newsfirstkannada.com

ಕೆಟ್ಟ ಮೇಲೆ ಬುದ್ಧಿ ಬಂತಾ.. ಅವಮಾನ ಮಾಡಿದ್ದ ಕೆ.ಎಲ್‌ ರಾಹುಲ್‌ಗೆ ಸಂಜೀವ್ ಗೋಯೆಂಕಾ ಮಾಡಿದ್ದೇನು?

Share :

Published May 14, 2024 at 3:29pm

  ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜಯ್ ಗೋಯೆಂಕಾ ಮಾಡಿದ್ದೇನು?

  ಹೈದರಾಬಾದ್ ತಂಡದ ವಿರುದ್ಧ ಎಲ್​​ಎಸ್​ಜಿ ತಂಡ ಹೀನಾಯವಾಗಿ ಸೋತಿತ್ತು

  ಕೆ.ಎಲ್​ ರಾಹುಲ್​ ಹಾಗೂ ಸಂಜೀವ್ ಗೋಯೆಂಕಾ ಹೊಸ ಪೋಟೋ ವೈರಲ್!

ಈ ಬಾರಿಯ ಐಪಿಎಲ್‌ ಹಣಾಹಣಿ ರಣರೋಚಕ ಹಂತ ತಲುಪಿದ್ದು, ಪ್ಲೇ ಆಫ್‌ಗೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ಪ್ಲೇ ಆಫ್ ಸಸ್ಪೆನ್ಸ್‌ ಮಧ್ಯೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್‌ ರಾಹುಲ್ ಈ ಬಾರಿಯ ಐಪಿಎಲ್‌ ಸಖತ್ ಸುದ್ದಿಯಾಗಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜಯ್ ಗೋಯೆಂಕಾ ಅವರ ವರ್ತನೆ ಭಾರೀ ಟೀಕೆಗೆ ಗುರಿಯಾಗಿತ್ತು.

ಎಲ್​​ಎಸ್​ಜಿ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ನಾಯಕ ಕೆ.ಎಲ್​ ರಾಹುಲ್​ ಅವರನ್ನು ಬಹಿರಂಗವಾಗಿ ನಡೆಸಿಕೊಂಡ ರೀತಿಗೆ ಭಾರೀ ಖಂಡನೆ ವ್ಯಕ್ತವಾಗುತ್ತು. ಹೈದರಾಬಾದ್​ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಎಲ್​ಎಸ್​ಜಿ ನಾಯಕ ಕೆ.ಎಲ್​.ರಾಹುಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಿಗದಿತ 20 ಓವರ್​ನಲ್ಲಿ 4 ವಿಕೆಟ್ ಕಳೆದುಕೊಂಡು 165 ರನ್​ಗಳಿಸಿತ್ತು. ಈ ಗುರಿ ಬೆನ್ನತ್ತಿದ ಹೈದರಾಬಾದ್ ತಂಡವು 9.4 ಓವರ್​ನಲ್ಲಿ 10 ವಿಕೆಟ್​​​ಗಳ ಭರ್ಜರಿ ಗೆಲುವು ಸಾಧಿಸಿ ಸಂಭ್ರಮಿಸಿತು. ಇದು ಎಲ್​​ಎಸ್​ಜಿ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: KL ರಾಹುಲ್​ಗೆ ಭಾರೀ ಅವಮಾನ; ಸಂಜೀವ್ ಗೋಯೆಂಕಾ ಕೋಪಕ್ಕೆ ಕಾರಣ ಇಲ್ಲಿದೆ..! 

ಹೈದರಾಬಾದ್ ತಂಡದ ವಿರುದ್ಧ ಹೀನಾಯ ಸೋಲಿಗೆ ಎಲ್​​ಎಸ್​ಜಿ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ಕೆ.ಎಲ್​ ರಾಹುಲ್ ಅವರ ಮೇಲೆ ಆಕ್ರೋಶ ಹೊರ ಹಾಕಿದ್ದರು. ಸಂಜೀವ್ ಗೋಯೆಂಕಾ ಅವರು ಕೆ.ಎಲ್ ರಾಹುಲ್ ವಿರುದ್ಧ ತೋರಿದ ವರ್ತನೆ ಬಹಳಷ್ಟು ಚರ್ಚೆಗೆ ಗುರಿಯಾಗಿತ್ತು.

ಇದನ್ನೂ ಓದಿ: ಅಂದು ಧೋನಿ ಕೆಳಗೆ ಇಳಿಸಿದ್ದ ಗೋಯೆಂಕಾ.. ಇಂದು KL ರಾಹುಲ್ ಅಷ್ಟೇ..! 

ಸಂಜೀವ್ ಗೋಯೆಂಕಾ ಕೋಪಕ್ಕೆ ತುತ್ತಾದ ಕೆ.ಎಲ್‌ ರಾಹುಲ್ ಪರ ಅನೇಕ ಕ್ರಿಕೆಟಿಗರು ಧ್ವನಿ ಎತ್ತಿದ್ದು, ಇದೀಗ ಸಂಜೀವ್ ಗೋಯೆಂಕಾ ಅವರು ನಾಯಕ ಕೆ.ಎಲ್​ ರಾಹುಲ್​ ಅವರನ್ನು ಡಿನ್ನರ್‌ಗಾಗಿ ಮನೆಗೆ ಕರೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಾಯಕ ಕೆ.ಎಲ್​ ರಾಹುಲ್​ ಹಾಗೂ ಸಂಜೀವ್ ಗೋಯೆಂಕಾ ತಬ್ಬಿಕೊಂಡಿರುವ ಫೋಟೋ ವೈರಲ್ ಆಗಿದೆ.

ಕಳೆದ ರಾತ್ರಿ ಸಂಜೀವ್ ಗೋಯೆಂಕಾ ಅವರು LSG ನಾಯಕ ಕೆ.ಎಲ್​ ರಾಹುಲ್​ ಅನ್ನು ತಮ್ಮ ಮನೆಯ ಡಿನ್ನರ್‌ಗೆ ಆಹ್ವಾನಿಸಿದ್ದಾರೆ. ಈ ವೇಳೆ ಒಬ್ಬರನ್ನೊಬ್ಬರು ತಬ್ಬಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಹೈದರಾಬಾದ್ ವಿರುದ್ಧ ಹೀನಾಯ ಸೋಲಿಗೆ ಆಕ್ರೋಶಗೊಂಡಿದ್ದ ಸಂಜೀವ್ ಗೋಯೆಂಕಾ ತಮ್ಮ ವಿರುದ್ಧದ ಟೀಕೆಗೆ ಡ್ಯಾಮೇಜ್ ಕಂಟ್ರೋಲ್‌ ಮಾಡಲು ಮುಂದಾಗಿದ್ದಾರೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಟ್ಟ ಮೇಲೆ ಬುದ್ಧಿ ಬಂತಾ.. ಅವಮಾನ ಮಾಡಿದ್ದ ಕೆ.ಎಲ್‌ ರಾಹುಲ್‌ಗೆ ಸಂಜೀವ್ ಗೋಯೆಂಕಾ ಮಾಡಿದ್ದೇನು?

https://newsfirstlive.com/wp-content/uploads/2024/05/KL-Rahul-Sanjiv-Goenka.jpg

Load More