ತಿಹಾರ್ ಜೈಲಿನಲ್ಲಿರುವ 125 ಕೈದಿಗಳಿಗೆ ಹೆಚ್ಐವಿ ಪಾಸಿಟಿವ್ ಸೋಂಕು
ಪ್ರಾಣ ಕಂಟಕ ಕಾಯಿಲೆ ತಿಹಾರ್ ಕೈದಿಗಳಿಗೆ ಅಂಟಿಕೊಂಡಿದ್ದಾದ್ರೂ ಹೇಗೆ?
10,500 ಕೈದಿಗಳಿಗೆ ಮೆಡಿಕಲ್ ಸ್ಕ್ರೀನಿಂಗ್ ನಡೆದ ವೇಳೆ ಮಾಹಿತಿ ಬಯಲು
ನವದೆಹಲಿ: ತಿಹಾರ್ ಜೈಲ್ನಿಂದ ಬೆಚ್ಚಿ ಬೀಳಿಸುವಂತ ಮಾಹಿತಿಯೊಂದು ಹೊರ ಬಂದಿದೆ. ಜೈಲಿನಲ್ಲಿ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 125 ಜನ ಕೈದಿಗಳು ಹೆಚ್ಐವಿ ಎಂಬ ಜೀವ ಕಂಟಕ ರೋಗಕ್ಕೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತಿದೆ. ತಿಹಾರ್ ಜೈಲಿನಲ್ಲಿ ಹೆಚ್ಐವಿ ಪಾಸಿಟಿವ್ ಕೇಸ್ಗಳು ಹೊಸದೇನಲ್ಲ. ಅಲ್ಲಿರುವ 200 ಕೈದಿಗಳಲ್ಲಿ ಲೈಂಗಿಕತೆಗೆ ಸಂಬಂಧಿತ ರೋಗಗಳು ಇರೋದು ಗೊತ್ತಾಗಿದೆ. ಇತ್ತೀಚೆಗಷ್ಟೇ ಒಟ್ಟು 14 ಸಾವಿರ ಕೈದಿಗಳಲ್ಲಿ 10, 500 ಕೈದಿಗಳ ಮೆಡಿಕಲ್ ಸ್ಕ್ರೀನಿಂಗ್ ಮಾಡಲಾಗಿತ್ತು. ಈ ವೇಳೆ ಇಂತಹದೊಂದು ಆತಂಕಕಾರಿ ವಿಷಯ ಹೊರಗೆ ಬಂದಿದೆ.
ತಿಹಾರ್ ಜೈಲಿನಲ್ಲಿ ಆಗಾಗ ಕೈದಿಗಳಿಗೆ ಮೆಡಿಕಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಅದರಲ್ಲೂ ತಿಹಾರ್ ಜೈಲಿಗೆ ನೂತನ ಡಿಜಿಯಾಗಿ ಸತೀಶ್ ಗೋಲಾಚ್ ಅವರು ಅಧಿಕಾರವಹಿಸಿಕೊಂಡ ಬಳಿಕ ಇದೇ ಮೇ ಹಾಗೂ ಜೂನ್ನಲ್ಲಿ 10, 500 ಜನ ಕೈದಿಗಳಿಗೆ ಮೆಡಿಕಲ್ ಸ್ಕ್ರೀನಿಂಗ್ ಮಾಡಿಸಲಾಗಿತ್ತು. ಇದರಲ್ಲಿ ಹೆಚ್ಐವಿ ಪರೀಕ್ಷೆಯೂ ಕೂಡ ಇತ್ತು. ಮೆಡಿಕಲ್ ಸ್ಕ್ರೀನಿಂಗ್ ಬಳಿಕ ಒಟ್ಟು 125 ಕೈದಿಗಳಲ್ಲಿ ಹೆಚ್ಐವಿ ಪಾಸಿಟಿವ್ ಇರೋದು ಕಂಡು ಬಂದಿವೆ.
ಇದನ್ನೂ ಓದಿ: ಡಿಕೆಶಿ ಸಸ್ಯಹಾರಿಯಾಗಲು ಕಾರಣ ಯಾರು ಗೊತ್ತಾ? ತಿಹಾರ್ ಜೈಲಿಂದ ಬಂದ ಮೇಲೆ ಈ ನಿರ್ಣಯ ತೆಗೆದುಕೊಂಡಿದ್ದೇಕೆ?
ಆತಂಕಪಡುವ ವಿಷಯವಲ್ಲ ಎಂದ ಜೈಲು ಸಿಬ್ಬಂದಿ
ಜೈಲು ಸಿಬ್ಬಂದಿ ಹೇಳುವ ಪ್ರಕಾರ ಇದರಲ್ಲಿ ಅಚ್ಚರಿಗೊಳ್ಳುವ ವಿಷಯವೇನೂ ಇಲ್ಲ. ಕೈದಿಗಳು ಇಲ್ಲಿಗೆ ಬಂದ ಮೇಲೆ ಹೆಚ್ಐವಿ ಪಾಸಿಟಿವ್ ಕಂಡು ಬಂದಿಲ್ಲ. ಹಲವು ಸಮಯಗಳಲ್ಲಿ ಹೊರಗಿನ ಜಿಲ್ಲೆಗಳಿಂದ ಇಲ್ಲಿಗೆ ಕೈದಿಗಳನ್ನು ಶಿಫ್ಟ್ ಮಾಡಲಾಗುತ್ತದೆ. ಹಾಗೆ ಬಂದ ಕೈದಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆ ವೇಳೆಯೂ ಕೂಡ ಇವರಲ್ಲಿ ಹೆಚ್ಐವಿ ಪಾಸಿಟಿವ್ ಕಂಡು ಬಂದಿತ್ತು. ಈಗ ಮತ್ತೆ ಹಲವು ಬಾರಿ ಮೆಡಿಕಲ್ ಚೆಕಪ್ ಮಾಡಿ ನೋಡಿದಾಗಲೂ ಕೂಡ ಅವರಲ್ಲಿ ಹೆಚ್ಐವಿ ಇದೆ. ಹೀಗಾಗಿ ಆತಂಕಪಡುವಂತದ್ದು ಏನೂ ಇಲ್ಲ ಎನ್ನುತ್ತಾರೆ ಜೈಲು ಸಿಬ್ಬಂದಿ.
ಇದರ ಜೊತೆಗೆ 10,500 ಕೈದಿಗಳ ಪೈಕಿ 200 ಕೈದಿಗಳಲ್ಲಿ ಲೈಂಗಿಕ ಸಂಬಂಧಿತ ಕಾಯಿಲೆಗಳು ಕಾಣಿಸಿಕೊಂಡಿವೆ ಮತ್ತು ಸ್ಕಿನ್ ಇನ್ಫೆಕ್ಷನಂತಹ ಕಾಯಿಲೆಗಳೂ ಕೂಡ ಕಾಣಿಸಿಕೊಂಡಿವೆ. ಪರೀಕ್ಷೆಯಾದ ಯಾವುದೇ ಕೈದಿಗಳಲ್ಲಿ ಟಿಬಿಯ ಯಾವುದೇ ಪಾಸಿಟಿವ್ ಕೇಸ್ ಕಾಣಿಸಿಕೊಂಡಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ತಿಹಾರ್ ಜೈಲು ಪಾಲಾದ ಕೇಜ್ರಿವಾಲ್.. ದೆಹಲಿ ಸಿಎಂ ಆನ್ಸರ್ ಕೇಳಿ, ಕೇಳಿ ED ಅಧಿಕಾರಿಗಳು ಸುಸ್ತು!
ಮಹಿಳಾ ಕೈದಿಗಳಿಗೂ ನಡೆದಿದೆ ಕ್ಯಾನ್ಸರ್ ಟೆಸ್ಟ್
ತಿಹಾರ್ ಜೈಲಿನ ಪ್ರೊಟೆಕ್ಟಿವ್ ಸರ್ವೆ ವಿಭಾಗವು. ಏಮ್ಸ್ ಮತ್ತು ಸಫ್ದರ್ಜಂಗ್ ಆಸ್ಪತ್ರೆಯೊಂದಿಗೆ ಸೇರಿ ಮಹಿಳಾ ಕೈದಿಗಳನ್ನು ಸರ್ವಾಯಿಕಲ್ ಕ್ಯಾನ್ಸರ್ನ ಪರೀಕ್ಷೆಯನ್ನು ಕೂಡ ಮಾಡಿಸಿದ್ದಾರೆ. ಮಹಿಳೆಯರಲ್ಲಿ ಈ ಬಗೆಯ ಕ್ಯಾನ್ಸರ್ ಕಾಯಿಲೆ ಕಾಣುವುದು ಸಾಮಾನ್ಯ, ಹೀಗಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ಆಗಾಗ ಈ ಪರೀಕ್ಷೆಯನ್ನು ಮಾಡಲಾಗುತ್ತದೆ. ಒಂದು ವೇಳೆ ಯಾವುದಾದರೂ ಮಹಿಳಾ ಕೈದಿಯಲ್ಲಿ ಈ ಬಗೆಯ ಕ್ಯಾನ್ಸರ್ ಕಂಡು ಬಂದಿದ್ದೆ ಆದಲ್ಲಿ, ಅವರಿಗೆ ಆರಂಭದಲ್ಲಿಯೇ ಉತ್ತಮ ಚಿಕಿತ್ಸೆ ನೀಡಲು ಅನಕೂಲವಾಗುತ್ತದೆ. ಹೀಗಾಗಿ ಈ ಸರ್ವಾಯಿಕಲ್ ಕ್ಯಾನ್ಸರ್ ಟೆಸ್ಟ್ನ್ನು ಮಾಡಿಸಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ