ದರ್ಶನ್​ ಹತ್ರ ಪರಿಹಾರ ಕೇಳೋಕೆ ಹೋದ್ರೆ ನಾಯಿ ಛೂ ಬಿಟ್ರು.. ಕಾಟೇರನ ಕರಾಳ ಮುಖ ಬಿಚ್ಚಿಟ್ಟ ಕೂಲಿ ಕಾರ್ಮಿಕ

author-image
AS Harshith
Updated On
ದರ್ಶನ್​ ಹತ್ರ ಪರಿಹಾರ ಕೇಳೋಕೆ ಹೋದ್ರೆ ನಾಯಿ ಛೂ ಬಿಟ್ರು.. ಕಾಟೇರನ ಕರಾಳ ಮುಖ ಬಿಚ್ಚಿಟ್ಟ ಕೂಲಿ ಕಾರ್ಮಿಕ
Advertisment
  • 8 ವರ್ಷದಿಂದ ಕೂಲಿ ಕೆಲಸ ಮಾಡುತ್ತಿದ್ದ ಮಹೇಶ್​
  • ಫಾರ್ಮ್​ ಹೌಸ್​ನಲ್ಲಿ ಎತ್ತು ತಿವಿದು ಕಣ್ಣು ಕಳೆದುಕೊಂಡ ವ್ಯಕ್ತಿ
  • ದರ್ಶನ್​ ಹತ್ರ ಸಹಾಯ ಕೇಲಲು ಹೋದ್ರೆ ಏನು ಮಾಡಿದ್ರಂತೆ ಗೊತ್ತಾ?

ನಟ ದರ್ಶನ್​​ ಕರಾಳ ಮುಖವನ್ನು ಅಲ್ಲೇ ಕೂಲಿ ಮಾಡಿದ್ದ, ಸದ್ಯ ಹಾಸಿಗೆ ಹಿಡಿದ ವ್ಯಕ್ತಿಯೊಬ್ಬರು ಬಿಚ್ಚಿಟ್ಟಿದ್ದಾರೆ. 8 ವರ್ಷದಿಂದ ಕೂಲಿ ಮಾಡಿ ಕೊನೆಗೆ ತೊಂದರೆ ಆದಾಗ ಸಹಾಯ ಮಾಡದೆ ನೋವು ಕೊಟ್ಟ ಕಾಟೇರನ ಇನ್ನೊಂದು ಮುಖವನ್ನು ಅನಾವರಣ ಮಾಡಿದ್ದಾರೆ.

ಮಹೇಶ್​ ಎಂಬ ಕೂಲಿ ಕಾರ್ಮಿಕ ನಟ ದರ್ಶನ್​ ಬಗ್ಗೆ ಮಾತನಾಡಿದ್ದಾರೆ. ‘ಅಂದು ದರ್ಶನ್​ ಸಾಹೇಬ್ರು ಎತ್ತಿಗೆ ಲಾಲ ಕಟ್ಟಿಸಿಬಿಡಪ್ಪ ಎಂದು ಹೇಳಿ ಅವರ ಪಾಡಿಗೆ ಎಲ್ಲಿಗೆ ಹೋದ್ರು ಗೊತ್ತಿಲ್ಲ. ಬಳಿಕ ಎತ್ತು ಹಿಡಿಯಲು ಹೋದಾಗ ಅದರ ಕೊಂಬು ಕಣ್ಣಿಗೆ ಹೊಡೆದುಬಿಟ್ಟಿತು. ಕೊಂಬು ತಾಗಿದಂತೆ ಕಣ್ಣು ತಲೆಯಲ್ಲಿ ಬಂದುಬಿಟ್ಟಿತು. ತಕ್ಷಣವೇ ಅಲ್ಲೇ ಬಿದ್ದುಬಿಟ್ಟೆ. ನಂತರ ಚಿಕಿತ್ಸೆ ಕೊಡಿಸಿದರು. ಬಳಿಕ ಅವರ ಕಡೆಯವರು ನನ್ನನ್ನು ಮನೆಗೆ ಬಿಟ್ಟುಹೋದ್ರು’.

ಇದನ್ನೂ ಓದಿ: ನಟ ದರ್ಶನ್​ಗೆ ಬೇಲ್ ಸಿಗೋದು ಡೌಟ್? ಆರೋಪ ಸಾಬೀತಾದ್ರೆ ಎಷ್ಟು ವರ್ಷ ಜೈಲು ಶಿಕ್ಷೆ..?

ಎತ್ತು ಕೊಂಬು ತಾಗಿ ಗಾಯಗೊಂಡ ಬಳಿಕ. ಅಣ್ಣ ಹೀಗಾಗೋತ್ತಲ್ಲ. ಜೀವನ ಏನು ಮಾಡಲಿ. ನನ್ನ ಮನೆಯಲ್ಲಿ ಹೆಂಡತಿ ಮಕ್ಕಳು ಏನು ಮಾಡೋದು ಎಂದು ದರ್ಶನ್​ ಬಳಿ ಹೇಳಿದೆ. ಅದಕ್ಕೆ ದರ್ಶನ್​​ ನಾನು ಇದ್ದೀನಿ. ವ್ಯವಸ್ಥೆ ಮಾಡಿಕೊಡ್ತೀನಿ ಎಂದು ಹೇಳಿದ್ರೆ ಹೊರತು ಏನು ಮಾಡಿಕೊಡಲಿಲ್ಲ.

ಇದನ್ನೂ ಓದಿ: ಬಾಡಿಗೆ ಅಂತ ಹೋದವನು ಕೊಲೆ ಕೇಸ್‌ನಲ್ಲಿ ಲಾಕ್! ದರ್ಶನ್​ ಮಾಡಿದ ಕಿತಾಪತಿಗೆ ಕಾರ್​ ಡ್ರೈವರ್​ಗೆ ಸಂಕಷ್ಟ

ಪರಿಹಾರ ಕೇಳಲು ಹೋದಾಗ ಗೇಟು ಬೀಗ ಹಾಕಿ ನಾಯಿ ಬಿಟ್ಟುಬಿಟ್ರು. ಗೇಟು ಬೀಗ ತೆಗಿ ಎಂದು ಹೇಳಿದ್ರೆ ಸಾಹೇಬ್ರು ಹೇಳಿದ್ದಾರೆ ಗೇಟು ಬೀಗ ತೆಗಿಬೇಡ ಎಂದು ಅವರು ಹೇಳಿದ್ರೆ ತೆಗಿತೀನಿ. ಹೋಗಿ ಹೋಗಿ ಎಂದು ನಮ್ಮನ್ನ ಕಳ್ಸಿದ್ರು.

ಇದನ್ನೂ ಓದಿ: ದರ್ಶನ್​​ ಈ ಸ್ಥಿತಿಗೆ ಕಾರಣ ಯಾರು? ಪವಿತ್ರಾ ಗೌಡ ಮಾಜಿ ಗಂಡ ಸಂಜಯ್​ ಬಿಚ್ಚಿಟ್ಟ ಅಸಲಿ ಸತ್ಯ!

ಆದಾದ ಬಳಿಕ ನನ್ನ ಅತ್ತೆ ಮಗ ಮತ್ತು ಆತನ ಹೆಂಡತಿಯನ್ನು ಕಳಿಸಿದ್ವಿ. ಆದರೆ ಅವರ ಮೇಲೆ ನಡುರಸ್ತೆಯಲ್ಲಿ ರೌಡಿಸಂ ಮಾಡಿದ್ರು. ಹೊಡೆಯಾಕೆ ಹೋದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment