Accident: ಕಾರು, ಸ್ಕೂಟಿ ನಡುವೆ ಭೀಕರ ರಸ್ತೆ ಅಪಘಾತ.. ಮಹಿಳೆ ಸಾವು

author-image
Ganesh
Updated On
Accident: ಕಾರು, ಸ್ಕೂಟಿ ನಡುವೆ ಭೀಕರ ರಸ್ತೆ ಅಪಘಾತ.. ಮಹಿಳೆ ಸಾವು
Advertisment
  • ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಜಖಂ
  • ಅಪಘಾತವಾಗಿ ನಡು ರಸ್ತೆಯಲ್ಲೇ ಪಲ್ಟಿ ಹೊಡೆದ ಕಾರು
  • ಕಾರು ಚಾಲಕ ಪೊಲೀಸ್ ವಶಕ್ಕೆ, ತನಿಖೆ ಆರಂಭ

ಬೆಂಗಳೂರು: ಕಾರು ಹಾಗೂ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಮಹಿಳೆ ಸಾವನ್ನಪ್ಪಿದ್ದಾಳೆ. ಹೆಬ್ಬಾಳು ಬಡಾವಣೆ ನಿವಾಸಿ ರಾಧಾ (34) ದುರ್ದೈವಿ.

ಮೈಸೂರು ಕೆ.ಆರ್‘.ಎಸ್ ರಸ್ತೆಯಲ್ಲಿ ಈ ಭೀಕರ ಅಪಘಾತ ನಡೆದಿದೆ. ವೇಗವಾಗಿ ಬಂದ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ಹೊಡೆತಕ್ಕೆ ಕಾರು ನಡು ರಸ್ತೆಯಲ್ಲಿ ಪಲ್ಟಿ ಹೊಡೆದಿದೆ. ಮಾತ್ರವಲ್ಲ ಕಾರಿನ ಮುಂದಿನ ಟೈರ್ ಕಳಚಿ ಬಿದ್ದಿದೆ. ಅಲ್ಲದೇ ಕಾರಿನ ಮುಂಭಾಗ ಸಂಪೂರ್ಣ ಸಖಂಗೊಂಡಿದೆ.

ಇದನ್ನೂ ಓದಿ:ಮಳೆ ಬರುವ ವೇಳೆ ಘೋರ ದುರಂತ.. ಸಿಡಿಲು ಬಡಿದು 12 ಮಂದಿ ದಾರುಣ ಸಾವು

ದುರ್ಘಟನಾ ಸ್ಥಳಕ್ಕೆ ಮೈಸೂರಿನ ವಿವಿ ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸ್ತಿದ್ದಾರೆ. ಕಾರು ಹಾಗೂ ಚಾಲಕನನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಕಾರು ಚಾಲಕನ ವಿಚಾರಣೆಗೆ ಒಳಪಡಿಸಿದ್ದು, ಅಪಘಾತಕ್ಕೆ ಕಾರಣವನ್ನು ಪತ್ತೆ ಹಚ್ಚತ್ತಿದ್ದಾರೆ. ಇತ್ತ ಮೃತಳ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಇದನ್ನೂ ಓದಿ:ಇವತ್ತು ಮುಂಬೈ ವಿರುದ್ಧ ಲಕ್ನೋ ಗೆದ್ದರೆ RCB ಪ್ಲೇ ಆಫ್ ಹಾದಿಗೆ ಪೆಟ್ಟು ಬೀಳುತ್ತಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment