/newsfirstlive-kannada/media/post_attachments/wp-content/uploads/2024/08/DARSHAN-3.jpg)
ಕೈದಿಗಳ ನಿಯಂತ್ರಣಕ್ಕೆ ಅನುಗುಣವಾಗಿ ಜೈಲು ಜಾಮರ್ ಎಂಬ ತಂತ್ರಜ್ಞಾನ ಬಂದಿದೆ. ಇದೊಂದು ಸ್ಮಾರ್ಟ್​​ ತಂತ್ರಜ್ಞಾನವಾಗಿದ್ದು, ಇದರ ಮೂಲಕ ಜೈಲಿನ ಒಳಕ್ಕೆ ಬರುವ ಅನಧಿಕೃತ ಕರೆಗಳನ್ನು ನಿರ್ಬಂಧಿಸಬಹುದಾಗಿದೆ. ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ಜಾಮರ್​ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಕೇವಲ ಕರೆಗಳ ನಿರ್ಬಂಧ ಮಾತ್ರವಲ್ಲದೆ, ಅನಧಿಕೃತ ಕರೆಗಳನ್ನು ಪತ್ತೆಹಚ್ಚಲು ಇದರಿಂದ ಸಾಧ್ಯವಿದೆ.
ಜೈಲು ಜಾಮರ್​ ಹೇಗೆ ಕಾರ್ಯನಿರ್ವಹಿಸುತ್ತದೆ
ಜೈಲಿನ ಒಳಕ್ಕೆ ಸೆಲ್​ಫೋನ್​​ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶಕ್ಕಾಗಿ ಜೈಲು ಜಾಮರ್​ ಅಳವಡಿಸಲಾಗಿದೆ. ಈ ಸೆಲ್ಯುಲರ್​ ಜ್ಯಾಮಿಂಗ್​​ ಸಾಧನವನ್ನು ಯಾವುದೇ ಸಮಯದಲ್ಲಿ ಬೇಕಾದರೂ ಸಂವಹನಕ್ಕೆ ಅನುಮತಿಸುವ ಮತ್ತು ನಿರಾಕರಿಸುವ ಆಯ್ಕೆಯನ್ನು ಹೊಂದಿದೆ.
/newsfirstlive-kannada/media/post_attachments/wp-content/uploads/2024/08/PARAPPAN-AGRAHARA-1.jpg)
ಇದನ್ನೂ ಓದಿ: ಒಂದಲ್ಲಾ, ಎರಡಲ್ಲಾ, 14 OTT ಸೇವೆ ಸಂಪೂರ್ಣ ಉಚಿತ! 154 ರೂಪಾಯಿಯ ಪ್ಲಾನ್​ನಲ್ಲಿ ಇಷ್ಟೆಲ್ಲಾ ಸಿಗುತ್ತಾ?
ಅಂದಹಾಗೆಯೇ ಸೆಲ್ಯುಲರ್​ ಜ್ಯಾಮಿಂಗ್​​ ಸಾಧನ ರಿಮೋಟ್​​ ಕಂಟ್ರೋಲ್​​ ಕಾರ್ಯಾಚರಣೆ ಪ್ರಯೋಜನವನ್ನು ಹೊಂದಿದೆ. ರಿಮೋಟ್​​ ಆನ್​/ಆಫ್​​ ಮಾಡುವ ಮೂಲಕ ಇದನ್ನು ಸಕ್ರಿಯಗೊಳಿಸಬಹುದಾಗಿದೆ.
ಇನ್ನು ದರ್ಶನ್​ ವಿಡಿಯೋ ಕರೆ ವಿಚಾರವನ್ನು ಗಮನಿಸುವುದಾದರೆ, ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿಯೂ ಸಹ ನೆಟ್​ವರ್ಕ್​ ಜಾಮರ್​ ಅಳವಡಿಸಲಾಗಿದೆ. ಇದು ಹೈ ಫ್ರೀಕ್ವೆನ್ಸಿ ಜಾಮರ್ ಆಗಿದ್ದು, ಜೈಲಿನ ಆಸುಪಾಸಿನಲ್ಲಿರುವ ಮನೆಗಳು ಇದರಿಂದ ನೆಟ್​ವರ್ಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ​ ಸ್ಥಳೀಯರು ನೆಟ್ ವರ್ಕ್ ಸಮಸ್ಯೆ ಬಗ್ಗೆ ಆಗಾಗ ಮನವಿ ಮಾಡುತ್ತಿರುತ್ತಾರೆ.
/newsfirstlive-kannada/media/post_attachments/wp-content/uploads/2023/10/BGM_JAIL.jpg)
ಸ್ಥಳೀಯರ ಸಮಸ್ಯೆಯನ್ನು ಆಳಿಸಿದ ಅಧಿಕಾರಿಗಳು ಜೈಲು ಜಾಮರನ್ನು ಸ್ವಲ್ಪ ಮಟ್ಟಿಗೆ ಸಡಿಲಿಕೆ ಮಾಡಿದ್ದರು ಎನ್ನಲಾಗುತ್ತಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕೈದಿಗಳು ಸ್ಮಾರ್ಟ್​ಫೋನ್​ ಬಳಕೆಯ ಜೊತೆಗೆ ವಿಡಿಯೋ ಕರೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಆದರೀಗ ನೆಟ್​ವರ್ಕ್​ ಜಾಮರ್​ ಇದ್ದರೂ ಇಲ್ಲದಿದ್ದರೂ ಜೈಲಿನ ಒಳಕ್ಕೆ ಸ್ಮಾರ್ಟ್​ಫೋನ್​ ಹೇಗೆ ಬಂತು ಎಂಬ ಅನುಮಾನ ದೊಡ್ಡದಾಗಿ ಕಾಡುತ್ತಿದೆ. ಸ್ಥಳೀಯರಿಗೆ ಆಗುವ ನೆಟ್​ವರ್ಕ್​ ಸಮಸ್ಯೆ ಕೈದಿಗಳಿಗೆ ಯಾಕಾಗುತ್ತಿಲ್ಲ ಎಂಬ ಮತ್ತೊಂದು ಅನುಮಾನ ಹುಟ್ಟಿಕೊಂಡಿದೆ. ಆದರೆ ಇವೆಲ್ಲದ್ದಕ್ಕೆ ಸರಿಯಾದ ತನಿಖೆ ಮೇಲೆ ಉತ್ತರ ಸಿಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us