/newsfirstlive-kannada/media/post_attachments/wp-content/uploads/2024/06/YUVA_RAJ_SHRIDEVI_3.jpg)
ಸ್ಯಾಂಡಲ್​ವುಡ್​ನಲ್ಲಿ ಒಂದಾದ ಮೇಲೆ ಒಂದರಂತೆ ವಿಚ್ಛೇದನ ಸುದ್ದಿಗಳು ಹೊರಬರ್ತಿವೆ. ಯುವ ರಾಜ್​ ಕುಮಾರ್​ನ ಡಿವೋರ್ಸ್​ ನ್ಯೂಸ್​ ಇದೀಗ ದೊಡ್ಮನೆಯನ್ನ ತಲೆತಗ್ಗಿಸುವಂತೆ ಮಾಡಿದೆ. ಜೂನಿಯರ್ ಪವರ್​ಸ್ಟಾರ್ ಎಂದೇ ಕರೆಸಿಕೊಳ್ತಿದ್ದ ಯುವನ ವೈವಾಹಿಕ ಬದುಕಲ್ಲಿ ಬಿರುಗಾಳಿ ಎದ್ದಿದೆ.
ಸ್ಯಾಂಡಲ್​ವುಡ್ ದೊಡ್ಮನೆಯಲ್ಲಿ ಮೊದಲ ಡಿವೋರ್ಸ್ ಕೇಸ್
ಸ್ಯಾಂಡಲ್​ವುಡ್​ನ ದೊಡ್ಮನೆಯಲ್ಲಿ ಮೊದಲ ಡಿವೋರ್ಸ್ ಕೇಸ್ ದಾಖಲಾಗಿದೆ. ಕೌಟುಂಬಿಕ ಕೋರ್ಟ್​​​ನಲ್ಲಿ ಯುವ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದಾರೆ. ಜುಲೈ 4ರಂದು ವಿಚಾರಣೆ ನಿಗದಿ ಆಗಿದೆ.
/newsfirstlive-kannada/media/post_attachments/wp-content/uploads/2024/06/YUVA_RAJ_SHRIDEVI_3.jpg)
4 ಕೋಟಿ ವಂಚನೆ ಮಾಡಿದ್ರಾ ಯುವ ಪತ್ನಿ ಶ್ರೀದೇವಿ?
ಇನ್ನು ರಿಪ್ಲೈ ನೋಟಿಸ್‌ನಲ್ಲಿ ಶ್ರೀದೇವಿ ಅವರು ಮಾಡಿರೋ ಆರೋಪಗಳು ಹೊರಬೀಳ್ತಿದ್ದಂತೆ ಯುವ ಪರ ವಕೀಲ ಸಿರಿಲ್ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ನಾಲ್ಕು ಕೋಟಿ ಬಾಂಬ್​​ ಹಾಕಿದ್ದಾರೆ. ಅತ್ತ ಯುವ ಪರ ವಕೀಲನ ಆರೋಪಕ್ಕೆ ಪತ್ನಿ ಶ್ರೀದೇವಿ ತಿರುಗೇಟು ಕೊಟ್ಟಿದ್ದಾರೆ.
ಇದನ್ನೂ ಓದಿ:30 ಸೆಕೆಂಡುಗಳ ಹಿಂದೆ ತಾಯಿ ಜತೆ ಮಾತಾಡಿದ್ದ ಮಗ.. ಶೂಟ್​ ಮಾಡಿ ಕೊಂದೇಬಿಟ್ಟ ಹಂತಕರು!
View this post on Instagram
‘ಅತ್ಯಂತ ದುರದೃಷ್ಟಕರ ಬೆಳವಣಿಗೆ’
ವೃತ್ತಿಪರ ಸೌಹಾರ್ದತೆಯನ್ನ ಕಾಯ್ದುಕೊಳ್ಳಬೇಕಾದ ವ್ಯಕ್ತಿಯೇ ಸಾರ್ವಜನಿಕವಾಗಿ ಒಬ್ಬ ಹೆಣ್ಣಿನ ಚಾರಿತ್ರ್ಯದ ಬಗ್ಗೆ ಕೀಳು ಮಟ್ಟದ ಸುಳ್ಳು ಆರೋಪಗಳನ್ನ ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ ಹಾಗೂ ಬಹಳ ನೋವುಂಟು ಮಾಡಿದೆ. ಕಳೆದ ಕೆಲವು ತಿಂಗಳಿಂದಾದ ಅನೇಕ ನೋವುಗಳ ಹೊರತಾಗಿಯೂ, ನಾನು ಕುಟುಂಬದ ಗೌರವ ಕಾಪಾಡಿಕೊಳ್ಳಲು, ಮೌನವಾಗಿದ್ದೆ. ಆದ್ರೆ ನನ್ನ ಸಭ್ಯತೆ ಹಾಗೂ ಮಾನವೀಯತೆ ಗೌರವಿಸದೆ, ಕೀಳುಮಟ್ಟದ ಆರೋಪಗಳನ್ನ ಮಾಡ್ತಿರೋದು ದುರದೃಷ್ಟಕರ.
- ಶ್ರೀದೇವಿ, ಯುವ ರಾಜಕುಮಾರ್​ ಪತ್ನಿ
/newsfirstlive-kannada/media/post_attachments/wp-content/uploads/2024/06/Yuva-Rajkumar-Divorce-7.jpg)
ಇನ್​ಸ್ಟಾಗ್ರಾಂನಿಂದ ಪತ್ನಿ ಜೊತೆಗಿನ ಎಲ್ಲಾ ಫೋಟೋಗಳನ್ನೂ ಕೂಡ ಯುವ ಡಿಲೀಟ್​ ಮಾಡಿದ್ದಾರೆ. ಒಟ್ಟಾರೆ, ಸುಮಾರು 7 ವರ್ಷ ಪ್ರೀತಿಸಿ ಮದುವೆಯಾದ ಜೋಡಿ ಈಗ ಬೇರೆಯಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us