Advertisment

ನಡು ರಸ್ತೆಯಲ್ಲಿ ಕಂತೆ ಕಂತೆ ನೋಟುಗಳ ಸುರಿಮಳೆಗೈದ ಖ್ಯಾತ ಯೂಟ್ಯೂಬರ್ -Video

author-image
Ganesh
Updated On
ನಡು ರಸ್ತೆಯಲ್ಲಿ ಕಂತೆ ಕಂತೆ ನೋಟುಗಳ ಸುರಿಮಳೆಗೈದ ಖ್ಯಾತ ಯೂಟ್ಯೂಬರ್ -Video
Advertisment
  • ನಡು ರಸ್ತೆಯಲ್ಲಿ ಹಣದ ರಾಶಿ ಸುರಿದು ಕೆಂಗಣ್ಣಿಗೆ ಗುರಿ
  • ಯೂಟ್ಯೂಬರ್ ವಿರುದ್ಧ ಜನರು ರೊಚ್ಚಿಗೆದ್ದಿದ್ದು ಯಾಕೆ?
  • ಎಷ್ಟು ಹಣ ಎಸೆದ? ನೋಡಲೇಬೇಕಾದ ವಿಡಿಯೋ ಇಲ್ಲಿದೆ

ಇನ್​ಸ್ಟಾಗ್ರಾಮರ್, ಯೂಟ್ಯೂಬರ್ ಸಂಚಾರ ದಟ್ಟಣೆ ಇರುವ ನಡು ರಸ್ತೆಯಲ್ಲಿ ಹಣವನ್ನ ಮೇಲಿಂದ ಬೀಸಾಡಿದ ಪ್ರಸಂಗ ಹೈದರಾಬಾದ್​​ನ ಕುಕಟಪಳ್ಳಿಯಲ್ಲಿ ನಡೆದಿದೆ. ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಹಣವನ್ನು ಆಯ್ದುಕೊಳ್ಳಲು ಜನ ಮುಗಿಬಿದ್ದಿದ್ದಾರೆ.

Advertisment

ಪರಿಣಾಮ ಜನಜಂಗುಳಿ ಹೆಚ್ಚಾಗಿ ಸರಣಿ ಅಪಘಾತ ಮತ್ತು ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಆಗಿದೆ. ಇದು ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದ್ದು, ಯೂಟ್ಯೂಬರ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಕೇಳಿಬಂದಿದೆ.

ಇದನ್ನೂ ಓದಿ:ಕಳೆದ ಬಾರಿ ಹಸರಂಗ ಯಾಕೆ IPL ಆಡಲಿಲ್ಲ? ಇಲ್ಲೂ ಇದೆ ಆರ್​ಸಿಬಿಯ ಒಂದು ನಿರ್ಧಾರದ ಕತೆ..!

Advertisment

ಹರ್ಷ ಅಲಿಯಾಸ್ ಮಹದೇವ್​ ರಸ್ತೆಯಲ್ಲಿ ಹುಚ್ಚಾಟ ಮೆರೆದಿರುವ ಯೂಟ್ಯೂಬರ್​. ವೈರಲ್ ಆಗಿರುವ ಒಂದು ವಿಡಿಯೋದಲ್ಲಿ ಬೈಕ್​ನಲ್ಲಿ ಸ್ಟೈಲೀಶ್ ಆಗಿ ಬರುವ ಯೂಟ್ಯೂಬರ್​ ನಿಂತು ಹಣವನ್ನು ಗಾಳಿಯಲ್ಲಿ ತೂರಿದ್ದಾನೆ. ಇನ್ನೊಂದು ವಿಡಿಯೋದಲ್ಲೂ ನಡು ರಸ್ತೆಯಲ್ಲಿ ನಿಂತ ಹಣ ಎಸೆದು ಬಂದಿದ್ದಾನೆ. ಮತ್ತೊಂದು ವಿಡಿಯೋದಲ್ಲೂ ಗಾಳಿಯಲ್ಲಿ ಹಣವನ್ನು ತೂರಿದ್ದಾನೆ. ಈ ವೇಳೆ ಜನರು ದುಡ್ಡನ್ನು ಆರಿಸಿಕೊಳ್ಳಲು ನಾಮುಂದು, ತಾಮುಂದು ಎಂದು ಮುಗಿ ಬಿದ್ದಿದ್ದಾರೆ. ಆ ವಿಡಿಯೋ ಇಲ್ಲಿದೆ.

ಇದನ್ನೂ ಓದಿ:Breaking: ಅನಿಲ್ ಅಂಬಾನಿಗೆ ಬಿಗ್​ ಶಾಕ್.. ಷೇರು ಮಾರುಕಟ್ಟೆಯಿಂದ 5 ವರ್ಷ ಬ್ಯಾನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment