Advertisment

ದರ್ಶನ್ ಫೋಟೋ ವೈರಲ್ ಮಾಡಿದ ವೇಲು ಯಾರು? ನಾಗನಿಗಾಗಿ ಡಬಲ್ ಮರ್ಡರ್‌ ಮಾಡಿದ್ದ ಶಿಷ್ಯ!

author-image
Gopal Kulkarni
Updated On
ದರ್ಶನ್ ಫೋಟೋ ವೈರಲ್ ಮಾಡಿದ ವೇಲು ಯಾರು? ನಾಗನಿಗಾಗಿ ಡಬಲ್ ಮರ್ಡರ್‌ ಮಾಡಿದ್ದ ಶಿಷ್ಯ!
Advertisment
  • ದರ್ಶನ್​ ಫೋಟೋ ವೈರಲ್​ ಮಾಡಿದ್ದಕ್ಕೆ ವೇಲುವಿನ ಮೇಲೆ ಹಲ್ಲೆ?
  • ಶಿಷ್ಯ ವೇಲುವಿನ ಮೇಲೆ ಜೈಲಿನಲ್ಲಿ ಅಟ್ಯಾಕ್​ ಮಾಡಿದ್ದ ವಿಲ್ಸನ್ ಗಾರ್ಡನ್‌ ನಾಗ
  • ಜೈಲಿನಲ್ಲಿ ಆರೋಪಿ ದರ್ಶನ್ ಫೋಟೋ ತೆಗೆದಿದ್ದು ನಾಗನ ಶಿಷ್ಯ ವೇಲು

ಬೆಂಗಳೂರು: ಜೈಲಿನಲ್ಲಿ ದರ್ಶನ್ ಬಿಂದಾಸ್​ ಆಗಿ ಸಿಗರೇಟ್ ಎಳೀತಾ, ಕಾಫಿ ಕುಡಿತಾ ಇದ್ದ ಫೋಟೋ ವೈರಲ್ ಆಗಿದ್ದು ಈಗ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ಸರ್ಕಾರದ ಮಟ್ಟದಲ್ಲಿ, ಪೊಲೀಸ್ ಅಧಿಕಾರಿಗಳ ಮಟ್ಟದಲ್ಲಿ ದೊಡ್ಡ ದೊಡ್ಡ ಬೆಳವಣಿಗೆಗಳು ಆಗುತ್ತಿವೆ. ಇದರ ನಡುವೆಯೇ ಫೋಟೋ ವೈರಲ್ ಮಾಡಿದವನ ಮೇಲೆ ಜೈಲಿನಲ್ಲಿ ಹಲ್ಲೆಯೂ ಕೂಡ ಆಗಿದೆ.

Advertisment

ಇದನ್ನೂ ಓದಿ:ಜೈಲಲ್ಲಿ ರಾಜಾತಿಥ್ಯ.. ದರ್ಶನ್ ಬೆನ್ನಿಗೆ ನಿಂತ ಸುಮಲತಾ ಅಂಬರೀಶ್ ಶಾಕಿಂಗ್ ಹೇಳಿಕೆ; ಏನಂದ್ರು?

ದರ್ಶನ್ ಫೋಟೋ ವೈರಲ್ ಮಾಡಿದ್ದು ವಿಲ್ಸನ್ ಗಾರ್ಡನ್ ಬಲಗೈ ಬಂಟ ಎಂದೇ ಖ್ಯಾತಿಯಾಗಿದ್ದ ವೇಲು. ವಿಲ್ಸನ್ ಗಾರ್ಡನ್ ನಾಗನಿಗಾಗಿ ವೇಲು ಮತ್ತೆ ಕಣ್ಣನ್ ಬ್ರದರ್ಸ್​ ಎರಡೆರಡು ಮರ್ಡರ್ ಮಾಡಿದ್ದಾರೆ. ನಾಗನನ್ನು ಬಿಡಲ್ಲ ಹೊಡಿತೀವಿ ಎಂದವರಿಗೆಲ್ಲಾ ಮುಹೂರ್ತವಿಟ್ಟು ಮುಗಿಸಿದ್ದಾರೆ. ಹೀಗಿದ್ದ ವೇಲುವಿನ ಮೇಲೆ ನಿನ್ನೆ ಜೈಲಿನಲ್ಲಿ ಅಟ್ಯಾಕ್ ಆಗಿದೆ. ಮಾಡಿದ್ದು ಬೇರೆ ಯಾರು ಅಲ್ಲ ಯಾರಿಗೆ ತನ್ನ ಪ್ರಾಣವನ್ನು ಲೆಕ್ಕಿಸದೇ ಎರಡೆರಡು ಮರ್ಡರ್ ಮಾಡಿದ್ನೋ ಅದೇ ವಿಲ್ಸನ್ ಗಾರ್ಡನ್ ನಾಗ.

publive-image

ಇದನ್ನೂ ಓದಿ:ಇದು ಗೋವಾ ಟ್ರಿಪಾ? ಜೈಲಿನ ಮತ್ತೊಂದು ಫೋಟೋ ವೈರಲ್‌; ರೌಡಿಗಳ ಬ್ರ್ಯಾಂಡೆಡ್ ಲೈಫ್‌ ಬಗ್ಗೆ ಕೇಳಿದ್ರೆ ಶಾಕ್‌ ಆಗ್ತೀರಾ!

Advertisment

ವೈರಲ್ ಆಗಿರುವ ದರ್ಶನ್ ಫೋಟೋ ತೆಗೆದಿದ್ದೇ ಈ ಕೈದಿ ವೇಲು. ಬಿಲ್ಡಪ್​ಗಾಗಿ ದರ್ಶನ್ ಹಾಗೂ ನಾಗ ಒಟ್ಟಿಗಿರುವ ಫೋಟೋ ಕ್ಲಿಕ್ಕಿಸಿದ್ದಾನೆ. ಅದನ್ನ ತಮ್ಮ ಹುಡುಗರಿಗೆ ಕಳಿಸಿ ಬಲ್ಡಪ್ ವಿಡಿಯೋ ಮಾಡಿಸಲಿಕ್ಕೆ ಹೇಳಿದ್ದಾನೆ . ಆದ್ರೆ ಏನೋ ಮಾಡಲು ಹೋಗಿ ಇನ್ನೇನೋ ಆಯ್ತು ಅಂತಾರಲ್ಲ ಆ ರೀತಿ ಆಗಿ ಹೋಗಿದೆ. ನಾಗ ಹಾಗೂ ಸಹೋದರ ಕಣ್ಣನ್ ಗಮನಕ್ಕೆ ತರದೇ ವೇಲು ಈ ಪ್ಲಾನ್ ಮಾಡಿದ್ದಾನೆ. ಆದ್ರೆ ಅಷ್ಟರೊಳಗೆ ಫೋಟೋ ವೈರಲ್ ಆಗಿ ಹೋಗಿದೆ. ತನಗಾಗಿ ಎರಡೆರಡು ಮರ್ಡರ್ ಮಾಡಿದವನ ಮೇಲೆಯೇ ನಾಗ ಹಲ್ಲೆ ಮಾಡಿದ್ದಾನೆ. ಫೋಟೋ ವೈರಲ್ ಆಗಿದ್ದಕ್ಕೆ, ಅದಾದ ಬಳಿಕ ನಡೆದ ಬೆಳವಣಿಗೆಗೆ ನಾಗ ಕುದ್ದು ಹೋಗಿ ವೇಲು ಮೇಲೆ ಹಲ್ಲೆ ಮಾಡಿದ್ದಾನೆ.

ಇದನ್ನೂ ಓದಿ:ಅಂತಿಂಥವನಲ್ಲ ಕುಳ್ಳ ಸೀನ.. ಡಿ.ಕೆ ಶಿವಕುಮಾರ್​ ಕೈಯಿಂದಲೇ ಸನ್ಮಾನ ಮಾಡಿಸಿಕೊಂಡಿದ್ದ ರೌಡಿಶೀಟರ್!

ನಾಗನಿಗಾಗಿ ಏನೇನು ಮಾಡಿದ್ದಾನೆ ಗೊತ್ತಾ ಈ ವೇಲು?
ನಾಗನನ್ನ ಬಿಡಲ್ಲ ಹೊಡದೇ ಹೊಡಿತೀನಿ ಅಂತ ಶಪಥ ತೊಟ್ಟಿದ್ದ ಶಾಂತಿನಗರ ಲಿಂಗ. 2020ರಲ್ಲಿ ಇಂತಹದೊಂದು ಗಟ್ಟಿ ಶಪಥ ಮಾಡಿದ್ದ ಲಿಂಗನನ್ನು, ಹಾಸನದ ಚನ್ನರಾಯಪಟ್ಟಣದಲ್ಲಿ ಭೀಕರ ಹತ್ಯೆ ಮಾಡಿದ್ದ ವೇಲು. ವೇಲು ಹಾಗೂ ಕಣ್ಣನ್ ಸೇರಿ ನಾಗನ 10 ಸಹಚರರನ್ನ ಆಗ ಅರೆಸ್ಟ್ ಮಾಡಲಾಗಿತ್ತು. ಲಿಂಗನ ಶಿಷ್ಯ ಸಿದ್ದಾಪುರ ಮಹೇಶನಿಂದ ನಾಗನ ಆಪ್ತನ ಕೊಲೆಯೊಂದು ನಡೆದು ಹೋಗಿತ್ತು. ಲಿಂಗನ ಹತ್ಯೆಗೆ ಪ್ರತೀಕಾರವಾಗಿ ಮದನ್ ಎಂಬುವವನ ಹತ್ಯೆ ಮಾಡಿದ್ದ ಮಹೇಶ್, ಮುಂದೆ ಜೈಲಲ್ಲಿಯೇ ಕುಳಿತು ನಾಗನ ಹತ್ಯೆಗೆ ಸ್ಕೆಚ್ ಹಾಕಿದ್ದ ಸಿದ್ದಾಪುರ ಮಹೇಶ್.

Advertisment

ಇದು ಕೂಡ ಕಣ್ಣನ್ ಹಾಗೂ ವೇಲು ಕಿವಿಗೆ ಬಿದ್ದಿತ್ತು. ಯಾವಾಗ ಮಹೇಶ್ ಜೈಲಿನಿಂದ ರಿಲೀಸ್ ಆಗ್ತಿದ್ದಾನೆ ಅಂತ ಗೊತ್ತಾಯ್ತೋ ಆಗಲೇ ಅಲರ್ಟ್​ ಆಗಿದ್ದ ವೇಲು. ಮಹೇಶ್ ಜೈಲಿನಿಂದ ರಿಲೀಸ್ ಆದ ದಿನವೇ ಜೈಲಿನ ಮುಂದೆಯೇ ಕಣ್ಣನ್ ಹಾಗೂ ವೇಲು ಸೇರಿ ಅವನ ಹೆಣ ಬೀಳಿಸಿದ್ದರು. ಮಹೇಶ್ ಹತ್ಯೆ ಮಾಡಿದ ಆರೋಪದ ಮೇಲೆ ಮತ್ತೆ ಜೈಲು ಸೇರಿದ್ದಾರೆ ಈ ವೇಲು ಬ್ರದರ್ಸ್‌.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment