/newsfirstlive-kannada/media/post_attachments/wp-content/uploads/2024/08/FSSAI-DIRECTION.jpg)
ನವದೆಹಲಿ: ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ (FSSAI)ಹಾಲಿನ ಉತ್ಪಾದಕಗಳನ್ನು ಮಾರುವ ಕಂಪನಿಗಳಿಗೆ ಖಡಕ್ ವಾರ್ನಿಂಗ್ ನೀಡಿದೆ. ಹಾಲು ಉತ್ಪಾದಕ ಕಂಪನಿಗಳು ಇತ್ತೀಚೆಗೆ ತಮ್ಮ ಉತ್ಪನ್ನಗಳಿಗೆ ಹಾಲು, ತುಪ್ಪ, ಬೆಣ್ಣೆ ಇವುಗಳಿಗೆ FSSAI ಹೆಸರಿನಲ್ಲಿ ಎ1 ಗುಣಮಟ್ಟದ ಉತ್ಪನ್ನ, ಎ2 ಗುಣಮಟ್ಟದ ಉತ್ಪನ್ನ ಎಂದು ಲೇಬಲ್ ಅಂಟಿಸಿ ಗ್ರಾಹಕರ ದಾರಿ ತಪ್ಪಿಸುತ್ತಿವೆ.
ಇದನ್ನೂ ಓದಿ:ಪ್ರೀತಿಯ ನಾಯಿ ಮರಿ ಜೊತೆ ಸೋನಿಯಾ ಗಾಂಧಿ ಸಖತ್ ಪೋಸ್.. ಫೋಟೋ ವೈರಲ್! ಏನಿದರ ಸ್ಪೆಷಲ್?
ಈ ಕಾರಣದಿಂದಾಗಿ ಡೈರಿ ಉತ್ಪನ್ನಗಳನ್ನು ಮಾಡುವ ಕಂಪನಿಗಳಿಗೆ FSSAI ಒಂದು ಸೂಚನೆ ನೀಡಿದೆ. ಆ ಎ1 ಎ2 ಅನ್ನೋ ಗುಣಮಟ್ಟ ಎಂದರೇನು ಸ್ಪಷ್ಟನೆ ನೀಡಿ. ಕೂಡಲೇ ಆ ಲೇಬಲ್ಗಳನ್ನು ತೆಗೆಯಿರಿ ಎಂದು ಖಡಕ್ ಸೂಚನೆ ನೀಡಿದೆ. ಕೇಲವ ಹಾಲಿನ ಉತ್ಪನ್ನಗಳ ಕಂಪನಿಗೆ ಮಾತ್ರವಲ್ಲ, ಎಲ್ಲ ಎಫ್ಬಿಓ ಕಂಪನಿಗಳು ಇದೇ ನಿರ್ದೇಶನ ನೀಡಿದೆ.
ಇದನ್ನೂ ಓದಿ:ಭೀಕರ ಅಪಘಾತ.. ಪುಟಾಣಿ ಮಕ್ಕಳು ಸೇರಿ 24 ಮಂದಿ ದಾರುಣ ಸಾವು; ಉಳಿದವರಿಗಾಗಿ ಹುಡುಕಾಟ!
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಇದು ಕೇವಲ ಗ್ರಾಹಕರನ್ನು ದಾರಿ ತಪ್ಪಿಸುವ ಮಾರ್ಗ ಮಾತ್ರವಲ್ಲ FSSI ನಿಯಮದ ಉಲ್ಲಂಘನೆ ಕೂಡ ಹೌದು ಎಂದು ಹೇಳಿದೆ. ಅದರ ಜೊತೆಗೆ ಮತ್ತೊಂದು ಸ್ಪಷ್ಟನೆಯನ್ನೂ ಕೂಡ ನೀಡಿದೆ. ಎ1 ಎ2 ಹಾಲುಗಳು ಬೆಟಾ ಕೇಸಿಯನ್ ಅನ್ನೋ ಪೌಷ್ಠಿಕಾಂಶದ ಆಧಾರದ ಮೇಲೆ ನಿರ್ಣಯಿಸಲಾಗುತ್ತದೆ. ಇದು ಗ್ರಾಹಕರನ್ನು ಗೊಂದಲಕ್ಕೆ ದೂಡುತ್ತದೆ. ಈ ರೀತಿ ಲೇಬಲ್ ಅಂಟಿಸಿ ಮಾರುವುದನ್ನು ಮೊದಲು ಎಲ್ಲಾ ಕಂಪನಿಗಳು ಕೈಬಿಡಬೇಕು ಎಂದು ಖಡಕ್ ಸೂಚನೆ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ