ಕಿಂಗ್ ಕೊಹ್ಲಿ ಅರ್ಧಶತಕವನ್ನು ಸಂಭ್ರಮಿಸಿಲ್ಲ. ಅವರ ಮೌನ ನೋಡಿದ್ರೆ ಇನ್ನೂ ಭಾಕಿ ಇದೆ ಅದಕ್ಕೆ ಸುಮ್ಮನಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೊಹ್ಲಿ ಅಭಿಮಾನಿಗಳು, ಪ್ರತಿ ಪಂದ್ಯದಲ್ಲೂ ಅರ್ಧ ಶತಕ, ಸೆಂಚುರಿ ಬಾರಿಸಿದಾಗ ವೈಯಕ್ತಿಕ, ವೈಯಕ್ತಿಕ ಎಂದು ಟೀಕೆ ಮಾಡ್ತಾರೆ. ಅದಕ್ಕೆ ನಮ್ಮ ಹೀರೋ ಸುಮ್ಮನ್ನಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ಮೊದಲು ಬ್ಯಾಟ್ ಮಾಡಿದ್ದ ಆರ್​ಸಿಬಿ 7 ವಿಕೆಟ್ ಕಳೆದುಕೊಂಡು 206 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ಎಸ್​ಆರ್​ಹೆಚ್​, 8 ವಿಕೆಟ್ ಕಳೆದುಕೊಂಡು 171 ರನ್​ಗಳಿಸಿತು.

ಇದನ್ನೂ ಓದಿಇನ್ನೇನು ಸಾಯುತ್ತಿದ್ದ ಮಹಿಳೆಗೆ ಹಂದಿಯ ಮೂತ್ರಪಿಂಡ ಕಸಿ ಯಶಸ್ವಿ, ಮರುಜನ್ಮ ಪಡೆದ ಪವಾಡಗಿತ್ತಿಯ ಕಥೆ..!

View this post on Instagram

A post shared by F I L M Y G Y A N (@filmygyan)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅರ್ಧ ಶತಕ ಬಾರಿಸಿಯೂ ಸಂಭ್ರಮಿಸಿದ ಕೊಹ್ಲಿ; ಬೇರೆಯದ್ದೇ ಮಾತಾಡಿಕೊಂಡ ಅಭಿಮಾನಿಗಳು..!

https://newsfirstlive.com/wp-content/uploads/2024/04/KOHLI-10.jpg

Load More