Advertisment

ಮೈಸೂರಲ್ಲಿ ಒಂದೇ ಕುಟುಂಬದ ನಾಲ್ವರ ಸಾವು.. ಕಾರಣವೇನು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ!

author-image
admin
Updated On
ಮೈಸೂರಲ್ಲಿ ಒಂದೇ ಕುಟುಂಬದ ನಾಲ್ವರ ಸಾವು.. ಕಾರಣವೇನು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ!
Advertisment
  • ಕಳೆದ ಸೋಮವಾರ ರಾತ್ರಿ ಮನೆಯಲ್ಲಿ ಮಲಗಿದ್ದವರಿಗೆ ಆಗಿದ್ದೇನು?
  • ಸಂಬಂಧಿಕರು ಪದೇ ಪದೇ ಕಾಲ್ ಮಾಡಿದ್ದು, ಕಾಲ್ ರಿಸೀವ್ ಆಗಿರಲಿಲ್ಲ
  • ಅಕ್ಕಪಕ್ಕದ ಮನೆಯವರು ಬಾಗಿಲು ಬಡಿದಾಗ ಈ ಪ್ರಕರಣ ಬೆಳಕಿಗೆ ಬಂತು

ಮೈಸೂರಿನ ಯರಗನಹಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದು, ಇಡೀ ಸಾಂಸ್ಕೃತಿಕ ನಗರಿಯನ್ನೇ ಬೆಚ್ಚಿ ಬೀಳಿಸಿದೆ. ಪತಿ, ಪತ್ನಿ, ಇಬ್ಬರು ಮಕ್ಕಳು ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದಾರೆ.

Advertisment

ಯರಗನಹಳ್ಳಿಯ ಮನೆಗೆ FSL ಅಧಿಕಾರಿಗಳು, ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟ ಕುಮಾರಸ್ವಾಮಿ ಕುಟುಂಬಸ್ಥರು ಇಸ್ತ್ರೀ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಮೇಲ್ನೋಟಕ್ಕೆ ಇಡೀ ಮನೆಯಲ್ಲಿದ್ದ ಗ್ಯಾಸ್ ಸೋರಿಕೆಯಿಂದ ಮೃತಪಟ್ಟಿರೋ ಶಂಕೆ ವ್ಯಕ್ತವಾಗಿದೆ.

publive-image

ಕುಮಾರಸ್ವಾಮಿ ಕುಟುಂಬಸ್ಥರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಕ್ಕರಾಯನ ಪಟ್ಟಣ ಗ್ರಾಮದವರು. ಕಳೆದ 30 ವರ್ಷದಿಂದ ಮೈಸೂರು ಜಿಲ್ಲೆಯ ಯರಗನಹಳ್ಳಿಯಲ್ಲಿ ಬಂದು ವಾಸಿಸುತ್ತಿದ್ದರು.
ಕುಮಾರಸ್ವಾಮಿ ಕುಟುಂಬಸ್ಥರು ಗ್ಯಾಸ್ ಸಿಲಿಂಡರ್ ಮೂಲಕ ಬಟ್ಟೆಗಳನ್ನು ಇಸ್ತ್ರೀ ಮಾಡುತ್ತಿದ್ದರು. ಇವರ ಮನೆಯಲ್ಲಿ ಇಸ್ತ್ರೀ ಮಾಡಲು ಸಿಲಿಂಡರ್‌ ಇಟ್ಟುಕೊಂಡಿದ್ದರು. 10 ಅಡಿ ಉದ್ದ, 20 ಅಡಿ ಅಗಲದ ಚಿಕ್ಕ ಮನೆಯಲ್ಲಿ ಈ ಕುಟುಂಬ ವಾಸಿಸುತ್ತಿದ್ದು, ಮನೆಯಿಂದ ಗಾಳಿ ಹೊರಗೆ ಹೋಗಲು ಅವಕಾಶ ಇಲ್ಲ. ಹೀಗಾಗಿ ಆ ಸಿಲಿಂಡರ್ ಸೋರಿಕೆಯಿಂದ ನಾಲ್ವರು ಸಾವನ್ನಪ್ಪಿರಬಹುದು ಎನ್ನಲಾಗಿದೆ.

ಇದನ್ನೂ ಓದಿ:ಟೆನ್ಶನ್​ ಯಾಕೆ.. ಲಿಪ್​ ಲಾಪ್​ ಓಕೆ ಎಂದ ಮಹಾನಟಿ.. ‘ಬೇಬಿ ಜಾನ್​’ನಲ್ಲಿ ಮುತ್ತುದುರಿಸಲಿದ್ದಾರೆ ಕೀರ್ತಿ ಸುರೇಶ್​? 

Advertisment

ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸ್ವಂತ ಮನೆಯಲ್ಲಿ ಇಸ್ತ್ರೀ ಕೆಲಸ ಮಾಡಿಕೊಂಡು ಕುಮಾರಸ್ವಾಮಿ ಕುಟುಂಬ ಜೀವನ ನಡೆಸುತ್ತಿದ್ದರು. ಮೃತರು ಸಂಬಂಧಿಕರ ಮದುವೆಗೆಂದು ಚಿಕ್ಕಮಗಳೂರಿಗೆ ಹೋಗಿ ಬಂದಿದ್ದರು. ಕಳೆದ ಸಂಜೆ ಚಿಕ್ಕಮಗಳೂರಿನಿಂದ ವಾಪಸ್ ಬಂದಿದ್ದಾರೆ. ರಾತ್ರಿ ಮನೆಯಲ್ಲಿ ಮಲಗಿದ್ದಾರೆ.

ಕುಮಾರಸ್ವಾಮಿ ಸಂಬಂಧಿಕರು ಕಾಲ್ ಮಾಡಿದ್ದು, ಕಾಲ್ ರಿಸೀವ್ ಆಗಿರಲಿಲ್ಲ. ಕಳೆದ ಸೋಮವಾರ ರಾತ್ರಿ ಮನೆಯಲ್ಲಿ ಮಲಗಿದ್ದವರು ಬುಧವಾರ ಬೆಳಗಿನ ಜಾವ ಆದರೂ ಎದ್ದಿರಲಿಲ್ಲ. ಇವತ್ತು ಕುಮಾರಸ್ವಾಮಿ ಸಂಬಂಧಿಕರು ಅಕ್ಕಪಕ್ಕದವರಿಗೆ ಕುಮಾರಸ್ವಾಮಿ ಇದ್ದಾರಾ ಎಂಬುದರ ಬಗ್ಗೆ ನೋಡಲು ಹೇಳಿದ್ದಾರೆ. ಸ್ಥಳೀಯರು ಬಾಗಿಲು ಬಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

publive-image

ಕುಮಾರಸ್ವಾಮಿ ಅವರು ವಾಸವಿದ್ದ ಮನೆ 10*20 ಅಡಿ ಇರುವ ಚಿಕ್ಕ ಮನೆ. ಮನೆಯ ಹಿಂಭಾಗ ಹಾಗೂ ಮುಂಭಾಗ ಮಾತ್ರ ಕಿಟಕಿ ವ್ಯವಸ್ಥೆ ಇರೋದು. ಬಟ್ಟೆ ಇಸ್ತ್ರಿ ಪೆಟ್ಟಿಗೆಗೆ ಗ್ಯಾಸ್ ಬಳಸುತ್ತಾ ಇದ್ದರು. ಸೋಮವಾರ ರಾತ್ರಿ ಮನೆಗೆ ಬಂದವರು ಎರಡು ಕಿಟಕಿ ಬಂದ್ ಮಾಡಿಕೊಂಡು ಮಲಗಿದ್ದರು. ರೂಮ್‌ನಲ್ಲಿ ಗಂಡ ಹೆಂಡತಿ ಹಾಲ್‌ನಲ್ಲಿ ಮಕ್ಕಳಿಬ್ಬರು ಮಲಗಿದ್ದರು. ಈ ವೇಳೆ ಅನಿಲ ಸೋರಿಕೆಯಿಂದ ಎಲ್ಲರೂ ಮೃತಪಟ್ಟಿದ್ದಾರೆ.

Advertisment

ಇದನ್ನೂ ಓದಿ: ಲೋಕವೇ ಮೆಚ್ಚುವ ಕಾರ್ಯಕ್ಕೆ ಮುಂದಾದ ಡ್ರೋನ್​ ಪ್ರತಾಪ್​.. ಏನದು? 

ಎಲ್ಲರ ಕಿವಿ ಮತ್ತು ಮೂಗು ಬಾಯಲ್ಲಿ ರಕ್ತ ಸೋರಿಕೆಯಾಗಿತ್ತು. ಗ್ಯಾಸ್ ಸ್ಮೆಲ್ ಬರ್ತಿತ್ತು. ಮನೆಯ ಹಿಂದೆ ವಿಂಡೋ ತೆಗೆದು ನೋಡಿದಾಗಲೂ ಸ್ಮೆಲ್ ಬರ್ತಾ ಇತ್ತು. ಫೈರ್ ಡಿಪಾರ್ಟ್ಮೆಂಟ್, ಎಫ್ಎಸ್‌ಎಲ್ ತಂಡ ಬಂದು ಡೋರ್ ಓಪನ್ ಮಾಡಿದ್ದೇವೆ. ಆಗಲೂ ಗ್ಯಾಸ್ ಸ್ಮೆಲ್ ಬರ್ತಿತ್ತು. ಆಗ ಎಲ್ಲಾ ಡೋರ್ ಓಪನ್ ಮಾಡಿ ನಂತರ ಒಳ ಹೋಗಿ ನೋಡಿದ್ದೇವೆ.

publive-image

ಮನೆಯಲ್ಲಿ ಮೂರು ಗ್ಯಾಸ್‌ ಸಿಲಿಂಡರ್ ಇದೆ. ಗ್ಯಾಸ್‌ ಬಳಸಿ ಐರನ್ ಮಾಡುತ್ತಾ ಇದ್ದರು. ಹೀಗಾಗಿ ಮೂರು ಸಿಲಿಂಡರ್ ಇತ್ತು. ಮೇಲ್ನೋಟಕ್ಕೆ ಒಂದು ಸಿಲಿಂಡರ್ ಮಾತ್ರ ಲೀಕ್ ಆಗಿದೆ. ಉಳಿದ ಎರಡು ಸಿಲಿಂಡರ್ ಖಾಲಿ ಇತ್ತು. ಕುಮಾರಸ್ವಾಮಿ (45) ಮಂಜುಳಾ (39) ಅರ್ಚನಾ (19) ಸ್ವಾತಿ (17) ಸಾವನ್ನಪ್ಪಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment