15 ನಿಮಿಷ ನೀವು ಒಂದೇ ಜಾಗದಲ್ಲಿ ಕೂತು ಕೆಲಸ ಮಾಡ್ತೀರಾ? ಹಾಗಿದ್ರೆ ಕೂಡಲೇ ಎಚ್ಚರ ವಹಿಸಿ!

author-image
Veena Gangani
Updated On
15 ನಿಮಿಷ ನೀವು ಒಂದೇ ಜಾಗದಲ್ಲಿ ಕೂತು ಕೆಲಸ ಮಾಡ್ತೀರಾ? ಹಾಗಿದ್ರೆ ಕೂಡಲೇ ಎಚ್ಚರ ವಹಿಸಿ!
Advertisment
  • 15 ನಿಮಿಷಕ್ಕೊಮ್ಮೆ ಬ್ರೇಕ್​ ತೆಗೆದುಕೊಳ್ಳದಿದ್ದರೆ ಏನಾಗುತ್ತೆ ಗೊತ್ತಾ?
  • ಅತಿಯಾಗಿ ನಿಮ್ಮಲ್ಲಿ ಬೆನ್ನು ನೋವು ಕಾಣಿಸಿಕೊಂಡ್ರೆ ಈ ಕೆಲಸ ಮಾಡಿ
  • ನಿಮಗೆ ಬೆನ್ನು ನೋವು ಬಂದರೆ ಮೊದಲು ಮಾಡಬೇಕಾದ ಕೆಲಸವೇನು?

ಇತ್ತೀಚಿನ ದಿನಗಳಲ್ಲಿ ಜನ ಸಾಮಾನ್ಯರು ಒಂದೇ ಕಡೆ ಕುಳಿತುಕೊಂಡು ಕೆಲಸ ಮಾಡುತ್ತಾ ಇರುತ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಕೈಯಲ್ಲಿ ಫೋನ್ ಹಿಡಿದುಕೊಂಡು ಕುಳಿತು ಕೊಂಡರೇ ಮುಗಿತು ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಆದರೆ ಹೀಗೆ ಒಂದೇ ಕಡೆ ಕೂತಲ್ಲೇ ಕೂತು ಕೆಲಸ ಮಾಡೋದಾಗಲಿ, ಫೋನ್​ ನೋಡೋದಾಗಲಿ ಮಾಡ್ತಾ ಇದ್ದರೆ ಏನೆಲ್ಲಾ ಆಗುತ್ತೆ ಅಂತ ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಇದನ್ನೂ ಓದಿ: 12 ವರ್ಷದಿಂದ ಈತನ ನಿದ್ರೆ ದಿನಕ್ಕೆ ಕೇವಲ 30 ನಿಮಿಷ.. ನೀ ಮಾಯೆಯೊಳಗೊ ನಿದ್ದೆ ಮಾಯೆ ನಿನ್ನೊಳಗೊ..!

publive-image

ಹೌದು, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ಯುವಕರು ಹಲವು ರೀತಿಯ ಚಿಕಿತ್ಸೆಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಬೆನ್ನು ನೋವು ಮತ್ತು ಮೂಳೆ ನೋವಿನ ಸಮಸ್ಯೆಯಿಂದಾಗಿ ವೈದ್ಯರ ಬಳಿ ಹೋಗಿ ತಮಗೆ ಆಗುತ್ತಿರುವ ಕಷ್ಟದ ಬಗ್ಗೆ ನೋವನ್ನು ತೋಡಿಕೊಳ್ಳುತ್ತಿದ್ದಾರೆ. ಯಾವುದೇ ವಯೋಮಿತಿ ಇಲ್ಲದೇ ಬೆನ್ನು ನೋವು ಬಹುತೇಕರನ್ನು ಕಾಡುತ್ತಿದೆ. ಹಾಗಾದ್ರೆ ಇದರ ನಿವಾರಣೆ ಹೇಗೆ ಸಾಧ್ಯ ಎಂಬವುದನ್ನು ಕೆಲವು ಟಿಪ್ಸ್ ಮೂಲಕ ತಿಳಿಯೋಣ.

ಇದನ್ನೂ ಓದಿ:ತ್ವಚೆ ನ್ಯಾಚುರಲ್​ ಆಗಿ ಪಳಪಳ ಹೊಳೆಯುತ್ತೆ.. ಆದ್ರೆ ಐಸ್‌ ಕ್ಯೂಬ್​ ಬಳಸುವಾಗ ಈ ತಪ್ಪು ಮಾಡಬೇಡಿ!

ಸಾಮಾನ್ಯವಾಗಿ ಒಂದೇ ಕಡೆ ಕುಳಿತುಕೊಂಡು ಕೆಲಸ ಮಾಡುವುದರಿಂದ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಮೊದಲು ನಿಧಾನ ಗತಿಯಲ್ಲಿ ಶುರುವಾದ ಈ ಬೆನ್ನು ನೋವು ದಿನ ಕಳೆದಂತೆ ಜಾಸ್ತಿಯಾಗುತ್ತಾ ಹೋಗುತ್ತದೆ. ಒಂದೇ ಕಡೆ ಕುಳಿತುಕೊಳ್ಳಲು ಆಗೋದಿಲ್ಲ. ಜೊತೆಗೆ ಸ್ವಲ್ಪ ಬಗ್ಗಿ ಬಿಟ್ಟರೆ ಆ ನೋವು ಇನ್ನೂ ಜಾಸ್ತಿಯಾಗುತ್ತದೆ ಎಂಬ ಅನುಭವಗಳು ಆಗುತ್ತದೆ. ಇಂತಹ ನೋವು ಸಾಮಾನ್ಯವಾಗಿ ಸಾಕಷ್ಟು ತೀವ್ರವಾಗಿರುತ್ತದೆ ಮತ್ತು ಲಘುವಾಗಿ ತೆಗೆದುಕೊಳ್ಳಬಾರದು. ಹೀಗೆ ಇದನ್ನು ಲಘುವಾಗಿ ತೆಗೆದುಕೊಂಡರೇ ಇದು ಹೃದಯಾಘಾತ, ಪಾರ್ಶ್ವವಾಯು ರೋಗಕ್ಕೆ ಕಾರಣವಾಗಿ ಬಿಡುತ್ತದೆ. ಹೀಗಾಗಿ ಬೆನ್ನು ನೋವು ಉಸಿರಾಟದ ತೊಂದರೆ, ಎದೆಯ ಒತ್ತಡ ಅಥವಾ ನೋವು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಬೆನ್ನು ನೋವು ಬರೋದಕ್ಕೆ ಮುಖ್ಯ ಕಾರಣಗಳೇನು?
ಮೊದಲು ಅತಿಯಾದ ಒತ್ತಡದಿಂದ ಈ ಬೆನ್ನು ನೋವು ಕಾಣಿಸಿಕೊಳ್ಳತ್ತದೆ. ಮೂಳೆಗಳಲ್ಲಿ ಶಕ್ತಿ ಕಡಿಮೆಯಾಗಿದ್ದರೆ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಹೀಗೆ ಬೆನ್ನು ನೋವು ಬಂದರೆ ಮೊದಲು ಮಾಡಬೇಕಾದ ಕೆಲಸ ವಿಶ್ರಾಂತಿ. ದಿನವಿಡೀ ಕೆಲಸ ಮಾಡ್ತಾ ಇದ್ದರೆ ಅಂತವರು ರೆಸ್ಟ್​ ಮಾಡುವುದು ತುಂಬಾನೇ ಮುಖ್ಯ ಅಂತಾರೆ ವೈದ್ಯರು. ಹೀಗೆ ನೋವು ಕಾಣಿಸಿಕೊಂಡಾಗ ಹಿಟ್​ ಪ್ಯಾಕ್​ ಅಥವಾ ಕೋಲ್ಡ್​ ಪ್ಯಾಕ್​ಗಳನ್ನು ಇಟ್ಟುಕೊಂಡು ನೋವನ್ನು ಕಡಿಮೆ ಮಾಡಿಕೊಳ್ಳಬಹುದು.

publive-image

ಬೆನ್ನು ನೋವಿಗೆ ಬೇಕಾದ ಔಷಧಿಗಳು ಪಡೆದುಕೊಂಡರು 7 ದಿನಕ್ಕಿಂತ ಹೆಚ್ಚು ಸಮಯದ ಕಾಲ ನೋವು ಇದ್ದರೆ ತಡ ಮಾಡದೇ ವೈದ್ಯರನ್ನು ಸಂಪರ್ಕಿಸಬೇಕು. ಆಗಾಗ ಬೆನ್ನು ನೋವು ಬಂದು ಹೋಗುವುದು ಮಾಡಿದ್ರೆ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೆ 45 ನಿಮಿಷಕ್ಕಿಂತ ಹೆಚ್ಚು ಸಮಯದವರೆಗೂ ಒಂದೇ ಕಡೆ ಕುಳಿತುಕೊಳ್ಳಬಾರದು. 15 ನಿಮಿಷಕ್ಕೊಮ್ಮೆ ನಡೆದಾಡುತ್ತಾ ಇರಬೇಕು. ಆಗಾಗ ನಿಮ್ಮ ದೇಹಕ್ಕೆ ವಿಶ್ರಾಂತಿ ನೀಡುತ್ತಾ ಇರಬೇಕು. ಬಹಳ ಮುಖ್ಯವಾಗಿ ದೈಹಿಕವಾಗಿ ವ್ಯಾಯಾಮ ಮಾಡಬೇಕು. ಇನ್ನೊಂದು ಬಾರದ ವಸ್ತುವನ್ನು ಎತ್ತುವಾಗ ಜಾಗರೂಕರಾಗಿ ಇರುವುದು ತುಂಬಾ ಮುಖ್ಯವಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment