ಈ ಸಲನೂ ಪಾಕ್ಗೆ ಪವರ್ ಫುಲ್ ಪಂಚ್ ನೀಡೋಕೆ ಕೊಹ್ಲಿ ರೆಡಿ
ಹ್ಯಾರೀಸ್ ರೌಫ್ ಬೌಲಿಂಗ್ನಲ್ಲಿ ಶತಮಾನದ ಶಾಟ್ ಸಿಡಿಸಿದ್ದ ಕೊಹ್ಲಿ
ಮತ್ತೊಂದು ಹೈವೋಲ್ಟೇಜ್ ಪಂದ್ಯಕ್ಕಾಗಿ ಕಾದು ಕುಳಿತಿರುವ ಫ್ಯಾನ್ಸ್
ಇಂಡೋ ಪಾಕ್ ಮ್ಯಾಚ್ ಅಂದ್ರೆ, ವಿಶ್ವ ಕ್ರಿಕೆಟ್ನಲ್ಲಿ ಎಲ್ಲಿಲ್ಲದ ಕ್ರೇಜ್. ಬದ್ಧವೈರಿಗಳ ಈ ಹೋರಾಟ ಕಣ್ತುಂಬಿಕೊಳ್ಳಲು ಕೋಟ್ಯಾಂತರ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಆದ್ರೆ, ಎದುರಾಳಿ ಪಾಕ್ ತಂಡಕ್ಕೆ ಮಾತ್ರ ಒಂದು ಶಾಟ್ ಇನ್ನು ಕಾಡುತ್ತಿದೆ. ಆ ಶಾಟ್ ಯಾವುದು?.
ಇಂಡೋ -ಪಾಕ್ ಕ್ರಿಕೆಟ್ ಫೈಟ್ ಅಂದ್ರೆ ಮುಗೀತು. ಇಡೀ ವಿಶ್ವ ಕ್ರಿಕೆಟ್ ಜಗತ್ತೆ ಬದ್ಧವೈರಿಗಳ ಕಾದಾಟ ನೋಡಲು ಕಾದು ಕುಳಿತಿರುತ್ತೆ. ಕಣ್ಣು ರೆಪ್ಪೆ ಹೊಡೆಯದಂತೆ ಪಂದ್ಯವನ್ನ ಆಸ್ವಾಧಿಸ್ತಾರೆ. ಯಾಕಂದ್ರೆ, ಇಂಡೋ- ಪಾಕ್ ನಡುವಿನ ಪಂದ್ಯದ ಗಮ್ಮತ್ತೇ ಆಗಿರುತ್ತೆ. ಇದು ನಿನ್ನೆ, ಮೊನ್ನೆಯದಲ್ಲ, ಇದಕ್ಕಿರೋ ಇತಿಹಾಸ ತುಂಬಾ ದೊಡ್ಡದು. ಆದ್ರೀಗ ಅಂಥದ್ದೇ ಹೈವೋಲ್ಟೇಜ್ ಮ್ಯಾಚ್ಗೆ ದಿನಗಣನೆ ಶುರುವಾಗಿದೆ.
ಇದನ್ನೂ ಓದಿ: ಹೆಂಡತಿ ಸಾವಿನಿಂದ ನೊಂದ ಗಂಡ.. ಮಧ್ಯರಾತ್ರಿ ನೇಣು ಬಿಗಿದುಕೊಂಡು ಸಾವು
ಭಾರತ ಹಾಗೂ ಪಾಕ್ ನಡುವಿನ ಟಿ20 ವಿಶ್ವಕಪ್ ಸಮರಕ್ಕೆ ಕೌಂಟ್ಡೌನ್ ಶುರುವಾಗಿದ್ದು, ಪ್ರತಿಷ್ಠಿತ ಪಂದ್ಯಕ್ಕಾಗಿ ಉಭಯ ತಂಡಗಳು ಭಾರೀ ಸ್ಟ್ರಾಟರ್ಜಿ ಗೇಮ್ ಪ್ಲಾನ್ಗಳನ್ನೇ ರೂಪಿಸ್ತಿವೆ. ಗೆದ್ದೇ ಗೆಲ್ಲುವ ಶಪಥ ಮಾಡಿವೆ. ಆದ್ರೆ. ಬದ್ಧವೈರಿ ಪಾಕ್ಗೆ ಮಾತ್ರ, ಕಿಂಗ್ ಕೊಹ್ಲಿ ಸಿಡಿಸಿದ್ದ ಆ ಒಂದು ಶಾಟ್ ಇನ್ನಿಲ್ಲದೆ ಕಾಡುತ್ತಿದೆ.
ಮರೆಯಲಾಗ್ತಿಲ್ಲ 2022 ಟಿ20 ವಿಶ್ವಕಪ್ನ ಡ್ರೀಮ್ ಶಾಟ್..!
ಕಳೆದ ಟಿ20 ವಿಶ್ವಕಪ್ ಟೂರ್ನಿಯ ಇಂಡೋ- ಪಾಕ್ ಪಂದ್ಯವನ್ನ ಬೇಕಾದ್ರೂ ಮರೀಬೋದು.. ಆದ್ರೆ, ಹ್ಯಾರಿಸ್ ರೌಫ್ ಬೌಲಿಂಗ್ನಲ್ಲಿ ಕೊಹ್ಲಿ ಸಿಡಿಸಿದ ಸಿಕ್ಸರ್ನ ಮರೆಯೋಕೆ ಸಾಧ್ಯಾನೆ ಇಲ್ಲ. ಯಾಕಂದ್ರೆ, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಏಕಾಂಗಿ ಹೋರಾಟದ ಪರಿ ಹಂಗಿತ್ತು. 8 ಎಸೆತಕ್ಕೆ 28 ರನ್. ಹೈ ಫ್ರಷರ್ ಗೇಮ್. ಕ್ವಾಲಿಟಿ ಫೇಸ್ ಬೌಲರ್. 140ರ ವೇಗದ ಬಾಲ್. ಫುಲ್ ಲೆನ್ತ್ ಬಾಲ್. ಕೊಹ್ಲಿಯ ಫೂಟ್ ಬ್ಯಾಲೆನ್ಸ್ ಕೂಡ ಸರಿ ಇರಲಿಲ್ಲ. ಆದ್ರೆ, ಕೊಹ್ಲಿಯ ಟೈಮಿಂಗ್ ಆ್ಯಂಡ್ ಪವರ್ ಸ್ಟ್ರೋಕ್ಗೆ ಹ್ಯಾರಿಸ್ ತಲೆ ಮೇಲಿಂದ ಹಾರಿ ಹೋಗಿದ್ದ ಚೆಂಡು ಬೌಂಡರಿ ಗೆರೆ ದಾಟಿತ್ತು. ಈ ನಂಬಲಾಸಾಧ್ಯವಾಗಿದ್ದ ಆ ಸಿಕ್ಸರ್, ಟೀಮ್ ಇಂಡಿಯಾವನ್ನ ಗೆಲುವಿನ ಟ್ರ್ಯಾಕ್ಗೆ ಮರಳುವಂತೆ ಮಾಡಿತ್ತು.
ಇದನ್ನೂ ಓದಿ: ಫೈರಿ ಬ್ಯಾಟರ್ನಿಂದ ತಂಡಕ್ಕೆ ಬಿಗ್ ಬೂಸ್ಟ್.. ಪ್ಲೇಯಿಂಗ್- 11ರಲ್ಲಿ ಪಂತ್ ಆಯ್ಕೆಗೆ ಅಡ್ಡಗಾಲು ಹಾಕ್ತಾರಾ ಸಂಜು?
Virat Kohli’s 18.5 Six has been selected as the greatest moment in T20 World Cup history.
The Greatest Iconic Shot In Cricket History.pic.twitter.com/jrDmRS1zix
— KRISHNA (@KrishnaVK_18) June 1, 2024
ಬದ್ಧವೈರಿ ಪಾಕ್ಗೆ ಕಾಡುತ್ತಿದ್ದೆ ಆ ಶತಮಾನದ ಶಾಟ್..!
ವಿರಾಟ್ ಕೊಹ್ಲಿ ಸಿಡಿಸಿದ್ದ ಈ ಗ್ರೇಟೆಸ್ಟ್ ಶಾಟ್ಗೆ 2 ವರ್ಷಗಳೇ ಕಳೆದಿವೆ. ಹಾಗಿದ್ರು, ಆ ಮಿರಾಕಲ್ ಶಾಟ್, ಇಂದಿಗೂ ಫ್ಯಾನ್ಸ್ ಮನದಲ್ಲಿ ಅಚ್ಚಳಿಯದಂತೆಯೇ ಇದೆ. ಇಂಡೋ- ಪಾಕ್ ಮ್ಯಾಚ್ ಎಂದಾಕ್ಷಣ ವಿರಾಟ್, ಸಿಡಿಸಿದ ಈ ಶತಮಾನದ ಶಾಟ್ ಫ್ಯಾನ್ಸ್ ಕಣ್ಮುಂದೆ ಬರ್ತಿದೆ. ಪಾಕ್ ತಂಡದ ಬೌಲರ್ಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಅಷ್ಟೇ ಅಲ್ಲ. ಸದ್ಯ ರೆಡ್ ಹಾಟ್ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿಯನ್ನ ತಡೆಯೋದು ಹೇಗೆ ಅನ್ನೋ ಟೆನ್ಶನ್ ಶುರುವಾಗಿದೆ. ಪಾಕ್ ಎದುರಿನ ಪಂದ್ಯವೆಂದ್ರೆ, ಎದೆಯುಬ್ಬಿಸಿ ಬ್ಯಾಟಿಂಗ್ ನಡೆಸೋ ವಿರಾಟ್ ಕೊಹ್ಲಿ, ಈ ಸಲನೂ ಪಾಕ್ಗೆ ಪವರ್ ಫುಲ್ ಪಂಚ್ ನೀಡೋಕೆ ರೆಡಿಯಾಗಿರೋದು ಅಂತೂ ಸತ್ಯ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ