ಮೊನ್ನೆ ಬೆಲೆ ಏರಿಕೆ ಈಗ ವ್ಯಾಲಿಡಿಟಿ ಇಳಿಕೆ! ವೊಡಾಫೋನ್ ಬಳಕೆದಾರರಿಗೆ ಶಾಕ್ ಕೊಟ್ಟ ಇವೆರಡು ಪ್ಲಾನ್​​

author-image
AS Harshith
Updated On
Vodafone Idea: 5G ಸೇವೆ ಪ್ರಾರಂಭಿಸಲು ಮುಂದಾದ ವೊಡಾಫೋನ್​ ಐಡಿಯಾ? ಬೆಂಗಳೂರಿಗೆ ಯಾವಾಗ?
Advertisment
  • ಬೆಲೆ ಏರಿಕೆ ಬಳಿಕ ಈಗ ವ್ಯಾಲಿಡಿಟಿ ಇಳಿಕೆ
  • ಗ್ರಾಹಕರಿಗೆ ಶಾಕ್​ ಮೇಲೆ ಶಾಕ್​ ಕೊಟ್ಟ ವೊಡಾಫೋನ್​​
  • 2 ಪ್ರಿಪೇಯ್ಡ್​ ಪ್ಲಾನ್​ಗಳ ವ್ಯಾಲಿಡಿಟಿ ಇಳಿಸಿಕೊಂಡ ವೊಡಾಫೋನ್​

ಇತ್ತೀಚೆಗೆ ಖಾಸಗಿ ಕಂಪನಿಗಳು ಬೆಲೆ ಎರಿಕೆ ಮಾಡಿರುವ ಸಂಗತಿ ಗೊತ್ತೇ ಇದೆ. ಪ್ರಿಪೇಯ್ಡ್​ ಬಳಕೆದಾರರಿಗೆ ಬೆಲೆ ಏರಿಕೆಯಿಂದ ಶಾಕ್​ ನೀಡಿದೆ. ವೊಡಾಫೋನ್​ ಐಡಿಯಾ ಕೂಡ ಇದೇ ರೀತಿಯ ಬೆಲೆ ಏರಿಕೆಗೆ ಮಾಡುವ ಮೂಲಕ ಗ್ರಾಹಕರಿಗೆ ಶಾಕ್​ ನೀಡಿತ್ತು. ಇದೀಗ ವ್ಯಾಲಿಡಿಟಿ ಇಳಿಕೆ ಮಾಡುವ ಮೂಲಕ ಮತ್ತೊಮ್ಮೆ ಅಚ್ಚರಿ ಮೂಡಿಸಿದೆ.

ಹೌದು. 479 ರೂಪಾಯಿಯ ಮತ್ತು 666 ರೂಪಾಯಿಯ ಪ್ರಿಪೇಯ್ಡ್​ ಪ್ಲಾನ್​ ವ್ಯಾಲಿಡಿಟಿಯನ್ನು ಇಳಿಕೆ ಮಾಡಿದೆ. ಆ ಮೂಲಕ ತನ್ನ ಬಳಕೆದಾರರಿಗೆ ಸುಡುವಂತೆ ಮಾಡಿದೆ. ಸದ್ಯ ಈ ಪ್ಲಾನ್​​ ವ್ಯಾಲಿಡಿಟಿ ಎಷ್ಟಿದೆ ನೋಡೋಣ.

ಇದನ್ನೂ ಓದಿ: Pager ಸ್ಫೋಟಗೊಂಡತೆ Smartphone​ ಬ್ಲಾಸ್ಟ್​ ಆಗುತ್ತಾ? ಎಕ್ಸ್​ಫರ್ಟ್ಸ್​​ ಬಿಚ್ಚಿಟ್ಟಿದ್ದಾರೆ ಅಚ್ಚರಿಯ ಸಂಗತಿ

479 ರೂಪಾಯಿಯ ಪ್ರಿಪೇಯ್ಡ್​ ಪ್ಲಾನ್​ 56 ದಿನಗಳ ವ್ಯಾಲಿಡಿಟಿ ಹೊಂದಿತ್ತು. ಆದರೀಗ 48 ದಿನಗಳ ವ್ಯಾಲಿಡಿಟಿಗೆ ಸೀಮಿತಗೊಳಿಸಿದೆ, ಇದರಲ್ಲಿ ಪ್ರತಿದಿ 1GB ಡೇಟಾ ಮತ್ತು ದಿನಕ್ಕೆ 100 SMS​​ ಉಚಿತವಾಗಿ ಸಿಗುತ್ತಿದೆ. ಜೊತೆಗೆ ಅನಿಯಮಿತ ಕರೆ ಸೌಲಭ್ಯ ನೀಡುತ್ತಿದೆ.

ಇದನ್ನೂ ಓದಿ: ಬೆಕ್ಕಿನ ಕಣ್ಣಿನ ಸುಂದರಿಗೆ 44 ವರ್ಷ.. ಹುಟ್ಟು ಹಬ್ಬದಂದು ಕೆಂಪು ಗೌನ್​ನಲ್ಲಿ ಮಿಂಚಿದ ಬೆಬೋ ಕರೀನಾ

666 ರೂಪಾಯಿ ರೀಚಾರ್ಜ್​ ಪ್ಲಾನ್​ 77 ದಿನಗಳ ವ್ಯಾಲಿಡಿಟಿ ಹೊಂದಿತ್ತು. ಆದರೀಗ 64ಕ್ಕೆ ಇಳಿಸಿದೆ. ಆ ಮೂಲಕ ಅಚ್ಚರಿಗೆ ದೂಡಿದೆ. ಈ ಪ್ಲಾನ್​ನಲ್ಲಿ ಗ್ರಾಹಕರಿಗೆ ದಿನಕ್ಕೆ 1.5GB ಡೇಟಾ, ಅನಿಯಮಿತ ಕರೆ ಸೌಲಭ್ಯ, ದಿನಕ್ಕೆ 100 SMS​​ ಉಚಿತವಾಗಿ ನೀಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment