newsfirstkannada.com

20 ವರ್ಷಕ್ಕೆ ಸಾವು.. ಯಂಗ್ ಪ್ಲೇಯರ್ ನಿಧನದಿಂದ ಬೆಚ್ಚಿ ಬಿದ್ದ ಕ್ರಿಕೆಟ್ ಜಗತ್ತು, ಅಸಲಿಗೆ ಆಗಿದ್ದೇನು?

Share :

Published May 3, 2024 at 6:58pm

Update May 3, 2024 at 7:03pm

    ಯುವ ಪ್ಲೇಯರ್ ನಿಧನದಿಂದ ಸಂತಾಪ ಸೂಚಿಸುತ್ತಿರುವ ಆಟಗಾರರು

    ಕೇವಲ 20ನೇ ವಯಸ್ಸಿನಲ್ಲೇ ದುರಂತ ಸಾವು, ಇದಕ್ಕೆ ಕಾರಣ ತಿಳಿದಿಲ್ಲ!

    ಸಾವಿನ ಹಿಂದಿನ ದಿನ ಮೂರು ವಿಕೆಟ್​ ಪಡೆದು ಸಂಭ್ರಮಿಸಿದ್ದ ಪ್ಲೇಯರ್

ಇಂಗ್ಲೆಂಡ್​ನ ದೇಶಿಯ ಕ್ರಿಕೆಟ್​ನ ಯುವ ಸ್ಪಿನ್ನರ್ ಹಾಗೂ ವೋರ್ಸೆಸ್ಟರ್‌ಶೈರ್ ಸಂಸ್ಥೆಯ ಪ್ಲೇಯರ್ ಜೋಶ್ ಬೇಕರ್ ಕೇವಲ 20 ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಇನ್ನು ಸಾವಿಗೆ ಕಾರಣ ಏನು ಎಂಬುದು ನಿಖರವಾಗಿ ತಿಳಿದು ಬಂದಿಲ್ಲ.

ಯಂಗ್ ಎಡಗೈ ಸ್ಪಿನ್ನರ್ ಜೋಶ್ ಬೇಕರ್ ಅವರ ನಿಧನದ ಸುದ್ದಿಯಿಂದ ಕ್ರಿಕೆಟಿಗರು, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ, ಕೌಂಟಿ ಕ್ಲಬ್‌ಗಳು ಮತ್ತು ಮಾಜಿ ಕ್ರಿಕೆಟರ್ಸ್​ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ತಮ್ಮ ಸಾವಿನ ಹಿಂದಿನ ದಿನ ಟೆಸ್ಟ್​ ಪಂದ್ಯವೊಂದರಲ್ಲಿ 3 ವಿಕೆಟ್​ ಪಡೆದು ಸಂಭ್ರಮಿಸಿದ್ದರು. ಆದರೆ ಮರುದಿನ ದುರಂತ ಸಾವನ್ನಪ್ಪಿದ್ದಾರೆ. 2021 ರಲ್ಲಿ ವೋರ್ಸೆಸ್ಟರ್‌ಶೈರ್‌ಗೆ ಪಾದಾರ್ಪಣೆ ಮಾಡಿದ್ದ ಜೋಶ್, ಕೌಂಟಿ ಕ್ಲಬ್‌ಗಾಗಿ ಒಟ್ಟು 47 ಪಂದ್ಯಗಳನ್ನು ಆಡಿ 70 ವಿಕೆಟ್​ಗಳನ್ನ ಗಳಿಸಿದ್ದರು. ಉತ್ತಮವಾದ ಬ್ಯಾಟಿಂಗ್​ ಕೂಡ ಮಾಡುತ್ತಿದ್ದ ಕಾರಣ ಆಲ್​ರೌಂಡರ್ ಪಟ್ಟ ಕೂಡ ದಕ್ಕಿಸಿಕೊಂಡಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಯಶ್​ ಟಾಕ್ಸಿಕ್​​ನಿಂದ ಬಾಲಿವುಡ್​ ಬ್ಯೂಟಿ ಔಟ್​.. ಕರೀನಾ ಹೊರ ಬರಲು ಕಾರಣ?

ಇದನ್ನೂ ಓದಿ: ಮಂಡ್ಯ, ಮೈಸೂರಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ; ವರುಣನ ಅಬ್ಬರಕ್ಕೆ ಜನ ಶಾಕ್; ಎಲ್ಲೆಲ್ಲಿ ಏನಾಯ್ತು? 

ಜೋಶ್ ಬೇಕರ್ ಸಾವನ್ನಪ್ಪಿದ್ದಾರೆ ಎಂದು ವೋರ್ಸೆಸ್ಟರ್‌ಶೈರ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ತಂಡದ ಸಹ ಆಟಗಾರನಿಗಿಂತ ಹೆಚ್ಚು ಸ್ಕಿಲ್​ಗಳನ್ನು ಹೊಂದಿದ್ದರು. ನಮ್ಮ ಟೀಮ್​ನ ಅವಿಭಾಜ್ಯ ಅಂಗವಾಗಿ ಕೆಲವು ವರ್ಷಗಳಿಂದ ಆಡಿಕೊಂಡು ಬರುತ್ತಿದ್ದರು. ಸದ್ಯ ಅವರು ನಿಧನ ಹೊಂದಿರುವುದು ನಮಗೆಲ್ಲರಿಗೂ ತೀವ್ರ ದುಃಖ ತಂದಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

20 ವರ್ಷಕ್ಕೆ ಸಾವು.. ಯಂಗ್ ಪ್ಲೇಯರ್ ನಿಧನದಿಂದ ಬೆಚ್ಚಿ ಬಿದ್ದ ಕ್ರಿಕೆಟ್ ಜಗತ್ತು, ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/05/JOSH_BAKER.jpg

Load More