/newsfirstlive-kannada/media/post_attachments/wp-content/uploads/2024/09/whatsapp.jpg)
Whatsapp: ಮೆಟಾ ಒಡೆತನದ ವಾಟ್ಸ್​ಆ್ಯಪ್​ ಸಂದೇಶ ಕಳುಹಿಸುವ ವೇದಿಕೆಯಾಗಿದೆ. ಇದರ ಮೂಲಕ ಸಂದೇಶ ಮಾತ್ರವಲ್ಲದೆ, ಫೈಲ್​ಗಳನ್ನು, ಫೋಟೋ, ವಿಡಿಯೋ, ಆಡಿಯೋ, ಕರೆ​ಗಳನ್ನ ಮಾಡಬಹುದಾಗಿದೆ. ಅಷ್ಟು ಮಾತ್ರವಲ್ಲದೆ ತಮಗಿಷ್ಟದ ಫೋಟೋ ಮತ್ತು ವಿಡಿಯೋಗಳನ್ನು ಕ್ಲಿಕ್ಕಿಸಿ ಸ್ಟೇಟಸ್​ ಕೂಡ ಹಾಕಿಕೊಳ್ಳಬಹುದಾಗಿದೆ.
ಆದರೀಗ ಜನಪ್ರಿಯ ವಾಟ್ಸ್​ಆ್ಯಪ್​ನಲ್ಲಿ ಹೊಸ ಫೀಚರನ್ನು ತರಲು ಮೆಟಾ ಮುಂದಾಗಿದೆ. ಅದೇನೆಂದರೆ ವಾಟ್ಸ್​ಆ್ಯಪ್​ನಲ್ಲಿ ಕ್ಯಾಮೆರಾ ಫಿಲ್ಟರ್​​ ತರಲು ಯೋಜಿಸಿದೆ.
ಬಹುತೇಕರು ವಾಟ್ಸ್​ಆ್ಯಪ್​ನಲ್ಲಿ ಫೋಟೋ ಮತ್ತು ವಿಡಿಯೋ ಕ್ಲಿಕ್ಕಿಸಿ ಸ್ಟೇಟಸ್​ ಹಂಚಿಕೊಳ್ಳುತ್ತಾರೆ. ಇದನ್ನು ಗಮನಿಸಿದ ವಾಟ್ಸ್​ಆ್ಯಪ್​ ಫೋಟೋ ಮತ್ತು ವಿಡಿಯೋ ಫಿಲ್ಟರ್​ ತರಲು ಚಿಂತಿಸಿದೆ. ಇನ್​​ಸ್ಟಾಗ್ರಾಂನಂತೆಯೇ ಫಿಲ್ಟರ್ ಬಳಕೆಗೆ ಬರಲಿದೆ.
ಇದನ್ನೂ ಓದಿ: Sleep Internship: ನಿದ್ದೆ ಮಾಡಿ 9 ಲಕ್ಷ ರೂಪಾಯಿ ಗೆದ್ದ ಬೆಂಗಳೂರಿನ ಯುವತಿ!
ವಾಬೇಟಾಇನ್ಫೋ ಪ್ರಕಾರ, ವಾಟ್ಸ್​ಆ್ಯಪ್​ ಕ್ಯಾಮೆರಾದಲ್ಲಿ ಫಿಲ್ಟರ್​ ಅಳವಡಿಸುವ ಮೂಲಕ ಕೆಲವೊಂದು ಬದಲಾವಣೆ ತರಲಿದೆ. ಈ ಫಿಲ್ಟರ್​ಗಳು ಬೆಳಕನ್ನು ಸರಿಹೊಂದಿಸಲು, ಫೋಟೋ ಮತ್ತು ವಿಡಿಯೋ ಚಂದಗಾಣಿಸಲು ಪ್ರಯೋಜನಕಾರಿಯಾಗಿದೆ.
ವಾಟ್ಸ್​ಆ್ಯಪ್​ ಬಳಕೆದಾರರು ಈ ಫಿಲ್ಟರ್​ ಅನ್ನು ಟ್ಯಾಪ್​ ಮಾಡುವ ಮೂಲಕ ಅಳವಡಿಸಬಹುದಾಗಿದೆ. ಸದ್ಯ ಈ ಫೀಚರ್​ ಬೀಟಾ ಹಂತದಲ್ಲಿದ್ದು, ಸದ್ಯದಲ್ಲೇ ಬಳಕೆದಾರರಿಗೆ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us