/newsfirstlive-kannada/media/media_files/2025/08/01/dhruva-sarja-2025-08-01-09-20-32.jpg)
ಧ್ರುವ ಸರ್ಜಾ
ನಟ ಪ್ರಥಮ್ (Pratham) ವಿಚಾರದಲ್ಲಿ ನಾನು ದರ್ಶನ್ ಸರ್ ಪರ ಎಂದು ನಟ ಧ್ರುವ ಸರ್ಜಾ ಹೇಳಿದ್ದಾರೆ. ಮೇಲೆ ದರ್ಶನ್ ಅಭಿಮಾನಿಗಳು ಹಲ್ಲೆಗೆ ಯತ್ನಿಸಿದರು ಎಂಬ ಆರೋಪ ಇದೆ. ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಧ್ರುವ ಸರ್ಜಾ.. ಪ್ರಥಮ್ ಅವರು ಮಾಧ್ಯಮಗಳ ಜೊತೆ ಮಾತನಾಡುವಾಗ ದರ್ಶನ್ ಬಗ್ಗೆ ಕೆಲವು ಖಾರವಾದ ಮಾತುಗಳನ್ನು ಆಡಿದರು. ‘ದರ್ಶನ್ ಅವರಲ್ಲಿ ಕಿತ್ತುಕೊಳ್ಳೋಕೆ ಏನೂ ಇಲ್ಲ. ಅವರು ಧರಿಸೋದು ವಿಗ್. ಇನ್ನು, ಗಡ್ಡ ಮೀಸೆ ಅವರು ಬಿಡೋದಿಲ್ಲ. ಇನ್ನೇನು ಕಿತ್ತುಕೊಳ್ಳಲಿ’ ಎಂದು ಪ್ರಥಮ್ ಹೇಳಿದ್ದರು. ಆ ಮಾತನ್ನು ಧ್ರುವ ಸರ್ಜಾ (Dhruva Sarja) ಅವರು ಖಂಡಿಸಿದ್ದಾರೆ. ಇದೆಲ್ಲ ಬೇಕಿರಲಿಲ್ಲ ಎಂದು ಧ್ರುವ ಹೇಳಿದ್ದಾರೆ.
ಇದನ್ನೂ ಓದಿ: ಐದು ಮಂದಿ ಪತ್ನಿಯರು, 11 ಮಕ್ಕಳು ಒಂದೇ ಮನೆಯಲ್ಲಿ ವಾಸ..
ರಮ್ಯ ಮೇಡಂ ಅವರನ್ನು ವಲ್ಗರ್ ಆಗಿ ಟ್ರೋಲ್ ಮಾಡಿರೋದನ್ನು ಖಂಡಿಸ್ತೀನಿ. ಪ್ರಥಮ್ ವಿಚಾರದಲ್ಲಿ ನಾನು ದರ್ಶನ್ ಸರ್ ಪರ ನಿಲ್ತೀನಿ. I stand with ದರ್ಶನ್ ಸರ್. ಅವರಿಗೆ ಯಾರಾದ್ರೂ ಚಾಕು ತೋರಿಸಿದ್ರೇ ಕಂಪ್ಲೆಂಟ್ ಕೊಡಬೇಕು. ಅದನ್ನು ಬಿಟ್ಟು ದರ್ಶನ್ ಸರ್ ಬಗ್ಗೆ ಮಾತಾಡೋದು ಸರಿಯಲ್ಲ. ಏನು ಪ್ರೂವ್ ಮಾಡೋಕೆ ಹೋಗ್ತಿದ್ದಾರೆ ಗೊತ್ತಾಗ್ತಿಲ್ಲ. ಪ್ರಥಮ್ ವರ್ತನೆಯಿಂದ ನನಗೆ ಬಹಳ ಬೇಸರ ಆಗಿದೆ. ಲಾಯರ್ ಜಗದೀಶ್ ಸರ್ ಮಾತನ್ನು ಪ್ರಥಮ್ ಕೇಳಬೇಕಿತ್ತು. ಗೌರವ ಇಲ್ಲದ ರೀತಿಯಲ್ಲಿ, ನಿಂದಿಸುವ ಹಾಗೆ ಚಿಟಿಕೆಯೆಲ್ಲ ಹೊಡೆದು, ವಿಗ್ ಅದು ಇದು ಅಂತ ಮಾತನಾಡುವ ಅವಶ್ಯಕತೆ ಇರಲಿಲ್ಲ ಎಂದಿದ್ದಾರೆ ಧ್ರುವ.
ಎಲ್ಲರಿಗೂ ಅವರವರ ಆತ್ಮಗೌರವ ಇರುತ್ತದೆ. ಯಾರೋ ಕುಗ್ಗಿದ್ದಾರೆ ಎಂದಾಗ ಆಳಿಗೊಂದು ಕಲ್ಲು ಹಾಕಬಾರದು. ಈ ವಿಚಾರದಿಂದ ಸುದೀಪ್, ಶಿವಣ್ಣ, ದುನಿಯಾ ವಿಜಯ್, ಧನಂಜಯ ಅವರಿಗೆ ಬೇಜಾರು ಆಗಿರುತ್ತದೆ. ಪುನೀತ್ ಸರ್ ಇದ್ದಿದ್ರೆ ಬೇಜಾರು ಆಗಿರುತ್ತಿತ್ತು. ನಮ್ಮ ಅಣ್ಣನಿಗೂ ಬೇಜಾರು ಆಗಿರುತ್ತಿತ್ತು. ನಮ್ಮ ಹಿರಿಯ ನಟರು ಇಂಥ ಉದಾಹರಣೆ ಸೆಟ್ ಮಾಡಿಲ್ಲ ಎಂದು ಧ್ರುವ ಸರ್ಜಾ ಬೇಸರ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಅನಗತ್ಯವಾಗಿ ಕೈ ಸುಟ್ಟುಕೊಂಡ ರಾಹುಲ್.. ಫೈನಲ್ ಟೆಸ್ಟ್ನ ಮೊದಲ ದಿನ ಭಾರತಕ್ಕೆ ಆಘಾತ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ