/newsfirstlive-kannada/media/post_attachments/wp-content/uploads/2024/09/Darshan-Pavithra-Gowda-Photo-1.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪೊಲೀಸರು ಪ್ರತಿಯೊಬ್ಬ ಆರೋಪಿಯ ಸ್ವ-ಇಚ್ಛಾ ಹೇಳಿಕೆಯನ್ನು ದಾಖಲಿಸಿಕೊಂಡು ಅದನ್ನು 3991 ಪುಟದ ಜಾರ್ಜ್​ಶೀಟ್​ನಲ್ಲಿ ದಾಖಲಿಸಿದ್ದಾರೆ. ಆರೋಪಿ ನಂಬರ್ 1 ಆಗಿರುವ ಪವಿತ್ರಾಗೌಡರನ್ನು ವಿಚಾರಣೆ ಮಾಡಿರುವ ಪೊಲೀಸರು ಅವರ ಹೇಳಿಕೆಯನ್ನು ಪುಟ ಸಂಖ್ಯೆ 3849 ರಿಂದ 3851 ಪುಟದವರೆಗೆ ಪವಿತ್ರಾ ಹೇಳಿಕೆಯನ್ನು ದಾಖಲಿಸಿದ್ದಾರೆ. ಪವಿತ್ರಾ ತಮ್ಮ ಹೇಳಿಕೆಯಲ್ಲಿ ಈ ಹಿಂದೆ ದರ್ಶನ್ ಜೊತೆ ಜಗಳವಾಡಿ ಮಾತು ಬಿಟ್ಟಿದ್ದರ ಬಗ್ಗೆಯೂ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/07/Vijayalakshmi-Darshan-Wife-1.jpg)
ಇದನ್ನೂ ಓದಿ:ದರ್ಶನ್‌ಗೂ ಪವಿತ್ರಾಗೂ ಇರೋ ನಂಟೇನು? ಸ್ವಇಚ್ಛಾ ಹೇಳಿಕೆಯಲ್ಲಿ ಸ್ಫೋಟಕ ಸತ್ಯ ಬಯಲು; ಏನದು?
ರೇಣುಕಾಸ್ವಾಮಿ ಕೊಲೆಯ ಒಂದು ತಿಂಗಳ ಮುಂಚೆ ಪವಿತ್ರಾಗೌಡ ದರ್ಶನ್​ ಜೊತೆ ಜಗಳವಾಡಿ ಮಾತು ಬಿಟ್ಟಿದ್ದರು. ಅದಕ್ಕೆ ಕಾರಣ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಇದೇ ವರ್ಷ ಮೇ 19 ರಂದು ದರ್ಶನ್​ ಪತ್ನಿ ವಿಜಯಲಕ್ಷ್ಮೀ ಜೊತೆ ತಮ್ಮ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ದುಬೈಗೆ ಹೋಗಿದ್ದರು. ನನಗೆ ತಿಳಿಸದೇ ಪತ್ನಿಯೊಂದಿಗೆ ದುಬೈಗೆ ಹೋಗಿದ್ದರಿಂದ ನಾನು ಕೋಪಗೊಂಡು ಅವರೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದೆ ಎಂದು ತಮ್ಮ ಸ್ವಇಚ್ಛಾ ಹೇಳಿಕೆಯಲ್ಲಿ ದಾಖಲಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/07/Pavitra-Gowda-8.jpg)
ಇದರೊಂದಿಗೆ ಫೆಬ್ರವರಿಯಿಂದ ಗೌತಮ್ ಕೆ ಎಸ್ ಎಂಬ ಖಾತೆಯಿಂದ ನನಗೆ ನಿರಂತರವಾಗಿ ಅಶ್ಲೀಲ ಸಂದೇಶ, ಫೋಟೋಗಳು ಬರುತ್ತಿರುವ ಬಗ್ಗೆಯೂ ಪವಿತ್ರಾಗೌಡ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us