Advertisment

ಸಾರ್ವಜನಿಕರೇ ಎಚ್ಚರ! ಮಳೆ ಅಭಾವ; ಬರಿದಾದ ಡ್ಯಾಮ್​​ಗಳು; ಇನ್ಮುಂದೆ ಕುಡಿಯುವ ನೀರಿಗೂ ಸಮಸ್ಯೆ!

author-image
Ganesh Nachikethu
Updated On
Dam Water Level: ರಾಜ್ಯದ ಜಲಾಶಯಗಳ ಇಂದಿನ ನೀರಿನಮಟ್ಟ ಎಷ್ಟಿದೆ? ಇಲ್ಲಿದೆ ಮಾಹಿತಿ
Advertisment
  • ಇಡೀ ರಾಜ್ಯಾದ್ಯಂತ ಗಣನೀಯ ಪ್ರಮಾಣದಲ್ಲಿ ಬೀಳದ ಮುಂಗಾರು ಮಳೆ
  • ಕಳೆದೊಂದು ತಿಂಗಳಿಂದ ಇಡೀ ರಾಜ್ಯದಲ್ಲಿ ಶೇ.67ರಷ್ಟು ಮಳೆಯ ಕೊರತೆ..!
  • ಮಳೆಯಿಲ್ಲದೆ ಬರಿದಾದ ಡ್ಯಾಮ್​​ಗಳು, ಇನ್ಮುಂದೆ ಕುಡಿಯುವ ನೀರಿಗೂ ಸಮಸ್ಯೆ

ಬೆಂಗಳೂರು:ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇದರ ಪರಿಣಾಮ ನೀರಿನ ಸಂಗ್ರಹವಿಲ್ಲದೆ ಜಲಾಶಯಗಳು ಬರಿದಾಗಿವೆ. ಸುಮಾರು ಒಂದು ತಿಂಗಳಿಂದ ರಾಜ್ಯದಲ್ಲಿ ಶೇ.67ರಷ್ಟು ಮಳೆ ಕೊರತೆ ಉಂಟಾಗಿದೆ. ಕೋಲಾರ ಹೊರತುಪಡಿಸಿ ಇನ್ನೆಲ್ಲೂ ಮಳೆ ಆಗಿಲ್ಲ.

Advertisment

ಹೌದು, ಮುಂಗಾರು ಮಳೆ ಕೊರತೆಯಿಂದ ರಾಜ್ಯದಲ್ಲಿ ಕೆಆರ್​ಎಸ್​​​ ಸೇರಿ ಪ್ರಮುಖ ಜಲಾಶಯಗಳು ತುಂಬೇ ಇಲ್ಲ. ಇದರಿಂದ ಕುಡಿಯುವ ನೀರು ಪೂರೈಕೆ, ವಿದ್ಯುತ್ ಉತ್ಪಾದನೆ ಹಾಗೂ ನೀರಾವರಿ ಬೆಳೆಗಳ ಮೇಲೆ ಕೆಟ್ಟ ಪರಿಣಾಮ ಬಿದ್ದಿದೆ. ಅದರಲ್ಲೂ ಕಾವೇರಿ ಕೊಳ್ಳದಲ್ಲಂತೂ ನೀರಿನ ಅಭಾವ ಎದ್ದು ಕಾಣುತ್ತಿದೆ. ಕಾವೇರಿ ಜಲಾನಯನ ಭಾಗದಲ್ಲೂ ವಾಡಿಕೆ ಪ್ರಮಾಣದ ಮಳೆಯಾಗಿಲ್ಲ. ಹೀಗಾಗಿ ಬೆಂಗಳೂರಿಗೆ ನೀರಿನ ಅಭಾವ ಕಾಡುವ ಸಾಧ್ಯತೆ ಇದೆ.

ಕೆಆರ್​ಎಸ್​​​ನಲ್ಲಿ 10 ಟಿಎಂಸಿ ನೀರು ಮಾತ್ರ ಲಭ್ಯ!

ಮಳೆಯಿಲ್ಲದೆ ಕೆಆರ್​ಎಸ್​ ಡ್ಯಾಮ್​​ ಡೆಡ್​ ಸ್ಟೋರೇಜ್​ನತ್ತ ತಲುಪಿದೆ. ಸದ್ಯ ಕೆಆರ್​ಎಸ್​ ಡ್ಯಾಮ್​ನಲ್ಲಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಕಡಿಮೆ ಆಗಿದ್ದು, ಕೇವಲ 10 ಟಿಎಂಸಿ ಮಾತ್ರ ಲಭ್ಯವಿದೆ. ಹೀಗಾಗಿ ಆತಂಕ ಸನ್ನಿವೇಶ ಹೆಚ್ಚಾಗುವ ಸಾಧ್ಯತೆಗಳೇ ಕಂಡುಬರುತ್ತಿವೆ. ಒಂದು ವಾರ ಕಳೆದರೆ ಜೂನ್ ತಿಂಗಳೇ ಮುಗಿದು ಹೋಗಲಿದೆ. ಅಷ್ಟರಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯದೆ ಹೋದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಆಗಲಿದೆ.

publive-image

ಪ್ರತಿದಿನ ರಾಜಧಾನಿ ಬೆಂಗಳೂರಿಗೆ 140 ಕೋಟಿ ಲೀಟರ್​ ನೀರು ಅಗತ್ಯ ಇದೆ. ಅದರಲ್ಲೂ ಕುಡಿಯಲು 1.6 ಟಿಎಂಸಿ ನೀರು ಬೇಕಿದೆ. ಹೀಗೆ 10 ವರ್ಷಗಳ ಹಿಂದೆ 2012ರಲ್ಲಿ ಭೀಕರ ಜಲಕ್ಷಾಮ ಎದುರಾಗಿತ್ತು. ಇದಾದ ಬಳಿಕ 2015ರಲ್ಲೂ ಕೆಆರ್​ಎಸ್​​ ಡ್ಯಾಮ್​​​ ಖಾಲಿಯಾಗಿದ್ದು, ಹೇಮಾವತಿ ಜಲಾಶಯದಿಂದ ನೀರು ಪೂರೈಕೆ ಮಾಡಲಾಗಿತ್ತು. ಹಾಗೆಯೇ ಈ ಬಾರಿ ಕೂಡ ಕೆಆರ್​ಎಸ್​​​ ಜಲಾಶಯದ ಪರಿಸ್ಥಿತಿ ವ್ಯತಿರಿಕ್ತವಾಗಿದೆ.

Advertisment

ಡೆಡ್​ ಸ್ಟೋರೇಜ್​ ಎಂದರೇನು..?

KRS ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದೆ. ಆದರೆ, ಸದ್ಯ 78 ಅಡಿ ನೀರು ಮಾತ್ರ ಉಳಿದಿದೆ. ಇನ್ನೇನು 12 ಅಡಿ ಕಡಿಮೆಯಾದಲ್ಲಿ ಕೆಆರ್​ಎಸ್​​​ ಡೆಡ್​ ಸ್ಟೋರೇಜ್​​​​ ತಲುಪಲಿದೆ. ಜಲಾಶಯದ ತಳಭಾಗದಲ್ಲಿ ಉಳಿಯುವ ನೀರನ್ನೇ ಡೆಡ್ ಸ್ಟೋರೇಜ್ ಎನ್ನಲಾಗುತ್ತೆ. ಯಾವುದೇ ಜಲಾಶಯಕ್ಕೆ ಮಳೆ ಕೊರತೆ ಉಂಟಾಗಿ ಒಣಗಿದಾಗ ಎದುರಾಗುವ ಪರಿಸ್ಥಿತಿಯೇ 'ಡೆಡ್ ಸ್ಟೋರೇಜ್'. ಅತ್ಯಂತ ಕಷ್ಟದ ಸ್ಥಿತಿಯಲ್ಲಿ ಡ್ಯಾಮ್​​ನ ಡೆಡ್ ಸ್ಟೋರೇಜ್ ನೀರು ಬಳಕೆ ಮಾಡಲಾಗುತ್ತೆ. ಡೆಡ್ ಸ್ಟೋರೇಜ್ ನೀರು ಬಳಸುವುದು ಅಷ್ಟು ಸುಲಭವಲ್ಲ ಅನ್ನೋದು ತಜ್ಞರ ಅಭಿಪ್ರಾಯ. ಕಾರಣ ಡ್ಯಾಮ್​​ನ ತಳದಲ್ಲಿರುವ ನೀರನ್ನು ಗೇಟ್‌ಗಳಿಂದ ಹೊರ ಬಿಡಲು ಸಾಧ್ಯವಿಲ್ಲ. ಮೋಟರ್​​ ಮೂಲಕ ಪಂಪ್ ಮಾಡಬೇಕಾಗುತ್ತೆ. ಪಂಪ್ ಮಾಡಿದ್ರೂ ಕೆಸರು ಮಿಶ್ರಿತ ನೀರು ಬರಲಿದೆ. ಜೊತೆಗೆ ಜಲಾಶಯದಲ್ಲಿರುವ ಜೀವ ಸಂಕುಲಕ್ಕೂ ಹಾನಿಯಾಗುವ ಸಾಧ್ಯತೆ ಇದೆ.

ಇಡೀ ರಾಜ್ಯದಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆಯಾಗುತ್ತಿದೆ. ಆದರೂ ವ್ಯಾಪಕವಾದ ಮಳೆ ಬೀಳುತ್ತಿಲ್ಲ. ಇದರಿಂದ ಕುಡಿಯುವ ನೀರು, ಬೆಳೆಗಳಿಗೆ ಹಾಗೂ ವಿದ್ಯುತ್ ಉತ್ಪಾದನೆಗೆ ತೊಂದರೆ ಉಂಟಾಗಲಿದೆ. ಒಂದು ವೇಳೆ ಮುಂಗಾರು ಚೇತರಿಸಿಕೊಂಡು ವಾಡಿಕೆಯಷ್ಟು ಮಳೆಯಾಗದಿದ್ದರೆ ರಾಜ್ಯ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment