newsfirstkannada.com

ಕೊಹ್ಲಿ, ಗವಾಸ್ಕರ್​ ನಡುವಿನ ಕಿತ್ತಾಟಕ್ಕೆ ಪಾಕಿಸ್ತಾನದ ಮಾಜಿ ಆಟಗಾರ ಎಂಟ್ರಿ..!

Share :

Published May 8, 2024 at 2:43pm

Update May 9, 2024 at 7:46am

  ಸ್ಟ್ರೈಕ್ ರೇಟ್ ವಿಚಾರಕ್ಕೆ ಕೊಹ್ಲಿ ಮತ್ತು ಗವಾಸ್ಕರ್​ ಮಧ್ಯೆ ವಾಕ್ಸಮರ

  ವಿರಾಟ್ ಕೊಹ್ಲಿ ಅವರ ಸ್ಟ್ರೈಕ್​ರೇಟ್​ ಬಗ್ಗೆ ಟೀಕಿಸಿರುವ ಗವಾಸ್ಕರ್

  ಇಬ್ಬರ ನಡುವಿನ ಟಾಕ್ ಫೈಟ್ ಹೇಗೆ ನಡೆಯುತ್ತಿದೆ ಗೊತ್ತಾ?

ಐಪಿಎಲ್ ಪಂದ್ಯಗಳ ವೇಳೆ ವೀಕ್ಷಕ ವಿವರಣೆ ಗ್ಯಾಲರಿಯಲ್ಲಿ ಕೂತು ಕಾಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್​ ಇತ್ತೀಚೆಗೆ ಕೊಹ್ಲಿಯನ್ನು ನೇರವಾಗಿ ಟೀಕಿಸಿ ಚರ್ಚೆಗೆ ಗ್ರಾಸವಾಗಿದ್ದರು. ಸ್ಟ್ರೈಕ್​ ರೇಟ್ ಬಗ್ಗೆ ಮಾತನಾಡಿದ್ದ ಗವಾಸ್ಕರ್​, ವಿರಾಟ್ ಬಗ್ಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು.

ಗವಾಸ್ಕರ್​ ಟೀಕೆ ಬೆನ್ನಲ್ಲೇ, ಕೊಹ್ಲಿ ಬ್ಯಾಟಿಂಗ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಾರಿಯ ಐಪಿಎಲ್​ನಲ್ಲಿ ಉತ್ತಮ ಫಾರ್ಮ್​ನಲ್ಲಿರುವ ವಿರಾಟ್​​, ಬ್ಯಾಟ್​​ನಲ್ಲೇ ಎಲ್ಲದಕ್ಕೂ ಉತ್ತರ ನೀಡುತ್ತಿದ್ದಾರೆ. ಇದರ ನಡುವೆ ಮಾತನಾಡಿದ್ದ ಕೊಹ್ಲಿ, ಹಲವರು ನನ್ನ ಸ್ಟ್ರೈಕ್​ರೇಟ್​ ಬಗ್ಗೆ ಹಾಗೂ ಸ್ಪಿನ್​ಗೆ ಚೆನ್ನಾಗಿ ಆಡಲ್ಲ ಅಂತ ಮಾತನಾಡುತ್ತಾರೆ. ನನಗೆ ತಂಡವನ್ನ ಗೆಲ್ಲಿಸೋದು ಮುಖ್ಯ. ಕಳೆದ 15 ವರ್ಷಗಳಿಂದ ಇದನ್ನೇ ಮಾಡಿದ್ದೇನೆ. ಮೈದಾನದಲ್ಲಿ ಆಡುವ ನನಗೆ ಪಂದ್ಯದ ಪರಿಸ್ಥಿತಿ ಗೊತ್ತಿರುತ್ತೆ. ಕಾಮೆಂಟೇಟರಿ ಬಾಕ್ಸ್​​​​​​​​​​​ ಅಲ್ಲಿ ಕುಳಿತಿರುವವರಿಗೆ ಅಲ್ಲ. ಟೀಮ್​​​​​​​ ಗೆಲ್ಲಿಸೋದಷ್ಟೇ ನನ್ನ ಜವಾಬ್ದಾರಿ ಎಂದಿದ್ದರು.

ಇದನ್ನೂ ಓದಿ:‘ಕೋವಿಶೀಲ್ಡ್​ ಲಸಿಕೆ ಪಡೆದ್ರೆ ಡ್ಯಾನ್ಸ್ ಮಾಡುವಂತಿಲ್ಲ’ ಬೆಚ್ಚಿ ಬೀಳಿಸಿದ ಆಮಂತ್ರಣ ಕಾರ್ಡ್..!

ವಿರಾಟ್ ಮಾತಿಗೆ ಸಿಡಿಮಿಡಿಗೊಂಡಿದ್ದ ಗವಾಸ್ಕರ್.. ಈ ಎಲ್ಲಾ ಆಟಗಾರರು ನಾವು ಹೊರಗಿನ ಚರ್ಚೆಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಅಂತಾರೆ. ಮತ್ಯಾಕೆ ನೀವು ಉತ್ತರ ಕೊಡ್ತಿದ್ದೀರಿ. ಅದೇನೆ ಇರಲಿ. ನಾವೆಲ್ಲಾ ಸ್ವಲ್ಪ ಕ್ರಿಕೆಟ್​ ಆಡಿದ್ದೇವೆ, ತುಂಬಾ ಆಡಿಲ್ಲ. ನಮಗೆ ಯಾವುದೇ ಅಜೆಂಡಾ ಇಲ್ಲ. ನಾವು ಏನು ನೋಡುತ್ತೇವೋ ಅದನ್ನ ಮಾತನಾಡುತ್ತೇವೆ. ನಮಗೆ ಇಷ್ಟ, ಕಷ್ಟ ಅಂತಿಲ್ಲ. ಏನು ಆಗುತ್ತಿದ್ಯೂ ಅದ್ರ ಬಗ್ಗೆ ಮಾತನಾಡುತ್ತೇವೆ ಎಂದು ಕೊಹ್ಲಿಗೆ ಕೌಂಟರ್​ ನೀಡಿದ್ದರು. ಇವರಿಬ್ಬರ ವಾಕ್ಸಮರಕ್ಕೆ ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಎಂಟ್ರಿಯಾಗಿದ್ದಾರೆ.

ಇದನ್ನೂ ಓದಿ:ಅಪ್ಪನ ಕಳೆದುಕೊಂಡು ರಸ್ತೆಯಲ್ಲಿ ರೋಲ್​​ಗಳ ಮಾರಾಟ; 10 ವರ್ಷದ ಬಾಲಕನ ಕಣ್ಣೀರ ಬದುಕು..!

ನನ್ನ ಪ್ರಕಾರ ಇಬ್ಬರೂ ಶ್ರೇಷ್ಠ ಆಟಗಾರರು! ನನಗೆ ಸನ್ನಿ (ಗವಾಸ್ಕರ್) ಭಾಯ್ ಮೈದಾನದ ಒಳಗೆ ಮತ್ತು ಹೊರಗೆ ತಿಳಿದಿದೆ. ಅವರು ಹಲವು ವರ್ಷಗಳಿಂದ ಕಾಮೆಂಟರಿ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್‌ನಲ್ಲಿ ಅಗ್ರ ಆಟಗಾರ. ಅವರು ಕೂಡ ಶ್ರೇಷ್ಠ ಆಟಗಾರ. ಅವರ ಪ್ರದರ್ಶನವನ್ನು ನೋಡಿದರೆ ಕ್ರಿಕೆಟ್ ಇತಿಹಾಸದ ಶ್ರೇಷ್ಠ ಆಟಗಾರರೆಂದು ಪರಿಗಣಿಸಲ್ಪಟ್ಟಿದ್ದಾರೆ. ಆದರೆ ವಿರಾಟ್ ಹಾಗೆ ಹೇಳಬಾರದಿತ್ತು ಎಂದಿದ್ದಾರೆ.

ಇದನ್ನೂ ಓದಿ:ರಾಜಸ್ಥಾನ ಸೋಲಿನಿಂದ ಆರ್​ಸಿಬಿಗೆ ದೊಡ್ಡ ಆಘಾತ.. ಕೊಹ್ಲಿ, ಫಾಫ್ ನಿದ್ರೆಗೆ ಭಂಗ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿ, ಗವಾಸ್ಕರ್​ ನಡುವಿನ ಕಿತ್ತಾಟಕ್ಕೆ ಪಾಕಿಸ್ತಾನದ ಮಾಜಿ ಆಟಗಾರ ಎಂಟ್ರಿ..!

https://newsfirstlive.com/wp-content/uploads/2024/04/VIRAT-KOHLI-8.jpg

Load More