newsfirstkannada.com

ಗಿಲ್ ಅಲ್ಲ.. ಈತ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ಒಂದೇ ವರ್ಷಕ್ಕೆ ಸೂಪರ್ ಸ್ಟಾರ್..!

Share :

Published September 18, 2024 at 9:19am

    ಕ್ರಿಕೆಟ್​ ಲೋಕದ ನೆಕ್ಸ್ಟ್​ ಸೂಪರ್​ ಸ್ಟಾರ್​ ಯಾರು?

    ಶುಭ್​ಮನ್ ಗಿಲ್​ ಹಿಂದಿಕ್ಕಿದ ಈ ಆಟಗಾರ ಯಾರು?

    ಇವರ​ ಆಟಕ್ಕೆ ಆಸಿಸ್​ ಆಟಗಾರರ ಉಘೇ ಉಘೇ..!

ವಿಶ್ವ ಕ್ರಿಕೆಟ್​ ಲೋಕದ ನೆಕ್ಸ್ಟ್​ ಸೂಪರ್​ ಸ್ಟಾರ್​ ಯಾರು? ಇಂಟರ್​​ನ್ಯಾಷನಲ್​​ ಕ್ರಿಕೆಟ್​ಗೆ ಡೆಬ್ಯೂ ಮಾಡಿದ ಹಲವು ಯಂಗ್​​ಸ್ಟರ್ಸ್​​​ ಹೆಸರು ಸದ್ಯ ಈ ರೇಸ್​​ನಲ್ಲಿದೆ. ಇವರೆನ್ನೆಲ್ಲಾ ಟೀಮ್​ ಇಂಡಿಯಾದ ಟೆರರ್​​ ಬ್ಯಾಟ್ಸ್​​ಮನ್​​ ಯಶಸ್ವಿ ಜೈಸ್ವಾಲ್​ ಬೀಟ್​ ಮಾಡಿದ್ದಾರೆ. ಜೈಸ್ವಾಲ್​ ಬೆಂಕಿ ಆಟಕ್ಕೆ ವೈರಿ ತಂಡಗಳ ಆಟಗಾರರೇ ಬೆರಗಾಗಿದ್ದಾರೆ. ಟೀಮ್​ ಇಂಡಿಯನ್ಸ್​​ ಅಂದ್ರೆ ಉರಿದು ಬೀಳೋ ಆಸಿಸ್​ ಆಟಗಾರರು ಉಘೇ.. ಉಘೇ ಎಂದಿದ್ದಾರೆ.

ಯಶಸ್ವಿ ಜೈಸ್ವಾಲ್​. ಟೀಮ್​ ಇಂಡಿಯಾದ ನಯಾ ಸೆನ್ಸೇಷನ್​​.. ವಯಸ್ಸು ಇನ್ನೂ 23ರ ಗಡಿಯನ್ನ ದಾಟಿಲ್ಲ. ಟೀಮ್​ ಇಂಡಿಯಾ ಪರ ಡೆಬ್ಯೂ ಮಾಡಿ ಜಸ್ಟ್​​ 1 ವರ್ಷ ಆಯ್ತಷ್ಟೇ. ಇಂಟರ್​​ನ್ಯಾಷನಲ್​ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದ ಈ ಒಂದು ವರ್ಷದ ಅವಧಿಯಲ್ಲಿ, ಜೈಸ್ವಾಲ್​​ ತನ್ನ ಟೆರರ್​ ಬ್ಯಾಟಿಂಗ್​ನಿಂದ ಸೃಷ್ಟಿಸಿರೋ ಹವಾ ಅಷ್ಟಿಷ್ಟಲ್ಲ..!

ಇದನ್ನೂ ಓದಿ:ಬಾಂಗ್ಲಾ ಬೇಟೆಗೆ ಚಕ್ರವ್ಯೂಹ; 5 ವರ್ಷದ ಹಿಂದಿನ ತಂತ್ರ ಪ್ರಯೋಗಿಸಲು ಪ್ಲಾನ್.. ಏನದು?

ಜೈಸ್ವಾಲ್​ ಆಟಕ್ಕೆ ಕ್ರಿಕೆಟ್​ ಲೋಕ ಕ್ಲೀನ್​ಬೋಲ್ಡ್​
ಕಳೆದ ವರ್ಷ ಟೀಮ್​ ಇಂಡಿಯಾಗೆ ಎಂಟ್ರಿ ಕೊಟ್ಟು 9 ಟೆಸ್ಟ್​, 23 ಟಿ20 ಪಂದ್ಯವನ್ನಾಡಿರೋ ಜೈಸ್ವಾಲ್​, ಏಕದಿನ ಮಾದರಿಗೆ ಇನ್ನಷ್ಟೇ ಡೆಬ್ಯೂ ಮಾಡಬೇಕಿದೆ. ಆಡಿರೋ ಈ 32 ಅಂತಾರಾಷ್ಟ್ರೀಯ ಪಂದ್ಯಗಳಲ್ಲೇ ಜೈಸಾಲ್​ ತನ್ನ ತಾಕತ್ತನ್ನ ನಿರೂಪಿಸಿದ್ದಾರೆ. ಕನ್ಸಿಸ್ಟೆಂಟ್​ ಆಟದಿಂದ ಬೌಲರ್​​ಗಳ ಮೇಲೆ ದಂಡೆತ್ತಿ ಹೋಗಿ ರನ್​ ಕೊಳ್ಳೆ ಹೊಡೆದಿರೋ ಜೈಸ್ವಾಲ್​ ಇದೀಗ ವಿಶ್ವ ಕ್ರಿಕೆಟ್​​ನ ಸೂಪರ್​ ಸ್ಟಾರ್​ ಆಗುವತ್ತ ದಿಟ್ಟ ಹೆಜ್ಜೆ ಇಡ್ತಿದ್ದಾರೆ. ಅದೂ ಭಾರತ ಮತ್ತೊಬ್ಬ ಯಂಗ್​​ಸ್ಟರ್​​ ಶುಭ್​ಮನ್​ ಗಿಲ್​ನ ಹಿಂದಿಕ್ಕಿ.

ಶುಭ್​ಮನ್​ ಗಿಲ್​​ – ಯಶಸ್ವಿ ಜೈಸ್ವಾಲ್​ ನಡುವೆ ಜೈಸ್ವಾಲ್​ ಹೆಸರನ್ನೇ ಆಸಿಸ್​​ ಆಟಗಾರರು ಆಯ್ಕೆ ಮಾಡಿರೋದ್ರಲ್ಲಿ ಉತ್ಪ್ರೇಕ್ಷೆ ಏನಿಲ್ಲ ಬಿಡಿ. ತಮ್ಮ ಟೆರರ್​ ಬ್ಯಾಟಿಂಗ್​ನಿಂದ ಜೈಸ್ವಾಲ್ ಮಾಡಿರೋ ಮೋಡಿ ಹಂಗಿದೆ.

9 ಟೆಸ್ಟ್​​​, ಸಾವಿರ ರನ್​, 2 ದ್ವಿಶತಕ, 1 ಶತಕ
ಟೆಸ್ಟ್​ ಕ್ರಿಕೆಟ್​ನಲ್ಲಿ ಯಶಸ್ವಿ ಜೈಸ್ವಾಲ್​ ಮಾಡಿರೋ ಸಾಧನೆಯಿದು. ಆಡಿದ 9 ಟೆಸ್ಟ್​​ಗಳಲ್ಲಿ ಬೆಂಕಿ ಬ್ಯಾಟಿಂಗ್​ ನಡೆಸಿರೋ ಜೈಸ್ವಾಲ್​​, ಬರೋಬ್ಬರಿ 68.53ರ ಸರಾಸರಿಯಲ್ಲಿ ರನ್​ ಕೊಳ್ಳೆ ಹೊಡೆದಿದ್ದಾರೆ. 2 ಡಬಲ್​ ಸೆಂಚುರಿ, 1 ಸೆಂಚುರಿ ಸಹಿತ ಬರೋಬ್ಬರಿ 1028 ರನ್​ಗಳಿಸಿದ್ದಾರೆ. ಅಂದ್ಹಾಗೆ ಈ ಸಾವಿರ ರನ್​​​ಗಳ ಪೈಕಿ 700 ರನ್​ಗಳು ಬಂದಿರೋದು ಬಲಿಷ್ಟ ಬೌಲಿಂಗ್​ ಅಟ್ಯಾಕ್​, ಸಾಲಿಡ್​​ ಫೀಲ್ಡರ್​​ಗಳನ್ನ ಹೊಂದಿರೋ ಇಂಗ್ಲೆಂಡ್​​ ತಂಡದ ಎದುರು. ಜೈಸ್ವಾಲ್​ ನೆಕ್ಸ್ಟ್​​ ಸೂಪರ್​​ ಸ್ಟಾರ್​​ ಅನ್ನೋದಕ್ಕೆ ಟೆಸ್ಟ್​​ನಲ್ಲಿ ಮಾಡಿರೋ ಈ ಸಾಧನೆಗಿಂತ ಬೇಕಾ?

ಇದನ್ನೂ ಓದಿ:ರೋಹಿತ್, ಕೊಹ್ಲಿಗೆ ಶಾಕ್ ಕೊಟ್ಟ ಬೂಮ್ ಬೂಮ್​ ಬೂಮ್ರಾ.. ಕಳಚಿ ಬಿತ್ತು ಫೇಮಸ್ ಟ್ಯಾಗ್​ಲೈನ್..!

23 T20.. 1 ಶತಕ.. 164.31ರ ಭಯಾನಕ ಸ್ಟ್ರೈಕ್​ರೇಟ್​​
ರೆಡ್​ ​ಬಾಲ್​ ಕ್ರಿಕೆಟ್​ನಲ್ಲಿ​ ಮಾತ್ರವಲ್ಲ, ವೈಟ್​​ಬಾಲ್​ ಕ್ರಿಕೆಟ್​ನಲ್ಲೂ ಜೈಸ್ವಾಲ್​ ಬ್ಯಾಟ್​ ಝಳಪಿಸಿದ್ದಾರೆ. ಆಡಿರೋ 23 ಟಿ20 ಪಂದ್ಯಗಳಲ್ಲಿ ಬೌಂಡರಿ-ಸಿಕ್ಸರ್​ ಸಿಡಿಸಿ ಬೌಲರ್​​ಗಳ ಚಿಂದಿ ಉಡಾಯಿಸಿದ್ದಾರೆ. ಟಿ20 ಕ್ರಿಕೆಟ್​ನಲ್ಲೂ 1 ಶತಕ ಚಚ್ಚಿರೋ ಜೈಸ್ವಾಲ್​, 5 ಹಾಫ್​ ಸೆಂಚುರಿ ಸಹಿತ ಒಟ್ಟು 723 ರನ್​ ಸಿಡಿಸಿದ್ದಾರೆ. ಜೈಸ್ವಾಲ್​ ಬಿರುಗಾಳಿಯ ಬ್ಯಾಟಿಂಗ್​​ಗೆ 164.31ರ ಭಯಾನಕ ಸ್ಟ್ರೈಕ್​​ರೇಟ್​​ ಸಾಕ್ಷಿ.

ಹಿಟ್​​ಮ್ಯಾನ್​ ರೋಹಿತ್​ ಶರ್ಮಾಗೂ ಟಕ್ಕರ್
ರೋಹಿತ್​ ಶರ್ಮಾ, ಸದ್ಯ ವಿಶ್ವ ಕ್ರಿಕೆಟ್​ ಲೋಕದ ಸಿಕ್ಸರ್​ ಕಿಂಗ್​ ಎಂದೇ ಫೇಮಸ್​​. ಈ ಸಿಕ್ಸರ್​ ಕಿಂಗ್​ಗೂ ಯಶಸ್ವಿ ಜೈಸ್ವಾಲ್​ ಟಕ್ಕರ್​ ಕೊಟ್ಟಿದ್ದಾರೆ. ಕಳೆದ ವರ್ಷದಲ್ಲಿ ರೋಹಿತ್​ ಶರ್ಮಾ 20 ಪಂದ್ಯವನ್ನಾಡಿ 30 ಸಿಕ್ಸರ್​ ಸಿಡಿಸಿದ್ರೆ, ಜೈಸ್ವಾಲ್​ ಆಡಿರೋ 14 ಪಂದ್ಯಗಳಲ್ಲೇ 42 ಸಿಕ್ಸರ್​ ಸಿಡಿಸಿ ಮಿಂಚಿದ್ದಾರೆ. ಸಿಕ್ಕ ಕೆಲವೇ ಅವಕಾಶಗಳಲ್ಲಿ ಜೈಸ್ವಾಲ್ ಬ್ಯಾಟ್​ ಹಿಡಿದು ಘರ್ಜಿಸಿದ್ದಾರೆ.

ಏಕದಿನಕ್ಕೆ ಕಾಲಿಡಲು ಕಾತುರ
ಟೆಸ್ಟ್​ ಹಾಗೂ ಟಿ20ಯಲ್ಲಿ ಆರ್ಭಟಿಸಿರೋ ಯಶಸ್ವಿ ಜೈಸ್ವಾಲ್​ ಏಕದಿನ ಫಾರ್ಮೆಟ್​ಗೆ ಕಾಲಿಡಲು ಕಾದು ಕುಳಿತಿದ್ದಾರೆ. ಒನ್​ ಡೇ ಫಾರ್ಮೆಟ್​ನಲ್ಲಿ ಮಿಂಚು ಹರಿಸೋ ಎಲ್ಲಾ ಸಾಮರ್ಥ್ಯವಿದ್ರೂ, ಸ್ಥಾನಕ್ಕಿರೋ ಪೈಪೋಟಿಯ ನಡುವೆ ಜೈಸ್ವಾಲ್​ಗೆ ಅವಕಾಶ ಸಿಕ್ಕಿಲ್ಲ. ಒಂದೇ ಒಂದು ಚಾನ್ಸ್​​ಗಾಗಿ ಜೈಸ್ವಾಲ್​ ಹಸಿದ ಹುಲಿಯಂತೆ ಕಾದು ಕುಳಿತಿದ್ದಾರೆ. ಟೆಸ್ಟ್​​, ಟಿ20ಯಲ್ಲಿ ಮಾಡಿರೋ ಸಾಧನೆ ನೋಡಿದ್ರೆ ಏಕದಿನದಲ್ಲಿ ಅವಕಾಶ ಸಿಕ್ರೆ ಸ್ಥಾನ ಸೀಲ್​ ಮಾಡದೆ ಬಿಡಲ್ಲ ಬಿಡಿ.

ಇದನ್ನೂ ಓದಿ:ಬಾಂಗ್ಲಾಗೆ ಎಚ್ಚರಿಕೆ ಕೊಟ್ಟ ಕನ್ನಡಿಗ KL ರಾಹುಲ್; ಟೀಂ ಇಂಡಿಯಾ ಗೆಲುವಿನ ಸೂತ್ರ ಹೇಗಿದೆ..?

ಮುಂಬರುವ ಬಾಂಗ್ಲಾ ವಿರುದ್ಧ ಟೆಸ್ಟ್​ ಸರಣಿಗೆ ಜೈಸ್ವಾಲ್​ ಸಮಾರಾಭ್ಯಾಸ ಆರಂಭಿಸಿದ್ದಾರೆ. ಚೆನ್ನೈನ ಚೆಪಾಕ್ ಅಂಗಳದಲ್ಲಿ ಭರ್ಜರಿ ಅಭ್ಯಾಸ ನಡೆಸ್ತಿರೋ ಜೈಸ್ವಾಲ್​, ಬಾಂಗ್ಲಾ ಟೈಗರ್ಸ್​​ ಭೇಟೆಯಾಡೋ ರಣೋತ್ಸಾಹದಲ್ಲಿದ್ದಾರೆ. ಗುರುವಾರದಿಂದ ಆರಂಭವಾಗೋ ಟೆಸ್ಟ್​​ ಸರಣಿಯಲ್ಲಿ ಜೈಸ್ವಾಲ್​ ಬ್ಯಾಟ್​ ಮತ್ತಷ್ಟು ಸೌಂಡ್​ ಮಾಡಲಿ ಅನ್ನೋದು ಕ್ರಿಕೆಟ್​ ಪ್ರೇಮಿಗಳ ಆಶಯ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಗಿಲ್ ಅಲ್ಲ.. ಈತ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ಒಂದೇ ವರ್ಷಕ್ಕೆ ಸೂಪರ್ ಸ್ಟಾರ್..!

https://newsfirstlive.com/wp-content/uploads/2024/09/YASHASWI-2.jpg

Load More