Advertisment

VIDEO: ಕಾಮಿಡಿ ಕಂಟೆಂಟ್​ ಮಾಡಲು ಹೊರಟಿದ್ದ ನಾಲ್ವರು ಯುಟ್ಯೂಬರ್​ಗಳು​.. ಭೀಕರ ಅಪಘಾತದಲ್ಲಿ ಸಾವು

author-image
AS Harshith
Updated On
VIDEO: ಕಾಮಿಡಿ ಕಂಟೆಂಟ್​ ಮಾಡಲು ಹೊರಟಿದ್ದ ನಾಲ್ವರು ಯುಟ್ಯೂಬರ್​ಗಳು​.. ಭೀಕರ ಅಪಘಾತದಲ್ಲಿ ಸಾವು
Advertisment
  • ಕಾರು ಅಪಘಾತದಲ್ಲಿ ಸಾವನ್ನಪ್ಪಿದ ನಾಲ್ವರು ಯುಟ್ಯೂಬರ್​ಗಳು
  • ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಆರು ಮಂದಿ
  • ಯುಟ್ಯೂಬ್​ಗೆ ಕಂಟೆಂಟ್​ ಮಾಡಲು ಹೊರಟಿದ್ದ ವೇಳೆ ಅಪಘಾತ

ಕಾರು ಅಪಘಾತದಲ್ಲಿ ನಾಲ್ವರು ಯುಟ್ಯೂಬರ್​ಗಳು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಅಲ್ಲಿನ ಅವ್ರೋಹಾ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. ಮೃತರನ್ನು ಲಕ್ಕಿ, ಸಲ್ಮಾನ್​, ಶಾರುಖ್​ ಮತ್ತು ಶಾನವಾಜ್​ ಎಂದು ಗುರುತಿಸಲಾಗಿದೆ.

Advertisment

ಎರಡು ಕಾರುಗಳ ಮುಖಾಮುಖಿ ಡಿಕ್ಕಿಯಿಂದಾಗಿ ನಾಲ್ವರು ಯುಟ್ಯೂಬರ್​ಗಳು ಸಾವಿಗೀಡಾಗಿದ್ದಾರೆ. ನಾಲ್ವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

publive-image

ಇದನ್ನೂ ಓದಿ: 200 ಅಡಿ ಎತ್ತರದಿಂದ ನದಿಗೆ ಉರುಳಿದ ಜೀಪ್​​.. 16 ಜನರು ಸಾವು, 3 ಮಂದಿಗೆ ಗಾಯ

ನಾಲ್ವರು ಯುಟ್ಯೂಬರ್​ಗಳು 'ರೌಂಡ್​ 2 ವಲ್ಡ್'​​ ಚಾನೆಲ್​ಗಾಗಿ ಹಾಸ್ಯ ಕಂಟೆಂಟ್​ ಮಾಡಲು ಸಕ್ರಿಯರಾಗಿದ್ದರು ಮತ್ತು ಅದೇ ದಿನ ಹುಟ್ಟುಹಬ್ಬದ ಆಚರಣೆಗಾಗಿ ಮನೆಯಿಂದ ಹೊರಗೆ ಹೊರಟಿದ್ದರು. ಆದರೆ ಈ ವೇಳೆ ಕಾರಿನಲ್ಲಿ ಹೋಗುವಾಗ ಎದುರಿನಿಂದ ವೇಗವಾಗಿ ಬಂದ ಬೊಲೆರೊ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.

Advertisment

ಇದನ್ನೂ ಓದಿ: ಲವ್​ ಫೇಲ್ಯೂರ್​.. ಚಲಿಸುತ್ತಿದ್ದ ಬಸ್​ನಿಂದ ಹಾರಿ ಯುವಕ ಸಾವು

ಅಪಘಾತದ ಸಮಯದಲ್ಲಿ ಅಲ್ಲಿ ಸೇರಿದ ಜನರು ನಾಲ್ವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಡಿವೋರ್ಸ್​ ನೀಡಲು ಮುಂದಾದ ಪತಿ.. ಫ್ಲೈಓವರ್​ನಿಂದ ಜಿಗಿದು ಹೆಂಡತಿ ಆತ್ಮಹತ್ಯೆ

Advertisment


">June 9, 2024

ಹಸನ್‌ಪುರ ಸಿಒ ದೀಪ್ ಕುಮಾರ್ ಪಂತ್ ಘಟನೆ ಬಗ್ಗೆ ವಿವರಿಸಿದ್ದು, ‘ಮನೋಟಾ ಸೇತುವೆಯ ಬಳಿ ಅಪಘಾತ ಸಂಭವಿಸಿದೆ, ಎರಡು ಕಾರುಗಳು ಅತಿವೇಗದಿಂದ ಡಿಕ್ಕಿ ಹೊಡೆದಿವೆ. ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೊಂದು ಕಾರಿನಲ್ಲಿ ಸವಾರಿ ಮಾಡುತ್ತಿದ್ದ ನಾಲ್ವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ’ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment