newsfirstkannada.com

14 ವರ್ಷದ ಸ್ನೇಹ, 7 ವರ್ಷದ ಪ್ರೀತಿ; ಯುವ ರಿಲೀಸ್‌ಗೂ ಮೊದಲೇ ಗುರು, ಶ್ರೀದೇವಿ ಬೇರೆ, ಬೇರೆ ಆಗಿದ್ದೇಕೆ?

Share :

Published June 10, 2024 at 8:55pm

    ಸ್ನೇಹಿತರಾಗಿ, ಪ್ರೇಮಿಗಳಾಗಿ, ಪತಿ-ಪತ್ನಿಯರಾಗಿದ್ದ ಯುವ- ಶ್ರೀದೇವಿ

    ದೊಡ್ಮನೆ ಕುಟುಂಬದಲ್ಲೇ ಈ ರೀತಿ ಆಗಿರೋದು ಫ್ಯಾನ್ಸ್​ಗೂ ನೋವು

    14 ವರ್ಷಗಳ ಚಂದದ ಬಾಂಧವ್ಯಕ್ಕೆ ಇತಿಶ್ರೀ ಹಾಡಿದ್ರಾ ಯುವರಾಜ್?

ದೊಡ್ಮನೆ ಅಂದ್ರೆನೇ ಹಾಗೆ. ಕೌಟುಂಬಿಕ ಮೌಲ್ಯಗಳನ್ನ ಎತ್ತಿಹಿಡಿದಿರೋ ಕುಟುಂಬವದು. ಮನುಷ್ಯತ್ವಕ್ಕೆ ಬೆಲೆ ಕೊಟ್ಟಿರೋ ಕುಟುಂಬವದು. ಸಮಾಜಕ್ಕೆ ಮಾದರಿಯಾಗಿರುವ ಕುಟುಂಬವದು. ಹಾಗಾಗಿ, ಜನರಿಗೆ ಈ ಸುದ್ದಿ ಕೇಳಿ ಆಘಾತವಾಗಿದೆ. ಆಶ್ಚರ್ಯ ಅಂದ್ರೆ ಯುವರಾಜ್​ ಕುಮಾರ್ ಮತ್ತು ಶ್ರೀದೇವಿದು 7 ವರ್ಷದ ಪ್ರೀತಿ. ಸ್ನೇಹಿತರಾಗಿದ್ದ ಇವರು, ಪ್ರೇಮಿಗಳಾಗಿ ಮದುವೆಯಾಗಿದ್ದು ಆ ಸಕ್ಸಸ್‌ ಕಂಡ ಮೇಲೆಯೇ.

ಯುವರಾಜ್‌ಕುಮಾರ್‌ ಸಿನಿಮಾ ಯುವ ರಿಲೀಸ್ ಆದ್ಮೇಲೆ ಎಲ್ಲರಿಗೂ ಒಂದೇ ಅನಿಸಿದ್ದು, ಈತ ಮುಂದೊಂದು ದಿನ ಸೂಪರ್‌ಸ್ಟಾರ್ ಆಗ್ತಾನೇ ಅಂತಾ. ಯಾಕಂದ್ರೆ ಆ ಸಿನಿಮಾದಲ್ಲಿ ಯುವ ಆ್ಯಕ್ಟಿಂಗ್‌, ಆ್ಯಕ್ಷನ್‌, ಡ್ಯಾನ್ಸಿಂಗ್ ಸ್ಕಿಲ್ಸ್‌ ಜಸ್ಟ್ ವ್ಹಾವ್.

ಇದನ್ನೂ ಓದಿ: ಆದರ್ಶಗಳ ದೇಗುಲ ದೊಡ್ಮನೆಯಲ್ಲಿ ಬಿರುಗಾಳಿ.. ಯುವ ರಾಜ್‌, ಶ್ರೀದೇವಿ ಬಾಳಲ್ಲಿ ಅಸಲಿಗೆ ನಡೆದಿದ್ದೇನು?

ಮೊದಲ ಸಿನಿಮಾ ಸಕ್ಸಸ್ ಆದ್ಮೇಲೆ, 2ನೇ ಸಿನಿಮಾ ಯಾವಾಗ ಅನೌನ್ಸ್ ಆಗುತ್ತೆ ಅಂತಾ ಎಲ್ಲರೂ ವೇಯ್ಟ್ ಮಾಡ್ತಿದ್ರು. ಏಪ್ರಿಲ್ 23 ಅಂದ್ರೆ ಯುವ ಬರ್ತ್‌ಡೇ ಕೂಡ ಯಾವ ಸಿನಿಮಾ ಅನೌನ್ಸ್ ಆಗ್ಲಿಲ್ಲ. ಏಪ್ರಿಲ್‌ 24 ಅಣ್ಣಾವ್ರು ಹುಟ್ಟುಹಬ್ಬದ ದಿನವೂ ಅನೌನ್ಸ್ ಆಗ್ಲಿಲ್ಲ. ಇಲ್ಲಿಯವರೆಗೂ ಯುವ ರಾಜ್‌ಕುಮಾರ್ ಅವರ 2ನೇ ಸಿನಿಮಾ ಅನೌನ್ಸೇ ಆಗಿಲ್ಲ. ಆದ್ರೆ, ಅದಕ್ಕೂ ಮೊದಲೇ ಈ ಸುದ್ದಿ ಸ್ಫೋಟವಾಗುತ್ತದೆ ಅಂತಾ ಯಾರು ಗೆಸ್ ಕೂಡ ಮಾಡಿರಲಿಲ್ಲ.

ಯುವ ರಾಜ್‌ಕುಮಾರ್‌ಗೆ ಶ್ರೀದೇವಿ ಪರಿಚಯ ಹೇಗೆ?

ಅಂದ್ಹಾಗೇ, ಯುವರಾಜ್‌ಕುಮಾರ್ ಮತ್ತು ಶ್ರೀದೇವಿ ಅವರದ್ದು ಒಟ್ಟು 14 ವರ್ಷಗಳ ಬಾಂಧವ್ಯ. ಇದು ಸ್ನೇಹಿತರಾಗಿ, ಪ್ರೇಮಿಗಳಾಗಿ, ಪತಿ-ಪತ್ನಿಯರಾಗಿದ್ದ 14 ವರ್ಷಗಳ ಅವಧಿ. ಅಷ್ಟಕ್ಕೂ ಇವರಿಬ್ಬರ ಪರಿಚಯ ಹೇಗಾಯ್ತು ಅನ್ನೋದನ್ನ ನೋಡೋದಾದ್ರೆ, ಶ್ರೀ ದೇವಿ ಅವರು, ಇಂದಿನ ಯುವ, ಅಂದಿನ ಗುರು ರಾಜ್‌ಕುಮಾರ್‌ಗೆ ಪರಿಚಯವಾಗಿದ್ದು ಸರಿ ಸುಮಾರು 2010ರ ಇಸವಿಯಲ್ಲಿ. ಕಾಮನ್ ಫ್ರೆಂಡ್‌ ಮೂಲಕ ಗುರುಗೆ ಪರಿಚಯವಾದ ಶ್ರೀದೇವಿ ಭೈರಪ್ಪ, ಕೆಲವೇ ತಿಂಗಳ ಅಂತರದಲ್ಲಿ ತುಂಬಾ ಕ್ಲೋಸ್ ಆಗ್ತಾರೆ.

ರಾಘವೇಂದ್ರ ರಾಜ್‌ಕುಮಾರ್ ಆರೋಗ್ಯ ಚೆನ್ನಾಗಿರಲ್ಲ

ರಾಘವೇಂದ್ರ ರಾಜ್‌ಕುಮಾರ್ ಮನೆಗೂ ಕೂಡ ಶ್ರೀದೇವಿ ಭೈರಪ್ಪ ಹೋಗ್ತಾ ಇರ್ತಾರೆ. ಗುರು ಅವರ ತಾಯಿ ಮತ್ತು ಸಹೋದರನಿಗೂ ಕ್ಲೋಸ್ ಆಗಿರ್ತಾರೆ. ಅಂದ್ಹಾಗೇ, ಶ್ರೀದೇವಿ ಅವರು ಸ್ನೇಹಿತರಾಗಿದ್ದಾಗ, ರಾಘವೇಂದ್ರ ರಾಜ್‌ಕುಮಾರ್ ಅವ್ರ ಆರೋಗ್ಯ ಅಷ್ಟೊಂದು ಚೆನ್ನಾಗಿರೋದಿಲ್ಲ. ಅದು ರಾಘವೇಂದ್ರ ರಾಜ್‌ಕುಮಾರ್‌ ಕುಟುಂಬ ಕಷ್ಟದ ದಿನಗಳು. ಅಂತಹ ಸಮಯದಲ್ಲಿ ಗುರು ರಾಜ್‌ಕುಮಾರ್‌ಗೆ ಸ್ನೇಹಿತೆಯಾದ ಶ್ರೀದೇವಿ, ಯುವ ರಾಜ್‌ಕುಮಾರ್‌ಗೆ ಎಲ್ಲ ಹಂತದಲ್ಲೂ ಸಹಾಯ ಮಾಡಿರ್ತಾರೆ.

ಶ್ರೀದೇವಿ ಅವರ ಬಗ್ಗೆ ಇಡೀ ಕುಟುಂಬಕ್ಕೆ ಮೊದಲ ಇಷ್ಟವಾದ ಅಂಶ ಏನಂದ್ರೆ, ಅವರ ಡೇರಿಂಗ್. ಅಂದ್ರೆ, ಎಂತಹ ವಿಚಾರವಾದ್ರೂ ಅವರ ಮುನ್ನುಗ್ಗಿ ಸಾಲ್ವ್ ಮಾಡೋ ಚತುರತೆ ಬೆಳೆಸಿಕೊಂಡಿದ್ದರು. ಜೊತೆಗೆ ಐಎಎಸ್‌ಗೆ ಪ್ರಿಪೇರ್ ಆಗ್ತಿದ್ದರಿಂದ ಅವರ ನಾಲೆಡ್ಜ್‌ಗೆ ಇಡೀ ಕುಟುಂಬ ಬೆರಗಾಗಿರುತ್ತದೆ.

ಇದನ್ನೂ ಓದಿ: ಮೂರನೇ ವ್ಯಕ್ತಿ ವಿಚಾರ ಕೇಳಿ ಬಂದ ಕೂಡಲೇ ನಾನೇ ಅವರಿಗೆ ಕಾಲ್ ಮಾಡಿದೆ’ -ನಿವೇದಿತಾ ಹೇಳಿದ್ದೇನು?

ಸ್ನೇಹಿತರಾಗಿದ್ದ ಯುವ-ಶ್ರೀದೇವಿ ಪ್ರೀತಿಸತೊಡಗಿದರು

ಇನ್ನೊಂದೆಡೆ, ಯುವರಾಜ್‌ಕುಮಾರ್ ಗೆ ಓರ್ವ ಸ್ನೇಹಿತೆಯಾಗಿ ಕರಿಯರ್‌ ಕಟ್ಟಿ ಕೊಳ್ಳಲು ಬೆನ್ನೆಲುಬಾಗಿ ನಿಂತಿದ್ದರು ಅಂತಾ ಮೂಲಗಳು ಹೇಳಿವೆ. ವಿನಯ್‌ ರಾಜ್‌ಕುಮಾರ್‌ ಅವರ ರನ್‌ ಆ್ಯಂಟನಿ ಸಿನಿಮಾ ಪ್ರಮೋಷನ್‌ನಲ್ಲೂ ಸಾಕಷ್ಟು ಸಕ್ರಿಯವಾಗಿರ್ತಾರೆ. ದೆಹಲಿಯಲ್ಲಿ ರನ್‌ ಆ್ಯಂಟನಿ ಸ್ಕ್ರೀನಿಂಗ್ ಮಾಡಿಸುವಲ್ಲಿ ಶ್ರೀದೇವಿ ಅವರ ಪಾತ್ರ ದೊಡ್ಡದಿದೆ ಅಂತಾ ಹೇಳಲಾಗ್ತಿದೆ. ಇದಾದ ಬಳಿಕ ಸ್ನೇಹಿತರಾಗಿದ್ದ ಯುವ ಮತ್ತು ಶ್ರೀದೇವಿ ಪ್ರೀತಿಸತೊಡಗುತ್ತಾರೆ.

ಇದನ್ನೂ ಓದಿ: ಮಕ್ಕಳು ಮಾಡಿಕೊಳ್ಳೋ ವಿಚಾರಕ್ಕೆ ಡಿವೋರ್ಸ್​ ಆಯ್ತಾ? ಈ ಬಗ್ಗೆ ಚಂದನ್​ ಶೆಟ್ಟಿ ಹೇಳಿದ್ದೇನು?

ಇನ್‌ಫ್ಯಾಕ್ಟ್‌, ಶ್ರೀದೇವಿ ಅವರು ಯುವರಾಜ್‌ಕುಮಾರ್‌ಗಿಂತ ವಯಸ್ಸಿನಲ್ಲಿ ದೊಡ್ಡವರಾಗಿರ್ತಾರೆ. ಆದರೆ ಇವರಿಬ್ಬರ ಪ್ರೀತಿಗೆ ಏಜ್‌ ಅಡ್ಡಿಯಾಗಲಿಲ್ಲ. ಇಬ್ಬರ ಪರಸ್ಪರ ಒಪ್ಪಿಯೇ ಮನೆಯವರ ಮುಂದೆ ಮದುವೆ ಪ್ರಪೋಸಲ್ ಮುಂದಿಡುತ್ತಾರೆ. ಆಗ ಎರಡು ಕುಟುಂಬಗಳು ಒಪ್ಪಿಕೊಳ್ಳುತ್ತಾರೆ. ಆದ್ರೆ, ಇವರಿಬ್ಬರ ಇಷ್ಟು ಬೇಗ ಮದ್ವೆ ಬೇಡ. ನಾವು ಏನಾದ್ರೂ ಸಕ್ಸಸ್‌ ಕಂಡು, ಆ ನಂತರ ಮದ್ವೆಯಾಗ್ಬೇಕು ಅಂತಾ ಡಿಸೈಡ್ ಮಾಡ್ತಾರೆ. ಆ ಟೈಮ್‌ನಲ್ಲಿಯೇ ಸ್ಥಾಪನೆಯಾಗೋದೇ ಡಾ.ರಾಜ್‌ಕುಮಾರ್ ಅಕಾಡೆಮಿ.

ಡಾ.ರಾಜ್‌ಕುಮಾರ್‌ ಅಕಾಡೆಮಿ ಸ್ಥಾಪನೆ

ಡಾ.ರಾಜ್‌ಕುಮಾರ್‌ ಅಕಾಡೆಮಿ ಫಾರ್ ಸಿವಿಲ್ ಸರ್ವಿಸಸ್‌ ಸ್ಥಾಪನೆ ಮಾಡೋಕೆ ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಮುಂದಾಗುತ್ತಾರೆ. ರಾಜ್ಯದ ಐಎಎಸ್‌, ಕೆಎಎಸ್‌ ಅಧಿಕಾರಿಗಳನ್ನ ಸಂಪರ್ಕ ಮಾಡಿ, ಈ ಅಕಾಡೆಮಿಗೆ ಒಂದು ರೂಪುರೇಷೆ ನೀಡುತ್ತಾರೆ. ಈ ಅಕಾಡೆಮಿಗೆ ಪುನೀತ್‌ ರಾಜ್‌ಕುಮಾರ್ ದೊಡ್ಡ ಬೆನ್ನೆಲುಬಾಗಿ ನಿಲ್ಲುತ್ತಾರೆ. ನಮ್ಮ ಮನೆಯ ಮಕ್ಕಳು ಸಮಾಜಕ್ಕೆ ಮಾದರಿಯಾಗುವ ಕೆಲ್ಸ ಮಾಡ್ತಿದ್ದಾರೆ ಅನ್ನೋ ಉದ್ದೇಶದಿಂದ ಅಪ್ಪು, ಈ ಅಕಾಡೆಮಿಗೆ ಸಾಥ್ ಕೊಡುತ್ತಾರೆ. ಎಲ್ಲ ಅಂದುಕೊಂಡಂತೆ ನಡೆದು, ಏಪ್ರಿಲ್‌ 14, 2017ನೇ ಇಸವಿಯಲ್ಲಿ ಡಾ.ರಾಜ್‌ಕುಮಾರ್‌ ಅಕಾಡೆಮಿ ಫಾರ್ ಸಿವಿಲ್ ಸರ್ವಿಸಸ್‌ ಸ್ಥಾಪನೆಯಾಗುತ್ತದೆ.

ಇವರಿಬ್ಬರ ಪರಿಶ್ರಮದಿಂದ ಡಾ.ರಾಜ್‌ಕುಮಾರ್‌ ಅಕಾಡೆಮಿ ಫಾರ್ ಸಿವಿಲ್ ಸರ್ವಿಸಸ್‌ ಸಕ್ಸಸ್ ಕಾಣುತ್ತದೆ. ಯಾವಾಗ ಈ ಅಕಾಡೆಮಿ ಸಕ್ಸಸ್ ಆಯ್ತೋ ಇವರಿಬ್ಬರು ಮದುವೆಯಾಗಲೂ ಡಿಸೈಡ್ ಮಾಡ್ತಾರೆ. ಅದರಂತೆ 2019 ಮೇ 26 ರಂದು ಸಪ್ತಪದಿ ತುಳಿಯುತ್ತಾರೆ.

ಇದನ್ನೂ ಓದಿ: ಮಾಜಿ ಪತ್ನಿ ನಿವೇದಿತಾ ಬಗ್ಗೆ ಹೇಳಿದ್ದೇನು.. ಡಿವೋರ್ಸ್​​ ಕುರಿತು ಅಸಲಿ‌ ಕಾರಣ ಬಿಚ್ಚಿಟ್ಟ ಚಂದನ್ ಶೆಟ್ಟಿ

ಯುವ ಪ್ರಮೋಷನ್‌ಗೂ ಕೂಡ ಶ್ರೀದೇವಿ ಅವರು ಬಂದಿಲ್ಲ

ಮೈಸೂರು ಮೂಲದ ಶ್ರೀದೇವಿ ಅವರು ಯುವರಾಜ್‌ಕುಮಾರ್ ಅವರನ್ನ ತುಂಬಾ ಪ್ರೀತಿಸಿ ಮದುವೆಯಾದವರು. ಇವರಿಬ್ಬರ ನಡುವೆ ಏನಾಗಿದೆ ಅನ್ನೋದು ಅವರ ಕುಟುಂಬಕ್ಕಷ್ಟೇ ಗೊತ್ತು. ಯುವರಾಜ್‌ಕುಮಾರ್‌ ತಾವು ಸಲ್ಲಿಸಿರುವ ವಿಚ್ಛೇದನದ ಅರ್ಜಿಯಲ್ಲಿ, ಪತ್ನಿಯಿಂದ ಹಿಂಸೆಯಾಗಿದೆ ಅಂತಾ ಆರೋಪಿಸಿದ್ದಾರೆ.

6 ರಿಂದ 1 ವರ್ಷಗಳಿಂದ ಇವರಿಬ್ಬರ ನಡುವೆ ಮನಸ್ತಾಪಗಳಿದ್ವು ಅಂತಾ ಹೇಳಲಾಗ್ತಿದೆ. ಈ ಹಿನ್ನೆಲೆಯಲ್ಲಿ ಶ್ರೀದೇವಿ ಅವರು ಹೈಯರ್ ಸ್ಟಡಿಸ್‌ಗೋಸ್ಕರ, ಅಮೆರಿಕಾಗೆ ಹೋಗಿದ್ದಾರೆ. ಕಳೆದ 6 ತಿಂಗಳಿಂದ ಇವರು ಒಂದೇ ಮನೆಯಲ್ಲಿ ವಾಸಿಸುತ್ತಿಲ್ಲ. ಯುವ ಪ್ರಮೋಷನ್‌ಗೂ ಕೂಡ ಶ್ರೀದೇವಿ ಅವರು ಬಂದಿಲ್ಲ. ಮುಹೂರ್ತದಲ್ಲಿದ್ದ ಶ್ರೀದೇವಿ ಅವರು, ನಂತರ ಎಲ್ಲಿಯು ಕಾಣಿಸಿಕೊಂಡಿಲ್ಲ. ಯುವ ಶೂಟಿಂಗ್‌ ಶುರುವಾದ ನಂತರ ಅವರು ಹೈಯರ್ ಸ್ಟಡಿಸ್‌ಗೋಸ್ಕರ, ಅಮೆರಿಕಗೆ ಹೋದರು. ಆ ನಂತರ ಅವರು ಭಾರತಕ್ಕೆ ವಾಪಸ್ ಆಗಿಲ್ಲ. ಸೋಷಿಯಲ್ ಮೀಡಿಯಾದಲ್ಲೂ ಕೂಡ ಯುವ ಸಿನಿಮಾ ಬಗ್ಗೆ ಅವರು ಯಾವುದೇ ಪೋಸ್ಟ್ ಮಾಡಿಲ್ಲ. ಅವರ ಕೊನೆಯ ಪೋಸ್ಟ್‌, ಕೈಯ ಮೇಲೆ ಅಪ್ಪು ಸರ್‌ ಅವರ ಟ್ಯಾಟ್ಯೂ ಹಾಕಿಸಿಕೊಂಡಿರೋ ಫೋಟೋ.

ಶ್ರೀದೇವಿ ಭೈರಪ್ಪಗೆ ನೋಟಿಸ್‌! ಮುಂದೇನು.?

ಸದ್ಯ, ಯುವರಾಜ್‌ಕುಮಾರ್ ಕೌಟುಂಬಿಕ ನ್ಯಾಯಾಲಯಕ್ಕೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ, ಕೋರ್ಟ್‌ ಶ್ರೀದೇವಿ ಅವರಿಗೆ ನೋಟಿಸ್ ನೀಡಿದೆ. ಅವರು ನೋಟಿಸ್‌ಗೆ ಉತ್ತರ ನೀಡಿದ ನಂತ, ವಿಚಾರಣೆ ಆರಂಭವಾಗುತ್ತದೆ. ಕೋರ್ಟ್ ಅರ್ಜಿ ವಿಚಾರಣೆಯನ್ನ ಜುಲೈ 4ಕ್ಕೆ ಮುಂದೂಡಿಕೆ ಮಾಡಿದೆ.

ತಕ್ಷಣಕ್ಕೆ ಡಿವೋರ್ಸ್ ನೀಡೋದು ಡೌಟ್

ನೋಟಿಸ್ ಬಳಿಕ ಡಿವೋರ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀದೇವಿಗೆ ಕೋರ್ಟ್ ಪ್ರಶ್ನೆ ಮಾಡಲಿದೆ. ಡಿವೋರ್ಸ್ ನೀಡುವುದಕ್ಕೆ ಒಪ್ಪಿಗೆ ಇದೆಯಾ? ಇಲ್ಲವಾ? ಡಿವೋರ್ಸ್ ನೀಡಲ್ಲ ಅಂದ್ರೆ, ಆಕ್ಷೇಪಣೆ ಇರೋದು ಏನು? ಈ ಬಗ್ಗೆ ಅವರ ಪ್ರತಿಕ್ರಿಯೆ ಕೇಳಿ ಡಿಸಿಷನ್ ತೆಗೆದುಕೊಳ್ಳಲಾಗುತ್ತೆ. ತಕ್ಷಣಕ್ಕೆ ಡಿವೋರ್ಸ್ ನೀಡೋದು ಡೌಟ್, ವಾದ- ಪ್ರತಿ ವಾದವನ್ನ ಕೇಳುತ್ತೆ. ಎರಡೂ ಕಡೆಯ ವಾದಗಳನ್ನ ಕೋರ್ಟ್ ಕೇಳಲಿದೆ. 1st ಅಡಿಷನಲ್ ಕೋರ್ಟ್​ ನೊಟೀಸ್ ಜಾರಿ ಮಾಡಿದ್ದು, ನ್ಯಾಯಾಧೀಶೆ ಕಲ್ಪನಾ ಎಂ.ಎಸ್. ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಡಿವೋರ್ಸ್​ ಬಗ್ಗೆ ಸ್ಪಷ್ಟನೆ ಕೊಡ್ತಾರಾ ಚಂದನ್ ಶೆಟ್ಟಿ- ನಿವೇದಿತಾ?​

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಕೇಸೇ ಬೇರೇ. ಈ ಕೇಸೇ ಬೇರೇ. ಅದು ಪರಸ್ಪರ ಒಪ್ಪಿ, ಒಡಂಬಡಿಕೆ ಮಾಡಿಕೊಂಡು ಅರ್ಜಿ ಸಲ್ಲಿಸಿದ್ದರಿಂದ ವಿಚ್ಛೇದನ ಅರ್ಜಿಯನ್ನ ಕೋರ್ಟ್ ಪುರಸ್ಕರಿಸಿತು. ಆದ್ರೆ, ಶ್ರೀದೇವಿ ಮತ್ತು ಯುವರಾಜ್‌ಕುಮಾರ್ ಅವರದ್ದು ಪರಸ್ಪರ ಒಪ್ಪಿಗೆಯ ವಿಚ್ಛೇದನ ಅರ್ಜಿಯಲ್ಲ. ಇಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿರೋದು ಯುವರಾಜ್‌ಕುಮಾರ್‌. ಹೀಗಾಗಿ, ಮುಂದಿನ ಕಾನೂನು ಪ್ರಕ್ರಿಯೆಯ ನಂತರ, ನ್ಯಾಯಾಲಯ ವಿಚ್ಛೇದನದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ.

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಯುವ ರಾಜ್‌ಕುಮಾರ್ ವಿಚ್ಛೇದನದ ಸುದ್ದಿ ದೊಡ್ಡ ಮಟ್ಟದ ಬಿರುಗಾಳಿ ಎಬ್ಬಿಸಿದೆ. ಆದ್ರೆ, ಕಾನೂನಿನ ಮೂಲಕ ವಿಚ್ಛೇದನಕ್ಕೆ ಅರ್ಜಿಸಲ್ಲಿಸೋದಕ್ಕೆ ಅವಕಾಶವಿರುವುದರಿಂದ ಇಲ್ಲಿ ತಪ್ಪು, ಸರಿಯ ಪ್ರಶ್ನೆ ಉದ್ಭವಿಸೋದಿಲ್ಲ. ಸೆಲೆಬ್ರೇಟಿ ಆಗಿರೋ ಕಾರಣ, ಫ್ಯಾನ್ಸ್‌ಗಳಲ್ಲಿ ಬೇಸರ ಮೂಡುವುದು ಸಹಜ. ಅದು ದೊಡ್ಮನೆ ಕುಟುಂಬದಲ್ಲಿಯೇ ಈ ರೀತಿ ಆಯ್ತು ಅನ್ನೋ ನೋವು ಅಭಿಮಾನಿಗಳಲ್ಲಿ ಇರುವುದು, ಇರಲಿರುವುದ ಸತ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

14 ವರ್ಷದ ಸ್ನೇಹ, 7 ವರ್ಷದ ಪ್ರೀತಿ; ಯುವ ರಿಲೀಸ್‌ಗೂ ಮೊದಲೇ ಗುರು, ಶ್ರೀದೇವಿ ಬೇರೆ, ಬೇರೆ ಆಗಿದ್ದೇಕೆ?

https://newsfirstlive.com/wp-content/uploads/2024/06/YUVA_RAJ_SHRIDEVI.jpg

Load More