ಟೆಲಿಗ್ರಾಮ್ ಸಂಸ್ಥಾಪಕ ಪಾವೆಲ್ ದುರೋವ್ ಎಂಬ ವಿಚಿತ್ರ ವ್ಯಕ್ತಿತ್ವ
ಸದಾ ಕಪ್ಪು ಬಟ್ಟೆ, ಮದ್ಯವಿಲ್ಲ ಮಾಂಸವಿಲ್ಲ, ಒಂದು ದೇಶದಲ್ಲಿ ನಿಲ್ಲಲ್ಲ
ಹುಟ್ಟು ದೇಶವನ್ನೇ ತೊರೆದು ಇವನು ಅಲೆದಾಡಿದ್ದು ಒಟ್ಟು ಎಷ್ಟು ದೇಶ?
ಪ್ಯಾರಿಸ್: 39 ವರ್ಷದ ವಿವಾದಾತ್ಮಕ ಹಾಗೂ ಅಷ್ಟೇ ವಿಭಿನ್ನ ವ್ಯಕ್ತಿತ್ವದ ಟೆಲಿಗ್ರಾಮ್ ಸಾಮಾಜಿಕ ಜಾಲತಾಣದ ಸಂಸ್ಥಾಪಕ, ರಷ್ಯಾದಲ್ಲಿ ಹುಟ್ಟಿದ ಕೋಟ್ಯಾಧಿಪತಿ ಪಾವೆಲ್ ದುರೋವ್ ಸದ್ಯ ಜಾಗತಿಕವಾಗಿ ದೊಡ್ಡ ಸುದ್ದಿಯಾಗಿದ್ದಾರೆ. ಅವರ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಮಿನಲ್ ಚಟುವಟಿಕೆ, ಡ್ರಗ್ ಟ್ರಾಫಿಕಿಂಗ್, ಸೈಬರ್ ಅಪರಾಧ, ಭಯೋತ್ಪಾನೆಗೆ ಉತ್ತೇಜನ ಹೀಗೆ ಅನೇಕ ಆಯಾಮಗಳ ಅಪರಾಧಗಳು ನಡೆಯುತ್ತಿವೆ ಅನ್ನೋ ಆರೋಪದ ಮೇಲೆ ಅವರ ವಿರುದ್ಧ ಫ್ರಾನ್ಸ್ ಸರ್ಕಾರ ಅರೆಸ್ಟ್ ವಾರೆಂಟ್ ಹೊರಡಿಸಿತ್ತು. ಕಳೆದ ಶನಿವಾರವಷ್ಟೇ ಪ್ಯಾರಿಸ್ ಲೋ ಬೌರ್ಗೆಟ್ ಏರ್ಪೋರ್ಟ್ನಲ್ಲಿ ತಮ್ಮ ಖಾಸಗಿ ಜೆಟ್ನಲ್ಲಿ ಲ್ಯಾಂಡ್ ಆದ ವೇಳೆ ಅವರನ್ನು ಅರೆಸ್ಟ್ ಕೂಡ ಮಾಡಲಾಗಿತ್ತು, ಸದ್ಯ ಅರೆಸ್ಟ್ ಆಗಿರುವ ದುರೋವ್ ಅವರ ವಿಚಿತ್ರ ವ್ಯಕ್ತಿತ್ವ ದೊಡ್ಡದಾಗಿ ಸುದ್ದಿಯಾಗಿತ್ತಿದೆ. ಅವರನ್ನು ರಷಿಯನ್ ಝುಕರ್ಬರ್ಗ್ ಎಂದು ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ಬರ್ಗ್ಗೆ ಹೋಲಿಕೆ ಮಾಡಲಾಗುತ್ತಿದೆ. ಇವನ ವಿಚಿತ್ರ ವ್ಯಕ್ತಿತ್ವದ ಬಗ್ಗೆ ಚರ್ಚೆ ಆಗುತ್ತಿದೆ.
ಇದನ್ನೂ ಓದಿ: ಪಾಕಿಸ್ತಾನದ ಒಳಗೆ ರಣಭೀಕರ ಮಾರಣಹೋಮ.. ಸಾವಿನ ಸಂಖ್ಯೆ 60ಕ್ಕೂ ಹೆಚ್ಚು; ಕಾರಣವೇನು?
2006ರಲ್ಲಿ ಪಾವೆಲ್ ದುರೋವ್ ಸೇಂಟ್ ಪೀಟರ್ಸ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದು ಅದೇ ಸಮಯದಲ್ಲಿ ವಿಕೊಂಟ್ಯಾಕ್ಟ್ ಅನ್ನೋ ಸೊಷಿಯಲ್ ಮಿಡಿಯಾವನ್ನು ಶುರು ಮಾಡಿದರು. ಅದು ಜನರನ್ನು ಸೆಳೆಯಿತು. ಅವನ ವಿಚಿತ್ರ ವರ್ತನೆಯಿಂದಾಗಿ ಅದರ ಸಂಸ್ಥಾಪಕರ ಸಂಖ್ಯೆ ಏಳಕ್ಕೆ ಕುಸಿಯಿತು. ದುರೋವ್ 2012ರಲ್ಲಿ ಸೈಂಟ್ ಪಿಟರ್ಸ್ಬರ್ಗ್ನ ಬುಕ್ಸ್ಟೋರ್ ಟಾಪ್ ಮೇಳೆ ನಿಂತು ವಿಕೆದ ಪಂಗಡಗಳ ಕುರಿತು ಬರೆದ ಕೆಲವು ಬರವಣೆಗಳಳ ಹಾಳೆಗಳನ್ನು ಪಾದಚಾರಿಗಳ ಮೇಲೆ ತೂರಲು ಆರಂಭಿಸಿದ್ದ. ಕೊನೆಗೆ ಇದರಲ್ಲೂ ತೊಂದರೆಯಲ್ಲಿ ಸಿಲುಕಿ ವಿಕೊಂಟ್ಯಾಕ್ಟ್ನ ಬಳಕೆದಾರರ ವೈಯಕ್ತಿಕ ದಾಖಲೆಗಳನ್ನು ರಷಿಯಾದ ಸೆಕ್ಯೂರಿಟಿ ಸರ್ವಿಸ್ಗೆ ನೀಡದೇ 2014ರಲ್ಲಿ ರಷ್ಯಾವನ್ನು ತೊರೆದ.
ಇದನ್ನೂ ಓದಿ:102 ವರ್ಷದ ಅಜ್ಜಿಯ ಸಾಹಸಕ್ಕೆ ಎಲ್ರೂ ಶಾಕ್.. ಗಟ್ಟಿ ಗುಂಡಿಗೆ ಇದ್ದವರು ಈ ವಿಡಿಯೋ ನೋಡಿ!
ದೇಶದಿಂದ ದೇಶಕ್ಕೆ ತಿರುಗುತ್ತಲೇ ಈತ 2013ರಲ್ಲಿ ಟೆಲಿಗ್ರಾಮ್ ಎಂಬ ಸಾಮಾಜಿಕ ಜಾಲತಾಣದ ಆ್ಯಪ್ ಲಾಂಚ್ ಮಾಡಿದ ಮುಂದೆ ದುಬೈಗೆ ಹೋಗಿ ನೆಲೆನಿಂತ ದುರೋವ್, ಕೆರಿಬಿಯನ್ನ ನಾಗರೀಕತ್ವ ಪಡೆದುಕೊಂಡ ಮುಂದೆ 2021ರಲ್ಲಿ ಫ್ರಾನ್ಸ್ನ ನ್ಯಾಷನಾಲಿಟಿಯನ್ನು ಕೂಡ ಪಡೆದುಕೊಂಡ
ಅವನ ಸಂಸ್ಥಾಪಿತ ಟೆಲಿಗ್ರಾಮ್ ದೊಡ್ಡ ಯಶಸ್ಸು ಪಡೆಯಿತು. ಯಾವುದೇ ಸೆನ್ಸಾರ್ ಇಲ್ಲದೇ, ಯಾವುದೇ ನಿರ್ಬಂಧಗಳಿಲ್ಲದೇ ಬಳಸುವ ಆ್ಯಪ್ನನ್ನು ಜನರು ಅಪ್ಪಿಕೊಂಡರು. ಆದ್ರೆ ಮುಂದೆ ಅದು ಕೂಡ ಸಮಸ್ಯೆಯುಂಟು ಮಾಡಿತು. ಅವನದೇ ದೇಶವಾದ ರಷ್ಯಾದಲ್ಲಿ ಅದು ಕೋರ್ಟ್ನಿಂದ ಬ್ಲಾಕ್ ಮಾಡುವಂತೆ ಆದೇಶ ಹೊರಡಿಸಿಕೊಂಡಿತು. ಅದಾದ ಮೇಲೆ ಅದರ ಮೇಲೆ ಹೇರಿದ್ದ ನಿರ್ಬಂಧವನ್ನು ಕೂಡ ತೆಗೆಯಲಾಯ್ತು. ಉಕ್ರೇನ್ ಹಾಗೂ ರಷ್ಯಾದ ಯುದ್ಧ ಸಮಯದಲ್ಲಿ ಎರಡು ರಾಷ್ಟ್ರಗಳ ವಿಡಿಯೋ ಹಾಗೂ ಬ್ಲಾಗ್ಗಳನ್ನು ಶೇರ್ ಮಾಡಲು ಉಪಯೋಗಕ್ಕೆ ಬಂದಿದ್ದು ಇದೇ ಟೆಲಿಗ್ರಾಮ್
ಇದನ್ನೂ ಓದಿ: ಟೆಲಿಗ್ರಾಮ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್.. ಸಂಸ್ಥಾಪಕ, CEO ಅರೆಸ್ಟ್; ಆ್ಯಪ್ ಬ್ಯಾನ್ ಆಗುತ್ತಾ?
ಟೆಲಿಗ್ರಾಮ್ನಲ್ಲಿ ತನ್ನ ಬಗ್ಗೆ ತಾನೇ ಹಲವು ಪೋಸ್ಟ್ಗಳನ್ನು ಹಾಕಿಕೊಳ್ಳುತ್ತಿದ್ದ ಈ ದುರೋವ್ನ ಇನ್ನೊಂದು ವಿಚಿತ್ರ ವ್ಯಕ್ತಿತ್ವ ಅಂದ್ರೆ, ಈತ ಮದ್ಯ ಕುಡಿಯುವುದಿಲ್ಲ ಮಾಂಸ ತಿನ್ನುವುದಿಲ್ಲ, ಕಾಫಿ ಕೂಡ ಕುಡಿಯುವುದಿಲ್ಲ. ಸದಾ ಕಪ್ಪು ಬಣ್ಣದ ಬಟ್ಟೆಯಲ್ಲಿಯೇ ಇರುತ್ತಾನೆ.
ಕೆಲವು ದಿನಗಳ ಹಿಂದಷ್ಟೇ ಈತ ನಾನು 100 ಮಕ್ಕಳಿಗೆ ಜೈವಿಕ ತಂದೆ. ವಿಶ್ವದ ಹಲವು ಭಾಗದಲ್ಲಿ ನನ್ನ ಜೈವಿಕ ಮಕ್ಕಳು ಇದ್ದಾರೆ, ನಾನು ಅಷ್ಟು ವಿರ್ಯದಾನವನ್ನು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದು ಕೂಡ ಸುದ್ದಿಯಾಗಿತ್ತು. ಇತ್ತೀಚೆಗೆ ಫೋರ್ಬ್ಸ್ ಮ್ಯಾಗ್ಜಿನ್ ಬಿಡುಗಡೆ ಮಾಡಿದ್ದ ವರದಿಯ ಪ್ರಕಾರ 1500 ಕೋಟಿ ಯುಎಸ್ ಡಾಲರ್ನಷ್ಟು ಸಂಪತ್ತು ಈತನ ಬಳಿ ಇದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ