Advertisment

ಅಯೋಧ್ಯೆಯಲ್ಲಿ ಬಿಜೆಪಿಗೆ ಮುಖಭಂಗ.. ಹೀನಾಯ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಸ್ಥಳೀಯ ನಿವಾಸಿಗಳು..!

author-image
Ganesh
Updated On
ಅಯೋಧ್ಯೆಯಲ್ಲಿ ಬಿಜೆಪಿಗೆ ಮುಖಭಂಗ.. ಹೀನಾಯ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಸ್ಥಳೀಯ ನಿವಾಸಿಗಳು..!
Advertisment
  • ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಫರಿದಾಬಾದ್​ನಲ್ಲಿ ಸೋಲು
  • ಅಯೋಧ್ಯೆಯ ಜನರೇ ಬಿಜೆಪಿಯನ್ನು ತಿರಸ್ಕರಿಸಿದ್ಯಾಕೆ..?
  • ಜನವರಿ 22 ರಂದು ಭವ್ಯ ರಾಮಮಂದಿರದ ಉದ್ಘಾಟನೆ ನಡೆದಿತ್ತು

ಕಳೆದ ಜನವರಿಯಲ್ಲಿ ಅಯೋಧ್ಯೆಯಲ್ಲಿ ಬಿಜೆಪಿ ಸರ್ಕಾರ ವಿಜೃಂಭಣೆಯಿಂದ ರಾಮಮಂದಿರ ನಿರ್ಮಿಸಿ ಇತಿಹಾಸ ಬರೆದಿತ್ತು.. ರಾಮಮಂದಿರ ನಿರ್ಮಾಣದಿಂದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಏಕಾಂಗಿಯಾಗಿ ಬಹುಮತ ಸಾಧಿಸುತ್ತೆ ಎಂದು ಊಹಿಸಲಾಗಿತ್ತು, ಮಂದಿರ ನಿರ್ಮಾಣ ಜೊತೆ ಜೊತೆಗೆ ಅಯೋಧ್ಯೆ ನಗರವನ್ನು ಅಭಿವೃದ್ಧಿ ಮಾಡಲಾಗಿತ್ತು. ಆದ್ರೆ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದೆ. ಎಲ್ಲಾ ರೀತಿಯ ಅಭಿವೃದ್ಧಿ ಮಾಡಿದ್ರೂ ಅಯೋಧ್ಯೆಯ ಜನರೇ ಬಿಜೆಪಿಯನ್ನು ತಿರಸ್ಕರಿಸಿದ್ಯಾಕೆ ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ.

Advertisment

ಕಳೆದ ಐದು ತಿಂಗಳ ಹಿಂದೆ ಅಂದ್ರೆ ಜನವರಿ 22 ರಂದು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ಉದ್ಘಾಟನೆ ನಡೆದಿತ್ತು. ದೇಶ ವಿದೇಶಗಳಲ್ಲಿ ಭಾರಿ ಸುದ್ದಿಯಾಗಿತ್ತು. ಬಹುಕೋಟಿ ಹಿಂದೂಗಳು 500 ವರ್ಷಗಳ ಕನಸು ನನಸಾಗಿದೆ ಎಂದು ಸಂತಸ ಹಂಚಿಕೊಂಡಿದ್ರು. ವಿಪರ್ಯಾಸವೆಂದರೆ ಇದೇ ಅಯೋಧ್ಯೆಯಲ್ಲಿಯೇ ಈಗ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಕಾಂಗ್ರೆಸ್ ಕೊಟ್ಟಿದ್ದ ಗ್ಯಾರಂಟಿಗಳು ರದ್ದಾಗುತ್ತಾ? ಕಾಂಗ್ರೆಸ್​ ಶಾಸಕರಿಂದಲೇ ಒತ್ತಡ..?

ಅಯೋಧ್ಯೆ ರಾಮಮಂದಿರ ನಿರ್ಮಾಣ ರಾಜಕೀಯವಾಗಿಯೂ ವ್ಯಾಪಕ ಚರ್ಚೆಯಾಗಿತ್ತು, ಇದು ಬಿಜೆಪಿಯ ಲೋಕಸಭಾ ಚುನಾವಣೆ ಪ್ರಚಾರದ ವಸ್ತು ಎಂದೇ ಹೇಳಲಾಗಿತ್ತು.. ಅಯೋಧ್ಯೆಯಲ್ಲಿ ರಾಮಮಂದಿರದ ಜೊತೆ ಜೊತೆಗೆ ಬಿಜೆಪಿ ಸರ್ಕಾರ ಅಭಿವೃದ್ಧಿಗೆ ಒತ್ತು ನೀಡಿತ್ತು.. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲು ಸೇವೆಗಳ ಹೀಗೆ ದೊಡ್ಡ ದೊಡ್ಡ ನಗರಗಳಿಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಸಹ ಅಯೋಧ್ಯೆಯಲ್ಲಿ ಕಲ್ಪಿಸಲಾಗಿತ್ತು, ಇಷ್ಟೆಲ್ಲಾ ಅಭಿವೃದ್ಧಿ ಮಾಡಿದ್ರೂ ಕೂಡ ಬಿಜೆಪಿ ರಾಮನೂರಿನಲ್ಲಿ ಸೋತಿದ್ದು ಏಕೆ ಅನ್ನೋದು ಎಲ್ಲರ ಪ್ರಶ್ನೆ ಯಾಗಿದೆ.

Advertisment

55 ಸಾವಿರ ಮತಗಳ ಅಂತರದಿಂದ ಸೋತ ಬಿಜೆಪಿ ಅಭ್ಯರ್ಥಿ
ಅಯೋಧ್ಯೆ ರಾಮಮಂದಿರವು ಫೈಜಾಬಾದ್ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಹಾಲಿ ಸಂಸದ ಲಲ್ಲೂ ಸಿಂಗ್, ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ವಿರುದ್ಧ 54,567 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಇದು ಕೇಸರಿ ಪಾಳಯಕ್ಕೆ ತೀವ್ರ ಆಘಾತ ನೀಡಿದೆ. ರಾಮನೂರಿನಲ್ಲಿ ಬಿಜೆಪಿ ಏಕೆ ಸೋತಿತು?

ಇದನ್ನೂ ಓದಿ:ಅಪ್ಪ, ಅಮ್ಮ ಇಬ್ಬರೂ IAS; 10ನೇ ಮಹಡಿಯಿಂದ ಜಿಗಿದು ಪುತ್ರಿ ಸಾವು.. ಡೆತ್​ನೋಟ್​ನಲ್ಲಿ ಕಾರಣ ರಿವೀಲ್..

ಅಯೋಧ್ಯೆ ಸ್ಥಳೀಯರು ಹೇಳೊದೇನು..?
ಅಯೋಧ್ಯೆಯ ರಾಮಪಥ ನಿರ್ಮಾಣದ ಸಮಯದಲ್ಲಿ ಅನೇಕ ಮನೆಗಳನ್ನು ನೆಲಸಮಗೊಳಿಸಲಾಯಿತು, ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತು ಜೊತೆಗೆ ಅನೇಕ ಜನರ ಜೀವನೋಪಾಯವನ್ನೇ ಕಸಿಲಾಯ್ತು.. ಇದರ ಜೊತೆಗೆ ರಾಮ ಮಂದಿರ ಹಾಗೂ ಅಯೋಧ್ಯೆಯ ವಿಮಾನ ನಿಲ್ದಾಣದ ಸುತ್ತಮುತ್ತ ನಡೆಯುತ್ತಿರುವ ಭೂಸ್ವಾಧೀನದ ವಿರುದ್ಧ ಆಯೋಧ್ಯೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇತ್ತ ಸಮಾಜವಾದಿ ಪಕ್ಷದ ಅಭ್ಯರ್ಥಿ ದಲಿತ ನಾಯಕ ಎಂಬ ಕಾರಣಕ್ಕೆ ಬಿಎಸ್‌ಪಿ ಮತಗಳು ಸಮಾಜವಾದಿ ಪಕ್ಷದತ್ತ ಧ್ರುವೀಕರಣಗೊಂಡವು ಎಂದು ಹೇಳಲಾಗುತ್ತೆ.. ಜೊತೆಗೆ ಅಯೋಧ್ಯೆಯ ಹಾಲಿ ಸಂಸದರಾಗಿದ್ದ ಲಲ್ಲು ಸಿಂಗ್​​​​ ವಿರುದ್ಧ ಆಡಳಿತ ವಿರೋಧಿ ಅಲೆ ಇತ್ತು ಎನ್ನಲಾಗ್ತಿದೆ. ಇದೆಲ್ಲದರ ಜೊತೆ ಕೆಲ ಬಿಜೆಪಿ ನಾಯಕರು ಆಡಿದ ಸಂವಿಧಾನ ಬದಲಾವಣೆಯ ಮಾತು ಬಿಜೆಪಿ ಸೋಲಿಗೆ ಕಾರಣ ಅಂತ ಸ್ಥಳೀಯರು ಹೇಳಿದ್ದಾರೆ.

Advertisment

ಇದನ್ನೂ ಓದಿ:ವಿಶ್ವಕಪ್​​ನಲ್ಲೂ RCB ಬ್ಯಾಟ್ಸ್​​ಮನ್ ಫ್ಲಾಪ್​ ಶೋ.. ಇವತ್ತು ಗಳಿಸಿದ ರನ್ ಎಷ್ಟು ಗೊತ್ತಾ?

ಒಟ್ಟಾರೆ.. ಅಯೋಧ್ಯೆಯಲ್ಲಿನ ಸೋಲು ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿದೆ.. ಕೇವಲ ಮಂದಿರದಿಂದ ನಿರ್ಮಾಣದಿಂದ ಜನರ ಸಮಸ್ಯೆ ಪರಿಹಾರವಾಗಲ್ಲ ಎನ್ನುವುದನ್ನ ಅಯೋಧ್ಯೆ ಮತದಾರರು ತೋರಿಸಿಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment