/newsfirstlive-kannada/media/post_attachments/wp-content/uploads/2024/06/darshan38.jpg)
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ A2 ದರ್ಶನ್ ಹಾಗೂ ಮೂವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕೊಲೆ ಕೇಸ್ನಲ್ಲಿ ಜೈಲು ಪಾಲಾದ ನಟ ದರ್ಶನ್ಗೆ ವಿಚಾರಣಾಧೀನ ಖೈದಿ ನಂಬರ್ ನಂಬರ್ 6106 ನೀಡಲಾಗಿದೆ. ಎರಡು ದಿನದ ಪೊಲೀಸ್ ಕಸ್ಟಡಿ ಅವಧಿ ಮುಗಿದ ಕಾರಣ ಇಂದು ಕೋರ್ಟ್ಗೆ ಹಾಜರುಪಡಿಸಲಾಯ್ತು. ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ಗೆ ಕೊಲೆ ಕೇಸ್ನಲ್ಲಿ ಆರೋಪಿಗಳಾಗಿದ್ದ ನಾಲ್ವರನ್ನು ಪೊಲೀಸರು ಕರೆತಂದಿದ್ದರು.
ಇದನ್ನೂ ಓದಿ: ಬಂಧನದ ಬಳಿಕ ಸರಿಯಾಗಿ ಆಹಾರ ತಿನ್ನದ ದರ್ಶನ್.. ಇಳಿಕೆ ಕಂಡ ತೂಕ! ಸದ್ಯ ಎಷ್ಟು KG ಇದ್ದಾರೆ ಗೊತ್ತಾ?
ಪೊಲೀಸರು ಮತ್ತೆ ಕಸ್ಟಡಿಗೆ ಕೇಳಲಿಲ್ಲವಾದ್ದರಿಂದ ದರ್ಶನ್ ಹಾಗೂ ಇತರೆ ಮೂವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಯ್ತು. ಇದೇ ಪ್ರಕರಣದ ಆರೋಪಿಗಳಾದ ಪವಿತ್ರಾ ಹಾಗೂ ಇತರರಿಗೆ ಎರಡು ದಿನಗಳ ಹಿಂದೆಯೇ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ದರ್ಶನ್ ಅಭಿಮಾನಿ ಬಳಗದಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ನಾಲ್ಕು ಆರೋಪಿಗಳನ್ನು ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ಪರಪ್ಪನ ಅಗ್ರಹಾರ ಜೈಲಿಗೆ ಕರೆತಂದಿದ್ದಾರೆ. ಸಾಮಾನ್ಯ ಖೈದಿಗಳಂತೆ ನಟ ದರ್ಶನ್ ಜೈಲು ಸೇರಿದ್ದಾರೆ. ಜೈಲು ಪ್ರವೇಶದ ಬಳಿಕ ಎಂಟ್ರಿ ಪ್ರಕ್ರಿಯೆ ಶುರು ಆಗಲಿದೆ. ಕೇಸ್ ನಂ, ಖೈದಿಯ ಡಿಟೈಲ್ಸ್ ಪಡೆಯಲಾಗುತ್ತದೆ. ಆ ನಂತರ ಕ್ವಾರಂಟೈನ್ ಸೆಲ್ಗೆ ಖೈದಿಗಳ ರವಾನೆ ಮಾಡಲಾಗುತ್ತದೆ. ನಟ ದರ್ಶನ್ ಸೇರಿ ಮೂವರು ಆರೋಪಿಗಳಿಗೂ ವಿಚಾರಣಧೀನಾ ಖೈದಿ ನಂಬರ್ ನೀಡಲಿದೆ.
ವಿಚಾರಣಾಧೀನ ಖೈದಿ ನಂಬರ್!
ದರ್ಶನ್ - 6106
ಪ್ರದೋಶ್ - 6109
ವಿನಯ್ - 6108
ಧನರಾಜ್ - 6107
ಇದನ್ನೂ ಓದಿ: ದರ್ಶನ್, ಪ್ರಜ್ವಲ್ ಕುರಿತು ಮತ್ತೊಂದು ಟ್ವಿಟ್ ಮಾಡಿದ ನಟಿ ರಮ್ಯಾ.. ಈ ಸಲ ಏನಂದ್ರು?
ಇನ್ನು, ನಟ ದರ್ಶನ್ 2011ರಲ್ಲಿ ಪತ್ನಿ ಮೇಲೆ ಹಲ್ಲೆ ಕೇಸ್ನಲ್ಲಿ ಜೈಲು ಸೇರಿದ್ದರು. ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎರಡನೇ ಬಾರಿಗೆ ಜೈಲು ಪ್ರವೇಶಿಸಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಸೇರಿ ಒಟ್ಟು 13 ಆರೋಪಿಗಳನ್ನು ಜೂನ್ 20ರಂದು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಈಗ ದರ್ಶನ್ ಸೇರಿ ಒಟ್ಟು ನಾಲ್ಕು ಮಂದಿಯನ್ನು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನ 17 ಆರೋಪಿಗಳು
A1 – ಪವಿತ್ರಾ ಗೌಡ
A2 – ದರ್ಶನ್
A3 – ಪವನ್
A4 ರಾಘವೇಂದ್ರ
A5 ನಂದೀಶ
A6 ಜಗದೀಶ @ ಜಗ್ಗ
A7 ಅನು@ ಅನು ಕುಮಾರ್
A8 – ರವಿ
A9 – ಧನರಾಜ್ @ ರಾಜು
A10 – ವಿನಯ್
A11 – ನಾಗರಾಜ್
A12 – ಲಕ್ಷ್ಮಣ್
A13 – ದೀಪಕ್
A14 – ಪ್ರದೂಶ್
A15 – ಕಾರ್ತಿಕ್
A16 – ಕೇಶವಮೂರ್ತಿ
A17 ನಿಖಿಲ್ ನಾಯಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ