newsfirstkannada.com

KL ರಾಹುಲ್​ಗೆ ಭಾರೀ ಅವಮಾನ; ಸಂಜೀವ್ ಗೋಯೆಂಕಾ ಕೋಪಕ್ಕೆ ಕಾರಣ ಇಲ್ಲಿದೆ..!

Share :

Published May 9, 2024 at 1:35pm

Update May 9, 2024 at 2:18pm

    SRH ವಿರುದ್ಧ ಸೋತ ಬೆನ್ನಲ್ಲೇ ರಾಹುಲ್ ಮೇಲೆ ಆಕ್ರೋಶ

    ಎಲ್​ಎಸ್​ಜಿ ಮಾಲೀಕರ ನಡೆಗೆ ಭಾರೀ ವಿರೋಧ ವ್ಯಕ್ತವಾಗಿದೆ

    ರಾಹುಲ್​ರನ್ನು ನಡೆಸಿಕೊಂಡ ರೀತಿಗೆ ಅಭಿಮಾನಿಗಳಿಂದ ವಿರೋಧ

ಎಲ್​​ಎಸ್​ಜಿ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ನಾಯಕ ಕೆ.ಎಲ್​.ರಾಹುಲ್​ ಅವರನ್ನು ನಡೆಸಿಕೊಂಡ ರೀತಿಗೆ ಭಾರೀ ಖಂಡನೆ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಗೋಯೆಂಕಾ ನಡೆಯನ್ನು ಕ್ರಿಕೆಟ್ ಅಭಿಮಾನಿಗಳು ಖಂಡಿಸುತ್ತಿದ್ದಾರೆ. ಅಷ್ಟಕ್ಕೂ ಗೋಯೆಂಕಾ ಆಕ್ರೋಶಕ್ಕೆ ಕಾರಣ ಏನು ಅನ್ನೋದ್ರ ವಿವರ ಇಲ್ಲಿದೆ.

ಸಂಜೀವ್ ಗೋಯೆಂಕಾ ಕೋಪಕ್ಕೆ ಕಾರಣ ಏನು?
ಹೈದರಾಬಾದ್​ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಎಲ್​ಎಸ್​ಜಿ ನಾಯಕ ಕೆ.ಎಲ್​.ರಾಹುಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಿಗದಿತ 20 ಓವರ್​ನಲ್ಲಿ 4 ವಿಕೆಟ್ ಕಳೆದುಕೊಂಡು 165 ರನ್​ಗಳಿಸಿತ್ತು. ಆರಂಭದಲ್ಲಿ ಲಕ್ನೋ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಆಯುಷ್ ಬದೋನಿ 30 ಎಸೆತಗಳಲ್ಲಿ 55 ರನ್ ಮತ್ತು ನಿಕೋಲಸ್ ಪುರನ್ 26 ಎಸೆತಗಳಲ್ಲಿ 48 ರನ್ ಗಳಿಸಿ ಎಲ್‌ಎಸ್‌ಜಿ ಸ್ಕೋರ್ 165ಕ್ಕೆ ತಲುಪಿಸಿದರು.

ಇದನ್ನೂ ಓದಿ:KL ರಾಹುಲ್​​ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್​ಎಸ್​ಜಿ ಮಾಲೀಕ..! ವಿಡಿಯೋ

ಇದೇ ವೇಳೆ ನಾಯಕ ಕೆ.ಎಲ್.ರಾಹುಲ್ ಟೆಸ್ಟ್ ಪಂದ್ಯ ಆಡಿದಂತೆ ಬ್ಯಾಟಿಂಗ್ ಮಾಡಿದರು. 33 ಎಸೆತಗಳಲ್ಲಿ 29 ರನ್ ಗಳಿಸಿದರು. ಇದು ಕೂಡ ಎಲ್​ಎಸ್​ಜಿ ಮಾಲೀಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಮತ್ತೊಂದು ಕಡೆ ಲಕ್ನೋ ಬೌಲಿಂಗ್ ವಿಭಾಗ ನಿನ್ನೆ ಕಳಪೆ ಪ್ರದರ್ಶನ ತೋರಿಸಿತ್ತು. ನಿಯಂತ್ರಣ ಇಲ್ಲದೇ ಬೌಲಿಂಗ್ ಮಾಡಿದ ಪರಿಣಾಮ ಹೈದರಾಬಾದ್ ತಂಡದ ಆರಂಭಿಕ ಜೋಡಿ, ಯದ್ವಾ-ತದ್ವಾ ಬ್ಯಾಟ್ ಬೀಸಿತ್ತು.

ಪವರ್​​ಪ್ಲೇ ನಲ್ಲಿ ಲಕ್ನೋ ಕೇವಲ 27 ರನ್​ಗಳಿಸಿದ್ದರೆ, ಅದೇ ಪಿಚ್​ನಲ್ಲಿ ಹೈದರಾಬಾದ್ ತಂಡವು ಪವರ್‌ಪ್ಲೇನಲ್ಲಿ 107 ರನ್ ಗಳಿಸಿತ್ತು. ಮಾತ್ರವಲ್ಲ, ಕೇವಲ 58 ಎಸೆತಗಳಲ್ಲಿ 167ರನ್ ಗಳಿಸಿತ್ತು. ಅಂದರೆ ಹೈದರಾಬಾದ್ ತಂಡವು 9.4 ಓವರ್​ನಲ್ಲಿ ಅದ್ಭುತ ಗೆಲುವು ಸಾಧಿಸಿತು. ಜೊತೆ 10 ವಿಕೆಟ್​​​ಗಳ ಭರ್ಜರಿ ಗೆಲುವನ್ನು ಸಂಭ್ರಮಿಸಿತು. ಇದು ಎಲ್​​ಎಸ್​ಜಿ ಮಾಲೀಕರ ಆಕ್ರೋಶಕ್ಕೆ ಕಾರಣವಾಯಿತು.

ಇದನ್ನೂ ಓದಿ:ಚಿಕ್ಕ ಮಗುವಿಗೆ ನಿಂದಿಸಿದಂತೆ ರಾಹುಲ್​ರನ್ನ ಅವಮಾನಿಸಿದ ಮಾಲೀಕ.. ಭಾರೀ ಆಕ್ರೋಶ..!

LSG ಪ್ಲೇಆಫ್ ತಲುಪಲು ಅವಕಾಶ ಇದೆಯಾ?
ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮೂರು ತಂಡಗಳು ತಲಾ 12 ಅಂಕಗಳನ್ನು ಪಡೆದುಕೊಂಡಿವೆ. ಕಳಪೆ ನೆಟ್​​ ರನ್-ರೇಟ್​ನಿಂದ LSG ಆರನೇ ಸ್ಥಾನದಲ್ಲಿದೆ. ಒಂದು ವೇಳೆ ಲಕ್ನೋ ಪ್ಲೇಆಫ್‌ ರೇಸ್‌ನಲ್ಲಿ ಉಳಿಯಬೇಕಾದರೆ ಮುಂದಿನ ಎರಡು ಪಂದ್ಯಗಳಲ್ಲಿ ಗೆಲ್ಲಬೇಕು. ಡೆಲ್ಲಿ ಮತ್ತು ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಲೇಬೇಕು. ಜೊತೆಗೆ ನೆಟ್​ ರನ್​ ರೇಟ್ ಕೂಡ ಚೇತರಿಸಿಕೊಳ್ಳಬೇಕಿದೆ.

ಇದನ್ನೂ ಓದಿ:ಗ್ಯಾಂಗ್​ ವಾರ್​​ನಲ್ಲಿ ಇಬ್ಬರು ಸ್ಥಳದಲ್ಲೇ ಸಾವು; ಮತ್ತೋರ್ವ ಆಸ್ಪತ್ರೆಯಲ್ಲಿ ಕಣ್ಮುಚ್ಚಿದ.. ಬೆಚ್ಚಿಬಿದ್ದ ಶಿವಮೊಗ್ಗ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

KL ರಾಹುಲ್​ಗೆ ಭಾರೀ ಅವಮಾನ; ಸಂಜೀವ್ ಗೋಯೆಂಕಾ ಕೋಪಕ್ಕೆ ಕಾರಣ ಇಲ್ಲಿದೆ..!

https://newsfirstlive.com/wp-content/uploads/2024/05/LSG-KL-RAHUL.jpg

Load More