/newsfirstlive-kannada/media/media_files/2025/08/03/happy-friendship-day-2-2025-08-03-12-03-05.jpg)
ಜೀವನದಲ್ಲಿ ಯಾರು ಇರ್ತಾರೋ.. ಇರಲ್ವೋ ಗೊತ್ತಿಲ್ಲ. ಆದ್ರೆ ಬಿದ್ದಾಗ ನಮ್ಮ ಕೈ ಹಿಡಿದು ನಡೆಸೋ ಒಬ್ಬ ಗೆಳೆಯ ಇದ್ರೆ ಸಾಕು.. ಒಬ್ಬ ಒಳ್ಳೆ ಗೆಳೆಯ ಯಾರು ಅಂದ್ರೆ.. ಹಸಿವು ಅಂದಾಗ ಊಟ ಮಾಡಿಸೋನು.. ಅತ್ತಾಗ ಕಣ್ಣೀರು ಒರೆಸೋನು.. ಕೆಳಗೆ ಬಿದ್ದಾಗ ನೋಡಿ ನಗುವವರ ಮುಂದೆ ಕೈ ಹಿಡಿದು ಮೇಲೆ ಎತ್ತೋನು.. ಸೋತಾಗ ನಾನು ನಿನ್ನ ಜೊತೆ ಇದೀನಿ ಅಂತ ಸಾತ್ ಕೊಡ್ತಾನೋ ಅಂತವನೇ ನಿಜವಾದ ಗೆಳೆಯ.. ಇಂತಾ ಪ್ಯೂರೆಸ್ಟ್ ಫ್ರೆಂಡ್ನ್ನ ಸಂಭ್ರಮಿಸೋ ದಿನ ಇವತ್ತು.
ಬೇರೆಲ್ಲ ಸಂಬಂಧಕ್ಕಿಂತ ತುಂಬಾನೇ ಡಿಫರೆಂಟ್ ಅಂದ್ರೆ ಸ್ನೇಹ ಸಂಬಂಧ.. ನಮ್ಮ ಮನಸ್ಸಲ್ಲಿ ಕಾಡೋ ಅದೆಷ್ಟು ನೋವುಗಳನ್ನ, ಸಂಕಷ್ಟಗಳನ್ನ ನಾವು ಎಲ್ಲರೊಂದಿಗೂ ಹಂಚಿಕೊಳ್ಳೋದಕ್ಕೆ ಸಾಧ್ಯವಾಗಲ್ಲ. ಯಾರ ಮುಂದೆಯೂ ಹೇಳಿಕೊಳ್ಳಲಾಗದ ಮಾತುಗಳನ್ನ ಸ್ನೇಹಿತರೊಂದಿಗೆ ಮಾತ್ರ ಹಂಚಿಕೊಳ್ತೇವೆ. ಸ್ಕೂಲ್ನಿಂದ ಹಿಡಿದು ಕಾಲೇಜು ಮೆಟ್ಟಿಲು ಹತ್ತಿ, ಕೊನೆಗೆ ಒಂದೊಳ್ಳೆ ಉದ್ಯೋಗಕ್ಕೆ ಸೇರಿದಾಗಲೂ ಒಂದಿಷ್ಟು ಗೆಳೆಯರ ಬಳಗ ಇದ್ದೆ ಇರುತ್ತೆ..
ಇದನ್ನೂ ಓದಿ:ಶ್ವೇತ ಬಣ್ಣದ ಉಡುಪಿನಲ್ಲಿ ಮಿಂಚಿದ ಅಗ್ನಿಸಾಕ್ಷಿ ಖ್ಯಾತಿಯ ಸುಕೃತಾ ನಾಗ್..
ಅಂಥ ಗೆಳೆಯರ ಜೊತೆ ಕಳೆದ ಕ್ಷಣಗಳು ಯಾವತ್ತಿಗೂ ನಮ್ಮ ಗೂಡು ಮೆಮೂರಿಯಲ್ಲಿ ಸದಾಕಾಲ ಉಳಿಯುತ್ತವೆ. ನಮಗೆ ಸಂತೋಷವಾದಾಗ, ದುಃಖವಾದಾಗ ಅಥವಾ ಯಾವುದೋ ಸಮಸ್ಯೆಯಲ್ಲಿ ಸಿಕ್ಕಿ ಗೊಂದಲಕ್ಕೆ ಬಿದ್ದಾಗ ನಾವು ಕರೆ ಮಾಡೋದೇ ನಮ್ಮ ಗೆಳೆಯರಿಗೆ. ಹೀಗಾಗಿ ಪ್ರತಿಯೊಬ್ಬರ ಜೀವನದಲ್ಲಿ ಇಂಥಾ ಗೆಳೆಯರು ಇದ್ದೆ ಇರ್ತಾರೆ.. ಆ ಸಂಬಂಧ ರಕ್ತ ಸಂಬಂಧಕ್ಕಿಂತೂ ಮಿಗಿಲಾಗಿರೋ ಬಾಂಧವ್ಯವಾಗಿ ಉಳಿದುಕೊಳ್ಳುತ್ತದೆ.
ಇದನ್ನೂ ಓದಿ:NIMHANS ಅಲ್ಲಿ ಉದ್ಯೋಗ ಅವಕಾಶ.. ಈ ಕೋರ್ಸ್ ಪೂರ್ಣವಾಗಿದ್ರೆ ಅಪ್ಲೇ ಮಾಡಬಹುದು
ಹಾಗಂತ ಎಲ್ಲರೂ ನಮ್ಮ ಜೊತೆ ನಿಲ್ತಾರೆ ಅಂತ ಹೇಳೋದಿಕ್ಕೆ ಆಗಲ್ಲ.. ನಮ್ಮ ಬದುಕಿನ ದಾರಿ ಜೊತೆಯಾಗಿ ನಿಂತು ಹೆಜ್ಜೆ ಹಾಕೋರು ಬೆರಳಿಣಿಕೆ ಮಂದಿಯಷ್ಟೇ.. ಹೀಗಾಗಿ ಸಂತೋಷ.. ಸಂಕಷ್ಟದ ಸಮಯದಲ್ಲಿ ನಿಂತು ಹೆಗಲಾಗುವ ಗೆಳೆಯರಿಗೆ ಶುಭಾಶಯ ತಿಳಿಸುವ ದಿನ ಇವತ್ತು.. ನೀವು ನಿಮ್ಮ ಕಷ್ಟಕ್ಕೆ ಸ್ಪಂದಿಸಿ.. ನಿಮ್ಮ ಸಂತೋಷವನ್ನ ಸಂಭ್ರಮಿಸಿದ ಗೆಳೆಯ/ಗೆಳತಿಗೆ ಒಂದೊಳ್ಳೆ ಮೆಸೇಜ್, ಕಾಲ್ ಮಾಡಿ ಹ್ಯಾಪಿ ಫ್ರೆಂಡ್ಶಿಪ್ ಹೇಳಿ..
ವಿಶೇಷ ಬರಹ: ಮರಲಿಂಗ್ ಎಮ್.ಹೆಚ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ