newsfirstkannada.com

ಸಾವಿನೊಂದಿಗೆ ಸಾಹಸ.. ಸುನೀತಾ ವಿಲಿಯಮ್ಸ್‌ರಂತ ಗಗನಯಾನಿಗಳ ಸಂಬಳ ಎಷ್ಟು ಕೋಟಿ ಗೊತ್ತಾ?

Share :

Published August 27, 2024 at 8:08pm

    ಸಾವಿನೊಂದಿಗೆ ಹೋರಾಡುವ ಗಗನಯಾನಿಗಳಿಗೆ ನೀಡುವ ಸಂಬಳ ಎಷ್ಟು?

    ನಾಸಾದಲ್ಲಿ ಯಾವ ಮಾನದಂಡಗಳ ಮೇಲೆ ಸರ್ಕಾರ ಸಂಬಳ ನೀಡಲಾಗುತ್ತೆ

    ನಾಸಾ ಹಾಗೂ ಯುರೋಪ್ ಬಾಹ್ಯಾಕಾಶ ಸಂಸ್ಥೆಗಳು ನೀಡುವ ಸಂಬಳ ಎಷ್ಟು

ವಾಷಿಂಗ್ಟನ್​: ಗಗನಯಾನಿಗಳು ಅಂದ್ರೆನೇ ಜಗತ್ತಿನ ಅತ್ಯಂತ ಶ್ರೇಷ್ಠ ತರಬೇತಿ ಪಡೆದಿರುವ ಪಡೆ. ಅವರು ಕೈಗೆತ್ತಿಕೊಳ್ಳುವ ಒಂದೊಂದು ಮಿಷನ್​ಗಳು ಕೂಡ ಅತ್ಯಂತ ಕ್ಲಿಷ್ಟಕರ ಹಾಗೂ ಅತ್ಯಂತ ಸವಾಲನ್ನೊಡ್ಡುವ ಯೋಜನೆಗಳು. ಹಲವು ಅಪಾಯಗಳಿದ್ದರೂ ಲೆಕ್ಕಿಸದೇ ಜೀವವನ್ನು ಪಣಕ್ಕಿಟ್ಟು ಬಾಹ್ಯಾಕಾಶ ಸಂಸ್ಥೆಗಳು ಕೊಟ್ಟಿರುವ ಟಾಸ್ಕ್​​ನ್ನು ಪೂರೈಸುವುದಕ್ಕೆ ಸಜ್ಜಾಗುತ್ತಾರೆ. ಇಂತಹ ಸವಾಲಿನ, ಸಾವಿನ ದವಡೆಯಲ್ಲಿ ಹೋಗಿ ಬರುವ ಸಾಹಸಿಗಳಿಗೆ ಸಂಬಳ ತುಂಬಾ ಇರಬೇಕು ಎಂದು ಹಲವರು ಅಂದುಕೊಂಡಿರುತ್ತಾರೆ. ಅವರ ಸಂಬಳ ಎಷ್ಟಿರಬಹುದು ಅನ್ನೋ ಕುತೂಹಲದಲ್ಲಿಯೂ ಇರುತ್ತಾರೆ. ಹಾಗಾದ್ರೆ ಗಗನಯಾನಿಗಳ ಸಂಬಳ ಎಷ್ಟಿರುತ್ತೆ. ಅವರಿಗೆ ನೀಡುವ ಸಂಬಳವನ್ನು ಯಾವ ಮಾನದಂಡಗಳ ಮೇಲೆ ನೀಡಲಾಗುತ್ತೆ ಅನ್ನೋದರ ಡಿಟೇಲ್ಸ್ ನೋಡ್ತಾ ಹೋದ್ರೆ ಹಲವು ಸಂಗತಿಗಳು ನಮಗೆ ಕಾಣಸಿಗುತ್ತವೆ.

ಇದನ್ನೂ ಓದಿ: 1,257,828,750,000 ಕೋಟಿ ಆಸ್ತಿ ಒಡೆಯ​ ಅರೆಸ್ಟ್​; ಎಣ್ಣೆ ಹೊಡೆಯಲ್ಲ, ಮಾಂಸ ತಿನ್ನಲ್ಲ! ಈತನ ಹಿಸ್ಟ್ರಿ ವಿಚಿತ್ರ!

ಗಗನಯಾನಿಗಳ ಸಂಬಳ ಅವರು ಕಾರ್ಯನಿರ್ವಹಿಸುವ ಆಯಾ ಬಾಹ್ಯಾಕಾಶ ಸಂಸ್ಥೆಗಳ ಮೇಲೆ ಅವಲಂಬಿಸಿರುತ್ತದೆ. ಅದರ ಜೊತೆಗೆ ಅವರ ಅನುಭವ ಹಾಗೂ ನೀಡಿರುವ ಜವಾಬ್ದಾರಿಗಳು ಕೂಡ ಇಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಗಗನಯಾನಿಗಳ ಸಂಬಳದ ಬಗ್ಗೆ ಒಂದು ಪಕ್ಷಿನೋಟ ಬೀರುವುದಾದ್ರೆ ಹೀಗಿದೆ.

ನಾಸಾದ ಗಗನಯಾನಿಗಳಿಗೆ ನೀಡುವ ಸಂಬಳ, ಸವಲತ್ತು ಮತ್ತು ಪ್ರಯೋಜನಗಳು ಏನು
ನಾಸಾದಲ್ಲಿ ಹೊಸ ಹೊಸ ಬಾಹ್ಯಾಕಾಶ ಅನ್ವೇಷಣಾಗಳಿಗೆ ತೊಡಗುವಲ್ಲಿ ಮುಂಚೂಣಿಯಲ್ಲಿರುವ ನಾಗರಿಕ ಸಿಬ್ಬಂದಿಯನ್ನು ಜನರಲ್ ಶೆಡ್ಯೂಲ್ ಎಂದು ಯುಎಸ್​ನ ಸರ್ಕಾರ ವಿಭಾಗಿಸುತ್ತದೆ. ಸದ್ಯ ಬಾಹ್ಯಾಕಾಶ ಸಂಸ್ಥೆಗಳು ನೀಡಿರುವ ಮಾಹಿತಿ ಪ್ರಕಾರ ಸ್ಪೇಸ್ ಉದ್ಯಮದ ಮಾರ್ಕೆಟಿಂಗ್ ವಿಭಾಗದವರಿಗೆ, ಗಗನಯಾನಿಗಳಿಗೆ ಜನರಲ್ ಶೆಡ್ಯೂಲ್ 13-13ಱಂಕ್ ಅನ್ವಯ ಯುಎಸ್​ನ 84,365 ಡಾಲರ್ ಅಂದ್ರೆ ಭಾರತದ 70, 73,811 ರೂಪಾಯಿಂದ 1,15,079 ಡಾಲರ್ ಅಂದ್ರೆ ಭಾರತದ 96,49,109 ರೂಪಾಯಿಗಳನ್ನು ಪ್ರತಿ ವರ್ಷಕ್ಕೆ ನೀಡಲಾಗುತ್ತದೆ.

ಇದನ್ನೂ ಓದಿ: ಅದ್ಭುತ ಕ್ಯಾಮೆರಾ, ದೀರ್ಘಾವಧಿಯ ಬ್ಯಾಟರಿ.. ಆಕರ್ಷಕ Vivo T3 Pro 5G ಸ್ಮಾರ್ಟ್​ಫೋನ್​ ರಿಲೀಸ್​​!

ನಾಸಾ ಈ ಹಿಂದೆ ಅಂದ್ರೆ 2024ರಲ್ಲಿ ಗಗನಯಾನಿಗಳಿಗೆ ನೀಡಿದ ಸಂಬಳದ ಮೊತ್ತವನ್ನು ತನ್ನ ವೆಬ್​ಸೈಟ್​ನಲ್ಲಿ ಹೇಳಿಕೊಂಡಿತ್ತು. ಈ ವರ್ಷ ಅದು ಗಗನಯಾನಿಗಳಿಗೆ ನೀಡಿದ ಒಟ್ಟು ಸಂಬಳ 1,52,258 ಡಾಲರ್ ಅಂದ್ರೆ 1 ಕೋಟಿ 27 ಲಕ್ಷ 66 ಸಾವಿರದ 483 ಭಾರತೀಯ ರೂಪಾಯಿಗಳು. ಸುನೀತಾ ವಿಲಿಯಮ್ಸ್‌ ಅವರಿಗೂ ಈ ವರ್ಷದಲ್ಲಿ 1 ಲಕ್ಷ 52 ಸಾವಿರದ 258 ಡಾಲರ್‌ಗಳನ್ನು ಸಂಬಳವಾಗಿ ನೀಡಲಾಗಿದೆ.

ಇನ್ನೂ ಸೇನೆಯಿಂದ ನಾಸಾಗೆ ಬಂದು ಸೇವೆ ಸಲ್ಲಿಸಲು ಮುಂದಾಗುವ ಯೋಧರಿಗೆ ನಾಸಾದಲ್ಲಿ ಬೇರೆಯದ್ದೇ ರೀತಿಯ ಸಂಬಳವಿದೆ. ಅವರ ಮಿಲಿಟರಿ ಶ್ರೇಣಿ. ಅವರಿಗೆ ನೀಡಲಾಗುವ ಜವಾಬ್ದಾರಿ. ಅವರು ಸೇವೆ ಸಲ್ಲಿಸುವ ವರ್ಷಗಳ ಮೇಲೆ ಅವರ ಸಂಬಳ ನಿಗದಿಯಾಗುತ್ತದೆ ಎಂದು ನಾಸಾ ಹೇಳಿಕೊಂಡಿದೆ. ಈ ಹಿಂದೆ ಗಗನಯಾನ ಕೈಗೊಂಡಿದ್ದ ಯುಎಸ್​ನ ನೌಕಾದಳದ ಕಮಾಂಡರ್ ಮ್ಯಾಥೀವ್ ಡ್ಯೂಮನಿಕ್​ಗೆ ಪ್ರತಿ ತಿಂಗಳು 8, 199.60 ಡಾಲರ್ ಅಂದ್ರೆ 6,87,452 ರೂಪಾಯಿಗಳನ್ನು ನೀಡಲಾಗಿತ್ತು. ಮತ್ತು ಯುಎಸ್​ನ ವಾಯುದಳದ ಬ್ರಿಗೇಡಿಯರ್ ರಾಜಾಚಾರಿ 2023ರಲ್ಲಿ ತಿಂಗಳಿಗೆ 8,92,033 ರೂಪಾಯಿಗಳನ್ನು ಪಡೆದಿದ್ದರು ಎಂದು ಹೇಳಲಾಗಿದೆ. ಅದರ ಜೊತೆಗೆ ಇನ್ಸೂರೆನ್ಸ್, ಆರೋಗ್ಯ ಸೌಲಭ್ಯ ಹಾಗೂ ಪೆನ್ಷನ್​ಗಳನ್ನು ಕೂಡ ಇವರಿಗೆ ನೀಡಲಾಗಿದೆ.

ಇದನ್ನೂ ಓದಿ: ಟೆಲಿಗ್ರಾಮ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್‌.. ಸಂಸ್ಥಾಪಕ, CEO ಅರೆಸ್ಟ್; ಆ್ಯಪ್ ಬ್ಯಾನ್ ಆಗುತ್ತಾ?

ಇನ್ನು ನಿವೃತ್ತ ನೌಕಾದಳದ ಕ್ಯಾಪ್ಟನ್ ಸುನೀತಾ ವಿಲಿಯಮ್ಸ್​ಗೆ ನೀಡಿದ ಸಂಬಳದ ಬಗ್ಗೆ ಹಲವು ಮಾಧ್ಯಮಗಳು ಹಲವು ರೀತಿಯ ಅಂಕಿ ಸಂಖ್ಯೆಗಳನ್ನು ಕೊಟ್ಟಿದ್ದು. 2024ರ ಅನ್ವಯ ನಾಸಾದ ಮಾನದಂಡಗಳ ಪ್ರಕಾರ ನೀಡಬೇಕಾದ ಸಂಬಳವನ್ನೇ ನೀಡಲಾಗಿದೆ ಎಂದು ಕೂಡ ವರದಿಯಾಗಿದೆ.

ಯುರೋಪಿಯನ್ ಬಾಹ್ಯಾಕಾಶ ಸಂಶ್ಥೆಗಳು ನೀಡುವ ಸಂಬಳವನ್ನು ನೋಡ್ತಾ ಹೋದ್ರೆ ಅಲ್ಲಿ ಗಗನಯಾನಿಗಳಿಗೆ ಸಿಗುವ ಸಂಬಳ ನಾಸಾಗೆ ಹೋಲಿಸಿದರೆ ಕಡಿಮೆಯೇ ಇದೆ ಅಲ್ಲಿ ಶ್ರೇಣಿಕೃತ ವ್ಯವಸ್ಥೆ ಇದ್ದು ಎ2 ದಿಂದ ಎ4 ವರೆಗೆ ಶ್ರೇಣಿಗಳ ಅನ್ವಯ ಸಂಬಳ ಹಾಗೂ ಸವಲತ್ತುಗಳನ್ನು ನೀಡಲಾಗುತ್ತದೆ

ಆರಂಭಿಕ ಗಗನಯಾನಿಗಳನ್ನು ಎ2 ಶ್ರೇಣಿಯಲ್ಲಿ ನೋಡಲಾಗುತ್ತದೆ ಅವರಿಗೆ 5019.45 ಡಾಲರ್ ಅಂದ್ರೆ ವರ್ಷಕ್ಕೆ ಭಾರತೀಯ ರೂಪಾಯಿಗಳಲ್ಲಿ 5,55,760 ರಷ್ಟು ಯುಕೆ ನೀಡಿದರೆ ಫ್ರಾನ್ಸ್ 6251.51 ಡಾಲರ್ ಅಂದ್ರೆ 5,86,441 ರೂಪಾಯಿಗಳನ್ನು ವರ್ಷಕ್ಕೆ ನೀಡುತ್ತದೆ.

ಎ3 ಗ್ರೇಡ್​ನವರಿಗೆ ಅಂದ್ರೆ ತರಬೇತಿ ಸಂಪೂರ್ಣವಾಗಿ ಮುಗಿಸಿದವರಿಗೆ 6,85,749 ರೂಪಾಯಿ ಯುಕೆಯಲ್ಲಿ 8,40,511 ರೂಪಾಯಿ ಫ್ರಾನ್ಸ್​ನಲ್ಲಿ ನೀಡುತ್ತಾರೆ ಎ4 ಗ್ರೇಡ್​ನವರಿಗೆ ಅಂದ್ರೆ ಮೊದಲ ಬಾರಿ ಬಾಹ್ಯಾಕಾಶ ನೌಕೆಯನ್ನು ಏರಿದವರಿಗೆ 796771 ರೂಪಾಯಿಗಳು ಯಕೆಯಲ್ಲಿ 8,40. 511ರೂಪಾಯಿಗಳು ಫ್ರಾನ್ಸ್​ನಲ್ಲಿ ನೀಡಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾವಿನೊಂದಿಗೆ ಸಾಹಸ.. ಸುನೀತಾ ವಿಲಿಯಮ್ಸ್‌ರಂತ ಗಗನಯಾನಿಗಳ ಸಂಬಳ ಎಷ್ಟು ಕೋಟಿ ಗೊತ್ತಾ?

https://newsfirstlive.com/wp-content/uploads/2024/08/astronauts-salary.jpg

Load More