newsfirstkannada.com

ಶೋಕಿ ಜೀವನ.. 3 ತಿಂಗಳ ಹಿಂದೆ ಮನೆ ಬಾಡಿಗೆಗೆ ಬಂದ ಮೋನಿಕಾ; ಕೊಲೆ ಮಾಡಿದ ಮೇಲೆ ಆಗಿದ್ದೇನು?

Share :

Published May 15, 2024 at 8:10pm

Update May 15, 2024 at 8:21pm

    ಖಾಸಗಿ ಕಂಪೆನಿಯಲ್ಲಿ ಡೇಟಾ ಎಂಟ್ರಿ ಕೆಲಸ ಮಾಡ್ತಿದ್ದ ಯುವತಿ ಮೋನಿಕಾ

    ಮಗು ಜೊತೆ ಕಾಲ ಕಳೆಯುತ್ತಿದ್ದ ಮನೆಯ ಒಡತಿಯ ಕೊಲೆ ಮಾಡಿ ನಾಟಕ

    4 ತಿಂಗಳು ಎಲ್ಲಾ ಅಂದುಕೊಂಡಂತೆ ಆಗಿತ್ತು, ಆಮೇಲೆ ಆಗಿದ್ದೇನು?

ಬೆಂಗಳೂರು: ಕೈಯಲ್ಲಿ ಕಾಸು ಇಲ್ಲದಾಗಲೇ ಕ್ರಿಮಿನಲ್​ ಐಡಿಯಾಗಳು ತಲೆಗೆ ಹೊಳೋಯೋದು. ಶೋಕಿ ಜೀವನಕ್ಕಾಗಿ ಮನೆ ಬಾಡಿಗೆ ಕೇಳಿಕೊಂಡು ಬಂದ ಯುವತಿ ಮನೆಯ ಒಡತಿ ಮಹಿಳೆಯನ್ನೇ ಕೊಲೆ ಮಾಡಿದ್ದಾಳೆ. ಈ ಘಟನೆ ಕೆಂಗೇರಿ ಠಾಣಾ ವ್ಯಾಪ್ತಿಯ ಕೋನಸಂದ್ರದಲ್ಲಿ ನಡೆದಿದೆ. ಮಹಿಳೆಯನ್ನು ಕೊಂದಿದ್ದ ಯುವತಿ ಸಿಕ್ಕಿದ್ದು ಹೇಗೆ, ಯುವತಿ ಮೂಲತಃ ಯಾವ ಊರಿನವಳು?

ಕೊಲೆ ಮಾಡಿದ ಮೊನಿಕಾ (24) ಮೂಲತಃ ಕೋಲಾರದ ಚಿಂತಾಮಣಿಯವಳು. ಎಸ್​ಎಸ್​ಎಲ್​ಸಿ ಮುಗಿಸಿದ್ದ ಮೊನಿಕಾ 1 ವರ್ಷದ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯೊಂದರಲ್ಲಿ ಡೇಟಾ ಎಂಟ್ರಿ ಕೆಲಸ ಮಾಡ್ತಿದ್ದಳು. ಈ ನಡುವೆ ಅದೇನ್ ಆಯ್ತೋ ಗೊತ್ತಿಲ್ಲ ಆ ಕೆಲಸನೂ ಬಿಟ್ಟಿದ್ದಳು ಅಂತಾ ಗೊತ್ತಾಗಿದೆ. ಹೀಗಿರಬೇಕಾದರೆ 3 ತಿಂಗಳ ಹಿಂದೆಯಷ್ಟೇ ದಿವ್ಯಾ ಅವರ ಮನೆಗೆ ಮೊನಿಕಾ ಬಾಡಿಗೆಗೆ ಬಂದಿದ್ದಳು.

ಇದನ್ನೂ ಓದಿ: ಮುಂಬೈ ಹೋರ್ಡಿಂಗ್​ ಬಿದ್ದ ಕೇಸ್​ಗೆ ಹೊಸ ಟ್ವಿಸ್ಟ್​.. ದುರಂತದ ಸ್ಥಳದಲ್ಲಿಂದು ಮೋದಿ ರೋಡ್​ ಶೋ

ಕೊಲೆಯಾದ ಮಹಿಳೆ ದಿವ್ಯಾ

ಗ್ರೌಂಡ್​ ಫ್ಲೋರ್​ನಲ್ಲಿ ಮೊನಿಕಾ ಬಾಡಿಗೆಗೆ ಇದ್ದರೆ ಮನೆ ಓನರ್ ದಿವ್ಯಾ ಮತ್ತು ಗುರುಮೂರ್ತಿ ದಂಪತಿ ಫಸ್ಟ್​ ಫ್ಲೋರ್​ನಲ್ಲಿ ವಾಸವಾಗಿದ್ದರು. ಸರ್ಪ್ರೈಸ್​ ಅಂದ್ರೆ 4 ತಿಂಗಳ ಹಿಂದಷ್ಟೇ ದಿವ್ಯಾ-ಗುರುಮೂರ್ತಿ ದಂಪತಿ ಈ ಮನೆಯ ಗೃಹ ಪ್ರವೇಶ ಮಾಡಿ ವಾಸವಾಗಿದ್ದರು. ಗೃಹ ಪ್ರವೇಶವಾದ 1 ತಿಂಗಳ ಬಳಿಕ ಮೊನಿಕಾ ಬಾಡಿಗೆಗೆ ಬಂದಿದ್ದಳು. ದಿವ್ಯಾ ಅವರ ಪತಿ ಗುರುಮೂರ್ತಿ ಕೆಂಗೇರಿ ಉಪನಗರದ ಶಿವನಪಾಳ್ಯದಲ್ಲಿ ಸಲೂನ್ ಶಾಪ್ ನಡೆಸುತ್ತಿದ್ದರೆ. ದಿವ್ಯಾ ಗೃಹಿಣಿಯಾಗಿದ್ದಳು. ಈ ದಂಪತಿಗೆ ಒಂದು ಮಗುವಿದ್ದು, ಅತ್ತೆ-ಮಾವ ಜೊತೆಯಲ್ಲೇ ವಾಸವಿದ್ದರು. ಪ್ರತಿನಿತ್ಯ ಗಂಡ, ಅತ್ತೆ-ಮಾವ ಕೆಲಸಕ್ಕೆ ಹೋಗ್ತಿದ್ರೆ ದಿವ್ಯಾ ಮತ್ತು ಮಗು ಮನೆಯಲ್ಲೇ ಇರ್ತಿದ್ದರು. ನಾಲ್ಕು ತಿಂಗಳು ಎಲ್ಲವೂ ಅಂದುಕೊಂಡಂತೆ ಹೋಗ್ತಿತ್ತು.. ಆದ್ರೆ ಮೇ 10ನೇ ತಾರೀಖು ಮನೆಯವರೆಲ್ಲ ಕೆಲಸಕ್ಕೆ ಹೋದ ಮೇಲೆ ಈ ಕಡೆ ಮನೆ ಒಡತಿ ದಿವ್ಯಾಳ ಕೊಲೆಯಾಗಿದೆ.

ಅಕ್ಕ-ಪಕ್ಕದವರಿಗೂ ಯಾವ ಸುಳಿವು ಇರಲ್ಲ

ಕೆಲಸಕ್ಕೆ ಹೋಗಿದ್ದ ಗಂಡ ಎಂದಿನಂತೆ ಮನೆಗೆ ಫೋನ್ ಮಾಡಿದ್ದ. ಎಷ್ಟೇ ಫೋನ್ ಮಾಡಿದ್ದರು ದಿವ್ಯಾ ಫೋನ್ ರಿಸೀವ್ ಮಾಡದೇ ಇದ್ದಾಗ ಅನುಮಾನಗೊಂಡ ಪತಿ, ಮನೆಗೆ ಬಂದು ನೋಡಿದಾಗ ದಿವ್ಯಾ ಹೆಣವಾಗಿ ಬಿದ್ದಿದ್ದಳು. ಆದ್ರೆ ದಿವ್ಯಾಳನ್ನ ಕೊಂದಿದ್ಯಾರು? ಯಾಕೆ ಕೊಲೆ ಮಾಡಿದ್ರು? ಏನಾಯ್ತು ಅನ್ನೋದು ಪತಿಗೇ ಗೊತ್ತೇ ಆಗಲ್ಲ. ಮನೆಗೆ ಯಾರ್ ಬಂದ್ರು? ಯಾರು ಹೋದ್ರು ಅನ್ನೋದು ಗೊತ್ತಾಗಲ್ಲ. ಅಕ್ಕ-ಪಕ್ಕದವರಿಗೂ ಯಾವ ಸುಳಿವು ಇರಲ್ಲ. ದಿವ್ಯಾಳ ಹತ್ಯೆಯಾಗಿದೇ ಅಂತ ಗೊತ್ತಾದ್ಮೇಲೆ ಕೆಂಗೇರಿ ಉಪನಗರ ಪೊಲೀಸರು ಸಹ ಸ್ಥಳಕ್ಕೆ ಬರ್ತಾರೆ.

ಇದನ್ನೂ ಓದಿ: ಅಂಬಾರಿ ಅರ್ಜುನನ್ನ ಎಲ್ರೂ ಮರೆತರೂ ಜಾಲೆಂಜಿಂಗ್ ಸ್ಟಾರ್ ಮರೆಯಲಿಲ್ಲ.. ದರ್ಶನ್ ಏನು ಮಾಡಿದ್ರು ಗೊತ್ತಾ?

ಕೊಲೆ ಮಾಡಿದ ಮೋನಿಕಾ

ದಿವ್ಯಾಳ ಮನೆ ಹಾಗೂ ಮನೆಯ ಸುತ್ತಾಮುತ್ತಲಿನವರ ಬಳಿ ಮಾಹಿತಿ ಕಲೆ ಹಾಕ್ತಾರೆ. ಆದ್ರೆ ಕೊಲೆ ಮಾಡಿದ್ದು ಯಾರು? ಯಾಕೆ ಕೊಲೆ ಮಾಡಿದ್ರು ಅನ್ನೋದು ಗೊತ್ತಾಗಲ್ಲ. ಇನ್​ಫ್ಯಾಕ್ಟ್​ ದಿವ್ಯಾ ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ಮೊನಿಕಾಳನ್ನ ಸಹ ವಿಚಾರಿಸಲಾಗುತ್ತೆ. ಆಗ ಮೊನಿಕಾ ತನಗೇನೂ ಗೊತ್ತೇ ಇಲ್ಲ ಅನ್ನೋ ರೀತಿ ರಿಯಾಕ್ಟ್​ ಮಾಡ್ತಾಳೆ. ಆಗಷ್ಟೇ ಹೊರಗಿಂದ ಬಂದವರಂತೆ ನಟಿಸುವ ಮೊನಿಕಾ ಕೊಲೆಯ ಬಗ್ಗೆ ತನಗೇನು ಗೊತ್ತಿಲ್ಲ, ಕಳ್ಳರು ಯಾರಾದರೂ ಬಂದಿರಬಹುದಾ ಅಂತ ಹೇಳ್ತಾಳೆ. ಆ ಕ್ಷಣಕ್ಕೆ ಮೋನಿಕಾಳನ್ನ ಅಷ್ಟು ಸೀರಿಯಸ್​ ಆಗಿ ತೆಗೆದುಕೊಳ್ಳದ ಪೊಲೀಸರು ಸರಿ ಅಂತ ತನಿಖೆ ಮುಂದುವರೆಸುತ್ತಾರೆ. ಹಂತಕಿಯನ್ನು ಕೊನೆಗೆ ಪತ್ತೆ ಹಚ್ಚಿದ್ದಾರೆ. ಮನೆಗೆ ಬಾಡಿಗೆಗೆ ಬಂದಿದ್ದ ಯುವತಿಯೇ ಮನೆ ಓನರ್​ನ್ನ ಕೊಲೆ ಮಾಡಿದ್ದಾಳೆ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶೋಕಿ ಜೀವನ.. 3 ತಿಂಗಳ ಹಿಂದೆ ಮನೆ ಬಾಡಿಗೆಗೆ ಬಂದ ಮೋನಿಕಾ; ಕೊಲೆ ಮಾಡಿದ ಮೇಲೆ ಆಗಿದ್ದೇನು?

https://newsfirstlive.com/wp-content/uploads/2024/05/BNG_MURDER_MONIKA_10.jpg

Load More