/newsfirstlive-kannada/media/post_attachments/wp-content/uploads/2024/09/Chennai-Murder-case.jpg)
ಕಿರಾತಕನ ಕೃತ್ಯಕ್ಕೆ ಸೆಕ್ಸ್ ವರ್ಕರ್ ಸ್ಮಶಾನ ಸೇರಿದ ಘಟನೆಯೊಂದು ನೆರೆಯ ರಾಜ್ಯದಲ್ಲಿ ನಡೆದಿದೆ. ಇವನೇ ಭೀಕರ ಕೊಲೆ ಆರೋಪಿ ಮಣಿಕಂಠ.
ಮಣಿಕಂಠ ಕಳೆದೆರಡು ದಿನಗಳ ಹಿಂದೆ ಬ್ರೋಕರ್ ಒಬ್ಬರ ಮೂಲಕ ಸೆಕ್ಸ್ ವರ್ಕರ್​ ಅನ್ನ ಮನೆಗೆ ಕರೆಸಿಕೊಂಡಿದ್ದ. ಬಂದವಳ ಹೆಸರು ದೀಪಾ, ಮನಾಲಿ ಮೂಲದವಳು. ಇಬ್ಬರು ಕೆಲ ಕಾಲ ಚೆನ್ನಾಗಿಯೇ ಇದ್ರೂ, ಬಳಿಕ ಹಣಕಾಸು ವಿಚಾರವಾಗಿ ಇಬ್ಬರ ನಡುವೆ ಫೈಟ್​ ಶುರುವಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿದೆ. ಈ ವೇಳೆ ಮಣಿಕಂದನ್, ದೀಪಾ ಮೇಲೆ ಸುತ್ತಿಗೆಯಿಂದ ಹೊಡೆದು ಹಲ್ಲೆ ಮಾಡಿ ಕೊಲೆಗೈದಿದ್ದಾನೆ.
ಸೂಟ್​​ಕೇಸ್​ನಲ್ಲಿ ನೆತ್ತರು ಹೊರಬರುತ್ತಿರೋದನ್ನ ಕಂಡ ಜನ
ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಮಹಿಳೆ ದೇಹವನ್ನ ತುಂಡು ತುಂಡಾಗಿ ಕತ್ತರಿಸಿ ಸೂಟ್‌ಕೇಸ್‌ನಲ್ಲಿ ತುಂಬಿಸಿದ್ದ, ಶವ ಪತ್ತೆಯಾಗಿದೆ. ದೊರೈಪಕ್ಕಂ ಪ್ರದೇಶದಲ್ಲಿ ಅನಾಥವಾಗಿ ಸೂಟ್‌ಕೇಸ್ ಒಂದು ಬಿದ್ದಿದ್ದು, ಅದರಿಂದ ರಕ್ತ ಸೋರುತ್ತಿದೆ ಎಂದು ಚೆನ್ನೈನ ಕುಮಾರನ್ ಕುಡಿಲ್‌ನ ನಿವಾಸಿಯೊಬ್ಬರು ಮುಂಜಾನೆ 5.30ರ ವೇಳೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2024/09/Chennai-Murder-case-2.jpg)
ಸೂಟ್‌ಕೇಸ್ ಪತ್ತೆಯಾದ ಜಾಗದಿಂದ ಕೇವಲ ನೂರು ಮೀಟರ್ ದೂರದಲ್ಲಿ ವಾಸವಿರುವ 23 ವರ್ಷದ ಮಣಿಕಂದನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು, ಸೂಟ್‌ಕೇಸ್ ಓಪನ್ ಮಾಡಿದಾಗ ಒಳಗೆ ಕತ್ತರಿಸಿ ಇರಿಸಿದ್ದ ಮಹಿಳೆಯ ಶವ ಕಂಡು ಆಘಾತಗೊಂಡಿದ್ದು, ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.
ಇದನ್ನೂ ಓದಿ: ತಿಮ್ಮಪ್ಪನ ಭಕ್ತರೊಂದಿಗೆ ಚೆಲ್ಲಾಟ; ತಿರುಪತಿ ಲಡ್ಡುಗಳಲ್ಲಿ ದನದ ಕೊಬ್ಬು ಪತ್ತೆಯಾಗಿದ್ದು ಹೇಗೆ?
ಆ ಪ್ರದೇಶದ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸಿದ್ದು, ಅದರ ಆಧಾರದಲ್ಲಿ ಮಣಿಕಂದನ್‌ನನ್ನು ಬಂಧಿಸಲಾಗಿದೆ. ದೀಪಾ ತನ್ನಿಂದ ಹೆಚ್ಚು ಹಣಕ್ಕೆ ಬೇಡಿಕೆ ಇರಿಸಿದ್ದರಿಂದ ಇಬ್ಬರ ನಡುವೆ ತೀವ್ರ ಜಗಳ ನಡೆದಿತ್ತು. ಬಳಿಕ ಕೋಪಗೊಂಡು ಸುತ್ತಿಗೆಯಿಂದ ತಲೆಗೆ ಬಾರಿಸಿ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಪೊಲೀಸರಿಗೆ ಮಣಿಕಂದನ್ ತಿಳಿಸಿದ್ದಾನೆ. ನಂತರ ಆಕೆಯ ದೇಹದ ಭಾಗಗಳನ್ನು ತುಂಡು ತುಂಡಾಗಿ ಕತ್ತರಿಸಿ, ಅದನ್ನು ಸೂಟ್‌ಕೇಸ್‌ನೊಳಗೆ ತುಂಬಿಸಿದ್ದ ಮಣಿ, ಸೂಟ್‌ಕೇಸ್ ಅನ್ನು ರಸ್ತೆ ಬದಿಯಲ್ಲಿ ಎಸೆದು ಪರಾರಿಯಾದೆ ಎಂಬುದನ್ನ ವಿಚಾರಣೆಯಲ್ಲಿ ಹೇಳಿದ್ದಾನೆ.
ಇದನ್ನೂ ಓದಿ: ಗರ್ಭಿಣಿ ಮೈ ಮೇಲೆ ಎಗರಿದ ಶ್ವಾನ; ನಾಯಿ ಮಾಲೀಕನಿಗೆ ಬಿದ್ದ ದಂಡ ಎಷ್ಟು ಗೊತ್ತಾ?
ದೀಪಾ ಸಹೋದರ ಆಕೆಗಾಗಿ ಮನೆಯಲ್ಲಿ ಕಾಯುತ್ತಿದ್ದು, ವಾಪಸಾಗದಿದ್ದರಿಂದ ಫೋನ್ ಮಾಡಿ ಮಾಡಿ ಸಾಕಾಗಿದೆ. ಪೊಲೀಸರು ಫೈಂಡ್ ಮೈ ಡಿವೈಸ್ ಌಪ್ ಬಳಸಿ ಮೊಬೈಲ್ ಫೋನ್ ಹುಡುಕಿದಾಗ ಅದು ದೊರೈಪಕ್ಕಂ ಸಮೀಪ ಕಂಡುಬಂದಿದೆ. ಪೊಲೀಸರ ಸೂಚನೆಯಂತೆ ಮನಾಲಿ ಪೊಲೀಸ್ ಠಾಣೆಯಲ್ಲಿ ಸಹೋದರ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾನೆ. ಈ ನಡುವೆ ದೊರೈಪಕ್ಕಂನಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದರಿಂದ ಪೊಲೀಸರು ದೂರುದಾರನನ್ನು ಸಂಪರ್ಕಿಸಿದ್ದರು. ಅದು ತನ್ನ ಸಹೋದರಿಯದ್ದೇ ಎಂದು ಅತ ಗುರುತಿಸಿದ್ದಾನೆ.
ಒಟ್ಟಾರೆ, ಮಣಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಣಿ ಹೇಳಿರೋ ವಿವರನ್ನ ದಾಖಲಿಸಿಕೊಂಡಿದ್ದಾರೆ. ಅವನು ಜೈಲಿಗೆ ಹೋಗೋ ಮೂಹೂರ್ತ ಕೂಡ ಫಿಕ್ಸ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us